ಕನ್ನಡ ಜೋಕ್ಸ್ - Jokes in kannada
ನಗೆಹನಿಗಳು ಜೀವನದಲ್ಲಿ ಒಂದು ರೀತಿಯ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಮನುಷ್ಯನ
ಜೀವನದಲ್ಲಿನ ದಿನನಿತ್ಯದ ಜಂಜಾಟವನ್ನು ಮರೆಯಲು ಇಂತಹ ನಗೆಹನಿಗಳು ಸಹಾಯ ಮಾಡುತ್ತದೆ. ಎಲ್ಲರನ್ನು
ಹಸನ್ಮುಖರನ್ನಾಗಿಸಲು ನನಗೆ ಹನಿಗಳಿಂದ ಮಾತ್ರ ಸಾಧ್ಯ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಕನ್ನಡದಲ್ಲಿ ನಕ್ಕವರು ನೂರು ಕಾಲ ಬಾಳಿಯಾರರು ಎಂಬ ಅನುಭವ ಪೂರ್ಣ ಗಾದೆ ಮಾತೇ ಇದೆ.
ಮನುಷ್ಯರ ಬೇಸರ ನೀಗಲು ನಗೆಹನಿಗಳು ಉತ್ತಮ ಸಾಧನಗಳಾಗಿವೆ.
ನಗೆಹನಿಗಳು ಕೇವಲ ಒಬ್ಬರ ಸೃಷ್ಟಿಯಲ್ಲ. ಮಾತಿನ ಸಂದರ್ಭದಲ್ಲಿ ನಗೆತರಿಸುವಂತಹ ವಾಕ್ಯಗಳು
ಒಮ್ಮಿಂದೊಮ್ಮೆಲೆ ಉದ್ಭವಿಸುವ ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಪ್ರಸಾರವಾಗುತ್ತವೆ.
ಆದುದರಿಂದಲೇ ನಗೆ ಹನಿಗಳನ್ನು ಕೇಳಿದ ಪ್ರತಿಯೊಬ್ಬರಿಗೂ ತಾನು ಈ ಮಾತುಗಳನ್ನು ಹಿಂದೆ
ಎಲ್ಲಿಯೂ ಕೇಳಿರುವೆನೆಂದು ಅನಿಸುತ್ತದೆ. ನಗೆಹನಿಗಳಲ್ಲಿ ಹೊಸತು-ಹಳತು ಎಂಬ ಬೇದವಿರುವುದಿಲ್ಲ
ಅವು ಎಂದೆಂದಿಗೂ ನಿತ್ಯನೂತನವಾಗಿ ಉಳಿಯುತ್ತದೆ.
ನಗುವುದರಿಂದ ಮನುಷ್ಯನ ಮನಸ್ಸು ಉಲ್ಲಾಸಗೊಳ್ಳುತ್ತದೆ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು
ಎಂದು ಬಹಳಷ್ಟು ಜನ ಅಭಿಪ್ರಾಯ ಪಡುತ್ತಾರೆ. ಈ ವಿಷಯದಲ್ಲಿ ಬಹಳಷ್ಟು ಸತ್ಯ ಅಡಗಿದೆ ಎಂಬುದರಲ್ಲಿ
ಎಳ್ಳಷ್ಟು ಸಂಶಯವಿಲ್ಲ.
ಯಾವುದೇ ವ್ಯಕ್ತಿ ಸದಾ ಗಂಭೀರವಾಗಿದ್ದರೆ ಕೋಪದಿಂದ ಕೂಡಿದ್ದರೆ ಅಂಥವನು ಸಮಾಜದಲ್ಲಿ
ಒಳ್ಳೆಯ ಹೆಸರನ್ನು ಪಡೆಯಲು ಸಾಧ್ಯವಾಗುವುದಿಲ್ಲ. ತಾನು ನಗುತ್ತಾ ಇತರರನ್ನು ನಗಿಸುತ್ತಿದ್ದಾರೆ
ಅಂತಹ ವ್ಯಕ್ತಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.
