Type Here to Get Search Results !

Akbar Birabal Stories - ಅಕ್ಬರ್ ಬೀರಬಲ್ ಕತೆಗಳು - ಭಾಗ 6

 ಅಕ್ಬರ್ ಬೀರಬಲ್ ಕತೆಗಳು

 ಕತೆಗಳ ಪಟ್ಟಿ(toc)

Stories of Akbar and Birbal area unit very fashionable in  India. In many instances Birbal uses his wit and intelligence to calm the ire of Emperor Akbar and amuse him at constant time. It accustomed be a part of the oral tradition of storytelling, however in recent years these stories are compiled into books by varied authors.

Birbal was appointed by Akbar as a Minister (Mantri) and accustomed be a writer and Singer in around 1556–1562. He had an in depth association with Emperor Akbar and was one in all his most vital courtiers, a part of a gaggle referred to as the navaratnas (nine jewels).

Local people tales emerged primarily in nineteenth century involving his interactions with Akbar, him representational process him as being very clever and humourous.

We are happy to bring Akbar and Birbal stories in kannada launguage.


ನನ್ನೊಂದಿಗಿರು

ಒಮ್ಮೆ ಅಕ್ಬರನಿಗೆ ಬೀರಬಲ್ ಬಗ್ಗೆ ಅಸಮಾಧಾನ ಉಂಟಾಗಿ ಅವನ ಮುಖ ನೋಡಲೂ ಸಿದ್ಧನಿರಲಿಲ್ಲ.

ಬೀರಬಲ್, ನಿನ್ನನ್ನು ನೋಡೋಕೆ ನನಗೆ ಇಷ್ಟವಿಲ್ಲ. ಇಲ್ಲಿಂದ ಹೋಗು, ನಿನ್ನ ಮುಖ ತೋರಿಸಬೇಡ ಎಂದು ಆಜ್ಞೆ ಮಾಡಿದ.

ಬೀರಬಲ್ ಆಗ್ರಾದ ಹೊರಗೆ ಒಂದು ಗುಡಿಸಲು ಮಾಡಿಕೊಂಡು ಅಲ್ಲಿ ವಾಸಿಸತೊಡಗಿದ.

ಕೆಲವು ದಿನಗಳಾದವು. ಅಕ್ಬರ್ ಬೀರಬಲ್‌ನನ್ನು ನೋಡಲು ಇಷ್ಟಪಟ್ಟ ಅವನು ಎಲ್ಲೂ ಕಾಣಲಿಲ್ಲ. ಅಕ್ಬರನಿಗೆ ಚಿಂತೆಯಾಯಿತು. ತಾನು ಹಾಗೆ ಹೇಳಬಾರದಿತ್ತು ಎಂದುಕೊಂಡ.

ಒಂದು ದಿನ ಅಕ್ಬರ್ ಅರಮನೆಯಲ್ಲಿ ಸಭೆ ನಡೆಸುತ್ತಿರಬೇಕಾದರೆ ಥಟ್ಟನೆ ಒಬ್ಬ ಸೈನಿಕ ಪ್ರವೇಶಿಸಿ,

ಮಹಾರಾಜ! ಹೊರಗೆ ಒಬ್ಬ ಸಾಧು ನಿಂತಿದ್ದಾನೆ. ಗಡ್ಡ ಮೀಸೆ ಇದೆ ಅವನಿಗೆ ಅವನ ಶಿಷ್ಯರು ಅವನು ತುಂಬಾ ಬುದ್ಧಿವಂತ. ಜಗತ್ತಿನಲ್ಲಿ ಅಂತಹ ಬುದ್ಧಿವಂತ ಇಲ್ಲ ಎಂದು ಹೇಳುತ್ತಾರೆಎಂದು ಹೇಳಿದನು.

ಅಕ್ಬರ್ನಿಗೋ ಇಷ್ಟುದಿನ ಬೀರಬಲ್ ಇರಲಿಲ್ಲ ಎಂಬ ನೋವು ಇತ್ತು ತನ್ನ ಆಸ್ಥಾನದಲ್ಲಿ ಒಬ್ಬ ಬುದ್ದಿವಂತ ಇರಬೇಕು ಎಂದು ಆಲೋಚಿಸಿ ಸೈನಿಕನಿಗೆ ಅವನನ್ನು ಒಳಗೆ ಕರೆತರಲು ಹೇಳಿದನು.

ಸಾಧು ಅರಮನೆ ಒಳಗೆ ಬಂದನು. ಅವನು ಒಳ್ಳೆಯ ತೇಜಸ್ವಿ ಇದ್ದನು. ಅದೇ ಅವನು ಬುದ್ದಿವಂತನೆಂದು ಹೇಳುತ್ತಿತ್ತು.

ನೀವು ತುಂಬಾ ಜಾಣ ಬುದ್ಧಿವಂತ ಎಂದು ಹೇಳುತ್ತಾರೆ. ನಿಮ್ಮ ಶಿಷ್ಯರು ಜಗತ್ತಿನಲ್ಲಿ ನಿಮ್ಮಷ್ಟು ಬುದ್ದಿವಂತರಿಲ್ಲ ಎನ್ನುತ್ತಿದ್ದಾರೆ. ನಾನು ನನ್ನ ಜನರಿಗೆ ನಿಮ್ಮನ್ನು ಕೆಲವು ಪ್ರಶ್ನೆಗಳನ್ನು ಕೇಳಲು ಹೇಳುತ್ತೇನೆ. ನೀವು ತೃಪ್ತಿಕರವಾದ ಉತ್ತರ ಕೊಡಬೇಕು ತಿಳಿಯಿತೇ?

 ಸರಿಯಾದ ಉತ್ತರ ಕೊಟ್ಟರೆ ಅಮೂಲ್ಯ ಉಡುಗೊರೆಗಳು ಕೊಡುತ್ತೇನೆ. ಇಲ್ಲದಿದ್ದರೆ ಶಿಕ್ಷೆ ಕಾದಿರುತ್ತದೆಎಂದು ಅಕ್ಕರ್ ಹೇಳಿದನು.

