ತಾ ಕೈ ಅಂದರೆ ಕೇಳುವ ಕೈ, ಭೀಕ್ಷೆ ಬೇಡುವ ಕೈ.
ಕೋ ಕೈ ಅಂದರೆ ಕೊಡುವ ಕೈ, ದಾನ ಮಾಡುವ ಕೈ.
ಒಮ್ಮೆ ಅಕ್ಬರ್ ಆಸ್ಥಾನದಲ್ಲಿದ್ದವರನ್ನು ಯಾರೂ ಉತ್ತರಿಸಲಾಗದ ಒಂದು ಪ್ರಶ್ನೆ ಕೇಳಿದ.
“ಯಾರೇ ಆಗಲಿ ಏನಾದರೂ ಕೊಡಬೇಕಾದರೆ ಅಂಥ ವ್ಯಕ್ತಿಯ ಕೈ ಯಾವಾಗಲೂ ಮೇಲೆ ಇರುತ್ತದೆ. ಅದು ಕೋ ಕೈ. ಅದೇ ತೆಗೆದುಕೊಳ್ಳುವನ ಕೈಗಳು ಯಾವಾಗಲೂ ಕೆಳಗೆ ಇರುತ್ತವೆ. ಅಂದರೆ ಅದು ತಾ ಕೈ. ಆದರೆ ಯಾರು ಏನು ತೆಗೆದುಕೊಳ್ಳುತ್ತಾರೆಯೋ ಅದು ಕೊಡುವವನ ಕೈಗಿಂತ ಮೇಲೆ ಇರುವ ಒಂದು ಉದಾಹರಣೆ ಕೊಡಬಲ್ಲಿರಾ?”
ಆಸ್ಥಾನದಲ್ಲಿ ಒಬ್ಬರ ಮುಖ ಒಬ್ಬರು ನೋಡಿಕೊಂಡರು.
ಒಬ್ಬ ಏನು ಎಲ್ಲರೂ, 'ಸರ್ಕಾರ್, ಅದೆಂದಿಗೂ ಸಾಧ್ಯವಿಲ್ಲ, ಕೊಡುವವನ ಕೈ ಯಾವಾಗಲೂ ತೆಗೆದುಕೊಳ್ಳುವವನ ಕೈಗಿಂತ ಮೇಲಿರುತ್ತದೆ'' ಎಂದು ಹೇಳಿದರು.
ಬೀರಬಲ್ ಶಾಂತನಾಗಿ ಕುಳಿತಿದ್ದೆ. ಏನೂ ಉತ್ತರ ಕೊಡಲಿಲ್ಲ, ಬೀರಬಲ್, ನೀನೇನು ಹೇಳುವೆ? ಹಾಗೆ ಯೋಚಿಸುವೆಯಾ?''
“ಇಲ್ಲ, ಇಲ್ಲ” ಎಂದ ಬೀರಬಲ್. ಆಸ್ಥಾನದ ಎಲ್ಲರೂ ಚಕಿತರಾದರು.
ಆಗ ಅವರೆಲ್ಲ ಇಲ್ಲ , ಹುಜೂರ್ ! ಬೀರಬಲ್ ಪ್ರತಿಯಾಗಿ ಹೇಳುತ್ತಿದ್ದಾನೆ. ಎಂದಿಗೂ ಸಾಧ್ಯವಿಲ್ಲ, ಕೋ ಕೈ ಯಾವಾಗಲೂ ತಾ ಕೈಗಿಂತ ಮೇಲು'' ಎಂದರು.
“ಸಾಧ್ಯ ಸ್ವಾಮಿ'
“ಹೇಗೆ ಬೀರಬಲ್?''
“ಯಾರಾದರೂ ಸ್ವಲ್ಪ ನಶ್ಯ ತೆಗೆದುಕೊಳ್ಳಬೇಕಾದರೆ?” ಅಕ್ಬರ್ ಅರ್ಥ ಮಾಡಿಕೊಂಡ. ಆಗ ನಶ್ಯ ಕೊಡುವವನ ಕೈ ಕೆಳಗಿರುತ್ತದೆ. ತೆಗೆದುಕೊಳ್ಳುವವನ ಕೈ ಮೇಲಿರುತ್ತದೆ. ಅಕ್ಟರ್‌ನ ಹಾಗೆ ಎಲ್ಲರೂ ಬೀರಬಲ್‌ನ ಚಾತುರ್ಯದ ಉತ್ತರವನ್ನು ಹೊಗಳಿದರು.
ಅಹ್ವಾನ
ಒಂದು ದಿನ ಅಕ್ಬರ್ ಬೀರಬಲ್ ಜತೆ ಮಾತನಾಡುತ್ತಿರಬೇಕಾದರೆ ತಾಳ್ಮೆ ಕಳೆದುಕೊಂಡು ಬಿಟ್ಟ ಕೋಪ ಬಂದಿತು. ಬೀರಬಲ್‌ಗೆ ರಾಜನಿಗೆ ಸಿಟ್ಟು ಬಂದಿದೆ ಎಂದು ಗೊತ್ತಾಗಿ ಅಲ್ಲಿರಲು ಬಯಸಿದೆ ಅರಮನೆ ಬಿಟ್ಟು ಹೋದ.
ಬೀರಬಲ್ ಯಾವುದೋ ಅಪರಿಚಿತ ಸ್ಥಳಕ್ಕೆ ಹೊರಟು ಹೋದ. ತಾನೆಲ್ಲಿದ್ದೇನೆ ಎಂಬುದನ್ನು ಯಾರಿಗೂ ತಿಳಿಸಲಿಲ್ಲ ಕೆಲವು ದಿನಗಳಾದವು.
“ಬೀರಬಲ್ ಎಲ್ಲಿ ಹೋದ? ತಾನು ತಾಳ್ಮೆ ಕಳೆದುಕೊಳ್ಳಬಾರದಿತ್ತು ಅದಕ್ಕೆ ಬೀರಬಲ್ ಎಲ್ಲೋ ಹೋಗಿ ಬಿಟ್ಟಿದ್ದಾನೆ. ಹೇಗಾದರೂ ಮಾಡಿ ಬೀರಬಲ್ ಮತ್ತೆ ಅರಮನೆಗೆ ಬರುವಂತೆ ಮಾಡಬೇಕು'' ಎಂದು ಆಲೋಚಿಸಿದ. ಅಕ್ಟರ್ ಅವನಿಗಾಗಿ ಹುಡುಕಿಸಿದ. ಬೀರಬಲ್ ಎಲ್ಲೂ ಲಭ್ಯವಾಗಲಿಲ್ಲ,
ಕಡೆಗೆ ಬೇಸತ್ತ ಅಕ್ಟರ್ ಒಂದು ಉಪಾಯ ಮಾಡಿದ. ಅವನು ತನ್ನ ನೆರೆಕೆರೆಯ ರಾಜರಿಗೆ, “ನೋಡಿ, ಸಮುದ್ರದ ಮದುವೆ ವ್ಯವಸ್ಥೆಯಾಗಿದೆ. ನಿಮ್ಮ ನಿಮ್ಮ ಗಡಿಯ ನದಿಗಳನ್ನೆಲ್ಲ ಅರಮನೆಗೆ ಕಳುಹಿಸಿರಿ'' ಎಂದು ಆಜ್ಞೆ ಮಾಡಿದ.
