Type Here to Get Search Results !

ಅಕ್ಬರ್ ಬೀರಬಲ್ ಕತೆಗಳು - ಭಾಗ 2

Table of Content(toc) 

ಅಕ್ಬರ್ ಬೀರಬಲ್ ಕತೆಗಳು


Stories of Akbar and Birbal area unit very fashionable in  India. In many instances Birbal uses his wit and intelligence to calm the ire of Emperor Akbar and amuse him at constant time. It accustomed be a part of the oral tradition of storytelling, however in recent years these stories are compiled into books by varied authors.
Birbal was appointed by Akbar as a Minister (Mantri) and accustomed be a writer and Singer in around 1556–1562. He had an in depth association with Emperor Akbar and was one in all his most vital courtiers, a part of a gaggle referred to as the navaratnas (nine jewels).
Local people tales emerged primarily in nineteenth century involving his interactions with Akbar, him representational process him as being very clever and humourous.
We are happy to bring Akbar and Birbal stories in kannada launguage.

ಒಂದೇ ಪ್ರಶ್ನೆ

ಒಮ್ಮೆ ಅಕ್ಬರನ ಆಸ್ಥಾನಕ್ಕೆ ದಕ್ಷಿಣ ದೇಶದಿಂದ ಒಬ್ಬ ಪಂಡಿತ ಬಂದ. ಆದರೆ ಅವನು ಅರಮನೆ ತಲುಪಿದಾಗ ಬಹಳ ವೇಳೆ ಯಾಗಿತ್ತು, ಆದುದರಿಂದ ಭಟರು ಆ ಪಂಡಿತನಿಗೆ ಅಕ್ಬರನನ್ನು ನೋಡಲು ಅವಕಾಶ ಮಾಡಿಕೊಡಲಿಲ್ಲ, ಪಂಡಿತ ತಾನು ಬೀರಬಲ್‌ನನ್ನೂ ಕಾಣಬೇಕು ಎಂದು ಹೇಳಿದ. ಭಟರು ಅನ್ಯಮಾರ್ಗ ಕಾಣದೆ ಬೀರಬಲ್‌ನನ್ನು ಕಂಡು ಬರಲು ಹೋದರು. ಬೀರಬಲ್ ಆಗ ಅಕ್ಬರನೊಂದಿಗೆ ಯಾವುದೋ ವಿಷಯ ಮಾತನಾಡುತ್ತ ಕುಳಿತಿದ್ದ. ಭಟರು ಪಂಡಿತನೊಬ್ಬ ಕಾಣಲು ಬಂದಿರುವನೆಂದು ರಾಜನಿಗೆ ನಿವೇದಿಸಿದರು.


ಅಕ್ಬರ್‌ ಆಗ ತುಸು ಯೋಚಿಸಿ "ಹೇಗೊ ಪಂಡಿತ ಇಬ್ಬರನ್ನೂ ಕಾಣುವ ಆಸೆ ಇಟ್ಟು ಕೊಂಡು ಬಂದಿದ್ದಾನೆ. ಬೀರಬಲ್ ನನ್ನ ಬಳಿಯೇ ಇರುವುದರಿಂದ ಪಂಡಿತನೇನಾದರೂ ಸಮಸ್ಯೆ ಒಡ್ಡಿದರೆ ಸುಲಭವಾಗಿ ಬಗೆಹರಿಸುವನು'' ಎಂದು ಭಾವಿಸಿ ಭಟರಿಗೆ, “ಹೋಗಿ ಆ ಪಂಡಿತನನ್ನು ಕರೆದುಕೊಂಡು ಬಾ'' ಎಂದು ಹೇಳಿದ.


ಭಟರು ಪಂಡಿತನನ್ನು ಕರೆ ತಂದು ರಾಜನ ಸಮ್ಮುಖಕ್ಕೆ ಬಿಟ್ಟರು.

ಅಕ್ಬರ್‌ ಪಂಡಿತನನ್ನು ಬರಮಾಡಿಕೊಂಡು ಉಚಿತಾಸನದಲ್ಲಿ ಕುಳ್ಳಿರಿಸಿ,

 “ಪಂಡಿತರೇ, ತಾವು ಬಂದ ಉದ್ದೇಶವೇನು?” ಎಂದು ಕೇಳಿದ.

ಪಂಡಿತ ಮಾತನಾಡಿ, 'ಮಹಾಪ್ರಭು ! ನಾನು ಬೀರಬಲ್ನನ್ನು ಒಂದೆರಡು ಪ್ರಶ್ನೆಗಳನ್ನು ಕೇಳಬೇಕೆಂದಿದ್ದೇನೆ. ದಯವಿಟ್ಟು ಅವಕಾಶ ಮಾಡಿಕೊಡಿ'' ಎಂದ.


ಅಕ್ಬರ್‌ ಸಮ್ಮತಿಸಿದ.