ಆಯಿತು ಸ್ವಾಮಿ ! ಆದರೆ ಜನ ಹೇಳುವಷ್ಟು ಬುದ್ಧಿವಂತ ನಾನಲ್ಲ,  ನನಗೆ ಈ ಪರೀಕ್ಷೆ ಎಂದರೆ ಆಗೋಲ್ಲ, ಆದರೂ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ”“ ಎಂದ ಸಾಧು,

ರಾಜ ತನ್ನ ಮಂತ್ರಿ ತೊದರಮಲ್ ಕಡೆಗೆ ತಿರುಗಿ ಸಂಜ್ಞೆ ಮಾಡಿದ. ತೊದರಮಲ್ ಕೇಳಿದ.

ಅತ್ಯಂತ ಆಳವಾದುದು?”

ಹೆಣ್ಣಿನ ಹೃದಯ"

ದುರಸ್ತಿ ಮಾಡಲಾಗದ ನಷ್ಟ

“ಜೀವನ

ಸಾಧು ಯಾವುದೇ ಕಷ್ಟವಿಲ್ಲದೆ ಸಾಧು ಉತ್ತರಿಸುತ್ತಿದ್ದನು. ರಾಜಾಮಾನ ಸಿಂಹ ಆಸ್ಥಾನದಲ್ಲೇ ಇದ್ದನು. ಅವನೂ ಒಂದು ಪ್ರಶ್ನೆ ಹಾಕಿದನು.

ಒಬ್ಬ ವ್ಯಕ್ತಿಯ ಯಾವ ಸಾಮರ್ಥ್ಯ ಆತನ ಅತ್ಯುತ್ತಮವಾದುದೆಂದು ಹೇಳಬಹುದು?”

ಧೈರ್ಯ

ಗಾಳಿಗಿಂತ ವೇಗವಾದುದು ಯಾವುದು?

ಒಬ್ಬನ ಕಲ್ಪನೆ-ಊಹೆ

 ಜಗತ್ತಿನಲ್ಲಿ ಅತ್ಯಂತ ಉತ್ತಮ ಗೆಳೆಯ ಯಾರು?” 

ಸಾಕಷ್ಟು ಜ್ಞಾನ ಮತ್ತು ದೂರದೃಷ್ಟಿ” 

ಈ ಉತ್ತರ ಕೇಳಿದ ಅಬುಲ್ ಫಜಲ್ ಎಂಬುವನು,

 “ವಿಶ್ವದಲ್ಲಿ ಅತ್ಯುತ್ತಮವಾದ ವಸ್ತು ಯಾವುದು?”

 ”ಜ್ಞಾನ”“

ಅಕ್ಬರ್- ಯಾವುದು ಅತ್ಯಂತ ಸಿಹಿ?”“ 

ಮಗುವಿನ ನಗು !

 ಮುಂದಿನ ಪ್ರಶ್ನೆ ತಾನ್‌ಸೇನ್ ಹಾಕಿದನು. ಅವನೊಬ್ಬ ಸಂಗೀತಗಾರ. ಸಂಗೀತದಲ್ಲಿ ಯಾವುದು ನಾಶವಾಗುವುದಿಲ್ಲ?”

 “ಸಪ್ತ ಸ್ವರಗಳು” 

ಕಡೆಗೆ ಅಕ್ಬರ್ ತಾನೇ ಒಂದು ಪ್ರಶ್ನೆ ಹಾಕಿದ.

ಓಹ್! ನೀವು ಚೆನ್ನಾಗಿಯೇ ಉತ್ತರಗಳನ್ನು ಕೊಡುತ್ತಿರುವಿರಿ. ಈಗ ಹೇಳಿ ಯಾವುದು ಒಂದು ಸಾಮ್ರಾಜ್ಯವನ್ನು ಆಳಲು ಹೆಚ್ಚು ನೆರವಾಗುತ್ತದೆ?”

ಕೌಶಲ್ಯ"

ರಾಜನ ಅತ್ಯಂತ ದೊಡ್ಡ ಶತೃ ಯಾರು?”

 “ಆತನ ಸ್ವಾರ್ಥ

ಅಕ್ಬರನಿಗೆ ಸಾಧುವಿನ ಉತ್ತರಗಳು ಸಂತೋಷ ಕೊಟ್ಟವು. ನೀವು ನಮ್ಮ ಅರಮನೆಯಲ್ಲಿ ಇರಬಹುದು ಎಂದು ಹೇಳಿದನು. ಬಳಿಕ ಮಾತನಾಡಿ, “ಸ್ವಾಮಿ , ನಾನು ತಿಳಿದಂತೆ ಈ ದೇಶದ ಸಾಧು ಸಂತರಿಗೆ ಪವಾಡಗಳನ್ನು ಮಾಡುವ ಶಕ್ತಿ ಇದೆ ಎಂದು ಹೇಳುತ್ತಾರೆ. ನಿಮಗೇನಾದರೂ ಅಂತಹ ಶಕ್ತಿ ಇದೆಯೆ?” ಎಂದು ಕೇಳಿದನು.

ಏಕಿಲ್ಲ ? ನೀವೇನಾದರೂ ಈಗ ಯಾರನ್ನಾದರೂ ಈಗಲೇ ಸಂಧಿಸಬೇಕೆಂದಾಶಿಸಿದರೆ ಒಂದೇ ನಿಮಿಷದಲ್ಲಿ ಆತನನ್ನು ತೋರಿಸಬಲ್ಲೆಎಂದು ಸಾಧು ವೇಷದ ಬೀರಬಲ್ ಹೇಳಿದನು.