ಇದನ್ನು ಓದಿದವರು, ತಮ್ಮ
ಮಿತ್ರರಿಗೂ, ಬಂಧುಗಳಿಗೂ ಹೇಳಿದರೆ ಅವರು ಸಹ ನಕ್ಕು ತಮ್ಮ
ಮನಸ್ಸನ್ನು ಮುದಗೊಳಿಸುವರೆಂಬ ನಂಬಿಕೆ ನಮಗಿದೆ.
'ನಗಬೇಕು ನಗಿಸಬೇಕು ಅದೇ ಮಾನವಧರ್ಮ' ನಗಲಾರೆ
ಅಳುವೆ ಎಂದರೆ ಅದು ನಿಮ್ಮ ಕರ್ಮ.
Kannada jokes list - ಕನ್ನಡ ಜೋಕ್ಸ್ ಪಟ್ಟಿಗಳು
ಪುನರ್ಜನ್ಮ
ಮ್ಯಾನೇಜರ್ ಒಬ್ಬ ತನ್ನ ಕ್ಲರ್ಕ್ ರಾಮ್ನ್ನನ್ನು ಕ್ಯಾಬಿನ್ ಒಳಗೆ ಕರೆದು ''ನೀನು ಪುನರ್ಜನ್ಮವನ್ನು ನಂಬ್ತೀಯಾ?" ಎಂದು
ಪ್ರಶ್ನಿಸಿದರು.
"
ಹೂಂ ಸರ್ ! "ಎಂದ ರಾಮ್ "ನೀನು
ನಿನ್ನ ತಾತನ ಅಂತ್ಯ ಸಂಸ್ಕಾರಕ್ಕೆಂದು ನಿನ್ನೆ ಮಧ್ಯಾಹ್ನ ರಜಾ ಹಾಕಿ ಹೋದೆಯಲ್ಲ ಆಮೇಲೆ ಸ್ವಲ್ಪ
ಹೊತ್ತಿನ ನಂತರ ನಿಮ್ಮ ತಾತ ನಿಮ್ಮನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದರು " ಎಂದರು
ಮ್ಯಾನೇಜರ್ ಹಲ್ಲುಕಡಿಯುತ್ತಾ.
ಖಂಡಿತಾ ಕುರುಡ
"ಅಲ್ಲಿ
ನೋಡಿ....."ಪತ್ನಿ ಮನೆ ಒಳಗೆ ಕಾಲಿಡುತ್ತಲೇ ಒಂದು ಕೈ ಎಡಭಾಗಕ್ಕೆ ತೋರಿಸುತ್ತಾ ತನ್ನ
ಪತಿಗೆ ಹೇಳಿದಳು.
"ಏನೇ ಅದು, ಅವನು ಕುರುಡು ಬಿಕ್ಷುಕ ಅಲ್ಲೇ ತಾನೇ ಕೂತ್ಕೋಳ್ಳೊದು " ಎಂದ ಪತಿ
"ಅಲ್ಲಾರಿ ಅವನು ನನಗೆ ಕುರುಡ ಅಲ್ಲ ಅಂತ
ಅನ್ಸುತ್ತೆ!"
"ಏಕೆ?"
"ನಾನು ಅವನ ಪಕ್ಕಕ್ಕೆ ಬಂದ ತಕ್ಷಣ ಅವನು ' ಹೇ ಸುಂದರಿ , ದೇವರ
ಹೆಸರಿನಲ್ಲಿ ಈ ಕುರುಡನಿಗೆ ಭಿಕ್ಷೆ ಹಾಕು ಅಂತ ಕೇಳೋದೇ?" ಎಂದಳು ಗಲ್ಲದ
ಮೇಲೆ ಕೈ ಇಟ್ಕೊಂಡು.
"ಅಲ್ಲಾ ಕಣೇ ಅವನು ನಿನ್ನನ್ನು ಸುಂದರಿ ಅಂತ
ಹೇಳಿದ್ಮೇಲೆ ಅವನು ಖಂಡಿತವಾಗ್ಲೂ ನಿಜವಾದ ಕುರುಡಾನೇ " ಎಂದು ಸಮರ್ಥನೆ ಮಾಡಿದ ಪತಿರಾಯ.
