ಅಕ್ಬರ್ ಬೀರಬಲ್ ಕತೆಗಳು
Stories of Akbar and Birbal area unit very fashionable in India. In many instances Birbal uses his wit
and intelligence to calm the ire of Emperor Akbar and amuse him at constant
time. It accustomed be a part of the oral tradition of storytelling, however in
recent years these stories are compiled into books by varied authors.
Birbal was appointed by Akbar as a Minister (Mantri) and accustomed be a
writer and Singer in around 1556–1562. He had an in depth association with
Emperor Akbar and was one in all his most vital courtiers, a part of a gaggle
referred to as the navaratnas (nine jewels).
Local people tales emerged primarily in nineteenth century involving his
interactions with Akbar, him representational process him as being very clever
and humourous.
We are happy to bring Akbar and Birbal stories in kannada launguage.
ಬೀರಬಲ್ ಅಕ್ಬರನ ಆಸ್ಥಾನಕ್ಕೆ ಬಂದದ್ದು ಹೇಗೆ?
ಬೀರಬಲ್ ದೇಹಲಿಯಿಂದ ಬಹುದೂರದಲ್ಲಿ ವಾಸಿಸುತ್ತಿದ್ದ. ಅವನಿಗೆ ಅಕ್ಬರನ ಹಾಗೂ ಅವನ ಆಸ್ಥಾನಿಕರ ಬಗ್ಗೆ ಒಮ್ಮೆ ತಿಳಿದು ಬಂದಿತು. ತಾನೂ ದೆಹಲಿಗೆ ಹೋಗಿ ಎಲ್ಲರನ್ನು ನೋಡಿ ಬರೋಣವೆಂದು ದೆಹಲಿಗೆ ಹೊರಟ. ಬಹುದಿನಗಳ ಪ್ರಯಾಣದ ನಂತರ ಬೀರಬಲ್ ದೆಹಲಿಗೆ ಬಂದ. ಅರಮನೆಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಅವನನ್ನು ಒಬ್ಬ ಕಾವಲುಗಾರ ತಡೆದ.
“ಎಲ್ಲಿಗೆ ಹೋಗುತ್ತಿದ್ದಿ? ಯಾರು ನೀನು?” ಎಂದು ಕೇಳಿದ.
ಬೀರಬಲ್ ಮಾತನಾಡಿ, “ಅಯ್ಯಾ ! ನಾನು ಬಹುದೂರದಿಂದ ಬಂದಿದ್ದೇನೆ. ರಾಜನನ್ನು ನೋಡಬೇಕಾಗಿದೆ. ಒಳಗೆ ಬಿಡು'' ಎಂದು ಹೇಳಿದ.
ಕಾವಲುಗಾರ ಅವನನ್ನು ಒಳಗೆ ಬಿಡಲಿಲ್ಲ. ಬೀರಬಲ್ ನಿಂದ ಏನಾದರೂ ಹಣ ಸಿಗುವುದೇ ಎಂದು ಕಾವಲುಗಾರ ನಿರೀಕ್ಷಿಸಿದ್ದ.
ಬೀರಬಲ್ ಬಳಿ ಹಣವಿರಲಿಲ್ಲ. ಆಗ ಅವನಿಗೆ ಥಟ್ಟನೆ ಒಂದು ಉಪಾಯ ಹೊಳೆಯಿತು.
“ನೋಡಯ್ಯಾ, ನನ್ನನ್ನು ಒಳಗೆ ಬಿಡು. ರಾಜನು ಸಂತೋಷಗೊಂಡು ನನಗೆ ಏನಾದರೂ ಕೊಡುತ್ತಾನೆ. ರಾಜ ಏನು ಕೊಡುತ್ತಾನೋ ಅದರಲ್ಲಿ ಅರ್ಥ ನಿನಗೆ ನಾನು ಕೊಡುತ್ತೇನೆ'' ಎಂದು ಹೇಳಿದ.