ಹಾಗೇನು? ಹಾಗಾದರೆ ನನಗೆ ನನ್ನ ಬೀರಬಲ್‌ನನ್ನು ತೋರಿಸು. ಎಂದು ಕೇಳಿದ ಅಕ್ಬರ್,

ನಾನು ಅವನನ್ನು ಕಳೆದು ಕೊಂಡಿದ್ದೇನೆಸಾಧು ಉತ್ತರಿಸಲಿಲ್ಲ. ತನ್ನ ಗಡ್ಡ ಮೀಸೆ ತೆಗೆದು ನಿಂತ, ಎದುರಿಗೆ ಬೀರಬಲ್ ಕಾಣಿಸಿದ. ಅಕ್ಬರನಿಗೆ ತನ್ನ ಕಣ್ಣುಗಳನ್ನು ತಾನೇ ನಂಬಲಾಗಲಿಲ್ಲ.

ಬೀರಬಲ್, ನಾನಾಗಲೇ ಅನುಮಾನಪಟ್ಟೆ ನಿನ್ನ ಉತ್ತರಗಳಿಂದ ನಿನ್ನನ್ನು ಗುರುತಿಸಿದೆ. ಅದಕ್ಕೆ ಈ ಪ್ರಶ್ನೆ ಹಾಕಿದೆ. ನನಗೆ ಸಂತೋಷವಾಗಿದೆ. ಇನ್ನು ಮುಂದೆ ಎಲ್ಲಿಯೂ ಹೋಗಬೇಡ. ನನ್ನೊಂದಿಗೇ ಇರುಎಂದು ಹೇಳಿಕೊಂಡ, ಬೀರಬಲ್ಗೂ ಸಂತೋಷವಾಯಿತು.

ಕುಂಬಾರ ಮತ್ತು ಅಗಸ

ಒಂದು ಸಣ್ಣ ಪಟ್ಟಣದಲ್ಲಿ ಒಬ್ಬ ಕುಂಬಾರ ಮತ್ತು ಅಗಸ ವಾಸಿಸುತ್ತಿದ್ದರು. ಅಗಸ ಊರಿನ ಜನರ ಬಟ್ಟೆಗಳನ್ನು ಮಡಿ ಮಾಡಿ ತರುತ್ತಿದ್ದನು. ಊರಿನ ಜನರಿಗೆ ತುಂಬಾ ಉಪಯೋಗವಾಗಿದ್ದನು. ಅವನ ಬಳಿ ಒಂದು ಕತೆ ಇತ್ತು. ಒಂದು ದಿನ ಆ ಕತ್ತೆ ಕುಂಬಾರ ಮಾಡಿಟ್ಟಿದ್ದ ಮಡಕೆಗಳ ಮೇಲೆ ಓಡಿ ಎಲ್ಲ ಮಡಕೆಗಳು ಒಡೆದು ಚೂರಾದವು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವಂತೆ ಕುಂಬಾರನ ಪ್ರಯತ್ನವೆಲ್ಲ ವ್ಯರ್ಥವಾಗಿತ್ತು.

ಕುಂಬಾರನಿಗೆ ಕೋಪ ಬಂದು ಒಂದು ದೊಣ್ಣೆ ತೆಗೆದುಕೊಂಡು ಕತೆಗೆ ಎರಡು ಏಟು ಕೊಟ್ಟ ಆಗ ಅಲ್ಲಿಗೆ ಬಂದ ಅಗಸ, “ಗೆಳೆಯ ನನ್ನ ಕಡೆಗೆ ಏಕೆ ಹೊಡೆಯುತ್ತಿದ್ದಿ? ಅದು ನನ್ನ ಜೀವಎಂದ.

ಇರಬಹುದಯ್ಯ. ಆದರೆ ಅದು ನಾನು ಮಾಡಿಟ್ಟಿದ್ದ ಮಡಕೆಗಳನ್ನೆಲ್ಲ ಒಡೆದು ಹಾಕಿದೆ”“ ಎಂದ ಕುಂಬಾರ.

ಹೌದೆ? ಅದಕ್ಕೆ ನೀನು ಕತ್ತೆಯನ್ನು ಏಕೆ ಹೊಡೆದೆ? ನಾನು ನಿನಗಾದ ನಷ್ಟ ಕಟ್ಟಿ ಕೊಡುತ್ತೇನೆ. ತೆಗೆದುಕೊ ಹಣ”“ ಎಂದು ಅಗಸ ಹಣ ಕೊಟ್ಟು ಕತ್ತೆಯೊಂದಿಗೆ ಹೊರಟು ಹೋದನು. ಅದನ್ನು ಕೆಲವು ಜನ ನೋಡಿದರು. ಊರ ಜನರ ಮುಂದೆ ಅಗಸ ನನ್ನ ಮರ್ಯಾದೆ ತೆಗೆದ ತಲೆ ತಗ್ಗಿಸೋ ಹಾಗೆ ಮಾಡಿದ. ಇರಲಿ ನನಗೂ ಒಂದು ಕಾಲ ಬರುತ್ತೆಎಂದು ಕೊಂಡು ಸುಮ್ಮನಾದನು.

ಮಾರನೆಯ ದಿನ ಕುಂಬಾರ ಅಕ್ಬರನ ಅರಮನೆಗೆ ಹೋಗಿ ರಾಜನನ್ನು ಭೇಟಿಯಾದನು.

ಜಹಾಂಪನಾ ! ನೆನ್ನೆ ನನ್ನ ಒಬ್ಬ ಗೆಳೆಯ ಪರ್ಷಿಯಾದಿಂದ ಬಂದಿದ್ದನು. ಇಂದು ಅವನು ಆಗ್ರಾ ಬಿಟ್ಟು ಹೋದ. ಅವನು ಹೇಳಿದ್ದು ಏನೆಂದರೆ ಆಗ್ರಾದಲ್ಲಿರುವ ಆನೆಗಳು ತುಂಬ ದುರ್ಬಲ ಎಂದು ಪರ್ಷಿಯಾ ಜನ ಭಾವಿಸಿದ್ದಾರೆಎಂದು. ಅದೂ ಅಲ್ಲದೆ ಪರ್ಷಿಯಾ ದೊರೆ ಹತ್ತಿರ ಬರಿಯ ಬಿಳಿ ಆನೆಗಳೇ ಇವೆಯಂತೆ”“ಎಂದು ಹೇಳಿಕೊಂಡನು. ಆನೆಗಳು ಅವರು ಹೇಗೆ ಬಿಳಿ” ಅಕ್ಬರ್ ಅವಾಕ್ಕಾದನು.