ಪಂಡಿತ ಬೀರಬಲ್‌ನನ್ನು ಉದ್ದೇಶಿಸಿ ಮಾತನಾಡುತ್ತ “ಬೀರಬಲ್, ನಿನ್ನ ಬಗ್ಗೆ ತುಂಬಾ ಕೇಳಿದ್ದೇನೆ. ನೀನು ಜಾಣ ಎಂಬುದನ್ನೂ ಬಲ್ಲೆ, ನಾನು ನೂರು ಪ್ರಶ್ನೆಗಳನ್ನು ಕೇಳಲೊ ಇಲ್ಲವೇ ಒಂದೇ ಒಂದು ಸಮಸ್ಯಾತ್ಮಕ ಪ್ರಶ್ನೆ ಹಾಕಲೋ?” ಎಂದ.


ಬೀರಬಲ್, ''ಪಂಡಿತರೇ, ಈಗಾಗಲೇ ವೇಳೆಯಾಗಿದೆ. ನಿಮ್ಮ ಆ ಒಂದೇ ಪ್ರಶ್ನೆ ಸಾಕು” ಎಂದ.


ಪಂಡಿತ ತನ್ನ ಒಂದೇ ಪ್ರಶ್ನೆಯಿಂದ ಬೀರಬಲ್ನನ್ನು ಸೋಲಿಸಿ ಬಿಡುತ್ತೇನೆಂದು ಯೋಚಿಸಿ, “ಬೀರಬಲ್, ಕೋಳಿ ಮೊದಲು ಹುಟ್ಟಿದ್ದೋ ಮೊಟ್ಟೆ ಮೊದಲು ಹುಟ್ಟಿದ್ದೂ ಹೇಳು'' ಎಂದು ಕೇಳಿದ.


ಬೀರಬಲ್ ಥಟ್ಟನೆ, '' ಕೋಳಿ' ಎಂದ.


ಪಂಡಿತ, “ಅದು ಹೇಗೆ ಅಷ್ಟು ನಿರ್ಧಾರವಾಗಿ ಹೇಳುವೆ?” ಎಂದು ಕೇಳಿದ.


ಆಗ ಬೀರಬಲ್, 'ಪಂಡಿತರೇ, ಅದು ನಿಮ್ಮ ಎರಡನೇ ಪ್ರಶ್ನೆಯಾಗುತ್ತದೆ. ಮೊದಲೇ ಹೇಳಿದಂತೆ ನಾನು ಒಂದೇ ಪ್ರಶ್ನೆಗೆ ಉತ್ತರಿಸುವುದು ಅಲ್ಲವೆ?'' ಎಂದು ಹೇಳಿ ಸುಮ್ಮನಾದ.


ಪಂಡಿತ ಬೀರಬಲ್‌ನ ಜಾಣತನದ ಉತ್ತರ ಹಾಗೂ ಅವನ ಹಾಸ್ಯ ಪ್ರಜ್ಞೆಯನ್ನು ಮೆಚ್ಚಿ ತನ್ನ ಊರಿಗೆ ಮರಳಿದ.

ಕೇಳಿದ್ದಕ್ಕಷ್ಟೆ ಉತ್ತರ 


ಸಾಮಾನ್ಯವಾಗಿ ಕೆಲವರನ್ನು ಏನಾದರೂ ಒಂದು ಪ್ರಶ್ನೆ ಕೇಳಿದರೆ ಅದಕ್ಕೆ ತಕ್ಕ ಉತ್ತರ ಕೊಡುವುದಷ್ಟೆ ಮಾಡದೆ ಮಾತು ಬೆಳೆಸುವರು. ಇದು ಅನಗತ್ಯ ಎಂಬುದನ್ನು ಬೀರಬಲ್‌ನ ಒಂದು ಕಥೆ ಸ್ಪಷ್ಟಪಡಿಸುತ್ತದೆ.


ಒಮ್ಮೆ ಅಕ್ಬರನ ಮಂತ್ರಿಗಳಲ್ಲೊಬ್ಬನಾದ ಬೀರಬಲ್ ಮನೆಬಿಟ್ಟು ಯಾರನ್ನೋ ಕಾಣಲು ಹೊರಟಿದ್ದನು. ದಾರಿಯಲ್ಲಿ ಒಬ್ಬ ಮನುಷ್ಯ ಅವನ ಎದುರಾದನು. ಅವನು ಬೀರಬಲ್‌ನನ್ನು ತಡೆದು ನಿಲ್ಲಿಸಿ,


“ಅಯ್ಯಾ, ಅಕ್ಬರ ಮಹಾರಾಜರ ಮಂತ್ರಿ ಬೀರಬಲ್‌ರ ಮನೆ ಎಲ್ಲಿದೆ ತಮಗೆ ಗೊತ್ತೆ? ತಿಳಿಸುತ್ತೀರಾ? ಎಂದ.