ಕಾವಲುಗಾರ ಹಣದಾಸೆಯಿಂದ ಬೀರಬಲ್ನನ್ನು ಒಳಗೆ ಬಿಟ್ಟ ಬೀರಬಲ್ ಅಕ್ಬರನ ಆಸ್ಥಾನವನ್ನು ಪ್ರವೇಶಿಸಿ ತನ್ನ ಚಾತುರ್ಯದ ಮಾತುಗಳಿಂದ ಮತ್ತು ಹಾಸ್ಟೋಕ್ತಿಗಳಿಂದ ರಾಜನ ಕೃಪೆಗೆ ಪಾತ್ರನಾಗಿ ಹೋದ. ಅವನನ್ನು ತನ್ನ ಆಸ್ಥಾನದಲ್ಲಿಯೇ ಇರಿಸಿಕೊಳ್ಳಲು ನಿಶ್ಚಯಿಸಿದ.
'ಬೀರಬಲ್, ನೀನು ಏನು ಕೇಳಿದರೂ ಕೊಡುತ್ತೇನೆ. ನಿನಗೇನು ಬೇಕು?'' ಎಂದ ಕೇಳಿದ.
ಬೀರಬಲ್, “ಹುಜೂರ್! ನೀವು ನಿಜವಾಗಿಯೂ ನನ್ನಲ್ಲಿ ಕೃಪೆ ತೋರಿ ಕೊಡುವುದೇ ಆದರೆ ನಿಮ್ಮ ಅರಮನೆ ಮಹಾದ್ವಾರದ ಕಾವಲುಗಾರನಿಂದ ನನಗೆ ನೂರು ಛಡಿ ಏಟು ಕೊಡಿಸಿ'' ಎಂದು ಹೇಳಿದ. ಅಕ್ಟರನಿಗೆ ಬೀರಬಲ್‌ನ ಕೋರಿಕೆ ಕೇಳಿ ಆಶ್ಚರ್ಯವಾಯಿತು. ಅವನು,
'ಬೀರಬಲ್, ನಿಜವಾಗಿಯೂ ನಿನಗೆ ಚಾವಟಿ ಏಟುಗಳು ಬೇಕೆ?” ಎಂದು ಕೇಳಿದ.
ಬೀರಬಲ್, "ಮಹಾಪ್ರಭು! ಇದು ಸರಿಯಾದ ಬೇಡಿಕೆಯಲ್ಲ ಎಂದು ನನಗೂ ಗೊತ್ತು. ಆದರೂ ನನಗೆ ನೂರು ಚಾವಟಿ ಏಟು ಹೊಡೆಸಿ'' ಎಂದ.
ಅಕ್ಬರ್ ಬೇರೆ ಮಾರ್ಗ ಕಾಣದೆ ಕಾವಲುಗಾರನನ್ನು ಕರೆಯಿಸಿ “ಬೀರಬಲ್‌ನಿಗೆ ನೂರು ಚಾವಟಿ ಏಟು ಕೊಡು' ಎಂದು ಆಜ್ಞೆ ಮಾಡದ. ಕಾವಲುಗಾರ ಛಡಿ ಏಟು ಕೊಡಲು ಹೊರಟಾಗ ಬೀರಬಲ್ ಬೇಜಾರಿಲ್ಲದೆ ಅವನಿಂದ ಐವತ್ತು ಏಟುಗಳನ್ನು ಹೊಡೆಸಿಕೊಂಡ. ಬಳಿಕ ನಿಲ್ಲಿಸು ಎಂದು ಹೇಳಿದ.
ಆಗ ಅಕ್ಟರ್, 'ಬೀರಬಲ್, ನೀನೇನಾದರೂ ನಿನ್ನ ಮನಸ್ಸು ಬದಲಾಯಿಸಿದೆಯಾ?” ಎಂದು ಕೇಳಿದ.