ನಿದ್ರೆ ಬಂದುಬಿಟ್ಟಿರುತ್ತದೆ
ನೀನು ವಿಚಿತ್ರ ಮನುಷ್ಯ ಕಣಯ್ಯ, ನಿಂಗೇನ್
ದುಡ್ಡಿಗೆ ಅಂತಾ ತಾಪತ್ರಯ ಬಂದಿದ್ದು, ಹಗಲು
ಹೊತ್ತಿನಲ್ಲೇ ಕಳ್ಳತನ ಮಾಡಲು ಹೊರಟಿದ್ದೆಯಲ್ಲ?" ಎಂದು ಹೇಳಿದ
ಒಬ್ಬ . ಏನ್ ಮಾಡೋದು ಸರ್ ಈ ಹಾಳಾದು ರಾತ್ರಿ ನಿದ್ರೆ ಬರುತ್ತೆ ಸರ್.
ವಿನಂತಿ
ಓರ್ವ ವ್ಯಕ್ತಿಯ ಪತ್ನಿ ಮನೆ ಬಿಟ್ಟು ಹೋದಳು ಕಾನ್ಸ್ಟೇಬಲ್ ವ್ಯಕ್ತಿಯ ರಿಪೋರ್ಟ್
ಬರೆದುಕೊಂಡ ಆದರೂ ಸಹ ವ್ಯಕ್ತಿ ಕಾನ್ಸ್ಟೇಬಲ್ ಮುಂದೆಯೇ ನಿಂತಿದ್ದ. ಅದನ್ನು ಕಂಡ ಕಾನ್ಸ್ಟೇಬಲ್ ,
" ಇನ್ನೂ ಯಾಕೆ ನಿಂತಿದ್ದೀರಾ, ಹೋಗಿ ಮನೆಗೆ ಹೋಗಿ, ನಾನು ನಿಮ್ಮ
ಹೆಂಡತಿಯನ್ನು ಹುಡುಕಿ ಮನೆಗೆತಲುಪಿಸುತ್ತೇನೆ" ಎಂದ.
"ಇಲ್ಲ ಪೋಲಿಸಪ್ಪ, ಹಾಗೆ ಮಾಡಬೇಡ, ನಾನು ಇದನ್ನು
ಹೇಳುವುದಕ್ಕೆ ಇದುವರೆಗೆ ನಿಮ್ಮ ಹತ್ತಿರ ನಿಂತಿದ್ದೇನೆ" ಎಂದು ವಿನಂತಿಸಿಕೊಂಡ ಆತ.
ಅದಕ್ಕೇ ವಾಪಾಸು ಕೊಡ್ತಾ ಇದ್ದೀನಿಕೆಲಸದವ ತನ್ನ ಮಾಲೀಕನೊಂದಿಗೆ,
" ಯಜಮಾನ್ರೆ ನಿನ್ನೆ ಕಸದ ಬುಟ್ಟಿಯಲ್ಲಿ 500-500 ರೂಪಾಯಿಗಳ
ನೋಟು ಸಿಕ್ಕಿತು "
'' ನಾನೇ
ಬಿಸಾಕಿದ್ದೆ. ಅದು ನಿಜವಾದ ನೋಟುಗಳಲ್ಲ" ಎಂದ ಮಾಲೀಕ.
"ಅದಕ್ಕೋಸ್ಕರವೇ ನಾನು ಅದನ್ನು ವಾಪಸ್ಸು ಕೊಡ್ತಾ
ಇದೀನಿ ಯಜಮಾನ್ರೇ " ಎಂದು ವಿನಯವಾಗಿ ಉತ್ತರಿಸಿದ ಕೆಲಸದವ.