ಆ ದಾರಿಹೋಕ ಬೀರಬಲ್ನನ್ನು ನೋಡಿರಲಿಲ್ಲ. ತಾನು ಬೀರಬಲ್ನನ್ನು ಮಾತನಾಡಿಸುತ್ತಿದ್ದೇನೆ ಎಂದು ಅವನಿಗೆ ಹೇಗೆ ತಿಳಿಯಬೇಕು?


ಬೀರಬಲ್ ಅವನಿಗೆ ತನ್ನ ಮನೆಯ ಗುರುತು ಹೇಳಿ ತನ್ನ ಪಾಡಿಗೆ ತಾನು ಮುಂದಕ್ಕೆ ಹೊರಟ.

ದಾರಿ ಹೋಕ ಬೇಗನೆ ಬೀರಬಲ್‌ನ ಮನೆಗೆ ಹೋಗಿ ಅವನ ಮನೆಯ ಆಳನ್ನು, “ಏನಪ್ಪಾ? ಬೀರಬಲ್‌ರು ಮನೆಯಲ್ಲಿದ್ದಾರೆಯೆ?'' ಎಂದು ಕೇಳಿದ.

ಮನೆ ಆಳು, “ಇಲ್ಲ, ಅವರು ಯಾರನ್ನೋ ಕಾಣಲು ಹೋಗಿದ್ದಾರೆ. ಬರುವುದು ಸಂಜೆಯಾಗುತ್ತದೆ'' ಎಂದ.


ದಾರಿ ಹೋಕ ಬೀರಬಲ್‌ನಿಗಾಗಿ ಸಂಜೆಯವರಿಗೂ ಕಾದು ಕುಳಿತಿದ್ದ. ಸಂಜೆ ಬೀರಬಲ್ ಮನೆಗೆ ಬಂದಾಗ ಕಾದು ನಿಂತಿದ್ದ ಮನುಷ್ಯನಿಗೆ ಮನೆ ಗುರುತು ಹೇಳಿದವರೇ ಬೀರಬಲ್ ಎಂಬುದು ತಿಳಿಯಿತು. ಅವನು ಬೀರಬಲ್‌ನಿಗೆ ನಮಸ್ಕರಿಸಿ,


"ಸ್ವಾಮಿ, ಬೆಳಿಗ್ಗೆ ದಾರಿಯಲ್ಲಿ ಸಿಕ್ಕಾಗ ನೀವು ನಾನೇ ಬೀರಬಲ್ ಎಂದು ಏಕೆ ಹೇಳಲಿಲ್ಲ?” ಎಂದು ಕೇಳಿದ.


ಬೀರಬಲ್ ನಸುನಗುತ್ತಾ “ಅಲ್ಲವಯ್ಯ, ನೀನು ಮಂತ್ರಿ ಬೀರಬಲ್‌ರ ಮನೆ ಎಲ್ಲಿದೆ ತಮಗೆ ಗೊತ್ತೆ ತಿಳಿಸುತ್ತೀರಾ ಎಂದು ಕೇಳಿದೆ. ಆ ಪ್ರಶ್ನೆಗೆ ಉತ್ತರವಾಗಿ ನಾನು ಮನೆಯ ಗುರುತು ಹೇಳಿದೆ. ನೀನು ಬೀರಬಲ್‌ರ ಬಗ್ಗೆ ಕೇಳಿದ್ದರೆ ನಾನೇ ಬೀರಬಲ್ ಎಂದು ಹೇಳುತ್ತಿದ್ದೆ'' ಎಂದ.


ಬಂದಿದ್ದ ಮನುಷ್ಯನಿಗೆ ನಾಚಿಕೆಯಾಗಿ ಬಂದ ಕೆಲಸ ಮುಗಿಸಿ ಮನೆಗೆ ಹೊರಟ.


ಕಣ್ಣು ತೆರೆಸಿದ ಬೀರಬಲ್


ಅಕ್ಬರ ಚಕ್ರವರ್ತಿಯನ್ನು ನೋಡಲು ದಿನನಿತ್ಯವೆಂಬಂತೆ ಜನ ಬರುತ್ತಲೇ ಇರುತ್ತಿದ್ದರು. ಒಂದು ದಿನ ಒಬ್ಬ ವಿದ್ವಾಂಸ ಆಸ್ಥಾನಕ್ಕೆ ಬಂದು ಅಕ್ಷರವನ್ನು ಪ್ರಶಂಸಿಸಿ “ನೀವು ಈ ಜಗತ್ತನ್ನು ಸೃಷ್ಟಿಸುವ ದೇವರಿಗಿಂತಲೂ ದೊಡ್ಡವರು' ಎಂದು ಹೇಳಿ ಹೊರಟು ಹೋದ.