ನೆರೆಹೊರೆಯ ರಾಜರಿಗೆ ಆಶ್ಚರ್ಯವಾಯಿತು. ಇದೆಂಥ ಆಹ್ವಾನ ? ಯಾರಾದರೂ ನದಿಗಳನ್ನು ಕಳುಹಿಸಲು ಸಾಧ್ಯವೇ? ಎಂದು ಚಕಿತರಾದರು. ಒಬ್ಬ ರಾಜನ ಹೊರತು ಯಾರೂ ಅಕ್ಟರ್‌ಗೆ ಉತ್ತರಿಸಲಿಲ್ಲ, ಆ ರಾಜ ಉತ್ತರಿಸಿ, “ಪ್ರಭು ! ನಮ್ಮ ನದಿಗಳು ಈಗಾಗಲೇ ನಿಮ್ಮ ಸಾಮ್ರಾಜ್ಯಕ್ಕೆ ಹರಿಯಲು ಸಿದ್ಧವಾಗಿವೆ. ಆದರೆ ನೀವು ದಯಮಾಡಿ ಅರ್ಧ ದಾರಿಯಲ್ಲೇ ನದಿಗಳನ್ನು ಸ್ವಾಗತಿಸಲು ನಿಮ್ಮ ಬಾವಿಗಳಿಗೆ ಹೇಳಿರಿ'' ಎಂದು ತಿಳಿಸಿದ.
ಅಕ್ಟರನಿಗೆ ಆ ಉತ್ತರ ನೋಡಿ ಈ ಉತ್ತರ ಬರೆಯಬಲ್ಲ ಸಾಮರ್ಥ್ಯ ಬೀರಬಲ್ ಒಬ್ಬನಿಗೇ ಇರುವುದು ಎಂದು ನಿರ್ಧರಿಸಿದ. ಬೀರಬಲ್ ಆ ಉತ್ತರ ಬರೆದು ಕಳುಹಿಸಿದ ರಾಜನ ಬಳಿಯೇ ಇರಬೇಕೆಂದು ತಾನೇ ಆ ರಾಜನ ಬಳಿಗೆ ಬಂದು ಅಲ್ಲಿ ಬೀರಬಲ್ ಇದ್ದುದನ್ನು ಗುರುತಿಸಿದನು.
ಬೀರಬಲ್, ನಾನು ಸಿಟ್ಟಾದೆ ಎಂದು ಹೀಗೆ ನನ್ನನ್ನು ಬಿಟ್ಟು ಬರುವುದೇ? ನನ್ನದು ತಪ್ಪಾಯಿತು. ದಯಮಾಡಿ ಅರಮನೆಗೆ ಬಾ'' ಎಂದು ಬೀರಬಲ್‌ನಿಗೆ ಕೇಳಿಕೊಂಡನು.
ಬೀರಬಲ್ ಏನೂ ಹೇಳದೆ ಅರಮನೆಗೆ ಹಿಂತಿರುಗಿದನು. ರಾಜನೊಂದಿಗೆ ಸಂತೋಷವಾಗಿರುತ್ತಿದ್ದನು.
ಸಹವಾಸವೇ ಬೇಡ
ಅಕ್ಬರನ ಆಸ್ಥಾನದಲ್ಲಿ ಬೀರಬಲ್‌ನ ಸ್ಥಾನ ದಿನದಿಂದ ದಿನಕ್ಕೆ ಉನ್ನತವಾಗುತ್ತಿತ್ತು ಅವನ ಪ್ರತಿಭೆಗೆ ಸಮರಾದವರು ಆಗ್ರಾದಲ್ಲಿ ಯಾರೂ ಇರಲಿಲ್ಲ. ದರ್ಬಾರಿನ ಕೆಲವು ಮಂತ್ರಿಗಳಿಗಂತೂ ಬೀರಬಲ್‌ನನ್ನು ಕಂಡರೆ ಆಗುತ್ತಿರಲಿಲ್ಲ. ಮೇಲೆ ಅವನನ್ನು ಹೊಗಳುತ್ತಿದ್ದರೂ ಒಳಗೆ ಅವನನ್ನು ದ್ವೇಷಿಸುತ್ತಿದ್ದರು. ಹೇಗಾದರೂ ಮಾಡಿ ರಾಜನ ದೃಷ್ಟಿಯಲ್ಲಿ ಬೀರಬಲ್ ಕೆಳಮಟ್ಟದವನೆಂಬುದನ್ನು ತೋರಿಸಲು ಸಮಯ ಕಾಯುತ್ತಿದ್ದರು. ಒಮ್ಮೆ ಅವರೆಲ್ಲರಿಗೆ ಒಂದು ಯೋಚನೆ ಹೊಳೆಯಿತು.
ಅಕ್ಬ ರನಿಗೆ ಅತ್ಯಂತ ಸಮೀಪ ಇರುತ್ತಿದ್ದ ಕ್ಷೌರಿಕನ ನೆರವು ಪಡೆಯಲು ಬಯಸಿದರು. ಕ್ಷೌರಿಕನನ್ನು ಭೇಟಿ ಮಾಡಿದರು. ಕ್ಷೌರಿಕ ಹಿಗ್ಗಿಹೋದ.
“ನಾನು ಒಬ್ಬ ಸಾಮಾನ್ಯ ಕ್ಷೌರಿಕ, ನನ್ನ ಕೆಲಸ ಏನಿದ್ದರೂ ದೊರೆಗಳ ಬಳಿ ಐದೋ ಹತ್ತೋ ನಿಮಿಷವಷ್ಟೆ. ಆದರೆ ಮಂತ್ರಿಗಳು ಉನ್ನತ ಸ್ಥಾನದಲ್ಲಿರುವವರು. ಅಂಥವರು ನನ್ನ ನೆರವು ಕೇಳುತ್ತಿದ್ದಾರೆಂದರೆ ನಾನು ಅದೃಷ್ಟಶಾಲಿ, ಕೈ ತುಂಬ ದುಡ್ಡು ಸಿಗುತ್ತದೆ'' ಎಂದು ಕೊಂಡ.
ಎಲ್ಲರೂ ಸೇರಿ ಬೀರಬಲ್ನನ್ನು ಹೇಗಾದರೂ ಮಾಡಿ ಮುಗಿಸಿ ಬಿಡಬೇಕೆಂದು ತೀರ್ಮಾನಿಸಿದರು. ಅವರು ಇನ್ನು ಬದುಕಿರಬಾರದು ಎಂಬುದೇ ಎಲ್ಲರ ಇಚ್ಛೆಯಾಗಿತ್ತು, ಕ್ಷೌರಿಕನಿಗೆ ತಮ್ಮ ಯೋಜನೆಯನ್ನು ಸ್ಪಷ್ಟವಾಗಿ ಹೇಳಿದರು. ಕ್ಷೌರಿಕ ಒಪ್ಪಿಕೊಂಡ. ಮರುದಿನ ಬೆಳಿಗ್ಗೆ ಕ್ಷೌರಿಕ ಅರಮನೆಗೆ ಹೋಗಿ ಅಕ್ಟರನಿಗೆ ಮುಖ ಕ್ಷೌರ ಮಾಡಲು ಕುಳಿತನು.
“ಖಾವಂದ್! ನನಗೆ ವಯಸಾಯಿತು. ನಿಮ್ಮ ತಂದೆ ಹುಮಾಯೂನರ ಕಾಲದಿಂದಲೂ ನಾನು ಕ್ಷೌರ ಮಾಡುತ್ತಾ ಬಂದಿದ್ದೇನೆ. ನಿಮ್ಮ ತಂದೆಯವರ ಕೂದಲು ಅಂದರೆ ಕೂದಲು, ರೇಷ್ಮೆಯಂತೆ ಮೃದು'' ಎಂದು ಹೇಳಿಕೊಂಡ. “ಸರಿ. ಅದಕ್ಕೇನೀಗ? ಆ ವಿಷಯದ ಅಗತ್ಯವೇನು?” ಎಂದು ಕೇಳಿದ ಅಕ್ಬರ್.