ಆಗ ಬೀರಬಲ್, 'ಇಲ್ಲ ಹುಜೂರ್! ನಾನು ಈ ನಿಮ್ಮ ಕಾವಲುಗಾರನಿಗೆ ರಾಜ ನನಗೆ ಏನು ಕೊಡುತ್ತಾನೆಯೋ ಅದರಲ್ಲಿ ಅರ್ಥ ಪಾಲು ನಿನಗೆ ಕೊಡುತ್ತೇನೆ ಎಂದು ಹೇಳಿ ಒಳಗೆ ಬಂದಿದ್ದೇನೆ. ಇವನು ಈ ರೀತಿ ವಾಗ್ದಾನ ಪಡೆಯುವವರೆಗೂ ಅರಮನೆಯೊಳಕ್ಕೆ ನನ್ನನ್ನು ಬಿಡಲೇ ಇಲ್ಲ, ಆದುದರಿಂದ ಉಳಿದ ಐವತ್ತು ಛಡಿ ಏಟುಗಳನ್ನು ಈತನಿಗೆ ಕೊಡಬೇಕಾಗಿದೆ'' ಎಂದನು.
ಅಕ್ಟರ್ ಸಿಟ್ಟಾದನು. “ಏನೆಂದೆ? ಇವನು ನಿನ್ನಿಂದ ಹಣವನ್ನು ಅಪೇಕ್ಷಿಸಿದನೆ?” ಎಂದು ಕೇಳಿದನು.
ಬೀರಬಲ್, 'ಪ್ರಭು ! ಅಪರಿಚಿತರು ಬಂದಾಗ ಸ್ವಲ್ಪ ಚಿನ್ನವನ್ನೂ ಬೆಳ್ಳಿಯನ್ನೂ ಕೊಡುವುದು ಇಲ್ಲಿಯ ಪದ್ಧತಿ ಎಂದೂ ಹೇಳಿದ'' ಎಂದು ತಿಳಿಸಿದ.
ಅಕ್ಟರ್ ರೇಗಿಕೊಂಡು, “ಹಾಗಿದ್ದರೆ ಇವನಿಗೆ ಬಹುಮಾನ ಕೊಡಬೇಕಾದುದು ಅಗತ್ಯವಾಗಿದೆ' ಎಂದು ಇನ್ನೊಬ್ಬ ಸಿಪಾಯಿಗೆ ಕಾವಲುಗಾರನಿಗೆ ಐವತ್ತು ಛಡಿ ಏಟು ಕೊಡಲು ಆಜ್ಞಾಪಿಸಿದ.
ಅರಮನೆ ಕಾವಲುಗಾರ ಅವಮಾನದಿಂದ ತಲೆತಗ್ಗಿಸಿದ. ಛಡಿ ಏಟು ತಿಂದ ಬಳಿಕ ಉತ್ತಮನಾಗಿರಲು ನಿರ್ಧರಿಸಿದ.
ಎಲ್ಲರೂ ಅಳಿಯಂದಿರೇ
ಒಂದು ದಿನ ಅಕ್ಟರ್ ಮತ್ತು ಬೀರಬಲ್ ಇಬ್ಬರೂ ಬೇಟೆಗೆ ಹೋಗಿದ್ದರು. ಮಾರ್ಗದಲ್ಲಿ ಅಕ್ಟರನಿಗೆ ಒಂದು ಅಂಕುಡೊಂಕಾದ ಮರ ಕಾಣಿಸಿತು. ಆಗ ಅವನು ಬೀರಬಲ್‌ನನ್ನು , “ಅಯ್ಯಾ ಬೀರಬಲ್ ! ಈ ಮರ ಏಕೆ ಹೀಗೆ ಡೊಂಕಾಗಿದೆ?' ಎಂದು ಪ್ರಶ್ನಿಸಿದನು.
ಬೀರಬಲ್ ಉತ್ತರಿಸಿ, “ಮಹಾರಾಜ ! ಈ ಮರ ಕಾಡಿನ ಉಳಿದೆಲ್ಲ ಮರಗಳ ಅಳಿಯ. ಆದ್ದರಿಂದಲೇ ಡೊಂಕಾಗಿದೆ, ವಕ್ರವಾಗಿದೆ'' ಎಂದ. ಅಕ್ಟರ್ ಚಕಿತನಾಗಿ, “ಅದೇನು ಹಾಗೆ ಹೇಳುವೆ?'' ಎಂದು ಕೇಳಿದನು.