ವಿದ್ವಾಂಸ ಹಾಗೆ ಹೇಳಿದುದು ಅಕ್ಷರವನ್ನು ಚಿಂತೆಗೀಡು ಮಾಡಿತು. ನಿಜವಾಗಿಯೂ ನಾನು ದೇವರಿಗಿಂತ ದೊಡ್ಡವನೆ? ಯಾವ ವಿಧದಲ್ಲಿ? ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಂಡ. ಅವನಿಗೆ ಏನೂ ಉತ್ತರ ಹೊಳೆಯಲಿಲ್ಲ, ಆದರೂ ವಿದ್ವಾಂಸರು ಸುಳ್ಳು ಹೇಳುವುದಿಲ್ಲ ಎಂದು ಅಕ್ಬರ್‌ ತನ್ನ ಆಸ್ಥಾನದ ಪಂಡಿತರನ್ನು ಕರೆಯಿಸಿ, 'ಪಂಡಿತೋತ್ತಮರೆ, ಇಲ್ಲಿಗೆ ಬಂದಿದ್ದ ಒಬ್ಬ ವಿದ್ವಾಂಸ ನಾನು ದೇವರಿಗಿಂತ ದೊಡ್ಡವನು ಎಂದು ಹೇಳಿಹೋದುದನ್ನು ನೀವೆಲ್ಲ ಕೇಳಿದಿರಲ್ಲವೆ? ಯಾವ ವಿಧದಲ್ಲಿ ನಾನು ದೇವರಿಗಿಂತ ದೊಡ್ಡವನು ತಿಳಿಸಿ'' ಎಂದು ಕೇಳಿದ.


ಪಂಡಿತರು ಬಹಳಷ್ಟು ಆಲೋಚಿಸಿದರು. ಅವರಿಗೆ ಯಾವುದೇ ತೆರನಾದ ಉತ್ತರ ಹೊಳೆಯಲಿಲ್ಲ. ಎಲ್ಲರೂ ತಲೆಯಲ್ಲಾಡಿಸಿಬಿಟ್ಟರು. 

ಅಕ್ಬರ್‌ ಕಡೆಗೆ ಬೀರಬಲ್‌ನನ್ನೆ ಕೇಳಿದ.


ಬೀರಬಲ್, 'ಪ್ರಭು! ವಿದ್ವಾಂಸ ಹೇಳಿದುದು ಸರಿಯಾಗಿಯೇ ಇದೆ. ಅನುಮಾನವೇ ಬೇಡ'' ಎಂದ.


ಅಕ್ಬರ್‌, 'ಬೀರಬಲ್ ! ತಮಾಷೆ ಮಾಡಬೇಡ. ನಿಜವಾಗಿ ಹೇಳು. ನಾನು ಯಾವ ವಿಧದಲ್ಲಿ ದೇವರಿಗಿಂತ ದೊಡ್ಡವನು?” ಎಂದು ಕೇಳಿದ.


ಬೀರಬಲ್, 'ಮಹಾಪ್ರಭು ! ದೇವರು ಮಾಡಲಾಗದ ಒಂದು ಕೆಲಸವನ್ನು ನೀವು ಮಾಡಬಲ್ಲಿರಿ. ಆದುದರಿಂದ ನೀವು ದೊಡ್ಡವರು' ಎಂದ.


ಆಕ್ಬರ್‌ ಇರಬಹುದು ಎಂದುಕೊಂಡು ಮೀಸೆ ಮೇಲೆ ಕೈಯಾಡಿಸುತ್ತ 'ಏನದು ಅಂಥ ಕೆಲಸ?” ಎಂದು ಪ್ರಶ್ನಿಸಿದ.


ಬೀರಬಲ್, “ಹುಜೂರ್ ! ದೇವರು ಯಾರನ್ನಾದರೂ ಬಹಿಷ್ಕಾರ ಹಾಕಿ ಕಳುಹಿಸೋಣ ಎಂದು ಕೊಂಡ ಎನ್ನಿ, ಅವನು ಆ ವ್ಯಕ್ತಿಯನ್ನು ಎಲ್ಲಿಗೆ ಕಳುಹಿಸಲು ಸಾಧ್ಯ? ಅದೇ ನೀವಾದರೇ ಯಾರಿಗಾದರೂ ಬಹಿಷ್ಕಾರ ಹಾಕಿದಾಗ ಅವನನ್ನು ನಿಮ್ಮ ರಾಜ್ಯದಿಂದಲೇ ಹೊರಗೆ ಅಟ್ಟುವುದು ಸಾಧ್ಯವಲ್ಲವೆ?' ಎಂದು ಹೇಳಿದ.


ಆಕ್ಬರನಿಗೆ ಬೀರಬಲ್ ತನ್ನನ್ನು ಹಾಸ್ಯ ಮಾಡುತ್ತಿದ್ದಾನೆಂದು ಎನಿಸಿತು. ಅವನು ಪೆಚ್ಚಾಗಿ ಹೋದ.


“ಬೀರಬಲ್, ಯಾವನೋ ವಿದ್ವಾಂಸ ಹೇಳಿದುದನ್ನು ನಿಜವೆಂದು ತಿಳಿದು ದೇವರಿಗಿಂತ ದೊಡ್ಡವನೆಂದು ಭಾವಿಸಿದೆ. ನೀನು ನನ್ನ ಕಣ್ಣು ತೆರೆಸಿದೆ. ದೇವರಿಗಿಂತ ದೊಡ್ಡವನಾಗುವುದುಂಟೆ?” ಎಂದು ಹೇಳಿ ಬೀರಬಲ್‌ನನ್ನು ಸತ್ಕರಿಸಿದ.