“ಏನಿಲ್ಲ ಸ್ವಾಮಿ? ನೆನಪಾಯಿತು. ಹೇಳಿದೆ. ನೀವು ಏನೆ ಹೇಳಿ ಹುಮಾಯೂನರ ಕೂದಲು ತುಂಬಾ ನಯ. ಆ..... ಅಂದ ಹಾಗೆ ನಿಮ್ಮನ್ನು ಒಂದು ಪ್ರಶ್ನೆ ಕೇಳಲೇ?”
“ಕೇಳಯ್ಯಾ? ಏನದು ನಿನ್ನ ಪ್ರಶ್ನೆ?''
'ಹುಜೂರ್, ನೀವು ಮೊಗಲ್ ಸಾಮ್ರಾಟರು. ಬೇಕಾದಷ್ಟು ಸಿರಿಸಂಪತ್ತು ಇರೋರು. ನಿಮ್ಮ ತಂದೆ ತೀರಿ ಹೋಗಿ ತುಂಬಾ ದಿನಗಳಾದವು. ಒಮ್ಮೆಯಾದರೂ ಅವರು ಸ್ವರ್ಗದಲ್ಲಿ ಹೇಗಿದ್ದಾರೆ ಅಂತ ಯೋಚಿಸಿದ್ದೀರಾ?”
“ಮೂರ್ಖ! ಏನು ಅಂತ ಪ್ರಶ್ನೆ ಕೇಳಿದೆ. ಸತ್ತು ಸ್ವರ್ಗದಲ್ಲಿರೋರನ್ನು ಯಾರಾದರೂ ಹೋಗಿ ವಿಚಾರಿಸುವುದಕ್ಕೆ ಆಗುತ್ತೆ?'
“ಯಾಕಾಗೋಲ್ಲ ಹುಜೂರ್ ! ಖಂಡಿತಾ ಆಗುತ್ತೆ'
“ಏಯ್! ಸುಮ್ಮನೆ ಕ್ಷೌರ ಮಾಡು. ಪೆದ್ದು ಪೆದ್ದಾಗಿ ಮಾತನಾಡಬೇಡ.” “ಜಹಾಂಪನಾ ! ನನಗೊಬ್ಬ ಮಂತ್ರವಾದಿ ಗೊತ್ತು ಅವನು ಇಂಥ ವಿಷಯಗಳನ್ನು ಚೆನ್ನಾಗಿ ತಿಳಿದಿದ್ದಾನೆ.'
“ಹೌದೆ?”
“ಸತ್ತು ಸ್ವರ್ಗದಲ್ಲಿರುವ ನಮ್ಮ ಪಿತೃಗಳು ಹೇಗಿದ್ದಾರೆ ಎಂಬುವುದನ್ನು ನಾವೇ ನೇರ ಸ್ವರ್ಗಕ್ಕೆ ಹೋಗಿ ತಿಳಿದು ಬರಬಹುದು. ಮಂತ್ರವಾದಿ ಇದಕ್ಕೆ ಅವಕಾಶ ಮಾಡಿಕೊಡುತ್ತಾನೆ.”
“ಅಯ್ಯೋ! ಹಾಗಾದರೆ ನಾನು ನನ್ನ ತಂದೆ ವಿಷಯ ತಿಳೀಬೇಕಲ್ಲ.” “ಅದಕ್ಕೇನೀಗ? ನಾನು ಏರ್ಪಾಟು ಮಾಡುತ್ತೇನೆ. ಆದರೆ ಒಂದು ವಿಷಯ. ಸ್ವರ್ಗಕ್ಕೆ ಹೋಗಿ ಇಂತಹ ವಿಷಯ ಎಲ್ಲ ತಿಳಿದು ಬರಬೇಕಾದರೆ ನಾವು ತುಂಬಾ ಅನುಭವ ಇರೋ ವ್ಯಕ್ತಿಯನ್ನು ಕಳುಹಿಸಬೇಕಾಗುತ್ತೆ'
“ಅದೂ ಸರಿ ಅನ್ನು, ಆದರೆ ಅಂಥವರು ಯಾರು ಇದ್ದಾರೆ ನಮ್ಮ ರಾಜ್ಯದಲ್ಲಿ.”
“ಖಾವಂದ್ ! ಇದೇನು ಹೀಗೆ ಕೇಳುತ್ತೀರಿ? ನಮ್ಮ ಸಾಮ್ರಾಜ್ಯದಲ್ಲಿ ಈ ಕೆಲಸ ಮಾಡಿಕೊಂಡುವಂಥ ತುಂಬಾ ಬುದ್ಧಿವಂತ ವ್ಯಕ್ತಿ ನಮ್ಮಲ್ಲಿ ಇದ್ದೇ ಇದಾನೆ. ಆತ ನಿಮಗೂ ಗೊತ್ತೇ ಇದಾನೆ.”
“ಅದು ಯಾರಯ್ಯಾ ಅಂಥ ವ್ಯಕ್ತಿ? ಅದೂ ಸ್ವರ್ಗಕ್ಕೆ ಹೋಗಿ ಬರಬಲ್ಲ ವನೆ?”
“ಸ್ವಾಮಿ ! ಆತನೇ...... ಬೀರಬಲ್””
“ಏನು? 'ಬೀರಬಲ್ ! ಅವನು ನಮ್ಮ ಮಂತ್ರಿ, ಅವನು ಇಂಥ ಕೆಲಸ ಮಾಡಲು ಹೋಗುವುದೇ?”
“ಯಾಕೆ ಆಗಬಾರದು? ಬೀರಬಲ್‌ನಂತಹ ಬುದ್ದಿವಂತ ವ್ಯಕ್ತಿಯಿಂದ ಇದು ಸಾಧ್ಯ. ಅವನಿಗಾದರೆ ನಿಮ್ಮ ತಂದೆ ಯಾರು ಅಂತ ಗೊತ್ತು ಅವರ ಕ್ಷೇಮ ಸಮಾಚಾರ ತಿಳಿದೂ ಬರಬಲ್ಲ, ಮೇಲಾಗಿ ನಾನು ಕರೆದುಕೊಂಡು ಬರೋ ಮಾಂತ್ರಿಕನ ಜತೆ ಮಾತನಾಡುವ ಜಾಣತನ ಬೀರಬಲ್ಗಿದೆ.”
“ಸರಿ, ನೀನು ಹೇಳಿದ ಹಾಗೆ ಈ ಕೆಲಸಕ್ಕೆ ಬೀರಬಲ್ನನ್ನೆ ಒಪ್ಪಿಸೋಣ. ಏನೇನು ಏರ್ಪಾಟು ಮಾಡಬೇಕು ಅಂತ ಮಂತ್ರವಾದಿಯನ್ನು ಕೇಳಿ ಹೇಳು.''
ಅದನ್ನು ತಿಳಿದೇ ಬಂದಿದೀನಿ ಹುಜೂರ್, ಚಿತೆ ಸಿದ್ಧ ಮಾಡಿ ಬೀರಬಲ್ನನ್ನು ಅದರ ಮೇಲೆ ಕೂರಿಸಬೇಕು. ಮಂತ್ರವಾದಿ ಸ್ವರ್ಗಕ್ಕೆ ಹೋಗಲು ಬೇಕಾದ ಮಂತ್ರಗಳನ್ನು ಹೇಳುತ್ತಾನೆ. ಚಿತೆಗೆ ಬೆಂಕಿ ಹಚ್ಚಿದರಾಯಿತು. ಬೆಂಕಿ ಬೀರಬಲ್‌ಗೆ ತಾಗದಂತೆ ಅವನು ಹೊಗೆ ಜತೆ ಸ್ವರ್ಗಕ್ಕೆ ಹೋಗುತ್ತಾನೆ.”