ಬೀರಬಲ್ ಒಂದು ಗಾದೆಯನ್ನು ಉದಾಹರಿಸಿ, “ಸ್ವಾಮಿ, ಒಂದು ನಾಯಿಯ ಬಾಲ ಹಾಗೂ ಒಬ್ಬ ಅಳಿಯ ಯಾವಾಗಲೂ ಡೊಂಕು''
ಅಕ್ಟರ್, 'ಏನೆಂದೆ? ಹಾಗಿದ್ದರೆ ನನ್ನ ಅಳಿಯನೂ ಡೊಂಕು ಎನ್ನುವೆಯಾ?” ಎಂದು ಕೇಳಿದನು.
ಬೀರಬಲ್, “ಹೌದು ಮಹಾಪ್ರಭು! ಅನುಮಾನವೇ ಇಲ್ಲ' ಎಂದ. ಆಗ ಅಕ್ಟರ್, "ಹೌದೇನು? ಹಾಗಿದ್ದರೆ ನನ್ನ ಅಳಿಯನನ್ನು ಶಿಲುಬೆ ಗೇರಿಸು' ಎಂದು ಹೇಳಿಬಿಟ್ಟನು.
ಕೆಲದಿನಗಳುರುಳಿದವು. ಬೀರಬಲ್ ಅಕ್ಟರನ ಬಳಿಗೆ ಮೂರು ಶಿಲುಬೆಗಳನ್ನು ಹಿಡಿದು ತಂದನು. ಒಂದು ಚಿನ್ನದ ಶಿಲುಬೆಯಾಗಿದ್ದರೆ ಇನ್ನೆರಡು ಬೆಳ್ಳಿ ಹಾಗೂ ಕಬ್ಬಿಣದ ಶಿಲುಬೆಗಳಾಗಿದ್ದವು. ಅಕ್ಟರ್ ಅವನ್ನು ನೋಡಿ, “ಬೀರಬಲ್, ಏಕೆ ಮೂರು ಶಿಲುಬೆಗಳನ್ನು ತಂದಿರುವೆ?” ಎಂದು ಕೇಳಿದನು.
ಬೀರಬಲ್ನು ಉತ್ತರಿಸಿ, "ಮಹಾಪ್ರಭು ! ಒಂದು ನಿಮಗೆ, ಒಂದು ನನಗೆ ಮತ್ತು ಇನ್ನೊಂದು ನಿಮ್ಮ ಅಳಿಯನಿಗೆ'' ಎಂದನು.
ಅಕ್ಟರ್ ಸಿಟ್ಟಾಗಿ, “ನಾವೆಲ್ಲ ಏಕೆ ಶಿಲುಬೆಗೇರಬೇಕು?” ಎಂದು ಕೇಳಿದ.
ಬೀರಬಲ್ ಗಂಭೀರವದನನಾಗಿ, “ಮಹಾರಾಜ! ನಾವೆಲ್ಲರೂ
ಯಾರೋ ಒಬ್ಬರ ಅಳಿಯಂದಿರೆ ಅಲ್ಲವೆ?” ಎಂದು ಹೇಳಿದನು. ಅಕ್ಟರನಿಗೆ ಬೀರಬಲ್‌ನ ಜಾಣ್ಯ ಉತ್ತರ ಅರ್ಥವಾಯಿತು. ಅವನು ತನ್ನ ಅಳಿಯನನ್ನು ಶಿಲುಬೆಗೇರಿಸದೆ ಬಿಟ್ಟು ಬಿಡಲು ಹೇಳಿದನು.
ಕನಸಿನ ಅರ್ಥವೇನು?