ಅಕಾಶ ಮಾಳಿಗೆ


ಒಂದು ಸಲ ಅಕ್ಷರ್ ಚಕ್ರವರ್ತಿಗೆ ಒಂದು ಆಸೆಯಾಯಿತು. “ಭೂಮಿಯ ಮೇಲೆ ಮನೆ ಕಟ್ಟಿಕೊಂಡು ಬಾಳುವುದಕ್ಕಿಂತ ಆಕಾಶದಲ್ಲಿ ಕಟ್ಟಿಕೊಂಡು ಬಾಳುವುದು ತುಂಬ ಚೆನ್ನಾಗಿರುತ್ತದೆಯಲ್ಲವೆ?'' ಎಂದು ಆಶಿಸಿದ. ಈ ವಿಚಿತ್ರ ಆಸೆ ಅವನ ಮನಸಿನಲ್ಲಿ ಉಂಟಾದಾಗ ಬೀರಬಲ್ ಅಲ್ಲೆ ಇದ್ದ ಬೀರಬಲ್‌ನನ್ನು ಕರೆದು, 'ಬೀರಬಲ್, ಆಕಾಶ ಮಂಡಲದಲ್ಲಿ ನನಗೊಂದು ಮನೆ ಕಟ್ಟಬೇಕು. ಅದಕ್ಕೆ ಎಷ್ಟು ಖರ್ಚಾದರೂ ಸರಿ ನಾನು ಕೊಡುತ್ತೇನೆ. ಒಡನೆ ಅದಕ್ಕೆ ಏರ್ಪಾಡುಗಳನ್ನು ಮಾಡು'' ಎಂದು ಹೇಳಿದನು.


ಇದನ್ನು ಕೇಳಿದ ಬೀರಬಲ್ ಚಕಿತನಾಗಿ, 'ಆಕಾಶದಲ್ಲಿ ಮನೆ ಕಟ್ಟುವುದೇ? ಹೇಗೆ?'' ಎಂದು ಆಲೋಚಿಸಿದ. ಆದರೂ ತಾನು ಆಲೋಚನೆಗೊಳಗಾಗುದನ್ನು ತೋರಗೊಡದೆ, 'ಹುಜೂರ್, ಅವಶ್ಯವಾಗಿ ಕಟ್ಟೋಣ'' ಎಂದು ಬಿಟ್ಟನು.


ಅಕ್ಬರ್‌ ಚಕ್ರವರ್ತಿ ಏನಾದರೂ ಹೇಳಿದರೆ ಬೀರಬಲ್ ಅವರನ್ನೆದುರಿಸಿ ಇದು ಸಾಧ್ಯವೇ? ಹೀಗೂ ನಡೆಯುವುದೇ ಎಂದೆಲ್ಲ ಕೇಳುತ್ತಿರಲಿಲ್ಲ, ಮಾಡಿ ತೋರಿಸುತ್ತಿದ್ದನು.


ಬೀರಬಲ್ ಆಕಾಶದಲ್ಲಿ ಮನೆ ಕಟ್ಟಲು ಸಿದ್ಧತೆಗಳನ್ನು ಮಾಡಿಕೊಂಡು ಚಕ್ರವರ್ತಿ೯ ಬಳಿಗೆ ಬಂದು, "ರಾಜ, ಆಕಾಶ ಮಾಳಿಗೆ ಕಟ್ಟಲು ಕೆಲಸಗಾರರನ್ನು ಕರೆದುಕೊಂಡು ಬರಲು ಬೇರೆ ಊರಿಗೆ ಹೋಗಿ ಬರುತ್ತೇನೆ. ನಾನು ಹಿಂದಿರುಗಿ ಬರಲು ಮೂರು ತಿಂಗಳುಗಳಾಗುತ್ತವೆ'' ಎಂದು ಹೇಳಿದ. “ಆಗಲಿ, ಎಷ್ಟು ವರ್ಷಗಳಾದರೂ ಸರಿ. ಚಿಂತೆ ಇಲ್ಲ, ನನ್ನ ಕನಸು ನನಸಾಗಬೇಕು. ಆಕಾಶದಲ್ಲಿ ನಮ್ಮ ಮಾಳಿಗೆ ಮನೆ ಸಿದ್ಧವಾಗಬೇಕು' ಎಂದು ಅಕ್ಬರ್‌ ಒಪ್ಪಿಗೆ ಕೊಟ್ಟನು.