ಮುಖ ಕ್ಷೌರ ಮುಗಿಯಿತು. ಕ್ಷೌರದವನು ಹೇಳಿದ ಮಾತು ಕೇಳಿದ ಅಕ್ಟರ್ ಮಾರನೆಯ ದಿನವೇ ಬೀರಬಲ್‌ನನ್ನು ಕಂಡು, “ಅಯ್ಯಾ ಬೀರಬಲ್, ನಿನ್ನನ್ನು ಸ್ವರ್ಗಕ್ಕೆ ಕಳುಹಿಸುತ್ತಿದ್ದೇನೆ. ಸಿದ್ಧನಾಗು' ಎಂದ. ಬೀರಬಲ್‌ಗೆ ಅಕ್ಟರ್ ಹೇಳಿದುದರ ತಲೆಬುಡ ಅರ್ಥವಾಗಲಿಲ್ಲ,
“ಹುಜೂರ್! ಏನಿದು? ಸ್ವರ್ಗವೇ?. ಅಲ್ಲಿಗೆ ಹೋಗುವುದೇ?”
"ಹೌದಯ್ಯಾ ! ನನ್ನ ತಂದೆ ಹೇಗಿದಾರೆ ನೋಡಿಕೊಂಡು ಅವರ ಕ್ಷೇಮ ಸಮಾಚಾರ ತಿಳಿದು ಬಾ. ನನಗೆ ಮುಖ ಕ್ಷೌರ ಮಾಡ್ತಾನಲ್ಲ ಅವನಿಗೆ ತಿಳಿದಿರೋ ಒಬ್ಬ ಮಂತ್ರವಾದಿಗೆ ಸಮರ್ಥರಾದವರನ್ನು ಸ್ವರ್ಗಕ್ಕೆ ಕಳುಹಿಸಿಕೊಡೋ ವಿಧಾನ ತಿಳಿದಿದೆಯಂತೆ. ಹೋಗಿ ಬಂದೂ ಬಿಡಬಹುದಂತೆ.''
“ಭಲೆ ಭಲೆ? ನಾನು ಸ್ವರ್ಗ ನೋಡಿ ಬರಲು ಒಳ್ಳೆ ಅವಕಾಶ. ಆದರೆ ಸ್ವರ್ಗ ತುಂಬ ದೂರ ಇದೆ. ನನಗೆ ಹೋಗಿ ಬರಲು ಸ್ವಲ್ಪ ಹಣ ಬೇಕಾಗುತ್ತೆ”
ಅಷ್ಟೇ ತಾನೇ? ಎಷ್ಟು ಹಣ ಬೇಕೋ ತೆಗೆದುಕೋ.''
'ನಾನು ಸ್ವರ್ಗಕ್ಕೆ ಹೋಗಿಬರುವುದೆಂದರೆ ತುಂಬಾ ದಿನಗಳೇ ಆಗುತ್ತೆ ಅಲ್ಲಿಯವರೆಗೂ ನನ್ನ ಹೆಂಡತಿ ಮಕ್ಕಳ ಗತಿ? ಅದಕ್ಕೆ ಅವರಿಗೊಂದು ವ್ಯವಸ್ಥೆ ಮಾಡಿ ನೋಡಿಕೊಳ್ಳಲು ಯಾರನ್ನಾದರೂ ಬಿಟ್ಟು ನಾನು ಸ್ವರ್ಗಕ್ಕೆ ಹೋಗಬೇಕಾಗುತ್ತೆ”
“ಆಯಿತಯ್ಯಾ ? ಹಾಗೆ ಮಾಡು. ಆದರೆ ಬೇಗ ಸ್ವರ್ಗಕ್ಕೆ ಹೋಗಿ ಬಾ. ನನ್ನ ತಂದೆ ಹೇಗಿದ್ದಾರೋ ತಿಳಿಯುವ ಆತುರ ನನಗೆ.''
“ಚಿಂತಿಸಬೇಡಿ ಖಾವಂದ್ ! ನಿಮ್ಮ ಕೆಲಸ ಆಗುತ್ತೆ ನನಗೆ ಒಂದು ತಿಂಗಳು ಕಾಲಾವಕಾಶ ಕೊಡಿ ಅಷ್ಟೆ”
“ಸ್ವಲ್ಪ ಹೆಚ್ಚೇ ಆಯಿತು. ಇರಲಿ. ಬೇಗ ಸಿದ್ಧತೆ ಮಾಡಿಕೋ.”
'ಮಾಡಿಕೊಳ್ಳುತ್ತೇನೆ'' ಎಂದು ಹೇಳಿದ ಬೀರಬಲ್ ಮನೆಗೆ ಬಂದ. ಮುಖ ಕ್ಷೌರ ಮಾಡುವವನಿಗೆ ಇಷ್ಟೆಲ್ಲ ತಿಳಿದಿರುವುದು ಸಾಧ್ಯವಿಲ್ಲ ಯಾರೋ ಇವನಿಗೆ ಹೇಳಿಕೊಟ್ಟು ಕೆಲಸ ಮಾಡಿಸಿದ್ದಾರೆ. ಇದೊಂದು ಸಂಚು ಎಂದು ಬೀರಬಲ್‌ಗೆ ಅರ್ಥವಾಗಲು ವೇಳೆ ಹಿಡಿಯಲಿಲ್ಲ,
ಕೂಡಲೇ ಬೀರಬಲ್ ತನ್ನ ಮನೆಯಿಂದ ರುದ್ರಭೂಮಿವರೆಗೆ ಒಂದು ಸುರಂಗ ತೋಡಿಸಿದ, ರುದ್ರಭೂಮಿ ಅಂದರೆ ಶವಗಳನ್ನು ಸುಡುವ ಜಾಗದಿಂದ ತನ್ನ ಮನೆಗೆ ಬರಲು ದಾರಿಯಾಯಿತು ಎಂದು ಖಚಿತವಾದೊಡನೆ ಬೀರಬಲ್ ಅಕ್ಟರನ ಬಳಿಗೆ ಬಂದು,
“ಖಾವಂದ್, ನಾನು ಸ್ವರ್ಗಕ್ಕೆ ಹೋಗಲು ಸಿದ್ಧ, ನಿಮ್ಮ ತಂದೆಯವರಿಗೆ ನೀವು ಏನು ಬೇಕಾದರೂ ಕಳುಹಿಸಬಹುದು. ನಾನು ಹೋಗಿ ಬರುತ್ತೇನೆ” ಎಂದು ಹೇಳಿಕೊಂಡ. ಚಿತೆ ಸಿದ್ಧವಾಯಿತು. ಬೀರಬಲ್ನನ್ನು ಮೆರವಣಿಗೆಯಲ್ಲಿ ರುದ್ರಭೂಮಿಗೆ ಕರೆದೊಯ್ಯಲಾಯಿತು.
ಚಿತೆ ಮೇಲೆ ಬೀರಬಲ್‌ನನ್ನು ಕೂರಿಸಲಾಯಿತು. ಅಕ್ಟರನ ಕೆಲವು ಮಂತ್ರಿಗಳು ಸದ್ಯ ಬೀರಬಲ್ ಇನ್ನು ಬರುವುದಿಲ್ಲ, ಇದೇ ಅಂತಿಮ ದರ್ಶನವೆಂದು ಹರ್ಷಿಸಿದರು. ಅವರೆಲ್ಲ ಹೂಡಿದ್ದ ಸಂಚಿನ ಫಲವೇ ಅದಾಗಿತ್ತು. ಚಿತೆಗೆ ಬೆಂಕಿ ಹಚ್ಚಲಾಗಿ ಹೊಗೆ ಎದ್ದಿತು. ಮಂತ್ರವಾದಿ ಕೆಲಸಕ್ಕೆ ಬಾರದ ಮಂತ್ರಗಳನ್ನು ಉಸುರಿದನು. ಬೀರಬಲ್ ಮೊದಲೇ ಸಿದ್ಧಪಡಿಸಿದ್ದ ರಹಸ್ಯ ದ್ವಾರವನ್ನು ತೆಗೆದು ಒಳಗಿಳಿದು ಸುರಂಗದ ಮೂಲಕ ಬಂದು ಮನೆ ಸೇರಿದ, ಚಿತೆ ಉರಿಯಿತು. ಜನ ಬೀರಬಲ್ ಉರಿದು ಹೋದ ಎಂದು ಭಾವಿಸಿದರು. ಅಕ್ಟರ್ ಬೀರಬಲ್ ಸ್ವರ್ಗಕ್ಕೆ ಹೋದನೆಂದೇ ತಿಳಿದನು.