ನೋಟ್ಸ್ ಓದಿ ಅಲ್ಲ
ಮೇಷ್ಟ್ರು ತಿಮ್ಮನನ್ನು ಮೇಲೆಬ್ಬಿಸಿ ನಿಲ್ಲಿಸುತ್ತ
"ಏನೋ ತಿಮ್ಮ, ಕನ್ನಡದಲ್ಲಿ
ಫೇಲ್ ಆಗ್ಬಿಟ್ಟಿ ಏನೋ? ನೀನು ನಾನು
ಬರೆದು ಪ್ರಿಂಟ್ ಮಾಡಿಸಿದ್ದ ನೋಟ್ಸ್ ಓದಿದ್ಯಾ ಎಂದು ಠೀವಿಯಿಂದ ಕೇಳಿದರು.
"ನಿಮ್ಮ ಪ್ರಿಂಟೆಡ್ ನೋಟ್ಸ್ ಓದಿ ನಾನು ಫೇಲ್ ಆಗಿಲ್ಲ ಸಾರ್, ನಂಗೆ ಕಾಯಿಲೆ ಬಂದಿದ್ದರಿಂದ ನಾನು ಫೇಲ್ ಆಗ್ಬಿಟ್ಟೆ ಅಷ್ಟೇ ಸಾರ್" ಎಂದು ನುಡಿದ
ವಿನಯವಾಗಿ.
ಮುದ್ದು ಪ್ರಶ್ನೆ
ಓರ್ವ ಚಿಕ್ಕ ಹುಡುಗಿಯ ದೃಷ್ಟಿ ಪಾರ್ಕ್ನಲ್ಲಿ ಅಡ್ಡಾಡುತ್ತಿದ್ದ ಓರ್ವ ಗರ್ಭವತಿ ಮಹಿಳೆಯ
ಮೇಲೆ ಬಿತ್ತು ಗರ್ಭವತಿಯ ಹತ್ತಿರಕ್ಕೆ ಹೋಗಿ,
"ಆಂಟಿ, ಈ
ಹೊಟ್ಟೆಯಲ್ಲಿ ಏನಿದೆ? " ಎಂದು
ಕೇಳಿದಳು
"ಇದರಲ್ಲಿ ನನ್ನ ಪ್ರೀತಿಯ ಮಗು ಇದೆ ಮರಿ "
ಎಂದಳು ಅವಳು.
ಒಂದು ವೇಳೆ ಇದುನಿಮ್ಮ ಪ್ರೀತಿಯ ಮಗುವಾಗಿದ್ದರೆ
ನೀವೇಕೆ ಅದನ್ನು ತಿಂದು ಬಿಟ್ಟಿರಿ ಆಂಟಿ?" ಎಂದು
ಮುದ್ದುಮುದ್ದಾಗಿ ಕೇಳಿದರು ಹುಡುಗಿ.
ದುಬಾರಿ ಕಣ್ಣಿನ ಚಿಕಿತ್ಸೆ
"ನಿನ್ನೆ ನನ್ನ ಹೆಂಡತಿ ಕಣ್ಣಿಗೆ ಒಂದು ಮರಳಿನ ಚೂರು ಬಿದ್ದು
ಬಿಡ್ತು.ಅದನ್ನು ತೆಗೆದುಕೊಳ್ಳೋಕೆ 200 ರೂಪಾಯಿ ಖರ್ಚಾಯಿತು " ಎಂದ ಒಬ್ಬ ದುಃಖದಿಂದ.
ನೀನೇ ಪುಣ್ಯವಂತ ಕಣಯ್ಯಾ ನಿನ್ನೇ ನನ್ನ ಹೆಂಡತಿ ಕಣ್ಣಿಗೆ ಒಂದುರೇಷ್ಮೆ ಸೀರೆ ಬಿತ್ತು
ಅದನ್ನು ತೆಗೆದು ಕೊಡೋಕೆ 20000 ರೂಪಾಯಿ
ಖರ್ಚಾಯಿತು " ಮತ್ತೊಬ್ಬ ಇನ್ನು ದುಃಖದಿಂದ ನುಡಿದ.