ಅರಮನೆಯಿಂದ ಹೊರಬಿದ್ದ ಬೀರಬಲ್ ನೇರ ಪಕ್ಷಿಗಳನ್ನು ಬೇಟೆ ಆಡುವ ಬೇಟೆಗಾರನ ಬಳಿಗೆ ಹೋಗಿ, “ನನಗೆ ಇನ್ನು ಎರಡು ಮೂರು ದಿನಗಳಿಗೆಲ್ಲ ತುಂಬ ಗಿಣಿಗಳು ಬೇಕು. ಜೀವವಿರುವ ಗಿಣಿಗಳು ತಂದು ಕೊಟ್ಟರೆ ಬೇಕಾದಷ್ಟು ದುಡ್ಡು ಕೊಡುತ್ತೇನೆ'' ಎಂದು ಹೇಳಿದ.


ಮೂರು ದಿನಗಳು ಕಳೆದು ಬೇಟೆಗಾರ ನೂರು ಗಿಣಿಗಳನ್ನು ತಂದು ಬೀರಬಲ್‌ಗೆ ಕೊಟ್ಟನು. ಬೀರಬಲ್ ಅದರಲ್ಲಿ ಐವತ್ತು ಗಿಣಿಗಳನ್ನು ಮಾತ್ರ ತೆಗೆದುಕೊಂಡು ಮಿಕ್ಕಿದುದನ್ನು ಹಾರಿಬಿಟ್ಟ ಬೇಟೆಗಾರನಿಗೆ ಮಾತಿನಂತೆ ಕೊಡಬೇಕಾದ ಹಣವನ್ನು ಕೊಟ್ಟು ಕಳುಹಿಸಿದನು.


ಬೀರಬಲ್ ಐವತ್ತು ಗಿಣಿಗಳಿಗೆ ಮಾತನಾಡಲು ಕಲಿಸಿದ. ಒಂದೊಂದು ಗಿಣಿಗೂ, 'ಸುಣ್ಣ ತೆಗೆದುಕೊಂಡು ಬಾ, ಮರಳು ತೆಗೆದುಕೊಂಡು ಬಾ. ಇಟ್ಟಿಗೆ ಎಲ್ಲಿ? ಬಾಗಿಲು ಇಲ್ಲಿಡು' ಎಂದು ಚೆನ್ನಾಗಿ ಮಾತನಾಡಲು ಕಲಿಸಿ ಕೊಟ್ಟನು. ಗಿಣಿಗಳಿಗೆ ಮಾತನಾಡಲು ಕಲಿಸುತ್ತಿರುವಾಗಲೇ ಅರಮನೆಯಿಂದ ಯಾರೇ ಬಂದು ಕೇಳಿದರೂ, “ನಾನು ಊರಲ್ಲಿ ಇಲ್ಲ' ಎಂದು ಹೇಳಲು ಆಜ್ಞೆ ಮಾಡಿದ್ದ ಸೇವಕರಿಗೆ.


ಎರಡು ತಿಂಗಳುಗಳಾದವು. ಬೀರಬಲ್ ತನ್ನೊಂದಿಗೆ ಇಲ್ಲದ ಕೊರತೆಯನ್ನು ಅಕ್ಬರ್‌ ಅನುಭವಿಸಿದ್ದನು. ಬಹಳ ದುಃಖವೇ ಆಯಿತು. ಬೀರಬಲ್ನನ್ನು ಕರೆದುಕೊಂಡು ಬರಲು ಒಬ್ಬ ಸೇವಕರನ್ನು ಕಳುಹಿಸಿ ಕೊಟ್ಟನು. ಅವನು ಹೋಗಿ ಸ್ವಲ್ಪ ಹೊತ್ತಿನಲ್ಲಿ ಹಿಂತಿರುಗಿ ಬಂದು, “ಅರಸನೇ, ಬೀರಬಲ್ ಮನೆಯಲ್ಲಿ ಇಲ್ಲ ಅವರು ಆಕಾಶ ಮಾಳಿಗೆ ಕಟ್ಟಲು ಬೇಕಾದ ಶಿಲ್ಪಿಗಳನ್ನು ಕರೆತರಲು ಪಕ್ಕದೂರಿಗೆ ಹೋಗಿದ್ದಾರಂತೆ” ಎಂದು ಹೇಳಿದನು. ಬರಲು ಇನ್ನೂ ಒಂದು ತಿಂಗಳಾಗುತ್ತದೆ ಎಂದೂ.


ಈ ಉತ್ತರ ಕೇಳಿ ಅಕ್ಬರ್‌ ಚಿಂತೆಗೊಳಗಾದನು. ಆದರೂ ತನ್ನ ಕನಸಿನ ಆಕಾಶ ಮಾಳಿಗೆ ಕಟ್ಟಿಸಲು ಬೀರಬಲ್ ಕಷ್ಟಪಡುತ್ತಿದ್ದುದು ತಿಳಿದು ನೆಮ್ಮದಿಯಾಯಿತು.