ಮನೆಗೆ ಬಂದ ಬೀರಬಲ್ ಊರಲ್ಲಿ ಯಾರಿಗೂ ಕಾಣಿಸಿಕೊಳ್ಳದೆ ಗಡ್ಡ ಮೀಸೆಗಳು ಬೆಳೆಸಿದ. ಕೆಲವು ದಿನಗಳ ನಂತರ ಒಂದು ದಿನ ಅಕ್ಟರನ ಸಭೆಗೆ ಬಂದ. ಅಕ್ಟರ್‌ನಿಗೆ ಬೀರಬಲ್ ಸ್ವರ್ಗದಿಂದ ಹಿಂದಿರುಗಿ ಬಂದನೆಂದು ತಿಳಿದು ಸಿಂಹಾಸನದಿಂದ ಎದ್ದು ಬಂದು ಅವನನ್ನು ಅಪ್ಪಿಕೊಂಡ.
ಬೀರಬಲ್, ಅಬ್ಬಾ! ಸ್ವರ್ಗದಿಂದ ಯಾವಾಗ ಬಂದೆ? ಪ್ರಯಾಣ ಹೇಗಿತ್ತು? ತುಂಬಾ ದಿನಗಳಾಯಿತು ನಿನ್ನನ್ನು ನೋಡಿ ಹೇಗಿದ್ದಿ?” ಎಂದು ಕೇಳಿದ.
“ಹುಜೂರ್, ಎಲ್ಲ ನಿಮ್ಮ ದಯ. ಪ್ರಯಾಣ ಚೆನ್ನಾಗಿತ್ತು ಅದನ್ನು ಇನ್ನೊಂದು ದಿನ ಹೇಳುತ್ತೇನೆ.”
“ಹೇಗೋ ಹಿಂದಿರುಗಿ ಬಂದೆಯಲ್ಲ, ನನ್ನ ತಂದೆ ಹುಮಾಯೂನರನ್ನು ನೋಡಿದ್ದೆಯಾ? ಹೇಗಿದ್ದಾರೆ ಅವರು. ನನ್ನ ಬಗ್ಗೆ ಕೇಳಿದಿರಾ?”
ಪ್ರಭು! ಅದು ಸ್ವರ್ಗ. ಅಲ್ಲಿ ಅವರು ಯಾವುದಕ್ಕೂ ಕಡಮೆ ಇಲ್ಲದೆ ಸೌಖ್ಯವಾಗಿದ್ದಾರೆ. ನಿಮ್ಮ ಬಗ್ಗೆ ಹಾಗೂ ಸಾಮ್ರಾಜ್ಯದ ಬಗ್ಗೆ ತುಂಬಾ ವಿಚಾರಿಸಿದರು. ಆದರೆ ಅವರೇಕೋ ದುಃಖಿಸುತ್ತಿದ್ದರು.”
“ಯಾಕೆ? ನೀನು ಕೇಳಲಿಲ್ಲವೆ ಏಕೆ ಎಂದು?”
“ಕೇಳಿದೆ. ಅವರಿಗೆ ಉಡಲು ಉಣ್ಣಲು ಯೋಚನೆ ಇಲ್ಲ. ಕೈಗೆ ಕಾಲಿಗೆ ಆಳುಗಳಿರುವರು. ಅವರ ದುಃಖಕ್ಕೆ ಕಾರಣವೆಂದರೆ ...
“ಹೇಳು ಬೀರಬಲ್, ನನ್ನ ತಂದೆ ದುಃಖಕ್ಕೆ ಕಾರಣವೇನು?” “ಇನ್ನೇನಿಲ್ಲ, ನಾನೂ ತುಂಬಾ ಒತ್ತಾಯ ಮಾಡಿದ್ದಕ್ಕೆ ಅವರು ಕಾರಣ ಹೇಳಿದರು. ಆದರೆ ಅದು ಪರಿಹಾರವಾಗದು.”
“ಯಾಕೆ? ನಾನು ಪರಿಹರಿಸುತ್ತೇನೆ. ಅವರ ಇಚ್ಛೆಯಾದರೂ ಏನು? ಈಗ ಸ್ವರ್ಗಕ್ಕೆ ಹೋಗುವ ಬಗೆ ತಿಳಿದೇ ಇದೆ. ನಾವು ಅವರಿಗೆ ಏನು ಬೇಕೊ ಅದು ಕಳುಹಿಸೋಣ.''
'ಹುಜೂರ್ ! ನಿಮ್ಮ ತಂದೆಗೆ ಅಲ್ಲಿ ಮುಖಕ್ಷೌರ ಮಾಡುವವರು ಯಾರೂ ಇಲ್ಲವಂತೆ.'
'ಅದೇನು ? ಕ್ಷೌರಿಕರು ಸತ್ತು ಮೇಲೆ ಹೋಗಿಲ್ಲವೆ?”
“ಇಲ್ಲ. ಅಂತಹ ಯಾರೂ ಇಲ್ಲ. ನನಗಂತೂ ಅವರನ್ನು ಗುರುತಿಸುವುದೇ ಕಷ್ಟವಾಗಿ ಹೋಯಿತು. ತುಂಬಾ ಉದ್ದವಾದ ಗಡ್ಡ ಬಿಟ್ಟಿದ್ದರು. ನನಗೂ ಅಲ್ಲಿದ್ದ ಕೆಲವು ದಿನಗಳಲ್ಲಿ ಯಾರೂ ಕ್ಷೌರಿಕರು ಸಿಗಲೇ ಇಲ್ಲ, ಅದಕ್ಕೆ ನಾನೂ ಗಡ್ಡಮೀಸೆ ಬಿಟ್ಟಿದ್ದೇನೆ ನೋಡಿ, ನಿಮ್ಮ ತಂದೆಗೆ ಒಬ್ಬ ಕ್ಷೌರದವರು ಬೇಕಂತೆ. ದಯ ಮಾಡಿ ಅಕ್ಟರನಿಗೆ ಹೇಳಿ ಇಲ್ಲಿಗೆ ಒಬ್ಬ ಕ್ಷೌರಿಕನನ್ನು ಕಳುಹಿಸುವ ಏರ್ಪಾಟು ಮಾಡು ಎಂದರು.'
“ಓಹ್ ! ಇಷ್ಟೇನೆ? ನಾನು ಅವರ ಮಗ. ಅವರ ಆಸೆ ಪೂರಯಿಸುವುದು ನನ್ನ ಕರ್ತವ್ಯ. ಹೇಗೂ ನನಗೆ ಮುಖ ಕ್ಷೌರ ಮಾಡುವ ಅಬ್ದುಲ್ ಇದ್ದಾನೆ. ಅವನನ್ನೆ ಕಳುಹಿಸಿ ಬಿಡುತ್ತೇನೆ'
ಎಂದು ಹೇಳಿದ ಅಕ್ಟರ್ ತನಗೆ ಮುಖಕ್ಷೌರ ಮಾಡುವವನನ್ನು ಬರ ಮಾಡಿಕೊಂಡು ಮಂತ್ರವಾದಿಯ ನೆರವಿನಿಂದ ಅವನನ್ನು ಸ್ವರ್ಗಕ್ಕೆ ಕಲುಹಿಸುವ ಏರ್ಪಾಟು ಮಾಡಿದನು.