ಒಂದು ದಿನ ಮೊಗಲ್ ಚಕ್ರವರ್ತಿ ಅಕ್ಟರನಿಗೆ ಒಂದು ಹಲ್ಲು ವಿನಹ ಉಳಿದ ಎಲ್ಲ ಹಲ್ಲುಗಳನ್ನೂ ಕಳೆದುಕೊಂಡಿದ್ದಂತೆ ಕನಸು ಬಿತ್ತು ಎಚ್ಚೆತಾಗ ಅಕ್ಟರನಿಗೆ ಗಾಬರಿಯಾಗಿ ಆ ಕನಸಿನ ಅರ್ಥವೇನೆಂದು ತಿಳಿಯುವ ಕುತೂಹಲ ಉಂಟಾಯಿತು.
ಬೆಳಿಗ್ಗೆ ಅಕ್ಟರ್ ಎಲ್ಲ ಜ್ಯೋತಿಷಿಗಳನ್ನು ಬರ ಮಾಡಿಕೊಂಡು ಅವರಿಗೆ ತನಗೆ ರಾತ್ರಿ ಬಿದ್ದ ಕನಸನ್ನು ಹೇಳಿ ಅದರ ಅರ್ಥವನ್ನು ಹೇಳಲು ಕೋರಿದ. ಜ್ಯೋತಿಷಿಗಳು ಎಲ್ಲರೂ ಒಂದೆಡೆ ಕುಳಿತು ಚರ್ಚಿಸಿದರು. ಬಳಿಕ ಅವರೆಲ್ಲ ರಾಜನ ಬಳಿಗೆ ಬಂದು, “ಮಹಾರಾಜ! ಈ ಕನಸಿನ ಅರ್ಥ ಈ ರೀತಿ ಇದೆ. ನಿಮ್ಮ ಎಲ್ಲ ಬಂಧುಗಳು ನೀವು ಸಾಯುವ ಮೊದಲೇ ಸತ್ತು ಹೋಗುತ್ತಾರೆ' ಎಂದು ಹೇಳಿದರು.
ಕನಸಿನ ಅರ್ಥ ಕೇಳಿ ಅಕ್ಷರನಿಗೆ ಬಹಳ ದುಃಖವಾಯಿತು. ಎಲ್ಲರನ್ನೂ ಹೋಗಿ ಹೋಗಿ ಎಂದು ಹೇಳಿಕಳುಹಿಸಿಬಿಟ್ಟ, ಆಗ ಅಲ್ಲಿಗೆ ಬೀರಬಲ್ ಬರಲು ಅಕ್ಟರ್ ಅವನಿಗೂ ತನ್ನ ಕನಸನ್ನು ಕುರಿತು ತಿಳಿಸಿ, “ಅಯ್ಯಾ ಬೀರಬಲ್ ! ನನ್ನ ಕನಸಿನ ಅರ್ಥವನ್ನು ನೀನೇನಾದರೂ ಬಲ್ಲೆಯಾ?” ಎಂದು ಕೇಳಿದ.
ಬೀರಬಲ್ ಸ್ವಲ್ಪ ಹೊತ್ತು ಆಲೋಚಿಸಿ, “ಮಹಾರಾಜ ! ನಿಮ್ಮ ಕನಸು ತುಂಬಾ ಅರ್ಥಪೂರ್ಣವಾಗಿಯೇ ಇದೆ. ನೀವು ನಿಮ್ಮ ಎಲ್ಲ ಬಂಧುಗಳಿಗಿಂತ ಹೆಚ್ಚು ಕಾಲ ಬದುಕಿರುತ್ತೀರಿ'' ಎಂದು ಹೇಳಿದ.
ಬೀರಬಲ್‌ನ ಚಾತುರ್ಯದಿಂದ ಕೂಡಿದ ಉತ್ತರ ಕೇಳಿ ಅಕ್ಟರನಿಗೆ ತುಂಬಾ ಸಂತೋಷವಾಯಿತು. ಅವನಿಗೆ ಕೈತುಂಬಾ ಹೊನ್ನು ಕೊಟ್ಟು ಕಳುಹಿಸಿದ.