ಮೂರು ತಿಂಗಳುಗಳಾದವು. ಬೀರಬಲ್ ಗಿಣಿಗಳನ್ನು ಚೆನ್ನಾಗಿ ಮಾತನಾಡಲು ಕಲಿಸಿದ್ದನು. ಗಿಣಿಗಳೂ ಬೀರಬಲ್ ಹೇಳಿದ್ದುದನ್ನು ಥಟ್ಟನೆ ಹೇಳುತ್ತಿದ್ದವು. ಬೀರಬಲ್ ಆ ಗಿಣಿಗಳನ್ನು ಅರಮನೆ ಪಕ್ಕದಲ್ಲಿದ್ದ ಒಂದು ಮನೆಯಲ್ಲಿ ಪ್ರತ್ಯೇಕವಾಗಿ ಕೂಡಿ ಹಾಕಿ ಮನೆಗೆ ಬೀಗ ಹಾಕಿ ಅಕ್ಬರಿದ್ದಲ್ಲಿಗೆ ಬಂದನು.


ಆಕಾಶ 'ಖಾವಂದ್, ಮಾಳಿಗೆ ಕಟ್ಟಲು ಶಿಲ್ಪಿಗಳನ್ನು ಕರೆತಂದಿದ್ದಾಯಿತು. ಕೆಲಸ ಆರಂಭಿಸುವುದೇ. ತಾವು ಬಂದು ನೋಡಬೇಕು'' ಎಂದು ಹೇಳಿದನು.


ಅಕ್ಬರ್ ಬೀರಬಲ್ ಜತೆ ಹೋದನು. ಬೀರಬಲ್ ಗಿಣಿಗಳನ್ನು ಕೂಡಿಹಾಕಿದ್ದ ಮನೆ ಬಾಗಿಲು ತೆಗೆದನು. ಗಿಣಿಗಳು ಹೊರಗೆ ಬಂದು ಆಕಾಶಕ್ಕೆ ಹಾರಿದವು. ಹಾರುವಾಗ ಅವು ಬೀರಬಲ್ ಹೇಳಿಕೊಟ್ಟಿದ್ದ 'ಸುಣ್ಣ ತೆಗೆದುಕೊಂಡು ಬಾ, ಮರಳು ತೆಗೆದುಕೊಂಡು ಬಾ, ತಣ್ಣೀರು ಸುರಿ'' ಎಂಬೀ ಮಾತುಗಳನ್ನು ಆಡುತ್ತಾ ಹಾರಿದವು.


ಅಕ್ಬರನಿಗೆ ಆಶ್ಚರ್ಯವಾಯಿತು. ಗಿಣಿಗಳನ್ನು ನೋಡಿ, 'ಬೀರಬಲ್, ಏನಿದು? ಗಿಳಿಗಳು ಹೀಗೆ ಮಾತನಾಡುತ್ತಿವೆಯಲ್ಲ?” ಎಂದು ಕೇಳಿದನು.


“ಹೌದು ಜಹಾಂಪನಾ, ಅವು ಆಕಾಶದಲ್ಲಿ ಮನೆ ಕಟ್ಟುತ್ತಿವೆ'' ಎಂದನು.


ಆಗಲೇ ಅಕ್ಬರನಿಗೆ ತಾನು ಹೇಳಿದ್ದು ನೆರವೇರುವುದಿಲ್ಲ ಎಂಬುದು ಅರಿವಿಗೆ ಬಂದಿತು. ಆದರೆ ಬೀರಬಲ್‌ನ ಬುದ್ದಿ ಶಕ್ತಿ ಚಾತುರ್ಯಗಳನ್ನು ಮೆಚ್ಚಿಕೊಂಡನು.


ಆಕಾಶದಲ್ಲಿ ಮನೆ ಕಟ್ಟಲು ಸಾಧ್ಯವೇ?


ಬೆಸ್ತು ಬದ್ದ ಕರೀಂ


ದೆಹಲಿಯಲ್ಲಿ ಅಬ್ದುಲ್ ಕರೀಂ ಎಂಬುವನೊಬ್ಬನಿದ್ದ ಅವನಿಗೆ ಒಂದು ಕಣ್ಣು ಇರಲಿಲ್ಲ, ಆದ್ದರಿಂದ ಜನ ಅವನನ್ನು ಒಕ್ಕಣ್ಣ ಎಂದು ಕರೆಯುತ್ತಿದ್ದರು. ಅವನು ಬೀರಬಲ್ ನನ್ನು ಎಂದಾದರೂ ತೊಡಕಿಗೆ ಸಿಕ್ಕಿಸಬೇಕೆಂದು ಕಾಯುತ್ತಿದ್ದ ಇದು ಬೀರಬಲ್‌ನಿಗೂ ತಿಳಿದಿತ್ತು


ಒಂದು ದಿನ ಬೀರಬಲ್ ಹೊಗೆಸೊಪ್ಪು ಅಗಿದು ರಸವನ್ನು ಅರಮನೆಯ ಕಟ್ಟಡವೊಂದರ ಮೇಲೆ ಉಗಿದು ಅದರ ಸೌಂದರ್ಯವನ್ನು ಹಾಳು ಮಾಡಿದುದನ್ನು ಕರೀಂ ನೋಡಿದ. ಅವನು ಕೂಡಲೇ ಓಡಿ ಹೋಗಿ ಅಕ್ಬರನಿಗೆ ಬೀರಬಲ್‌ನ ಬಗ್ಗೆ ಚಾಡಿ ಹೇಳಿ ಸುಂದರವಾದ ಕಟ್ಟಡದ ಅಂದ ಹಾಳಾಯಿತು ಎಂದ.