ಕ್ಷೌರಿಕನ ಪಾಡು ನಾಯಿ ಪಾಡಾಯಿತು. ಯಾವ ಮಂತ್ರಿಗಳೂ ಅವನ ನೆರವಿಗೆ ಬರಲಿಲ್ಲ, ಅವನ್ನು ಚಿತೆಯ ಮೇಲೆ ಕೂರಿಸಿ ಬೆಂಕಿ ಹಚ್ಚಲಾಯಿತು. ಕ್ಷೌರಿಕ ಉರಿಯುವ ಬೆಂಕಿಗೆ ಜೀವಂತ ಸಿಕ್ಕಿ ದಹಿಸಿ ಹೋದ. ಅಂದಿನಿಂದ ಬೀರಬಲ್ನ ಸಹವಾಸವೇ ಬೇಡ ಎಂದು ಇತರ ಮಂತ್ರಿಗಳು ಅವನ ತಂಟೆಗೆ ಹೋಗಲಿಲ್ಲ,
ಪ್ರಾಮಾಣಿಕ ಬೀರಬಲ್
ಅಕ್ಬರ್ ಮತ್ತು ಬೀರಬಲ್ ಒಂದು ದಿನ ಒಟ್ಟಿಗೆ ಊಟ ಮಾಡುತ್ತಿದ್ದರು. ಅಡಿಗೆಯವನು ಬದನೆಕಾಯಿ ಉಪಯೋಗಿ ಅಡಿಗೆ ಮಾಡಿದ್ದನು. ಅಕ್ಟರ್ ಅಡಿಗೆ ತುಂಬಾ ರುಚಿ ಇದೆ ಅಂತ ಹೊಗಳಿ “ಬೀರಬಲ್, ಬದನೆಕಾಯಿ ತುಂಬ ಪುಷ್ಟಿಕರ ಹಾಗೂ ರುಚಿ ಇದೆ'' ಎಂದು ಹೇಳಿದನು.
ಬೀರಬಲ್ ಅಕ್ಬರ್ನ ಮಾತುಗಳನ್ನು ಗೌರವಿಸಿದನು. ದೊರೆ ಹೇಳಿದುದನ್ನು ಪರೀಕ್ಷಿಸಲು ಬಯಸಿದನು.
ಕೆಲವು ದಿನಗಳಾದವು. ಒಂದು ದಿನ ಅಕ್ಟರ್ ಅಡಿಗೆಯವನನ್ನು ಕರೆದು ಬದನೆಕಾಯಿ ಮಾತ್ರ ಉಪಯೋಗಿ ಕೆಲವು ಅಡಿಗೆಗಳನ್ನು ಮಾಡಲು ಹೇಳಿದನು. ಅಡಿಗೆಯವನೂ ಹಾಗೆಯೇ ಅಡಿಗೆ ಮಾಡಿದನು.
'ಅಕ್ಬರ್ ಊಟಕ್ಕೆ ಕುಳಿತನು. ಎರಡು ಬದನೆಕಾಯಿ ತುಂಡುಗಳನ್ನು ಎತ್ತಿಕೊಂಡು ಬಾಯಿಗಿಟ್ಟನು. ಅಡಿಗೆಯವನನ್ನು ಕರೆದು, 'ಇದೇನಯ್ಯಾ ಇದು? ಈ ತರಕಾರಿಯನ್ನು ಎಲ್ಲಿಯಾದರೂ ಎಸೆದು ಬಾ, ಇದು ರುಚಿ ಇಲ್ಲ ಬರಿ ಬೀಜಗಳು ಬೇರೆ. ಈ ತರಕಾರಿ ಶಕ್ತಿ ಕೊಡುತ್ಯೆ? ನೀನು ಒಂದು ಕೆಲಸ ಮಾಡು, ಬೀರಬಲ್‌ಗೆ ಈ ತರಕಾರಿ ಇಷ್ಟ, ಅವನಿಗೆ ಇದನ್ನು ಬಡಿಸು'' ಎಂದು ಸಿಟ್ಟಿನಿಂದ ಹೇಳಿದ.
ಅಡಿಗೆಯವನು ಹಾಗೆಯೇ ಆಗಲಿ ಎಂದು ಬೀರಬಲ್ ಗೆ ಆ ಅಡಿಗೆಯನ್ನು ಬಡಿಸಿ ಇಡೀ ಕಥೆಯನ್ನು ಹೇಳಿದನು.
'ಮೂರ್ಖ ! ಇದನ್ನೇಕೆ ತಂದೆ. ಇದನ್ನು ತೆಗೆದುಕೊಂಡು ಹೋಗಿ ಆಚೆ ಹಾಕು” ಎಂದ.
ಅಡಿಗೆಯವನು ಹಿಂದಿರುಗಿ ಅಕ್ಟರನಿಗೆ ಬೀರಬಲ್ ಕುರಿತು ಹೇಳಿದ. ಅಕ್ಟರ್ ಚಕಿತನಾದ, ಬೀರಬಲ್‌ನ ಬಳಿಗೆ ಬಂದು,
“ಅಯ್ಯಾ ಬೀರಬಲ್ ! ಆ ದಿನ ನೀನು ಬದನೆಕಾಯಿ ಒಳ್ಳೆ ತರಕಾರಿ ಅಂದರೆ ಒಪ್ಪಿಕೊಂಡೆ. ಆದರೆ ಇವತ್ತು ಎಸೆದುಬಾ ಅಂತಿದೀ ಯಾಕೆ?” ಎಂದು ಕೇಳಿದ.
“ಹುಜೂರ್ ! ಆ ದಿನ ನೀವು ಬದನೆಕಾಯಿ ಹೊಗಳಿದಿರಿ, ನಾನೂ ಹೊಗಳಿದೆ. ಇವತ್ತು ನೀವು ಅದನ್ನು ತಿನ್ನಲು ತಿರಸ್ಕರಿಸಿದಿರಿ. ನಾನೂ ಹಾಗೆ ಮಾಡಿದೆ. ನಾನೇಕೆ ತಿನ್ನಲಿ? ನಾನು ಪ್ರಾಮಾಣಿಕನಾಗಿರಬೇಕು ಅಂತ ಇಷ್ಟಪಟ್ಟಿದ್ದೀನಿ. ಅದು ನನಗೆ ಕರ್ತವ್ಯ. ನಾನು ಬದನೆಕಾಯಿ ಹೊಗಳಿದರೆ ಅದೇನೂ ನನ್ನನ್ನು ಗೌರವಿಸುವುದಿಲ್ಲ ಅಥವಾ ಯಾವುದೇ ಶಕ್ತಿ ನೀಡುವುದಿಲ್ಲ, ಆದರೆ ನೀವು ದೊರೆಗಳು ನಾನು ನಿಮಗೆ ಅವಿಧೇಯನಾಗಿರುವುದು ಸರಿಯೆ? ನಾನು ನಿಮ್ಮ ಸೇವಕ. ನಾನು ಬದನೆಕಾಯಿಗೆ ಸೇವಕನಲ್ಲ' ಬೀರಬಲ್ ಉತ್ತರಿಸಿದ.
ಅಕ್ಟರ್ ಬೀರಬಲ್ ಉತ್ತರ ಕೇಳಿ ಗಟ್ಟಿಯಾಗಿ ನಕ್ಕು ಬಿಟ್ಟ
ಮಹಾ ಗಾಯಕ
ತಾನ್‌ಸೇನ್ ಅಕ್ಬರ್ನ ಆಸ್ಥಾನದ ಗಾಯಕ. ಅಕ್ಬರ್ನಿಗೆ ಅವನೆಂದರೆ ಇಷ್ಟ ತಾನ್‌ಸೇನ್ ಪ್ರತಿ ರಾತ್ರಿ ದೊರೆಗೆ ಸಂತೋಷ ಉಂಟು ಮಾಡಲು ಹಾಡು ಹೇಳುತ್ತಿದ್ದನು. ಬೀರಬಲ್‌ಗೂ ತಾನ್‌ಸೇನನ ಹಾಡು ಇಷ್ಟವಾಗಿತ್ತು ಒಂದು ದಿನ ಒಂದು ಸಂಗೀತ ಕಾರ್ಯಕ್ರಮದ ವ್ಯವಸ್ಥೆಯಾಯಿತು.