ನಾನು ಕೋಳಿಯಲ್ಲ
ಬೀರಬಲ್ ತುಂಬಾ ಚತುರನೆಂದು ಪ್ರಖ್ಯಾತನಾಗಿದ್ದ. ಅಕ್ಟರನಿಗೆ ಒಮ್ಮೆ ಹೇಗಾದರೂ ಮಾಡಿ ಬೀರಬಲ್‌ನನ್ನು ಮೂರ್ಖನನ್ನಾಗಿಸಬೇಕೆಂದು ಆಸೆಯಾಯಿತು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ, ಏಕೆಂದರೆ ಬೀರಬಲ್ ಮಹಾಬುದ್ಧಿವಂತನಿದ್ದ, ಆದರೂ ಅಕ್ಟರ್ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಬೇಕೆಂದು ಒಂದು ಉಪಾಯ ಹೂಡಿದ.
ಒಂದು ದಿನ ಬೀರಬಲ್ ಇನ್ನೂ ಸಭೆಗೆ ಬಂದಿರಲಿಲ್ಲ, ಅಕ್ಟರ್ ತನ್ನ ಆಸ್ಥಾನಿಕರೆಲ್ಲರಿಗೂ ಒಂದೊಂದು ಕೋಳಿ ಮೊಟ್ಟೆ ಕೊಟ್ಟು ತಾನು ಬೀರಬಲ್ನನ್ನು ಮೂರ್ಖನನ್ನಾಗಿಸುವ ಪ್ರಯತ್ನದಲ್ಲಿದ್ದೇನೆ ಎಂದೂ ಹೇಳಿದ..
ಸ್ವಲ್ಪ ಹೊತ್ತಿನಲ್ಲೆ ಬೀರಬಲ್ ಆಸ್ಥಾನವನ್ನು ಪ್ರವೇಶಿಸಿದ. ಅವನನ್ನು ಕಂಡು ಅಕ್ಟರ್ ಆಸ್ಥಾನಿಕರನ್ನುದ್ದೇಶಿಸಿ,
“ನಿನ್ನೆ ನಾನು ನನ್ನ ಕನಸಿನಲ್ಲಿ ಒಬ್ಬ ಪವಿತ್ರ ವ್ಯಕ್ತಿಯನ್ನು ನೋಡಿದೆ. ಆತ ಹೇಳಿದ ಪ್ರಕಾರ ಯಾರು ನನ್ನ ತೋಟದಲ್ಲಿರುವ ಕೊಳದಲ್ಲಿಳಿದು ಒಂದು ಕೋಳಿಮೊಟ್ಟೆಯನ್ನು ತರುವರೋ ಅವರು ಮಾತ್ರ ನನಗೆ ಪ್ರಾಮಾಣಿಕರಾಗಿ ನಡೆದುಕೊಳ್ಳುತ್ತಿದ್ದಾರೆಂದು ಭಾವಿಸುತ್ತೇನೆ. ಆದುದರಿಂದ ನೀವೆಲ್ಲ ನಿಮ್ಮ ಪ್ರಾಮಾಣಿಕತೆಯನ್ನು ಪ್ರದರ್ಶಿಸಲು ಅರಮನೆಯ ಕೊಳದಲ್ಲಿಳಿದು ಒಂದೊಂದು ಮೊಟ್ಟೆಯ ಸಮೇತ ಬನ್ನಿ ನೋಡೋಣ'' ಎಂದು ಹೇಳಿದ.
ಎಲ್ಲ ಮಂತ್ರಿಗಳು ಮೊದಲೆ ಅಕ್ಟರ್ ಸೂಚನೆ ಕೊಟ್ಟಿದ್ದಂತೆ ಕೂಡಲೆ ಅರಮನೆಯ ಕೊಳಕ್ಕೆ ಹೋಗಿ ಅದರಲ್ಲಿಳಿದು ರಾಜನು ಬೆಳಿಗ್ಗೆ ನೀಡಿದ್ದ ಮೊಟ್ಟೆಯೊಡನೆ ಹೊರಬಂದು ರಾಜನ ಕೈಗೆ ಮೊಟ್ಟೆಗಳನ್ನು ಕೊಟ್ಟರು. ಅಕ್ಟರ್ ಆ ಎಲ್ಲರನ್ನು ಪ್ರಾಮಾಣಿಕರೆಂದು ಕೊಂಡಾಡಿದ.