 ““ಹಾಗೇನು? ಬಣ್ಣ ಮಾಡುತ್ತಾರೆ?” ಕೇಳಿದ ಅಕ್ಬರ್.

ಹುಜೂರ್ ! ರಾಜನ ಬಳಿ ಕೆಲವು ಅಗಸರಿದ್ದಾರೆ. ಅವರು ತುಂಬಾ ಕಷ್ಟಪಟ್ಟು ಆನೆಗಳನ್ನು ಬೆಳ್ಳಗೆ ಮಾಡುತ್ತಾರೆ.

ಹಾಗಾದರೆ ನಾನು ಕೂಡ ನಮ್ಮ ರಾಜ್ಯದ ಅಗಸರನ್ನು ಕರೆಸಿ ಆನೆಗಳನ್ನು ಬೆಳ್ಳಗೆ ಮಾಡುತ್ತೇನೆ.

ರಾಜ! ನೀವೇಕೆ ಆ ಶ್ರಮ ತೆಗೆದುಕೊಳ್ಳುತ್ತೀರಿ? ನನ್ನ ಮನೆ ಪಕ್ಕ ಇರೋ ಅಗಸ ಇಡೀ ಊರಿನಲ್ಲಿ ಪ್ರಸಿದ್ಧ. ನೀವು ಅವನನ್ನು ಕರೆಸಿ, ನಿಮ್ಮ ಕೆಲಸ ಅವನು ಮಾಡುತ್ತಾನೆ”“ ಎಂದು ಹೇಳಿ ಅಗಸ ಅಲ್ಲಿಂದ ಹೊರಟು ಹೋದನು.

ಮಾರನೆಯ ದಿನ ಅಕ್ಬರ್ ಅಗಸನನ್ನು ಕರೆಯಿಸಿ ಎಲ್ಲ ಬೂದು ಬಣ್ಣದ ಆನೆಗಳನ್ನು ಬೆಳ್ಳಗೆ ಮಾಡುಎಂದು ಆಜ್ಞೆ ಮಾಡಿದನು. ಅಗಸನಿಗೆ ಪೇಚಿಗಿಟ್ಟು ಕೊಂಡಿತು. ಇದೆಲ್ಲ ಕುಂಬಾರನ ಪ್ರತೀಕಾರದ ಫಲ ಎಂದು ತಿಳಿಯಲು ಅವನಿಗೆ ಹೊತ್ತು ಬೇಕಾಗಲಿಲ್ಲ, ಆದರೂ ಆನೆಗಳ ಬಳಿಗೆ ಹೋಗಿ ಅಲ್ಲಿ ಆನೆಗಳನ್ನು ತೊಳೆಯಲು ಕುಳಿತನು, ಒಂದು ಪ್ರಾಣಿಯ ಬಣ್ಣವನ್ನು ಬದಲಾಯಿಸಲು ಸಾಧ್ಯವೇ?

ಹೇಗೋ ಅಗಸ ಆ ದಿನದ ಕೆಲಸ ಮುಗಿಸಿ ಬೀರಬಲ್ನ ಮನೆಗೆಬಂದು ತನ್ನ ಕಷ್ಟ ಹೇಳಿಕೊಂಡನು. ಬೀರಬಲ್ ಅಗಸನ ಪರಿಸ್ಥಿತಿ ಅರ್ಥ ಮಾಡಿಕೊಂಡು ಅವನಿಗೆ ಒಂದು ಉಪಾಯ ಹೇಳಿದನು. ಅದರಂತೆ ಅಗಸ ಮರುದಿನ ರಾಜನ ಬಳಿಗೆ ಬಂದು, “ರಾಜನೇ ! ಆನೆಗಳನ್ನು ತೊಳೆಯಲು ನನಗೆ ಆನೆ ಗಾತ್ರದ ಕೆಲವು ಮಡಕೆಗಳು ಬೇಕು. ದಯವಿಟ್ಟು ಏರ್ಪಾಟು ಮಾಡುವಿರಾ?” ಎಂದು ಕೇಳಿಕೊಂಡನು.

ಅಕ್ಬರ್ ಒಪ್ಪಿಕುಂಬಾರನನ್ನು ಕರೆಯಿಸಿದನು. ಆನೆಗಳನ್ನು ತೊಳೆದು ಬಿಳಿ ಮಾಡಲು ಸಹಾಯವಾಗುವಂತೆ ಆನೆ ಗಾತ್ರದ ಮಡಕೆಗಳನ್ನು ಮಾಡಿಕೊಡು ಎಂದು ಆಜ್ಞೆ ಮಾಡಿದನು. ಕುಂಬಾರನಿಗೆ ಕಸಿವಿಸಿಯಾಯಿತು. ತಾನು ಮಾಡಿದ್ದು ತನಗೇ ತಿರುಗು ಬಾಣವಾಯಿತಲ್ಲ ಎಂದು ಕೊಂಡನು. ಆದರೂ ಗೆಲ್ಲುವ ಆಸೆಯಿಂದ ಮಡಕೆ ಮಾಡತೊಡಗಿದನು. ಅಷ್ಟು ದೊಡ್ಡ ಮಡಕೆ ಮಾಡಲಾಗಲೇ ಇಲ್ಲ. ಒಂದು ಮಡಕೆ ಮಾಡಿದರು ಅದೊಂದು ಆಳವಿದ್ದ ತಟ್ಟೆಯಂತಿತ್ತು ಅದನ್ನೆ ಅಕ್ಬರನಿಗೆ ತಂದುಕೊಟ್ಟನು.

ಅಕ್ಬರ್ ಆ ಮಡಕೆಯನ್ನು ಅಗಸನಿಗೆ ಕೊಡಿಸಿದನು. ಆನೆ ತನ್ನ ತಕ್ಷಣ ತಟ್ಟೆ ಒಡೆದು ಚೂರಾಯಿತು.