ಕಾರ್ಯಕ್ರಮದ ನಂತರ ಬೀರಬಲ್ ಜತೆ ಅಕ್ಬರ್ ಸುತ್ತಾಡುತ್ತಿದ್ದನು. ಆದಿನ ಬೆಳದಿಂಗಳಿತ್ತು “ಬೀರಬಲ್ ! ತಾನ್‌ಸೇನ್ ಒಳ್ಳೆ ಗಾಯಕ, ಎಷ್ಟು ಚೆನ್ನಾಗಿ ಸಂಗೀತ ಹೇಳುತ್ತಾನೆ? ನನಗೆ ಅವನ ಸಂಗೀತ ಕೇಳುತ್ತಿದ್ದರೆ ಸಂತೋಷವಾಗುತ್ತದೆ'' ಎಂದು ಹೇಳಿದ ಅಕ್ಟರ್ ಅವನಿಗೆ ತಾನ್‌ಸೇನ್ ಜಗತ್ ಪ್ರಸಿದ್ಧ ಸಂಗೀತಗಾರ ಎನಿಸಿತ್ತು
“ಸ್ವಾಮಿ, ನೀವು ಹೇಳೋದು ಸರಿ. ಆದರೆ ತಾನ್ಸೇನ್ ಅದನ್ನು ಒಪ್ಪಿಕೊಳ್ಳುವುದಿಲ್ಲ, ಅವನು ಹೇಳೋದೇನೆಂದರೆ ತನ್ನ ಗುರು ಹರಿದಾಸರಂತೆ ಯಾರೂ ಹಾಡುವುದಿಲ್ಲ ಎಂದು. ಸಜೀವ ಅಥವಾ ನಿರ್ಜಿವ ಎರಡನ್ನೂ ಸಂಗೀತಗಾರ ಮನರಂಜಿಸಬೇಕು.ಅವನೇ ಮಹಾನ್ ಗಾಯಕ ಎನ್ನುತ್ತಾನೆ ತಾನ್ಸೇನ್'' ಎಂದು ಹೇಳಿದ ಬೀರಬಲ್.
ತಕ್ಷಣ ಅಕ್ಟರ್ ತಾನ್‌ಸೇನ್‌ನನ್ನು ಅರಮನೆಗೆ ಕರೆಸಿದ. ತಾನ್ಸೇನ್ ಬಂದಾಗ, 'ತಾನ್ಸೇನ್, ನಿನ್ನ ಗುರು ಹರಿದಾಸ ನಿನಗಿಂತ ಚೆನ್ನಾಗಿ ಹಾಡುವರಂತೆ. ನಾನಂತೂ ನಿನಗಿಂತ ಯಾರು ಚೆನ್ನಾಗಿ ಹಾಡೋಲ್ಲ ಅಂದುಕೊಂಡಿದ್ದೆ. ನನಗೆ ನಿನಗಿಂತ ಬೇರೆ ಯಾರೂ ಚೆನ್ನಾಗಿ ಹಾಡೋಲ್ಲ ಎಂಬ ಅಭಿಪ್ರಾಯವಿದೆ'' ಎಂದು ಹೇಳಿದ.
'ಪ್ರಭು ! ನನ್ನ ಗುರು ಹರಿದಾಸರು, ದೈವೀಕ ಗಾಯಕರು ಅವರು ತುಂಬುರು ನಾರದರೇ ಯಾರೂ ಅವರ ಹಾಗೆ ಹಾಡೋಲ್ಲ' ಎಂದ ತಾನ್ಸೇನ್,
'ಹಾಗೇನು? ಹಾಗಾದರೆ ನಾನು ಅವರ ಸಂಗೀತ ಕೇಳಬೇಕು. ದಯ ಮಾಡಿ ಅವರನ್ನು ಕರೆಸು.”
“ಇಲ್ಲ ಸ್ವಾಮಿ. ನನ್ನ ಗುರುಗಳು ಹಾಗೆ ಬರುವುದಿಲ್ಲ, ಅವರನ್ನು ಕರೆಯುವ ಹಾಗಿಲ್ಲ ಅವರು ತಾವು ಇಷ್ಟಪಟ್ಟ ಕಡೆ ಮಾತ್ರ ಹಾಡುತ್ತಾರೆ'' ಎಂದ ತಾನ್ಸೇನ್,
ಅಕ್ಬರ್ ಆಲೋಚಿಸಿದ. ತಾನು ಹರಿದಾಸನಿಗಿಂತ ಕಡಮೆ ಎನಿಸಿತು. ಆದರೆ ಅದನ್ನು ಪ್ರದರ್ಶಿಸಲಿಲ್ಲ,
“ತಾನ್ಸೇನ್, ನಾನಂತೂ ಹಾಡು ಕೇಳಲೇಬೇಕು. ಏರ್ಪಾಟು ಮಾಡು.''
"ಮಹಾಸ್ವಾಮಿ ! ನನಗೆ ಭಯ. ಅವರೀಗ ವೃಂದಾವನದ ಆಶ್ರಮದಲ್ಲಿರುತ್ತಾನೆ. ನೀವು ಅಲ್ಲಿಗೆ ಹೋದರೆ ಅವರ ಸಂಗೀತ ಕೇಳಬಹುದು.''
ತಾನ್‌ಸೇನ್‌ನ ಸಲಹೆಗೆ ಅಕ್ಬರ್ ಒಪ್ಪಿ ರಾಜಾಮಾನಸಿಂಹನಿಗೆ ಹರಿದಾಸರೊಂದಿಗೆ ತನ್ನ ಭೇಟಿಗೆ ಏರ್ಪಾಟು ಮಾಡಲು ಆಜ್ಞೆ ಮಾಡಿದ. ಮಾರನೆಯ ದಿನವೇ ಮಾನಸಿಂಹ ಹರಿದಾಸರೊಂದಿಗೆ ಅಕ್ಷರನ ಭೇಟಿಗೆ ಏರ್ಪಾಟು ಮಾಡಿದ ಅಕ್ಟರ್ ರಥದಲ್ಲಿ ಕುಳಿತು ಅಲ್ಲಿಗೇ ಹೊರಟ. ಆಗ ತಾನ್‌ಸೇನ್ ದೊರೆಗಳನ್ನು ಭೇಟಿ ಮಾಡಿ, “ಹುಜೂರ್ ! ನೀವು ರಥದಲ್ಲಿ ಕುಳಿತು ಹೋದರೆ ನನ್ನ ಗುರು ನಿಮ್ಮನ್ನು ನೋಡಲು ಒಪ್ಪುವುದಿಲ್ಲ ಅವರು ಗುಡಿಸಲಲ್ಲಿ ವಾಸಿಸುತ್ತಾರೆ. ಆದುದರಿಂದ ಈ ವೈಭವ ಬೇಡ'' ಎಂದು ಹೇಳಿದ.
ಆಗ ಅಲ್ಲೇ ಇದ್ದ ಬೀರಬಲ್, “ಜಹಾಂಪನಾ ! ನೀವು ಗುಡಿಸಲಿಗೆ ಹೋಗುತ್ತಿದ್ದೀರಿ. ಅಂದ ಮೇಲೆ ಕಡಮೆ ಜನರೊಂದಿಗೆ ಹೋಗಿ, ಆಗ ಗುರೂಜಿಗಳಿಗೆ ತಮ್ಮ ನಿತ್ಯ ಕಾರ್ಯಕ್ಕೆ ಅಡ್ಡಿ ಆಗುವುದಿಲ್ಲ' ಎಂದು ಸಲಹೆ ಮಾಡಿದ.