ಪಾಪ ಯಾರಿಗೆ ?
"ಏನ್ರೀ ಜಿರಳೆ ಸಾಯಿಸುವ ಔಷಧಿ ಇದೆಯೆ ?"
"ಹೂಂ ಇದೆ "
"ಜಿರಳೆ
ಕೊಲ್ಲುವ ಪಾಪ ನಿನ್ನ ಮೇಲೆ ಬರುತ್ತೋ ಅಥವಾ ನನಗೆ ತಟ್ಟುತ್ತೋ ?"
"ಯಾರಿಗೂ ಪಾಪ ಬರೋಲ್ಲಾ "
" ಏಕೆ ?"
"ಜಿರಳೆ ಸತ್ತರೆ ತಾನೇ ?"
ಚಿಂತೆಯ ಕಾರಣ
ಡಾಕ್ಟರ್:- ಅಲ್ರೀ ಇವತ್ತು ನಿಮ್ಮನ್ನು ಡಿಸ್ಚಾರ್ಜ್ ಮಾಡ್ತಾ ಇದ್ದೇವೆ ಅಂತ ಹೇಳಿದ್ರು
ಸಹ ಯಾಕ್ರೀ ಸಪ್ಪಗಿದ್ದೀರಾ ? ಚಿಂತೆ
ಮಾಡ್ತಾ ಇದ್ದೀರಾ ?
ರೋಗಿ:- ನಿಮ್ಮ ಫೀಸ್
ಎಲ್ಲಾ ಇವತ್ತು ಸಾಯಂಕಾಲದೊಳಗೆ ಕೊಟ್ಟೇ ಬಿಡಬೇಕಲ್ಲ ಅಂತ ಚಿಂತೆ ಮಾಡ್ತಿದ್ದೀನಿ
Corona Jokes in kannada - (ಕೊರೋನಾ ಜೋಕ್ಸ್ )
ಈ ಲಾಕ್ಡೌನ್ ಒಂಥರಾ ಡಿಫರೆಂಟ್
ಎಷ್ಟು ಬೇಕಾದ್ರೂ ಲಿಕ್ಕರ್ 🍺 ಸಿಗುತ್ತೆ,
ಆದ್ರೆ ಅರ್ಜೆಂಟ್ ಆಗಿ ಒಂದು ನಿಕ್ಕರ್ 🩳 ಬೇಕು ಅಂದ್ರು
ಸಿಗಲ್ಲ......
😂😂😂😂😂
ಮದುವೆಗೆ ಅವಕಾಶ ಇದೆ ಅಂತೆ....
ಆದ್ರೆ,
ಬಟ್ಟೆ ಅಂಗಡಿ 👕,
ಆಭರಣ ಅಂಗಡಿ 👑,
ಫ್ಯಾನ್ಸಿ ಅಂಗಡಿ 💄
ಎಲ್ಲವೂ ಬಂದ್... ಹಾಗಾದರೆ ಮದುಮಕ್ಕಳು ಬರ್ಮುಡಾ ಮತ್ತು ನೈಟಿ ಯಲ್ಲಿ ಮದುವೆ
ಮಾಡಿಕೊಳ್ಳುವುದೇ.....
😂😂😂😂😂
ಎಣ್ಣೆ, ಬಾರ್, ರೆಸ್ಟೋರೆಂಟ್
ಬಂದ್
ಹೆಂಡತಿ ಖುಷ್. 🙎🏻♀️
ಬೆಳ್ಳಿ, ಬಂಗಾರ, ಸೀರೆ ಅಂಗಡಿ
ಬಂದ್
ಗಂಡ ಖುಷ್. 🙎🏻♂️
ಸ್ಕೂಲ್, ಕಾಲೇಜ್ ಬಂದ್
ಮಕ್ಕಳು ಖುಷ್. 👯🏻♀️
ಒಟ್ನಲ್ಲಿ ಸುಖ ಸಂಸಾರಕ್ಕೆ ಇನ್ನೂ ಏನ್ ಬೇಕು......