ಪಾದಗಳನ್ನು ತಟ್ಟೆಯಲ್ಲಿಟ್ಟ ಅಕ್ಬರನಿಗೆ ಸುದ್ದಿ ಮುಟ್ಟಿತು. ಅವನು ಕೋಪಗೊಂಡು ಕುಂಬಾರನನ್ನು ಕರೆಸಿದನು. ಕುಂಬಾರ ಬಂದಾಗ, “ಎಲವೊ ಮೂರ್ಖ ! ನಿನಗೆ ದೊಡ್ಡ ಮಡಕೆಗಳು ಮಾಡಲು ಹೇಳಿದರೆ ಮಾಡಿಯೇ ಇಲ್ಲ ಹೋಗು ಮತ್ತೆ ಮಾಡಿಕೊಂಡು ಬಾಎಂದನು.

ಕುಂಬಾರ ಈಗ ತಪ್ಪಿಸಿಕೊಳ್ಳುವ ಹಾಗಿರಲಿಲ್ಲ. ತನ್ನ ತಪ್ಪು ಒಪ್ಪಿಕೊಂಡು ಬಿಟ್ಟನು. ಅಕ್ಬರನಿಗೆ ಅಗಸ ತುಂಬಾ ತಾಳ್ಮೆಯಿಂದ ನಡೆದುಕೊಂಡನೆನಿಸಿತು. ಅವನನ್ನು ಕರೆಸಿ ಅವನಿಗೆ ಉಡುಗೊರೆಗಳನ್ನು ಕೊಟ್ಟನು.

ಆದರೆ ಅಗಸ ಅವನ್ನು ಹಿಂದಿರುಗಿಸಿ, “ಸ್ವಾಮಿ, ಈ ಉಡುಗೊರೆಗಳೆಲ್ಲ ಬೀರಬಲ್‌ರಿಗೆ ಸೇರಬೇಕು. ನನಗೀ ಉಪಾಯ ಹೇಳಿ ಕೊಟ್ಟಿದ್ದೆ ಅವರುಎಂದನು. ಅಕ್ಬರನಿಗೆ ಬೀರಬಲ್ ಬಗ್ಗೆ ಹೆಮ್ಮೆ ಎನಿಸಿತು.

ರಸ್ತೆಯ ತಿರುವುಗಳು

ಒಮ್ಮೆ ಅಕ್ಬರನಿಗೆ ಪರ್ಷಿಯಾದ ಚಕ್ರವರ್ತಿ ಒಂದು ಸಮಸ್ಯಾತ್ಮಕ ಪ್ರಶ್ನೆಯನ್ನು ಕಳುಹಿಸಿ ಅದರ ಉತ್ತರ ಕೇಳಿದ್ದ. ಆಗ್ರಾದ ರಸ್ತೆಗಳಲ್ಲಿ ಎಷ್ಟು ತಿರುವುಗಳಿವೆ ಎಂಬುದು ಈ ಪ್ರಶ್ನೆಯಾಗಿತ್ತು

ಅಕ್ಬರ್ ಮಾನಸಿಂಹ ಎಂಬುವನನ್ನು ಬರಮಾಡಿಕೊಂಡು, “ಮಾನಸಿಂಹ ಇನ್ನೆರಡು ದಿನಗಳಲ್ಲಿ ಆಗ್ರಾದ ರಸ್ತೆಗಳಲ್ಲಿ ಎಷ್ಟು ತಿರುವುಗಳಿವೆ ಎಂಬುದನ್ನು ಎಣಿಸಿ ಹೇಳಿ”“ ಎಂದು ಹೇಳಿದ.

ಮಾನಸಿಂಹ ಕಾರ್ಯನಿರತನಾದ. ಆದರೂ ಅಕ್ಬರನಿಗೆ ಒಂದು ವೇಳೆ ಸಮಸ್ಯೆ ಬಿಡಿಸಲಾಗದೆ ಹೋದರೆ ಪರ್ಷಿಯಾದ ಚಕ್ರವರ್ತಿ ತನ್ನ ಬಗ್ಗೆಏನೆಂದು ಕೊಳ್ಳುತ್ತಾನೆಯೋ ಎಂದು ಚಿಂತೆಯಾಯಿತು. ಆಗ ಅವನಲ್ಲಿಗೆ ಬಂದ ಬೀರಬಲ್‌ನಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಬೀರಬಲ್ ನಗುತ್ತಾ ಜಹಾಂಪನಾ ! ಇದಕ್ಕೆ ಮಾನಸಿಂಹನನ್ನು ಕಳುಹಿಸಿದಿರಾ? ಇದೊಂದು ಸುಲಭವಾದ ಪ್ರಶ್ನೆ , ಆಗ್ರಾದಲ್ಲಿನ ರಸ್ತೆಗಳಲ್ಲಿ ಎಷ್ಟು ತಿರುವುಗಳಿವೆ ಎಂಬುದು ನನಗೆ ಗೊತ್ತು ಅಷ್ಟೇ ಏಕೆ ಇಡೀ ವಿಶ್ವದ ಯಾವುದೇ ಪಟ್ಟಣದ ರಸ್ತೆಯ ತಿರುವುಗಳೆಷ್ಟು ಎಂಬುದೂ ನನಗೆ ಗೊತ್ತು ಎಂದ.

ಅಕ್ಬರ್ ಚಕಿತನಾಗಿ, “ಅಯ್ಯೋ ! ಹಾಗಿದ್ದರೆ ಹೇಳು ಮತ್ತೆ ಈಗಲೇ ಪರ್ಷಿಯಾದ ರಾಜನಿಗೆ ಉತ್ತರ ಬರೆದು ಕಳುಹಿಸುತ್ತೇನೆ”“ ಎಂದು ಬೀರಬಲ್ ಥಟ್ಟನೆ, “ರಾಜನೇ ! ವಿಶ್ವದಲ್ಲಿ ಯಾವುದೇ ರಸ್ತೆಯಲ್ಲೂ ಎರಡು ತಿರುವುಗಳಿರುತ್ತವೆ. ಒಂದು ಎಡ ತಿರುವು, ಇನ್ನೊಂದು ಬಲ ತಿರುವು”“ ಎಂದು ಹೇಳಿದ.

ಅಕ್ಬರನಿಗೆ ಅತಿ ಆಶ್ಚರ್ಯವಾಯಿತು. ಇಷ್ಟು ಸರಳವಾದ ಪ್ರಶ್ನೆಗೆ ಗಾಬರಿಯಾದೆನಲ್ಲ ಎಂದು ಬೀರಬಲ್‌ನನ್ನು ಸತ್ಕರಿಸಿ ಕಳುಹಿಸಿದ.

ಭ್ರಷ್ಟಾಚಾ

ಅಕ್ಬರ್ ಒಂದು ದಿನ ಸಿಂಹಾಸನದಲ್ಲಿ ಕುಳಿತಿದ್ದನು. ಎಲ್ಲ ಮಂತ್ರಿಗಳೂ ಆಸ್ಥಾನದಲ್ಲಿದ್ದರು. ಇದ್ದಕ್ಕಿದ್ದಂತೆ ಇಬ್ಬರು ಅಪರಿಚಿತರು ಆಸ್ಥಾನ ಪ್ರವೇಶಿಸಿದರು. ಒಬ್ಬ ರಾಮ, ಇನ್ನೊಬ್ಬ ಭೀಮ.

ರಾಮ ಹೇಳಿದ : ಜಹಾಂಪನಾ ! ಭೀಮ ಭ್ರಷ್ಟ ತಾನು ಮಾಡಿದ ಕೆಲಸಕ್ಕೆ ಹಣ ತೆಗೆದುಕೊಂಡಿದ್ದಾನೆ. ಇದು ನಾಲ್ಕು ಜನರಿಗೂ ಗೊತ್ತಾಗಿದೆ.

ಭೀಮ ಒಬ್ಬ ಅಂಗಡಿ ಮಾಲೀಕ. ಅಕ್ಬರ್ ಅವನನ್ನು ಜೈಲಿಗೆ ಹಾಕಲು ಆಜ್ಞೆ ಮಾಡಿದ. ಎರಡು ದಿನಗಳ ನಂತರ ಮಂತ್ರಿಗಳಿಗೆ ತನಿಖೆ ಮಾಡಲು ಹೇಳಿದ.

ರಾಮ ಅರಮನೆಯಿಂದಾಚೆ ಬಂದ. ಭೀಮನನ್ನು ಜೈಲಿಗೆ ನೂಕಲಾಯಿತು.

ಮಂತ್ರಿಗಳು ಮನೆಗೆ ಹೋದರು. ಅಕ್ಬರ್ ಬೀರಬಲ್ ಇಬ್ಬರೇ ಇದ್ದರು. ಒಬ್ಬ ಸಹಾಯಕ ಅವರಿಬ್ಬರು ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿಸಿಕೊಂಡನು.

ಬೀರಬಲ್ ! ಜನ ಭ್ರಷ್ಟರಾಗುತ್ತಿದ್ದಾರೆ. ಇದು ಸಾಧ್ಯವೇ? ತಾವು. ಕೂಡಿ ಕೊಡುವ ಕೆಲಸಕ್ಕೆ ಲಂಚ ಪಡೆಯುವರೇ?” ಅಕ್ಬರ್ ಕೇಳಿದ .

ಜಹಂಪನಾ ! ಯಾರು ಭ್ರಷ್ಟರೋ ಅವರು ಯಾವಾಗಲೂ ಭ್ರಷ್ಟರೇ. ಎಲ್ಲೇ ಇರಲಿ ಲಂಚ ತೆಗೆದುಕೊಳ್ಳುತ್ತಾರೆ. ಮಾಡಿದ ಕೆಲಸಕ್ಕೆ ಹಣ ನಿರೀಕ್ಷಿಸುತ್ತಾರೆಎಂದು ಬೀರಬಲ್ ನುಡಿದ.

ಆಗ ಅಲ್ಲೇ ಇದ್ದ ಸಹಾಯಕ ಬೀರಬಲ್ನನ್ನು ಕಂಡರಾಗದಿದ್ದವನು ಬಳಿಗೆ ಬಂದು ಸ್ವಾಮಿ, ಹಾಗೇನಿಲ್ಲ, ಭ್ರಷ್ಟರಾಗುವ ಅವಕಾಶವೇ ಇಲ್ಲದ ಕೆಲಸಗಳು ಇವೆಎಂದ.

“ಹಾಗಾದರೆ ಒಂದು ಉದಾಹರಣೆ ಕೊಡು.

ಸ್ವಾಮಿ, ಭೀಮನನ್ನು ಯಮುನಾ ನದಿ ದಡಕ್ಕೆ ಹಾಕಿ, ಅಲ್ಲಿ ಅವನು ದಡದಲ್ಲಿ ಕುಳಿತು ಅಲೆಗಳನ್ನೆಣಿಸಲಿಎಂದು ಸಹಾಯಕ ಹೇಳಿದ.

ಅಕ್ಬರ್ ಒಪ್ಪಿ ಭೀಮನನ್ನು ಹೊಸ ಜಾಗಕ್ಕೆ ಹಾಕಿದನು.

ಭೀಮನ ಬಗ್ಗೆ ಯಾವ ದೂರೂ ಬರಲಿಲ್ಲ, ಅಕ್ಬರನೂ ಖುಷಿಯಾದ. ಕೆಲದಿನಗಳಾದವು.

ಬೀರಬಲ್‌ಗೆ ಇದು ಒಪ್ಪಿಗೆ ಆಗಲಿಲ್ಲ, “ಜಹಾಂಪನಾ, ಯಾವುದಕ್ಕೂ ನಾವೇ ಒಮ್ಮೆ ಹೋಗಿ ಬರೋಣಎಂದು ಸಲಹೆ ಮಾಡಿದ. ಅಕ್ಬರ್ ಒಪ್ಪಿದನು.

ಅಕ್ಬರ್ ಮತ್ತು ಬೀರಬಲ್ ಇಬ್ಬರೂ ಯಮುನಾ ನದಿ ತೀರಕ್ಕೆ ಹೋಗಿ ಒಂದು ಮರದ ಹಿಂದೆ ಅವಿತುಕೊಂಡರು. ಅಲ್ಲಿಂದ ಭೀಮ ಅಲೆಗಳನ್ನು ಎಣಿಸುತ್ತಿದ್ದುದನ್ನು ನೋಡಿದನು.

ಇದ್ದಕ್ಕಿದ್ದಂತೆ ಕೆಲವು ಅಗಸರು ಅಲ್ಲಿ ಬಂಡು ದೋಣಿಯಲ್ಲಿ ಬಂದರು. ಒಬ್ಬ ಅಗಸ ಭೀಮನನ್ನು ದಡದಲ್ಲಿ ಕುಳಿತು ಏನು ಮಾಡುತ್ತಿದ್ದಿ?” ಎಂದು ಕೇಳಿದ.

ನಮ್ಮ ರಾಜ ಅಲೆಗಳನ್ನೆಣಿಸಲು ಹೇಳಿದ್ದಾರೆ. ನೀವು ನನಗೆ ತೊಂದರೆ ಕೊಟ್ಟಿರಿ, ನಾನು ನಿಮ್ಮ ಬಗ್ಗೆ ದೂರು ಕೊಡುತ್ತೇನೆ. ದೊರೆ ನಿಮ್ಮನ್ನು ಶಿಕ್ಷಿಸುವರು”“ ಎಂದು ಹೇಳಿದ ಭೀಮ.

ಅಗಸನಿಗೆ ಭಯವಾಗಿ ಹೇಳಿದ ಸ್ವಾಮಿ ! ದಯವಿಟ್ಟು ಹಾಗೆ ಮಾಡಬೇಡಿ. ನನ್ನನ್ನು ಹೋಗಲು ಬಿಡಿ”“ ಎಂದು ಅಂಗಲಾಚಿದ.

ಅದು ಹೇಗೆ ಸಾಧ್ಯ? ನೀವು ಹಾಗೆ ಹೋಗಬೇಕಾದರೆ ನೂರು ಹೊನ್ನಿನ ನಾಣ್ಯಗಳು ಕೊಟ್ಟು ಹೋಗಿ”“ ಎಂದ ಭೀಮ.

ಅಗಸನ ಹತ್ತಿರ ಅಷ್ಟು ದುಡ್ಡು ಎಲ್ಲಿರುತ್ತೆ? “ದಯವಿಟ್ಟು ಐವತ್ತು ನಾಣ್ಯಗಳು ತೆಗೆದುಕೊಳ್ಳಿಎಂದು ಹೇಳಿ ಕೊಟ್ಟು ಹೋದ.

 ಆಗ ಅಕ್ಬರ್ ಬೀರಬಲ್ ಇಬ್ಬರೂ ಪ್ರವೇಶಿಸಿದರು. ಭೀಮ ನಡುಗಿ ಹೋದ. ಅವನಿಗೆ ಜೈಲು ವಾಸ ಆಯಿತು. ಬೀರಬಲ್ ಅಕ್ಬರನಿಗೆ, “ದೊರೆ,ಭ್ರಷ್ಟ ಎಂದೂ ಭ್ರಷ್ಟನೇಎಂದಾಗ ಅಕ್ಬರ್ ಹರ್ಷಿಸಿದ.

ಕುರುಡರು

ಒಮ್ಮೆ ಅಕ್ಬರ್ ತನ್ನ ಸೇವಕರಿಗೆ ರಾಜ್ಯದಲ್ಲಿರುವ ಕುರುಡರ ಪಟ್ಟಿ ತಯಾರಿಸಲು ಹೇಳಿದನು. ಸೇವಕರು ಕೆಲವು ದಿನಗಳಲ್ಲಿ ಒಂದು ವರದಿ ತಂದರು. ಆಗ ಅಲ್ಲಿ ಬೀರಬಲ್‌ನೂ ಇದ್ದನು.

ಬೀರಬಲ್, ನನ್ನ ರಾಣಿ ಕುರುಡರಿಗೆ ಏನಾದರೂ ಕೊಡಬೇಕೆಂದು ನಿಶ್ಚಯಿಸಿದ್ದಾಳೆ. ಅದಕ್ಕೆ ನಾನು ಕುರುಡರ ಪಟ್ಟಿ ತಯಾರಿಸಿದ್ದೇನೆ. ಅದೃಷ್ಟವಶದಿಂದ ಕುರುಡರು ಕೆಲವರೇ ಇದ್ದಾರೆಎಂದ ಅಕ್ಬರ್.

ಹುಜೂರ್, ಕುರುಡರು ನೋಡಬಲ್ಲ ಜನರಿಗಿಂತ ಹೆಚ್ಚು ಮಂದಿ ಇದ್ದಾರೆ.

ಹುಚ್ಚುಚ್ಚಾಗಿ ಮಾತಾಡಬೇಡ. ನನ್ನ ಸೇವಕರು ಇಡೀ ರಾಜ್ಯ ಓಡಾಡಿ ಈ ಪಟ್ಟಿ ಸಿದ್ಧ ಮಾಡಿದ್ದಾರೆ.

ಆದರೆ ಸ್ವಾಮಿ ! ಅವರು ಒಂದು ವಿಷಯ ಮರೆತಿದ್ದಾರೆ. ಅವರು ಕಣ್ಣುಗಳಿದ್ದೂ ನೋಡಲಾರದ ಜನರನ್ನು ಪಟ್ಟಿಗೆ ಸೇರಿಸಿಲ್ಲ

ಬೀರಬಲ್, ತಮಾಷೆಗೆ ಇದು ಹೊತ್ತಲ್ಲ.

ಹುಜೂರ್, ನನಗೆ ಸ್ವಲ್ಪ ಕಾಲಾವಕಾಶ ಕೊಡಿ: ನಾನು ಹೇಳಿದ್ದು ನಿಜ ಅಂತ ನಿಮಗೆ ಗೊತ್ತಾಗುತ್ತೆ

ಸರಿಎಂದ ಅಕ್ಬರ್.

ಕೆಲವು ದಿನಗಳಾದವು. ಬೀರಬಲ್ ನಗರದ ಮುಖ್ಯರಸ್ತೇಲಿ ನಿಂತುಒಬ್ಬ ಸೇವಕನಿಗೆ ನಾನು ಹೇಳಿದಂತೆ ಬರಿ ಎಂದ. ಸೇವಕ ಬೀರಬಲ್ ಹೇಳಿದ್ದು ಬರೆಯುತ್ತಾ ಇದ್ದ. ಸ್ವಲ್ಪ ಹೊತ್ತಿನಲ್ಲಿ ಜನ ಜಮಾಯಿಸಿದರು.

ಬೀರಬಲ್ ! ಏನು ಮಾಡುತ್ತಿದ್ದೀರಿ?” ಎಂದು ಕೇಳಿದ ಒಬ್ಬ

ಬೀರಬಲ್‌ರವರೇ, ನೀವು ಏನು ಮಾಡುತ್ತಿದ್ದೀರಿ ಅಂತ ತಿಳಿದುಕೊಳ್ಳಬಹುದೇ?”“ ಇನ್ನೊಬ್ಬ ಕೇಳಿದ.

ಬೀರಬಲ್ ಒಂದು ಮಂಚದ ಹಗ್ಗಗಳನ್ನು ಬಿಗಿಯುತ್ತಿದ್ದ. ಅವನು ಸೇವಕನಿಗೆ,

ಲೋ, ಬರಿ 1, 2,  ನೋಡ ನೋಡುತ್ತಿದಂತೆಯೆ ಅಲ್ಲಿ ನೂರು ಜನ ಸೇರಿಬಿಟ್ಟರು. ಎಲ್ಲರೂ ಬೀರಬಲ್ನನ್ನು ಏನು ಮಾಡುತ್ತಿದ್ದೀರಿ ಎಂದು ಕೇಳುವುದೇ ಆಯಿತು.

ಬೀರಬಲ್ ಉತ್ತರಿಸಲಿಲ್ಲ. ಕೆಲಸ ಮಾಡುತ್ತಲೇ ಇದ್ದ. ಸೇವಕ ಬೀರಬಲ್ ಹೇಳಿದ್ದನ್ನು ಕಾಗದದ ಮೇಲೆ ಬರೀತಿದ್ದ. ಸ್ವಲ್ಪ ಹೊತ್ತಿಗೆ ಸಂಖ್ಯೆ 250 ತಲುಪಿತು. ಅಕ್ಬರ್ನಿಗೂ ಸುದ್ದಿ ಮುಟ್ಟಿತು. ಅವನೂ ಅಲ್ಲಿಗೆ ಬಂದು ಬೀರಬಲ್‌ನನ್ನು ಏನು ಮಾಡುತ್ತಿದ್ದೆ ಎಂದು ಕೇಳಿದ.

ಬೀರಬಲ್ ಉತ್ತರಿಸಿ, “ಜಹಾಂಪನಾ ! ನಾನು ಈ ಮಂಚದ ಹಗ್ಗಗಳು ಬಿಗಿಯುತ್ತಿದ್ದೇನೆ. ಅದೇ ಕಾಲದಲ್ಲಿ ನಾನು ಒಂದು ಪಟ್ಟಿ ತಯಾರಿಸುತ್ತಿದ್ದೇನೆ.

ಏನು ಪಟ್ಟಿ?”“

ಕುರುಡರ ಪಟ್ಟಿಎಂದು ಹೇಳಿದ .

ಬೀರಬಲ್ ರಾಜನಿಗೆ ಒಂದು ಪಟ್ಟಿ ಕೊಟ್ಟು ಜಹಾಂಪನಾ, ಇಂದು 250 ಜನ ನನ್ನನ್ನು ಏನು ಮಾಡುತ್ತಿದ್ದೆ ಎಂದು ಕೇಳಿದರು. ಅದೂ ಹಗಲಿನಲ್ಲಿಎಂದು ಹೇಳಿದನಲ್ಲದೆ ಇವರೆಲ್ಲ ಕುರುಡರಲ್ಲವೆ?” ಎಂದು ಕೇಳಿದ.

ಅಕ್ಬರ್ ಪಟ್ಟಿ ನೋಡಿದ. ಅದರಲ್ಲಿ ಅವನ ಹೆಸರೂ ಇತ್ತು

 “ಏನು ಬೀರಬಲ್ ! ನನ್ನ ಹೆಸರೂ ಸೇರಿಸಿದ್ದಿ?”

ಸ್ವಾಮಿ, ನೀವು ಆ ಪ್ರಶ್ನೆ ಕೇಳಿದ ಕೊನೆ ವ್ಯಕ್ತಿಎಂದ ಬೀರಬಲ್. ಅಕ್ಬರನಿಗೆ ಬೀರಬಲ್ ಹೇಳಿದ್ದು ಅರ್ಥವಾಯಿತು. ಕಣ್ಣಿದ್ದೂ ಕುರುಡರಾಗಿರುವವರ ಸಂಖ್ಯೆ ಹೆಚ್ಚು ಎಂಬುದನ್ನು ಒಪ್ಪಿಕೊಂಡ. ““ಬೀರಬಲ್, ನಿಜವಾಗಿಯೂ ನೀನು ಜಾಣ, ನನ್ನನ್ನೂ ಕುರುಡನನ್ನಾಗಿ ಮಾಡಿಬಿಟ್ಟೆಎಂದು ಅವನ ಬೆನ್ನು ತಟ್ಟಿದ.

 


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad

Search for Article