ಅಕ್ಬರ್ ಒಪ್ಪಿದನು. ಬೀರಬಲ್ ಮತ್ತು ತಾನ್‌ಸೇನರೊಂದಿಗೆ ರಥದಲ್ಲಿ ಕುಳಿತು ಹೋದರೂ ವೃಂದಾವನ ತಲುಪಿದ ಮೇಲೆ ಕಾಲ್ನಡಿಗೆಯಲ್ಲಿ ಗುರುಗಳ ಆಶ್ರಮಕ್ಕೆ ಹೋದನು.
ಬೀರಬಲ್ ಮತ್ತು ಅಕ್ಬರ್ ಒಂದು ಮರದಡಿ ನಿಂತರು. ತಾನ್ಸೇನ್ ಆಶ್ರಮದೊಳಗೆ ಹೋಗಿ ಗುರುಗಳು ಏನು ಮಾಡುತ್ತಿದ್ದಾರೆ. ಬೀರಬಲ್ ಮತ್ತು ಅಕ್ಟರ್‌ರವರಿಗೆ ಭೇಟಿ ಮಾಡಿಸಲು ಸಾಧ್ಯವೇ ಎಂದು ತಿಳಿದ. ಸ್ವಲ್ಪ ಸಮಯದ ನಂತರ ಇಬ್ಬರನ್ನು ಒಳಗೆ ಕರೆದೊಯ್ದ.
ಹರಿದಾಸ ಸಂತ ತಾನ್ಸೇನ್ ಇಬ್ಬರಿಗೂ ಆ ಸಂತರನ್ನು ಪರಿಚಯಿಸಿದ ಬಳಿಕ ಗುರುಗಳಿಗೆ ಒಂದು ಹಾಡಲು ಕೋರಿದ.
“ಮಹಾರಾಜ ! ನೀನು ಹಾಡು ಹೇಳಲು ಕೇಳಿದೆ. ಆದರೆ ನಾನು ಯಾರೊಬ್ಬರ ಬೇಡಿಕೆಗೂ ಹಾಡುವುದಿಲ್ಲ, ನಾನೇ ಹಾಡಿಕೊಳ್ಳುತ್ತೇನೆಯಷ್ಟೆ' ಎಂದರು ಹರಿದಾಸ.
ಅಕ್ಬರ್ನಿಗೆ ನಿರಾಸೆಯಾಗಿ ಸಿಟ್ಟು ಬಂದಿತು. ಆಗ ಬೀರಬಲ್ ಒಂದು ಉಪಾಯ ಮಾಡಿದ. ತಾನ್‌ಸೇನ್‌ನನ್ನು ಹೊರಕ್ಕೆ ಕರೆದು, “ಅಯ್ಯಾ ತಾನ್ಸೇನ್, ನಿಮ್ಮ ಗುರುಗಳು ರಾಜನ ಮುಂದೆ ಹಾಡಲು ಒಪ್ಪುತ್ತಿಲ್ಲ. ನೀನು ಅವರು ಹಾಡುವಂತೆ ಮಾಡಿಬಿಡು' ಎಂದ.
ಆಗ ತಾನ್‌ಸೇನ್, “ಅದಕ್ಕಿರೋದು ಒಂದೇ ದಾರಿ ಯಾರಾದರೂ ಶ್ರುತಿ ಬಿಟ್ಟು ತಪ್ಪಾಗಿ ಹಾಡಿದರೆ ಅದನ್ನು ಸರಿ ಮಾಡಲು ನಮ್ಮ ಗುರುಗಳು ಹಾಡುತ್ತಾರೆ' ಎಂದು ಉತ್ತರಿಸಿದ.
ಅದಕ್ಕೆ ಬೀರಬಲ್, 'ಸರಿ ಹಾಗಾದರೆ, ನೀನೇ ತಪ್ಪು ತಪ್ಪಾಗಿ ಹಾಡು. ಆಗ ಗುರುಗಳು ಸರಿಪಡಿಸಲು ತಾವು ಹಾಡುತ್ತಾರೆ' ಎಂದು ಸಲಹೆ ಮಾಡಿದ. ಅಕ್ಟರ್ ಕೂಡಾ ಈ ಸಲಹೆಗೆ ಒಪ್ಪಿದನು. ಅಕ್ಟರ್ ಬೀರಬಲ್ ಮರದಡಿ ನಿಂತರು. ತಾನ್ಸೇನ್ ಆಶ್ರಮದೊಳಗೆ ಪ್ರವೇಶಿಸಿ, ಭೈರವಿರಾಗದ ಹಾಡನ್ನು ತಪ್ಪಾಗಿ ಹಾಡಿದನು. ಸಿಟ್ಟಿಗೆದ್ದ ಹರಿದಾಸ,
"ತಾನ್ಸೇನ್, ನಿಲ್ಲಿಸು. ನಾನು ಹೀಗೆ ಹೇಳಿಕೊಟ್ಟಿದ್ದು? ನೀನು ನಾನು ಕಲಿಸಿದ್ದು ಮರೆತಂತಿದೆ'' ಎಂದು ಹೇಳಿ ತಾನೇ ಹಾಡಲು ಆರಂಭಿಸಿದನು. ಆ ಸಂಗೀತ ಕೇಳಿ ಅಕ್ಟರ್ ಹಿಗ್ಗಿ ಹೋದನು. ಹರಿದಾಸರ ಆಶೀರ್ವಾದ ಬೇಡಿದನು.
ದಾರಿಯಲ್ಲಿ ಅಕ್ಟರ್ ತಾನ್‌ಸೇನನನ್ನು “ನೀನೇಕೆ ನಿನ್ನ ಗುರುಗಳೆಡೆ ಹಾಡಲಾರೆ?” ಎಂದು ಕೇಳಿದನು.
“ಹುಜೂರ್ ! ನಾನೆಷ್ಟೇ ಪ್ರಯತ್ನಿಸಿದರೂ ಅವರಂತೆ ಹಾಡಲಾಗುತ್ತಿಲ್ಲ' ಎಂದ ತಾನ್‌ಸೇನ್.
ಬೀರಬಲ್ ಪ್ರವೇಶಿಸಿ, “ಪ್ರಭು ! ನನಗೆ ಕಾರಣ ಗೊತ್ತು. ಆದರೆ ಅದು ಹೇಳಿದರೆ ನೀವು ಸಿಟ್ಟಾಗಬಾರದು' ಎಂದ. ಅಕ್ಬರ್“ಸರಿ ಹೇಳು” ಎಂದು ಕೇಳಿಕೊಂಡ.
“ಮಹಾರಾಜ ! ತಾನ್‌ಸೇನ್ ಸಹ ತನ್ನ ಗುರುಗಳಂತೆ ಹಾಡಬಲ್ಲ, ಆದರೆ ಅವನ್ನು ನಿಮ್ಮನ್ನು ಸಂತೋಷಪಡಿಸಲು ಹಾಡುತ್ತಾನೆ. ಅದೇ ಹರಿದಾಸರು ಭಗವಂತನನ್ನು ಮೆಚ್ಚಿಸಲು ಹಾಡುತ್ತಾರೆ. ಅದೇ ವ್ಯತ್ಯಾಸ. ಇದರಿಂದ ಹರಿದಾಸರು ಮಹಾನ್ ಗಾಯಕರಾಗಿದ್ದಾರೆ'' ಎಂದ ಬೀರಬಲ್.
ಅಕ್ಟರ್ ಬೀರಬಲ್‌ನ ಉತ್ತರದಿಂದ ಹರ್ಷಿಸಿದ.