😂😂😂😂😂
ನಿಮ್ಮ ನೆಚ್ಚಿನ ಆಟ ಯಾವುದೂ !!?
🤔🤔🤔🤔
ಸಧ್ಯಕ್ಕೆ..... ಉಸಿರಾಟ
😤😤😤😤
😂😂😂😂😂
ಸರ್ಕಾರ ಹೇಳಿದಾಂಗೆ ಮನೇಲಿ ಇದ್ರೆ
"ಮೇ" ನಲ್ಲಿ ಸಿಗೋಣ,
ವಿನಾ ಕಾರಣ ಮನೆ ಬಿಟ್ಟು ಹೊರಗೆ ಬಂದ್ರೆ "ಮೇಲೆ" ಸಿಗೋಣ.
😂😂😂😂😂
ಸಧ್ಯಕ್ಕೆ ಈಗ ಇರೋದು ಏರಡೇ ಕಾಲಗಳು..... 🤔🤔
ಒಳಗಡೆ ಇದ್ರೆ "ಉಳಿಗಾಲ" 🏘️
ಹೊರಗಡೆ ಬಂದ್ರೆ "ಕೊನೆಗಾಲ" 🎡
😂😂😂😂😂
ಪ್ರೇಮಿಗಳು ಒಟ್ಟಿಗೆ ಇರೋ ದಿನ
"ವ್ಯಾಲೆಂಟೈನ್" ❤️ ಡೇ.
ಮನೆ ಮಂದಿಯೆಲ್ಲಾ ಒಟ್ಟಿಗೆ ಇರೋ ದಿನ "ಕ್ವಾರಂಟೆನ್" 🏚️ ಡೇ.
😂😂😂😂😂
ಅಂದು ಯುದ್ಧ ⚔️⚔️ಮಾಡಿ
ದೇಶವನ್ನು ಉಳಿಸಬೇಕಿತ್ತು.
ಆದ್ರೆ ಈ ಇಂದು ನಿದ್ದೆ 😴😴 ಮಾಡಿ
ದೇಶವನ್ನು ಉಳಿಸುವ ಪರಿಸ್ಥಿತಿ ಬಂದಿದೆ.
😂😂😂😂😂
ಅಂತೂ ಇಂತೂ
"ಎಣ್ಣೆ 🍻 ಹಾಲು" 🥛
ಬೆಳಿಗ್ಗೆ ಒಟ್ಟಿಗೆ ತರೂ ಟೈಮ್ ಬಂತು.....
😂😂😂😂😂
ಇನ್ಮುಂದೆನೂ ಕೋರೋನಾ ತೊಲಗದೆ ಇದ್ರೆ ಬಿಲ್ಡರ್ಸ್ ಗಳು ಹೀಗೆ ಜಾಹೀರಾತು ನೀಡಬಹುದು.....
2 ಬೆಡ್ ರೂಮ್,
ಕಿಚನ್, ಹಾಲ್,
ಐಸೋಲೇಷನ್ ರೂಮ್,
ಆಕ್ಸಿಜನ್ ಪೈಪ್ ಲೈನ್, ಮತ್ತೆ
ವೆಂಟಿಲೇಟರ್ ಸೌಲಭ್ಯ ಇದೆ". !!!!!
😂😂😂😂😂
ಏನ್ ಮಾಡಿದ್ರೂ
ಟೈಮ್ ಪಾಸ್ ಆಗ್ತಾ ಇಲ್ಲಾ ಅಂದ್ರೆ.....
ನೀವೇ ನಟಿಸಿರುವ , ನಿಮ್ಮದೇ
ಮೂವೀ
" ನಿಮ್ಮ ಮದುವೆ "
ಸಿಡಿ ಹಾಕಿಕೊಂಡು ನೋಡಿ.... 😂
ಸತ್ಯ ಘಟನೆ ಆಧಾರಿತ ಚಿತ್ರ.
😂😂😂😂😂
ಯಾರು 21 ದಿನ ಮನೆಯಲ್ಲಿ ಇರುತ್ತಾರೆ ಅವರೇ 2021ರ ಜನಗಣತಿಯಲ್ಲಿ ಇರುತ್ತಾರೆ..
ಮುಂಚೆಯೆಲ್ಲಾ ಒಂದು ರಜೆ ಕೇಳಿದರು ನಮ್ಮ ಮ್ಯಾನೇಜರ್ ಕೆಮ್ಮುತಿದ್ದ ಆದರೆ ಈಗ ನಾ
ಕೆಮ್ಮಿದ್ರೆ ಸಾಕು ನಮ್ಮ ಮ್ಯಾನೇಜರ್ ರಜೆ ಕೊಡುತ್ತಾನೆ..
ತುಂಬಾ ದಿನ ಇದ್ದರೆ ಮರ್ಯಾದೆ ಇರಲ್ಲ ಅಂತ ಅದಕ್ಕೆ ಹೇಳೋದು ಈಗ ನೋಡಿ ಕೊರೋನಾಗೆ ಮೊದಲು
ಇದ್ದ ಮರ್ಯಾದೆ ಈಗ ಇಲ್ಲ...
ಹೇಗೋ ಕಷ್ಟಪಟ್ಟು ಕೋವಿಡ್-19 ಇಂದ ಪಾರಾಗಿ
ಬಿಡ್ತೀವಿ ಅನ್ಕೊಳ್ಳಿ ಚೀನಾದವರು ಕೋವಿಡ್-19 S Pro ಬಿಟ್ರೆ ಮಾಡೋದು
ಏನೇ ಹೇಳಿ ನಮ್ಮ ಕಾಲದಲ್ಲಿ ನಮಗೆ ಇಷ್ಟೊಂದು ಪಬ್ಲಿಸಿಟಿ ಸಿಗಲಿಲ್ಲ ಇಂತಿ ನಿಮ್ಮ
ಚಿಕನ್ಗುನ್ಯ.
ಲಾಕ್ಡೌನ್ ಇದೇರೀತಿ ಮುಂದುವರಿದು ಇನ್ನು ಬಾರ್ ಓಪನ್ ಆಗಿಲ್ಲ ಅಂದ್ರೆ
ವಿಜ್ಞಾನಿಗಳಿಗಿಂತ ಮೊದಲು ಕುಡುಕರು ಕೋರೋನಾ ಗೆ ಔಷಧಿ ಕಂಡುಹಿಡಿಯುತ್ತಾರೆ
ಹೊರಗಡೆ ಬರಬೇಡಿ ಎಂದು ಎಷ್ಟು ಹೇಳಿದರೂ ಜನ ಕೇಳುತ್ತಿಲ್ಲ ಸರ್ ಅದಕ್ಕೆ ಒಬ್ಬ ಕೋರೋಣ
ರೋಗಿಯನ್ನು ಅವರ ಮೇಲೆ ಬಿಟ್ಟಿದ್ದೇವೆ
ಇನ್ನು ಮುಂದೆ ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯ ಅಯ್ಯೋ ರೀ ಇದು ನನ್ ಮಗ ಅಲ್ಲ ಕಣ್ರೀ ಬೇರೆ ಯಾರದೋ ಮಗನನ್ನು ಬಂದಿದ್ದೀರಾ
ಚೈನಾ ಬಾರ್ಡರ್ ದಾಟಿಕೊಂಡು ಬಂದಿರುವ ವೈರಸ್ ಗೆ ಈ ಒಂದು ಮಾಸ್ಕ್ ದಾಟಿ ಬರೋಕೆ ಆಗಲ್ವಾ
ಕೊರೋಣ ಚೀನಾದ ಮಹಾಗೋಡೆಯ ನಂತರ ಅತ್ಯಂತ ದೀರ್ಘಕಾಲ ಬಾಳಿಕೆ ಬಂದಂತಹ ಚೈನಾ ಪ್ರೋಡಕ್ಟ್
ಯಾವುದೆಂದರೆ ಕೊರೋನಾ ವೈರಸ್..