ಬೀರಬಲ್‌ನ ಸರದಿ ಬಂದಾಗ ಅವನೂ ಕೊಳದಲ್ಲಿಳಿದು ಮೊಟ್ಟೆಗಾಗಿ ಹುಡುಕಾಡಿದ. ಆದರೆ ಅಲ್ಲಿ ಯಾವ ಮೊಟ್ಟೆಯೂ ಸಿಗಲಿಲ್ಲ. ಆಗ ಬೀರಬಲ್ನಿಗೆ ಚಕ್ರವರ್ತಿ ಏನೋ ತಮಾಷೆ ಮಾಡುತ್ತಿದ್ದಾನೆಂದು ತಿಳಿದು ಹೋಯಿತು. ಕೊಳದಿಂದ ಈಚೆಗೆ ಬಂದ ಬೀರಬಲ್ ಸಭೆಗೆ ಪ್ರವೇಶಿಸಿ ಹುಂಜ ಕೂಗುವಂತೆ ಕೂಗತೊಡಗಿದ.
ಬೀರಬಲ್ ಮಾಡುತ್ತಿದ್ದ ಗದ್ದಲ ಕೇಳಲಾರದೆ ಅಕ್ಟರ್, 'ಬೀರಬಲ್, ನಿನಗೇನಾದರೂ ಬುದ್ಧಿ ಕೆಟ್ಟಿದೆಯೊ ಹೇಗೆ? ಕೊಳದಲ್ಲಿಳಿದು ಮೊಟ್ಟೆ ತರಲಿಲ್ಲವೆ? ನಿಲ್ಲಿಸು ನಿನ್ನ ಕೂಗಾಟವನ್ನು'' ಎಂದು ಹೇಳಿದ.
ಬೀರಬಲ್ ಕೂಗಾಟ ನಿಲ್ಲಿಸಿ, 'ಹುಜೂರ್ ! ಕೋಳಿಗಳು ಮಾತ್ರ ಮೊಟ್ಟೆಗಳನ್ನಿಡುತ್ತವೆ. ನಾನು ಹುಂಜ. ಕೋಳಿಯಲ್ಲಿ ಹೇಗೆ ಮೊಟ್ಟೆ ತರಲು ಸಾಧ್ಯ ಹೇಳಿ'' ಎಂದನು.
ಸಭಿಕರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕರು. ಅಕ್ಟರ್ ಪೆಚ್ಚಾಗಿ ಹೋದ. ಬೀರಬಲ್ನನ್ನು ಎಂದೂ ಮೂರ್ಖನನ್ನಾಗಿಸಲಾರೆ ಎಂದು ಕೊಂಡು ಸುಮ್ಮನಾದನು.
ಹೆಂಡತಿಗೆ ಹೆದರದ ಗಂಡಸರು ಯಾರು?
ಒಮ್ಮೆ ಅಕ್ಟರ್ ಮಾರುವೇಷದಲ್ಲಿ ನಗರ ಸಂಚಾರ ಮಾಡುತ್ತಿದ್ದಾಗ ಒಂದು ಮನೆಯೊಳಗೆ ಗಂಡ ಹೆಂಡತಿ ಜಗಳವಾಡುತ್ತಿದ್ದುದು ಕೇಳಿಸಿತು. ಗಂಡನಿಗಿಂತ ಹೆಂಡತಿಯದೇ ಮೇಲುಗೈ. ಅವಳು ಗಂಡನನ್ನು ಹೀನಾಮಾನ ಬಯ್ಯುತ್ತಿದ್ದಳು. ಒಂದೂ ಮಾತನಾಡದೆ ಗಂಡ ಸುಮ್ಮನಿದ್ದು ಬಿಟ್ಟ.