ಅಕ್ಬರನಿಗೆ ಬೀರಬಲ್‌ನ ಮೇಲೆ ಸಿಟ್ಟು ಬಂದಿತು. ಅವನು ಬೀರಬಲ್ ಅರಮನೆಗೆ ಬಂದಾಗ, 'ಬೀರಬಲ್, ನಿನ್ನಂತಹ ಬುದ್ದಿವಂತ ಹೀಗೆ ಮಾಡಬಹುದೆ? ಬೆಳಿಗ್ಗೆ ಕರೀಂ ನಿನ್ನ ಮೇಲೆ ದೂರು ತಂದಿದ್ದ ನೀನೇನೋ ಕಟ್ಟಡದ ಅಂದಗೆಡಿಸಿದೆಯಂತೆ. ಹೊಗೆಸೊಪ್ಪು ಅಗಿದು ಕಟ್ಟಡದ ಗೋಡೆ ಮೇಲೆ ಉಗುಳಿದೆಯಂತೆ. ಬೇರೆಲ್ಲಿಯಾದರೂ ಉಗುಳುಬಾರದಿತ್ತೆ? ಇನ್ನು ಮುಂದೆ ವ್ಯರ್ಥವೂ ನಿಷ್ಟ್ರಯೋಜಕವೂ ಸುಂದರವೂ ಅಲ್ಲದ ಸ್ಥಳದಲ್ಲಿ ಉಗುಳು' ಎಂದು ಎಚ್ಚರಿಸಿದ. ಬೀರಬಲ್ ತಪ್ಪಾಯಿತೆಂದು ರಾಜನಿಗೆ ಹೇಳಿ ಮನೆಗೆ ಬಂದ.


ಮಾರನೆಯ ದಿನ ಅಕ್ಬರ್‌ ಅರಮನೆಯ ಮೊಗಸಾಲೆಯಲ್ಲಿ ಕುಳಿತಿದ್ದಾಗ ಕರೀಂ ಅಲ್ಲಿಗೆ ಅಳುತ್ತಾ ಬಂದು, "ಕಾಪಾಡಿ ಪ್ರಭು ! ಬೀರಬಲ್ ಹೊಗೆಸೊಪ್ಪಿನ ರಸವನ್ನು ನನ್ನ ಕಣ್ಣಿನಲ್ಲಿ ಉಗುಳಿದ್ದಾನೆ. ನನಗೆ ಅವಮಾನವಾಗಿದೆ. ಬೀರಬಲ್‌ನನ್ನು ಶಿಕ್ಷಿಸಿ' ಎಂದು ಗೋಗರೆದ. ಅಕ್ಬರ್‌ ತಕ್ಷಣ ಬೀರಬಲ್‌ನನ್ನು ಕಂಡು ವಿಚಾರಿಸಿದ.


ಬೀರಬಲ್, "ಪ್ರಭು ! ನಾನು ನೀವು ಹೇಳಿದಂತೆ ಮಾಡಿದ್ದೇನೆ' ಎಂದ. ಅಕ್ಬರ್‌, “ಬೀರಬಲ್ ! ಏನು? ನಾನು ಅಬ್ದುಲ್ ಕರೀಮನ ಕಣ್ಣಿನಲ್ಲಿ ಉಗುಳು ಎಂದು ಹೇಳಿದ್ದೇನೇನು?' ಎಂದು ಕೇಳಿದ.


ಅದಕ್ಕೆ ಬೀರಬಲ್, "ಇಲ್ಲ ಪ್ರಭು ! ವ್ಯರ್ಥವಾದ ಸುಂದರವಲ್ಲದ ಸ್ಥಳದಲ್ಲಿ ಉಗುಳು ಎಂದಿದ್ದೀರಿ. ಕರೀಮನ ಒಂದು ಕಣ್ಣು ವ್ಯರ್ಥವಾಗಿದೆ. ಅಲ್ಲದೆ ಅದು ಸುಂದರವಾದ ಸ್ಥಳವೂ ಅಲ್ಲ, ಅದಕ್ಕೆ ಅಲ್ಲಿ ಉಗಿದೆ'' ಎಂದ. 


ಕರೀಂ ಬೀರಬಲ್ನ ಉತ್ತರ ಕೇಳಿ ಪೆಚ್ಚಾದ. ಬೇಸ್ತು ಬಿದ್ದ ಅವನು ಆ ನಂತರ ಬೀರಬಲ್‌ನ ತಂಟೆಗೆ ಹೋಗಲಿಲ್ಲ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad

Search for Article