ಅರಮನೆಗೆ ಹಿಂದಿರುಗಿದಾಗ ಅಕ್ಟರ್ ಬೀರಬಲ್ನನ್ನು ಕರೆಯಿಸಿ ಕೇಳಿದ. “ಬೀರಬಲ್, ಎಲ್ಲೆಲ್ಲೂ ಹೆಂಡತಿಗೆ ಹೆದರಿ ನಡೆಯುವ ಗಂಡಸರೇ ಕಂಡು ಬರುತ್ತಿದ್ದಾರೆ. ಹೆಂಡತಿಗೆ ಹೆದರದ ಗಂಡಸರು ಯಾರೂ ಇಲ್ಲವೆ?''
ಬೀರಬಲ್, "ಹುಜೂರ್, ಲೋಕವೇ ಹೀಗೆ ಎಲ್ಲ ಗಂಡಸರೂ ತಮ್ಮ ಹೆಂಡತಿಯರ ಅಡಿಯಾಳುಗಳೇ, ನಿಮಗೆ ಸಂದೇಹವಾದರೆ ಮದುವೆಯಾದ ಗಂಡಸರನ್ನು ಅರಮನೆಗೆ ಕರೆಸೋಣ, ಹೆಂಡತಿಗೆ ಹೆದರಿ ನಡೆಯುವವರೆಲ್ಲ ನಿಮ್ಮ ಬಲಗಡೆಗೆ ನಿಂತುಕೊಳ್ಳಲು ಹೇಳೋಣ'' ಎಂದ.
ಅಕ್ಟರ್ ಒಪ್ಪಿದ. ಹಾಗೆಯೇ ಡಂಗುರ ಸಾರಿಸಲಾಯಿತು. ವಿವಾಹಿತ ಗಂಡಸರನ್ನು ಅರಮನೆಗೆ ಕರೆಯಿಸಿ, “ಹೆಂಡತಿಗೆ ಹೆದರಿ ನಡೆಯುವರೆಲ್ಲ ನನ್ನ ಬಲಕ್ಕೆ ನಿಲ್ಲಿ'' ಎಂದು ಮತ್ತೊಮ್ಮೆ ಆಜ್ಞೆ ಮಾಡಿದ ಅಕ್ಟರ್,
ಅರಸನ ಕಟ್ಟಳೆ, ಅರಮನೆಗೆ ಬಂದ ಗಂಡಸರೆಲ್ಲ ರಾಜನ ಬಲಗಡೆಗೆ ನಿಂತರು. ಒಬ್ಬ ಮಾತ್ರ ಬೇರೆಯೆ ನಿಂತ.
ಅಕ್ಟರನಿಗೆ ಇವನೊಬ್ಬನಾದರೂ ಹೆಂಡತಿಗೆ ಹೆದರುವುದಿಲ್ಲವಲ್ಲ ಎಂದು ಸಮಾಧಾನವಾಯಿತು.
ಆದರೆ ಬೀರಬಲ್ ಹಾಗೆ ನಿಂತವನನ್ನು ಯಾಕೆ ನೀನು ಪ್ರತ್ಯೇಕವಾಗಿ ನಿಂತಿದ್ದಿ?' ಎಂದು ಕೇಳಿದ.
ಅದಕ್ಕೆ ಅವನು, “ಸ್ವಾಮಿ ನಾನು ಮನೆಯಿಂದ ಹೊರಡುವಾಗ ನನ್ನ ಹೆಂಡತಿ ಪೆದ್ದುಪೆದ್ದಾಗಿ ಗುಂಪಿನ ಜತೆ ನೀವೂ ನಿಂತುಬಿಡಬೇಡಿ ಎಂದು ಗದರಿಸಿ ಹೇಳಿದ್ದಳು'' ಎಂದು ಉತ್ತರಿಸಿದ.
ಆಗಷ್ಟೆ ಅಕ್ಟರನಿಗೆ ಹೆಂಡತಿಗೆ ಹೆದರದ ಗಂಡಸರು ಯಾರೂ ಇಲ್ಲ ಎಂಬುದು ಖಚಿತವಾಯಿತು: