ಅಕ್ಬರ್ ಬೀರಬಲ್ ಕತೆಗಳು
Stories of Akbar and Birbal area unit very fashionable in India. In many instances Birbal uses his wit and intelligence to calm the ire of Emperor Akbar and amuse him at constant time. It accustomed be a part of the oral tradition of storytelling, however in recent years these stories are compiled into books by varied authors.
Birbal was appointed by Akbar as a Minister (Mantri) and accustomed be a writer and Singer in around 1556–1562. He had an in depth association with Emperor Akbar and was one in all his most vital courtiers, a part of a gaggle referred to as the navaratnas (nine jewels).
Local people tales emerged primarily in nineteenth century involving his interactions with Akbar, him representational process him as being very clever and humourous.
We are happy to bring Akbar and Birbal stories in kannada launguage.
ಬೇಟೆಗಾರ ಅಕ್ಬರ
ಅಕ್ಬರ ರಾಜ.
ರಾಜರಿಗೆ ಬೇಟೆ ತುಂಬ ಇಷ್ಟದ ಹವ್ಯಾಸ. ಅಕ್ಬರನಿಗೂ ಬೇಟೆ ಪ್ರಿಯವಾಗಿತ್ತು.
ಒಂದು ದಿನ
ನಾಲ್ಕಾರು ಜನ ಬಂದು ಬೀರಬಲ್‌ನನ್ನು ಕಂಡರು. “ಹುಜೂರ್, ನಮ್ಮ ಹಳ್ಳಿ ಹಾಳಾಗಿ ಹೋಗುತ್ತಿದೆ. ಕಾಪಾಡಿ” ಎಂದು ಕೇಳಿಕೊಂಡರು.
“ಯಾಕೆ ಏನಾಯಿತು?”
“ಇನ್ನೇನು ಸ್ವಾಮಿ ಆಗಬೇಕು ? ರಾಜರು ತಮ್ಮ ಸಾಮ್ರಾಜ್ಯದಲ್ಲಿ
ಹೆಚ್ಚುಹೆಚ್ಚು ಅರಣ್ಯಗಳನ್ನು ಮಾಡಹೊರಟಿದ್ದಾರೆ. ರಾಜ ಆ ಕಾಡುಗಳಲ್ಲಿ ಬೇಟೆ ಆಡಬೇಕಂತೆ.”
“ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ.
ನೀವು ಹೋಗಿ ಬನ್ನಿ” ಎಂದು ಬೀರಬಲ್ ಅವರನ್ನೆಲ್ಲ
ಕಳುಹಿಸಿಬಿಟ್ಟ.
ಮಾರನೆಯ ದಿನ
ರಾಜನ ಪರಿವಾರ ಬೇಟೆಗೆ ಹೊರಟಿತು. ಜತೆಯಲ್ಲಿ ಬೀರಬಲ್ಲನೂ ಇದ್ದ.
“ಬೀರಬಲ್, ಎಷ್ಟು ಆಹ್ಲಾದಕರ ? ಅಲ್ಲಿ ನೋಡಿ ಆ ಗೂಬೆಗಳನ್ನು ಅವು
ಪರಸ್ಪರ ಜಗಳವಾಡುತ್ತಿರುವಂತಿದೆ. ನೀನು ಬುದ್ದಿವಂತ ಅವು ಏನು ಹೇಳುತ್ತಿರಬಹುದು? ಹೇಳು” ಎಂದ ಅಕ್ಬರ
“ನಾನು ಹೇಳಬಹುದು. ಆದರೆ ...
““ಯಾಕೆ ಸಂಕೋಚ? ಹೇಳು”“
“ಪ್ರಭು ! ನೀವು ಅದನ್ನು ಕೇಳಲು
ಇಷ್ಟಪಡುವುದಿಲ್ಲ”
“ಹೇಳು ಹೇಳು ! ಆ ಹಕ್ಕಿಗಳು ಹೇಳೋದು
ಕೇಳಿ ನಾನು ಏಕೆ ಬೇಸರಪಟ್ಟು ಕೊಳ್ಳಬೇಕು?”
“ಗೂಬೆಗಳ ಗುಂಪು ಪಕ್ಕದ ರಾಜ್ಯದಿಂದ
ಬಂದಿದೆ. ಆ ಗುಂಪು ತಮ್ಮ ಒಂದು ಹುಡುಗ ಗೂಬೆಗೆ ಇಲ್ಲಿನ ಹುಡುಗಿ ಗೂಬೆಗೆ ಮದುವೆ ಮಾಡಬೇಕಂತೆ.
ಅವು ಮದುವೆಗೆ ಏರ್ಪಾಟು ಮಾಡುತ್ತಿವೆ. ಆದರೆ ವರನ ತಂದೆ ಮತ್ತು ವಧುವಿನ ತಂದೆ ಮಧ್ಯೆ ಜಗಳ
ಆಗಿದೆ.”
“ಯಾಕೆ?”
“ವರನ ತಂದೆ ನಲವತ್ತು ಕಾಡುಗಳನ್ನು
ಬೇಡುತ್ತಿದ್ದಾನೆ. ಆದರೆ ವಧುವಿನ ತಂದೆ ಈಗ ಸಾಧ್ಯವಿಲ್ಲ ಎನ್ನುತ್ತಿದ್ದಾನೆ. ಆದರೆ ಕೆಲವು
ವರ್ಷಗಳ ನಂತರ ಬೇಕಾದರೆ ದಂಪತಿಗಳಿಗೆ ಎಂಬ ಎಂದು ವಾಗ್ದಾನ ಮಾಡುತ್ತಿದ್ದಾನೆ.”
“ಅದು ಹೇಗೆ?”
ನಲವತ್ತು ಕಾಡುಗಳಿಲ್ಲದ ಅವನು ಎರಡರಷ್ಟುಕಾಡುಗಳ “ಅವನು ಹೇಳ್ತಾ ಇದಾನೆ : ಇಲ್ಲಿನ
ಚಕ್ರವರ್ತಿಗೆ ಬೇಟೆ ಎಂದರೆ ಇಷ್ಟ ಅವನು ಹಳ್ಳಿಗಳನ್ನೆಲ್ಲ ತನ್ನ ಬೇಟೆ ಹವ್ಯಾಸಕ್ಕಾಗಿ
ಕಾಡುಗಳಾಗಿ ಪರಿವರ್ತಿಸುತ್ತಾ ಇದಾನೆ. ಭವಿಷ್ಯದಲ್ಲಿ ಅದು ಇಮ್ಮಡಿ ಆಗುತ್ತದೆ ಎಂದು.”
ಅಕ್ಬರನಿಗೆ ಬೀರಬಲ್ ತನ್ನನ್ನೆ ಉದ್ದೇಶಿಸಿ ಹೀಗೆ
ಹೇಳುತ್ತಿದ್ದಾನೆ ಎಂದು ಮನವರಿಕೆಯಾಯಿತು.
“ಬೀರಬಲ್, ಸರಿಯಾಗಿ ಹೇಳಿದೆ. ನಾನು ಸ್ವಾರ್ಥಿ.
ನನ್ನ ಬೇಟೆ ಆಸೆಗಾಗಿ ಹಳ್ಳಿಗಳ ನಾಶ ಮಾಡೋದು ಸರಿಯಲ್ಲ, ನಿಲ್ಲಿಸಿ ಬಿಡುತ್ತೇನೆ”“ ಎಂದು ಹೇಳಿ ಅರಮನೆಗೆ ಹಿಂತಿರುಗಿದನು.
ಮೇಣ ರಾಜಕುಮಾರ
ಅಕ್ಬರ
ಸರ್ವಧರ್ಮ ಪ್ರಿಯನಾಗಿದ್ದನು. ಇಸ್ಲಾಂ ಮತಾನುಯಾಯಿ ಆದರೂ ಇತರ ಧರ್ಮಗಳನ್ನು ವಿಶ್ವಾಸದಿಂದ
ಕಾಣುತ್ತಿದ್ದನು.
ಒಂದು ದಿನ ಅಕ್ಬರ
ಒಂದು ಮಗುವನ್ನು ಎತ್ತಿಕೊಂಡು ಬರುವಾಗ,
“ಬೀರಬಲ್, ನಿಮ್ಮ ದೇವರುಗಳು ನಿಜಕ್ಕೂ ತಮಾಷೆ” ಎಂದು ಬಿಟ್ಟನು.
“ಚಕ್ರವರ್ತಿ ಅಕ್ಬರ್ ನಮ್ಮ ಹಿಂದೂ
ಮತವನ್ನು ಗೌರವಿಸುತ್ತಾನೆ. ಇಸ್ಲಾಂ ಮತದಷ್ಟೆ ತನ್ನನ್ನು ಚುಡಾಯಿಸುತ್ತಿರುವಂತಿದೆ” ಎಂದು ಕೊಂಡ ಬೀರಬಲ್.
“ನೋಡು ನಿನ್ನ ಕೃಷ್ಣನನ್ನು ಅವನಿಗೆ
ಸಹಾಯಕರು ಯಾರೂ ಇಲ್ಲ ಎಂದು ಕಾಣುತ್ತೆ.... ಯಾರಾದರೂ ಭಕ್ತರು ಕರೆದರೆ ತಾನೇ ಅವರ ಸಹಾಯಕ್ಕೆ
ಹೋಗ್ತಾನೆ. ಅವನು ಬೇರೆ ಯಾರನ್ನಾದರೂ ಕಳುಹಿಸಬಹುದಲ್ಲವೇ?”
“ಹೌದೌದು” ಎಂದ ಬೀರಬಲ್,ಬೀರಬಲ್‌ಗೆ ರಾಜನಿಗೆ ಸರಿಯಾಗಿ
ಹೇಳಬೇಕೆಂದುಕೊಂಡು ಅಂದೇ ಸಂಜೆ ಒಬ್ಬ ಮೇಣದಗೊಂಬೆ ಮಾಡುವವನ ಅಂಗಡಿಗೆ ಹೋದನು. “ಬನ್ನಿ, ಏನಾಗಬೇಕಿತ್ತು?” ಎಂದು ಕೇಳಿದ ಅಂಗಡಿಯವ.
“ನೋಡಯ್ಯಾ ಚಕ್ರವರ್ತಿಗಳ ಮೊಮ್ಮಗ ಖುರಂನ
ಹಾಗೆ ಇರುವ ಅವನ ಗಾತ್ರದ ಮೇಣದ ಬೊಂಬೆ ಮಾಡಿಕೊಡು” ಎಂದ ಬೀರಬಲ್. ಅಂಗಡಿಯವನು ಒಪ್ಪಿ ಬೆಳಿಗ್ಗೆ ಬನ್ನಿ” ಎಂದ. ಬೆಳಿಗ್ಗೆ ಬಂದು ಬೀರಬಲ್
ಸಿದ್ಧವಾಗಿದ್ದ ಆ ಬೊಂಬೆಯನ್ನು ಮಗುವನ್ನು ನೋಡಿಕೊಳ್ಳುತ್ತಿದ್ದ ಕಾಲುವಿಗೆ ಕೊಟ್ಟು ಬಿಟ್ಟನು.
ಕಾಲು ಮಗುವಿನ
ಗೊಂಬೆ ನೋಡಿ “ಹುಜೂರ್, ಈ ಬೊಂಬೆ ನಮ್ಮ ಖುರಂ ಹಾಗೆ ಇದೆ. ಬಟ್ಟೆ
ಕೂಡ ಅವನು ಧರಿಸುವಂಥದೇ” ಎಂದ.
“ಕಾಲೂ, ಈಗ ಈ ಗೊಂಬೆಯನ್ನು ನಿನ್ನ ತೋಳಿನಲ್ಲಿ
ಎತ್ತಿಕೊಂಡುಹೋಗಿ ಉದ್ಯಾನದಲ್ಲಿರು. ಅಲ್ಲಿ ಕೊಳ ಇದೆಯಲ್ಲ ಅಲ್ಲಿಗೆ ಹೋಗುವಂತೆ ಮಾಡಿ ಗೊಂಬೆ
ಜಾರಿ ನೀರಿನಲ್ಲಿ ಬೀಳುವಂತೆ ಮಾಡು”“ ಎಂದು ಬೀರಬಲ್
ಅವನಿಗೆ ಹೇಳಿ ಅವನು ಉದ್ಯಾನದಲ್ಲಿ ಬಂದ ಸಮಯಕ್ಕೆ ಅಕ್ಬರನ ಜತೆ ತಾನೂ ಉದ್ಯಾನಕ್ಕೆ ಬಂದನು.
ಅಕ್ಬರನಿಗೆ
ಕಾಲೂ ಖಂ ಗೊಬೆಯನ್ನು ಕೊಳದಲ್ಲಿ ಜಾರಿ ಬೀಳಿಸಿದ್ದು ಕಾಣಿತು.
ಅಕ್ಬರ ಕೂಗಿ, “ಏಯ್ ಕಾಲೂ ಏನು ಮಾಡುತ್ತಿದ್ದಿ?” ಎಂದು ಓಡಿ ಹೋಗಿ ಕೊಳದಲ್ಲಿ ಧುಮುಕಿ
ಮಗುವನ್ನು ಎತ್ತಿಕೊಂಡನು. ಅದು ಮೇಣದ್ದೆಂದು ತಿಳಿದಾಗ, “ಸದ್ಯ ಬದುಕಿದೆ. ದೇವರು ದೊಡ್ಡೋನು. ಇದು ಮೇಣದ ಗೊಂಬೆ”“ಎಂದು ನಿಟ್ಟುಸಿರು ಬಿಟ್ಟನು.
ಬೀರಬಲ್
ಹತ್ತಿರ ಬಂದು, “ಕೊಳಕ್ಕೆ ನೀವೇ ಏಕೆ ಜಿಗಿದಿರಿ? ಯಾರೂ ಸೇವಕರಿರಲಿಲ್ಲವೇ? ಸಹಾಯಕ್ಕೆ ಕರೆಯ ಬೇಕಿತ್ತು” ಎಂದು ಕೇಳಿದ.
ಅಕ್ಬರ
ಮಾತನಾಡಿ, ಕರೆಯುತ್ತಿದ್ದೆ. ಆದರೆ ನನಗೆ ನನ್ನ
ಮೊಮ್ಮಗ ಅಮೂಲ್ಯ ನಾನು ಬೇರೆ ಯಾರನ್ನೋ ಕರೆದು ಕಾಯಲೇ?” ಎಂದ.
ಆಗ ಬೀರಬಲ್, “ಸರಿಯಾಗಿ ಹೇಳಿದಿರಿ ಪ್ರಭು, ಹಾಗೆಯೇ ಭಗವಾನ್ ಕೃಷ್ಣನಿಗೆ ತನ್ನ
ಭಕ್ತರು ತುಂಬಾ ಅಮೂಲ್ಯ” ಎಂದ.
ಅಕ್ಬರ
ಹರ್ಷಿಸಿ, “ಬೀರಬಲ್, ನೀನು ನಿನ್ನ ಮಾತನ್ನು ಸಾಧಿಸಿದೆ. ಭಲೆ
ಭಲೆ !” ಎಂದು ಹೇಳಿ ತನ್ನ ಮೊಮ್ಮಗನನ್ನು ಎತ್ತಿ
ಮುದ್ದಾಡಲು ಅರಮನೆಗೆ ಹೋದನು.
ಅಗುಳು ಚೆಲ್ಲಿದರೆ ಕಾಗೆಗಳಿಗೆ ಕಡಿಮೆಯೇ?
ಅಕ್ಬರನ ರಾಜ್ಯ ಸುಭಿಕ್ಷವಾಗಿತ್ತು ನೆರೆ ಹೊರೆ ರಾಜ್ಯಗಳಿಂದ ಶತೃಬಾಧೆ ಇರಲಿಲ್ಲ. ರಾಜ ನೆಮ್ಮದಿಯಾಗಿದ್ದ. ಅವನ ಕೋಶಾಗಾರವೂ ತುಂಬಿತ್ತು,
ಒಂದು ದಿನ ಬೀರಬಲ್ ರಾಜನಿಗೆ, “ಪ್ರಭು ! ಇಂದಲ್ಲ ನಾಳೆ ನಮ್ಮ ರಾಜ್ಯದ ಮೇಲೆ ಶತೃಗಳು ಬರಬಹುದು. ಆದುದರಿಂದಲ ಆಗಲಿಂದಲೇ ನಮ್ಮ ಸೈನ್ಯ ಹೆಚ್ಚಿಸಿಕೊಳ್ಳಬೇಕು. ಅಲ್ಲದೆ ಈಗಿರುವ ಸೈನಿಕರಿಗೆ ತರಬೇತಿ ಕೊಡಬೇಕು” ಎಂದು ಹೇಳಿದ.
ಬೀರಬಲ್‌ನ ಮಾತಿಗೆ ಅಕ್ಬರ ನಕ್ಕು “ಅಯ್ಯಾ ಬೀರಬಲ್ ! ಆ ಸಮಯ ಬಂದಾಗ ನೋಡಿಕೊಳ್ಳೋಣ, ನನ್ನ ಬಳಿ ಅಪಾರ ಹಣ ಇದೆ. ವೀರರನ್ನು ಕೊಂಡು ಕೊಳ್ಳಬಹುದು, ಅಗುಳು ಚೆಲ್ಲಿದರೆ ಕಾಗೆಗಳಿಗೆ ಕಡಿಮೆಯೇ ಎಂದು ಹೇಳುತ್ತಾರೆ. ಕೇಳಿಲ್ಲವೇ?” ಎಂದು ಬಿಟ್ಟನು.
ಬೀರಬಲ್ ಒಂದೆರಡು ಬಾರಿ ಹೇಳಿ ನೋಡಿದ, ಬೀರಬಲ್ ಮಾತುಗಳನ್ನು ಅಕ್ಬರ ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ.
ಇದು ಮುಂದೆ ವಿಪರೀತಕ್ಕಿಟ್ಟುಕೊಳ್ಳಬಹುದೆಂದು ಬೀರಬಲ್ ಒಂದು ದಿನ ರಾತ್ರಿ ಹನ್ನೆರಡು ಗಂಟೆಯಲ್ಲಿ ಬಂದು ಅಕ್ಬರನನ್ನು ಎಬ್ಬಿಸಿ ಬನ್ನಿ ಸ್ವಲ್ಪ ಕೆಲಸವಿದೆ ಎಂದು ಅವನನ್ನು ಮೊಗಸಾಲೆಗೆ ಕರೆದುಕೊಂಡು ಹೋದ. ಬೀರಬಲ್ ಬಳಿ ಒಂದು ಪಾತ್ರೆ ಇತ್ತು ಪಾತ್ರೆ ತುಂಬ ಅನ್ನದ ಅಗುಳುಗಳಿದ್ದವು.
ಬೀರಬಲ್
ಅಕ್ಕರನಿಗೆ, “ಹುಜೂರ್, ಎಲ್ಲಿ ಈ ಅಗುಳುಗಳನ್ನು ನೆಲದ ಮೇಲೆ
ಚೆಲ್ಲಿ” ಎಂದ.
ಅಕ್ಬರ್ ಏನೋ ಸಂಗತಿ ಇರಬೇಕು ಎಂದುಕೊಂಡು ಬೀರಬಲ್ ಹೇಳಿದಂತೆ ಮಾಡಿದ.
ಬೀರಬಲ್ ಕೇಳಿದ, “ಎಲ್ಲಿ ಪ್ರಭು ! ಅಗುಳು ಚೆಲ್ಲಿದರಲ್ಲ, ಒಂದಾದರೂ ಕಾಗೆ ಕಾಣುತ್ತಿಲ್ಲ,
ಅಕ್ಬರನಿಗೆ ಬೀರಬಲ್ ಕೇಳಿದ್ದು ಅರ್ಥವಾಯಿತು.
ತನ್ನ ತಪ್ಪಿನ
ಅರಿವಾಯಿತು. ಹಣವಿದ್ದರೆ ಏನು ಬೇಕಾದರೂ ಮಾಡಬಹುದೆಂದು ಇಷ್ಟು ದಿನ ಸುಮ್ಮನಿದ್ದೆನಲ್ಲ
ಎಂದುಕೊಂಡ. ಮುಂದೆ ಬೀರಬಲ್ ಹೇಳಿದಂತೆ ನಡೆದುಕೊಂಡನು.
ಬೆಳೆಯುವ ಕೋಲು
ಬೀರಬಲ್ ಒಂದು ದಿನ ನ್ಯಾಯಾಸ್ಥಾನದಲ್ಲಿ ಕುಳಿತಿದ್ದನು. ಆಗ ಅಲ್ಲಿಗೆ ಒಬ್ಬ ಶ್ರೀಮಂತ ಬಂದು, “ಸ್ವಾಮಿ, ನನ್ನ ಹಣದ ಚೀಲ ಕಳುವಾಗಿದೆ. ದಯವಿಟ್ಟು ಪತ್ತೆ ಮಾಡಿಸಿ ಕೊಡಬೇಕು”“ ಎಂದು ದೂರು ಇತ್ತ.
ಆಗ ಬೀರಬಲ್, “ನಿನಗೆ ಯಾರಲ್ಲಿಯಾದರೂ ಸಂಶಯವಿದೆಯೆ?”“ ಎಂದು ಕೇಳಿದ.
“ನನಗೆ ನನ್ನ ಸೇವಕನ ಮೇಲೆ ಸಂಶಯವಿದೆ. ಆದರೆ ಹೇಗೆ ಅವನನ್ನು ನೀನೆ ಕದ್ದೆ ಎಂದು ಹೇಳುವುದು?” ಎಂದ ಶ್ರೀಮಂತ.
“ನಿನ್ನ ಸೇವಕರೆಲ್ಲರನ್ನೂ ನನ್ನ ಮನೆಗೆ ಕರೆದುಕೊಂಡು ಬಾ” ಎಂದು ಸಲಹೆ ಮಾಡಿದ ಬೀರಬಲ್.
ಶ್ರೀಮಂತ ತನ್ನ ಏಳು ಮಂದಿ ಸೇವಕರನ್ನು ಬೀರಬಲ್ ನ ಮನೆಗೆ , ಕರೆದುಕೊಂಡು ಹೋದ, ಬೀರಬಲ್ ಒಂದು ಕೋಲುಗಳ ಕಟ್ಟು ಕೈಲಿ ಹಿಡಿದುಕೊಂಡು ಆ ಸೇವಕರೊಬ್ಬಬ್ಬರಿಗೆ ಒಂದೊಂದು ಕೋಲು ಕೊಡುತ್ತಾ “ಇದು ಜಾದೂಗಾರ ಕೊಟ್ಟ ಕೋಲು. ಕಳ್ಳರನ್ನು ಪತ್ತೆ ಹಚ್ಚಲು ಒದಗುತ್ತವೆ. ಈ ಕೋಲನ್ನು ಕಳ್ಳ ಮುಟ್ಟಿದರೆ ರಾತ್ರಿಯಲ್ಲಿ ಒಂದು ಅಂಗುಲ ಬೆಳೆಯುತ್ತದೆ. ಆದುದರಿಂದ ನೀವು ಈ ರಾತ್ರಿ ನನ್ನ ಮನೆಯ ಬೇರೆ ಕೋಣೆಗಳಲ್ಲಿರಬೇಕು ತಿಳಿಯಿತೇ?” ಎಂದು ಹೇಳಿದ.
ಬೇರೆ ಆ ರಾತ್ರಿ ಏಳೂ ಸೇವಕರು ಅಲ್ಲಿಯೇ ಪ್ರತ್ಯೇಕವಾಗಿ ಉಳಿದರು. ಮರುದಿನ ಬೆಳಿಗ್ಗೆ ಎಲ್ಲರೂ ಬೀರಬಲ್‌ನ ಬಳಿಗೆ ಬಂದರು. ಬೀರಬಲ್ ಎಲ್ಲರ ಕೋಲುಗಳನ್ನು ಅಳತೆ ಮಾಡಲು ತನ್ನ ಸೇವಕನಿಗೆ ಹೇಳಿದ. ಆರುಕೋಲುಗಳು ಅಷ್ಟೇ ಅಳತೆಯದಿದ್ದವು. ಒಂದು ಕೊಲು ಮಾತ್ರ ಒಂದು ಅಂಗುಲ ಗಿಡ್ಡವಾಗಿತ್ತು ಬೀರಬಲ್ ತಕ್ಷಣ ಅವನನ್ನು ಬಂಧಿಸಲು ಹೇಳಿದ ಆ ಕೋಲು ಹಿಡಿದಿದ್ದ ಸೇವಕ,
“ಹುಜೂರ್ ತಾವು ಕೋಲು ಒಂದಂಗುಲ
ಬೆಳೆಯುತ್ತದೆ ಎಂದು ಹೇಳಿದ್ದೀರಿ ಆದರೆ .....” ಎಂದು ಬೀರಬಲ್, "ಆದುದರಿಂದಲೆ ನಿಜವಾದ ಕಳ್ಳ ಪತ್ತೆಯಾಗಲು
ಬೀರಬಲ್,
“ಆದುದರಿಂದಲೆ ನಿಜವಾದ ಕಳ್ಳ ಪತ್ತೆಯಾಗಲು ಸಾಧ್ಯವಾಯಿತು. ಕಳ್ಳ ನಾನು ನಿರೀಕ್ಷಿಸಿದಂತೆ ಅದನ್ನು ಒಂದು ಅಂಗುಲ ಕತ್ತರಿಸಿದ” ಎಂದ.
ಕಳ್ಳನನ್ನು ಬಂಧಿಸಿ ಸೆರೆಮನೆಗೆ ಹಾಕಲಾಯಿತು. ಶ್ರೀಮಂತನಿಗೆ ಹಣವನ್ನು ಹಿಂದಕ್ಕೆ ಕೊಡಲಾಯಿತು.
ನ್ಯಾಯ ತೀರ್ಮಾನ
ಬೀರಬಲ್ ಅವರನ್ನು ಯಾರು ನೀವು? ಎಂದು ಕೇಳಿದ. ಅವರಲ್ಲಿ ಒಬ್ಬ ಗೋವಿಂದ. ಇನ್ನೊಬ್ಬ ಗೋಪಾಲ.
ಗೋವಿಂದ ಮಾತನಾಡಿ, “ಸ್ವಾಮಿ, ನನ್ನ ಹೊಲದ ಪಕ್ಕ ಒಂದು ಮಾವಿನ ಮರ ಇದೆ. ಅದು ಮೊದಲಿನಿಂದಲೂ ನನ್ನ ಆರೈಕೆಯಲ್ಲಿದೆ. ಆದರೆ ಈಗ ಆ ಮರ ತನ್ನದು ಎಂದು ಗೋಪಾಲ ಹೇಳುತ್ತಿದ್ದಾನೆ. ನನಗೆ ನ್ಯಾಯ ದೊರಕಿಸಿಕೊಡಬೇಕು” ಎಂದು ಹೇಳಿದ.
ಗೋಪಾಲ, “ಇಲ್ಲ ಪ್ರಭು ! ನಿಜಕ್ಕೂ ಆ ಮರ ನಾನೇ ಇಟ್ಟು ಬೆಳೆಸಿದ್ದು ಗಿಡವಾಗಿದ್ದಾಗಿನಿಂದಲೂ ನಾನು ಅದನ್ನು ನೋಡಿಕೊಳ್ಳುತ್ತಿದ್ದೇನೆ. ಆ ಮರ ನನಗೇ ಸೇರಬೇಕು” ಎಂದು ಹೇಳಿದ.
ಬೀರಬಲ್ ತಕ್ಷಣ ಏನೂ ಹೇಳದೆ, “ನಾಳೆ ಬನ್ನಿ ನೋಡೋಣ”“ ಎಂದ. ಇಬ್ಬರೂ ತಮ್ಮ ತಮ್ಮ ಮನೆಗಳಿಗೆ ಹೋದರು.
ಅನಂತರ
ಬೀರಬಲ್ ತನ್ನ ಒಬ್ಬ ಸೇವಕನನ್ನು ಕರೆದು, “ಈ ಸಂಜೆ ನೀನು ಗೋವಿಂದ, ಗೋಪಾಲರ ಮನೆಗಳಿಗೆ ಹೋಗಿ ಕಳ್ಳರು ಮಾವಿನ ಕಾಯಿಗಳನ್ನು
ಕದಿಯುತ್ತಿದ್ದಾರೆ ಎಂದು ಹೇಳು. ಆಗ ಅವರೇನು ಮಾಡುವರು ಎಂಬುದನ್ನು ಬಂದು ನನಗೆ ತಿಳಿಸು”“ ಎಂದು ಹೇಳಿದ.
ಸೇವಕ ಮೊದಲು ಗೋವಿಂದನ ಬಳಿಗೆ ಬಂದು ಬೀರಬಲ್ ತಿಳಿಸಿದಂತೆ ಹೇಳಿದ. ಗೋವಿಂದ, “ಹೌದೇ, ಈಗ ನನಗೆ ಬೇರೆ ಏನೋ ಕೆಲಸ ಇದೆ. ಆಮೇಲೆ ಹೋಗಿ ನೋಡುತ್ತೇನೆ”“ ಎಂದುಬಿಟ್ಟ
ಗೋಪಾಲನ ಮನೆಗೆ ಹೋಗಿ ಸೇವಕ ವಿಷಯ ತಿಳಿಸಿದಾಗ ತಕ್ಷಣ ಅವನು ಒಂದು ದೊಣ್ಣೆ ಹಿಡಿದುಕೊಂಡು ಮರದ ಬಳಿಗೆ ಓಡಿಹೋದನು. ಸೇವಕ ಬೀರಬಲ್ ಬಳಿಗೆ ಬಂದು ಇಬ್ಬರೂ ನಡೆದುಕೊಂಡ ರೀತಿಯನ್ನು ಹೇಳಿದ.
ಮಾರನೆಯ ದಿನ ಬೀರಬಲ್ ನ್ಯಾಯಾಲಯದಲ್ಲಿದ್ದಾಗ ಗೋವಿಂದ,
ಗೋಪಾಲ ಇಬ್ಬರೂ ಅಲ್ಲಿಗೆ ಬಂದರು.
ಬೀರಬಲ್, “ಆ ಮರ ಇಬ್ಬರದೂ ಇರಲಾರದು, ಅದು ಯಾರದ್ದೆಂದು ನಿಜ ಹೇಳಿ”“ ಎಂದ.
ಇಬ್ಬರೂ “ನನ್ನದು” ,
“ ಆಗ ಬೀರಬಲ್, “ಇದು ಸರಿಯಲ್ಲ, ನೀವು ಹೀಗೆ ಇಬ್ಬರೂ ಕಚ್ಚಾಡುವುದು ಬೇಡ. ನೀವು ಮಾವಿನ ಹಣ್ಣುಗಳನ್ನು ಕಿತ್ತು ಸಮನಾಗಿ ಹಂಚಿಕೊಳ್ಳಿ. ಇದು ನನ್ನ ಆಜ್ಞೆ” ಎಂದ.
"ನನ್ನದು” ಎಂದೇ ಹೇಳಿದರು.
“ಗೋವಿಂದ ಗೋಪಾಲ ಇಬ್ಬರು ಮುಖು ಮುಖು ನೋಡಿಕೊಂಡರು. ಮುಂದುವರಿದ ಬೀರಬಲ್, “ಇನ್ನು ಮರದ ವಿಚಾರ, ಮರವನ್ನು ಕಡಿದು ಇಬ್ಬರಿಗೂ ಸಮವಾಗಿ ಹಂಚಲಾಗುವುದು” ಎಂದ.
ಈ ತೀರ್ಮಾನದಿಂದ ಸಂತೋಷಗೊಂಡ ಗೋವಿಂದ, “ಪ್ರಭು, ತಮ್ಮ ತೀರ್ಮಾನ ನ್ಯಾಯವಾಗೇ ಇದೆ” ಎಂದೆ.
ಆದರೆ ಗೋಪಾಲ ಒಪ್ಪದೆ, “ಸ್ವಾಮಿ, ನಾನು ಆ ಮರವನ್ನು ಕಷ್ಟಪಟ್ಟು ಬೆಳೆಸಿದ್ದೇನೆ. ಅದನ್ನು ಕಡಿದು ಹಾಕಿದರೆ ನನಗೆ ತುಂಬಾ ನೋವಾಗುತ್ತದೆ. ನನಗೆ ಹಣ್ಣು ಕಾಯಿ ಯಾವುದೂ ಬೇಡ, ಮರ ಗೋವಿಂದನಿಗೇ ಇರಲಿ” ಎಂದ.
ಬೀರಬಲ್
ಥಟ್ಟನೆ, “ಗೋಪಾಲ, ಮರದ ನಿಜವಾದ ಹಕ್ಕುದಾರ ನೀನೇ, ಸುಳ್ಳು ಹೇಳಿದ ಗೋವಿಂದನಿಗೆ ಛಡಿ ಏಟು
ಶಿಕ್ಷೆ ಕೊಟ್ಟಿದ್ದೇನೆ” ಎಂದು ತನ್ನ ಅಂತಿಮ ತೀರ್ಪು ನೀಡಿದ.
ಗೋವಿಂದ ತನ್ನ ತಪ್ಪಿಗೆ ಶಿಕ್ಷೆ ಅನುಭವಿಸಿದನು.
ಸಮಯಕ್ಕೆ ತಕ್ಕಬುದ್ದಿ
ಪಾನಮತ್ತನಾದ ದೊರೆ
. ಪ್ರತಿ ದಿನ
ಚಕ್ರವರ್ತಿ ರಾಜ ಕಾರ್ಯಗಳನ್ನು ಮುಗಿಸಿ ಹಿಂತಿರುಗಿದಾಗ ಅವನಿಗೆ ತುಂಬಾ ಶ್ರಮವಾಗುತ್ತಿತ್ತು.
ಆಗೆಲ್ಲ ರಾಣಿ ಒಂದು ಅಳತೆ ಮದ್ಯವನ್ನು ಕೊಟ್ಟು ತೃಪ್ತಿಪಡಿಸುತ್ತಿದ್ದಳು. ರಾಜ ಅದನ್ನು ಕುಡಿದು
ನೆಮ್ಮದಿಯಾಗಿ ನಿದ್ದೆ ಮಾಡಿಬಿಡುತ್ತಿದ್ದನು.
ಬೀರಬಲ್ ಮತ್ತು ಬರಿಸುವ ಮದ್ಯಗಳನ್ನು ಸರಬರಾಜು ಮಾಡಕೂಡದೆಂದು ಆಜ್ಞೆ ವಿಧಿಸಿದನು. ಅರಮನೆಗೆ ಮದ್ಯಗಳ ಸರಬರಾಜು ನಿಂತಿತು. ಆದರೂ ಆಕ್ಟರನ ವರ್ತನೆ ಸರಿಹೋಗಲಿಲ್ಲ. ಬೀರಬಲ್‌ಗೆ ಪೇಚಿಗಿಟ್ಟು ಕೊಂಡಿತು.
ಹೀಗೆಯೇ ಇದ್ದುಬಿಟ್ಟರೆ ರಾಜ್ಯ ಅನಾಯಕವಾಗುವುದೆಂದು ಬೀರಬಲ್ ತನಗೆ ಕಾಯಿಲೆಯಾಗಿದೆ ಎಂದು ನಟಿಸಿ ದೀರ್ಘಕಾಲದ ರಜೆ ಹಾಕಿ ಮನೆಯಲ್ಲಿದ್ದುಬಿಟ್ಟ ಆದರೆ ಚಕ್ರವರ್ತಿಗೆ ಮದ್ಯ ಒದಗಿಸುತ್ತಿರುವವರು ಯಾರು ಎಂಬುದನ್ನು ತಿಳಿಯಬೇಕೆಂದು ನಿರ್ಧರಿಸಿದ.
ಅಕ್ಬರನಿಗೆ
ಬೀರಬಲ್‌ನ ಉತ್ತರ ತೃಪ್ತಿ ನೀಡಲಿಲ್ಲ,
“ನಿನ್ನ ಬಳಿ ಏನಿದೆ ಎಂದು ಧೈರ್ಯವಾಗಿ
ಹೇಳು, ತಮಾಷೆಗೆ ಇದು ಸಮಯವಲ್ಲ” ಎಂದೆ.
ಬೀರಬಲ್, “ಆನೆ ಪ್ರಭು” ಎಂದು ಉತ್ತರಿಸಿದ,ಅಕ್ಬರ ಕೆರಳಿ ಕೆಂಡಾಮಂಡಲವಾದ,
“ಜ್ಞಾನ ನೆಟ್ಟಗಿದೆಯೋ ಇಲ್ಲವೋ? ಆನೆಯಂತೆ ಆನೆ. ಏನಿದು ಬೇಗ ಹೇಳು” ಎಂದ.
ಅಕ್ಬರನ ಕೋಣೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೀರಬಲ್ ತನ್ನ ಕೋಣೆಗೆ ಮದ್ಯದ ಸೀಸೆ ಕದಿಯಲಿಕ್ಕೆ ಬಂದಿದ್ದನೆಂದು ಅಕ್ಬರನಿಗೆ ತಿಳಿದು ಹೋಯಿತು.
ಅಕ್ಬರ ಕೇಳಿದ, “ಬೀರಬಲ್, ನೀನೊಲ್ಲೂ ಸೀಸೆಯ ಮದ್ಯವನ್ನೆಲ್ಲ ಕುಡಿದೆ ಎಂದು ತೋರುತ್ತೆ ಅದಕ್ಕೆ ಹೀಗೆ ಬುದ್ದಿ ಸ್ವಾಧೀನವಿಲ್ಲದೆ ಹರಟದೆಯಲ್ಲವೆ? ಕಂಕುಳಲ್ಲಿ ಮದ್ಯದ ಸೀಸೆ ಇಟ್ಟುಕೊಂಡು ಆನೆ, ಕತ್ತೆ ಕುದುರೆ ಎಂದೆಲ್ಲ ಹೇಳಿದೆಯಲ್ಲಾ , ಮಂತ್ರಿಯಾಗಿ ನೀನು ಹೀಗೆ ನಡೆದುಕೊಳ್ಳಬಾರದಿತ್ತು”
ಅದಕ್ಕೆ
ಬೀರಬಲ್, “ಮಹಾರಾಜ! ವಾಸ್ತವವಾಗಿ ನಾನು ಒಂದು
ತೊಟ್ಟೂ ಕುಡಿದಿಲ್ಲ, ಕೇವಲ ಸೀಸೆ ನನ್ನ ಬಳಿ ಇದೆಯಷ್ಟೆ
ಅಷ್ಟಕ್ಕೆ ಅದು ನನ್ನನ್ನು ಹುಚ್ಚುಹುಚ್ಚಾಗಿ ಮಾತನಾಡುವಂತೆ ಪ್ರೇರೆಸಿತು. ಇನ್ನು ದಿನ ನಿತ್ಯ
ಕುಡಿಯುವರಲ್ಲ ಅವರ ಪಾಡೇನು?” ಎಂದ.
ಬೀರಬಲ್ ಮಾತನಾಡಿದ್ದು ತನ್ನನ್ನೇ ಕುರಿತು ಎಂಬುದು ಅಕ್ಬರನಿಗೆ ಅರ್ಥವಾಯಿತು. ಬೀರಬಲ್ ಮುಂದುವರಿದು ಹೇಳಿದ.
“ಪ್ರಭು ಈ ಸೀಸೆಯಲ್ಲಿ ಆರು ಅಳತೆಗಳಿವೆ
ಯಾರೇ ಆಗಲಿ ಮೊದಲನೆ ಅಳತೆ ತೆಗೆದುಕೊಂಡಾಗ ಯಾವುದಕ್ಕೂ ವಿಚಾರ ಮಾಡುವುದಿಲ್ಲ ಎರಡನೆ ಅಳತೆ
ಹೀರಿದಾಗ ಅದು ಅವನು ತೊದಲು ಭಾಷೆಯಲ್ಲಿ ಮಾತನಾಡುವಂತೆ ಮಾಡುತ್ತದೆ. ಮೂರನೆ ಅಳತೆ ಅವನನ್ನು
ಕುದುರೆ ಸಂತೋಷದಲ್ಲಿ ಕೆನೆಯುವಂತೆ ಮಾಡುತ್ತದೆ. ನಾಲ್ಕನೆಯ ಅಳತೆ ಹೀರಿದಾಗ ಆನೆ ಹುಚ್ಚಾಪಟ್ಟೆ
ಆಡುವಂತೆ ಅವನು ವರ್ತಿಸುತ್ತಾನೆ. ಐದನೆಯ ಅಳತೆ ಕುಡಿದಾಗ ಕತ್ತೆ ಆಡಿದಂತೆ ಆಡುತ್ತಾನೆ. ಆರನೆಯ
ಅಳತೆ ಅವನ ಪ್ರಜ್ಞೆ ತಪ್ಪಿಸುತ್ತದೆ. ಗಟ್ಟಿಯಾಗಿ ಬೆನ್ನಿನ ಮೇಲೆ ಗುದ್ದಿದಾಗಲೆ ಅವನು
ಎಚ್ಚೆತ್ತುಕೊಳ್ಳುತ್ತಾನೆ. ಹಾಗೆಯೇ ನಾನೂ ಸಹ ನಿಮಗೆ ಉತ್ತರಿಸಿದೆ. ಮೊದಲು ಸುಮ್ಮನಿದ್ದೆ.
ಅನಂತರ ಗಿಣಿ, ಕುದುರೆ, ಆನೆ, ಕತ್ತೆ ಎಂದೆ. ಕಡೆಗೆ ನೀವು ಸೇವಕರನ್ನು ಕರೆಸಿ ಶಾಸ್ತಿ
ಮಾಡಿಸುತ್ತೇನೆ ಎಂದಾಗಲೆ ನಾನು ನನ್ನ ಬಳಿ ಏನಿದೆ ಎಂದು ನಿಜ ಹೇಳಿದೆ.
ಪ್ರಭು !
ಮದ್ಯಪಾನ ಕೆಟ್ಟದ್ದು ಮದ್ಯ ಹೀರಿದವನು ಜ್ಞಾನ ಶೂನ್ಯನಾಗುತ್ತಾನೆ. ಮನಸ್ಸು
ಸ್ಥಿಮಿತದಲ್ಲಿರುವುದಿಲ್ಲ, ಎಂಥೆಂಥ ರಾಜರೋ ಮದ್ಯಪಾನ ಮತ್ತರಾಗಿ
ತಮ್ಮ ಕರ್ತವ್ಯವನ್ನೆ ಮರೆತು ಬುದ್ಧಿಹೀನರಾಗಿ ವರ್ತಿಸುತ್ತಾರೆ. ಇದನ್ನು ನಿಮ್ಮ ಗಮನಕ್ಕೆ ತರಲು
ನಾನು ಈ ರೀತಿ ವರ್ತಿಸಬೇಕಾಯಿತು. ನೀವು ಕೋಟ್ಯಾನು ಕೋಟಿ ಪ್ರಜೆಗಳನ್ನಾಳುತ್ತಿದ್ದೀರಿ. ನೀವೇ
ಹೀಗೆ ರಾಜಕಾರ್ಯಗಳನ್ನು ಮರೆತರೆ ಹೇಗೆ? ನಾನು
ತಪ್ಪಾಗಿ ವರ್ತಿಸಿದ್ದರೆ ಕ್ಷಮಿಸಿ.” ಅಕ್ಬರಗೆ
ತನ್ನ ತಪ್ಪಿನ ಅರಿವಾಯಿತು.
ಮಾತೇ
ಹೊರಡಲಿಲ್ಲ. ಈಗಲಾದರೂ ಬೀರಬಲ್ ಬಂದು ತನ್ನನ್ನು ತಿದ್ದಿದನಲ್ಲ ಎಂದು ಸಂತೋಷಿಸಿದ. ಅಕ್ಬರ
ಎಂದಿನಂತೆ ರಾಜ್ಯ ಕಾರ್ಯದಲ್ಲಿ ಮಗ್ನನಾದ. ಇದರಿಂದ ಉಳಿದ ಮಂತ್ರಿಗಳಿಗೂ ನೆಮ್ಮದಿ ಸಿಕ್ಕಿತು.
ಎರಡು ಕತ್ತೆಗಳ ಭಾರ
ಮೊಗಲ್ ಸಾಮ್ರಾಟ ಅಕ್ಬರ್ ಬೀರಬಲ್ ಜತೆ ವಾಯುವಿಹಾರ ಹೋಗುವುದು ಸಾಮಾನ್ಯವಾಗಿತ್ತು ಇಬ್ಬರೂ ಬೆಳಿಗ್ಗೆ ವೇಳೆ ನಡೆದು ಹೋಗುತ್ತಿದ್ದರು.
ಒಂದು ದಿನ ಅಕ್ಕರನ ಮೊಮ್ಮಗ ಖುರಂ ತಾನೂ ಅವರ ಜತೆ ಬರುವುದಾಗಿ ಹೇಳಿಕೊಂಡನು. ಅಕ್ಬರ ಬರಬೇಡ ಎಂದು ಎಷ್ಟೋ ಸಮಾಧಾನ ಹೇಳಿದರೂ ಖುರಂ ಕೇಳಲಿಲ್ಲ. ಹೀಗಾಗಿ ಅವನನ್ನು ಕರೆದುಕೊಂಡು ಹೊರಟನು.
ಮೊಗಲ್ ಸಾಮ್ರಾಟ ಅಕ್ಬರ್ ಬೀರಬಲ್ ಜತೆ ವಾಯುವಿಹಾರ ಹೋಗುವುದು ಸಾಮಾನ್ಯವಾಗಿತ್ತು ಇಬ್ಬರೂ ಬೆಳಿಗ್ಗೆ ವೇಳೆ ನಡೆದು ಹೋಗುತ್ತಿದ್ದರು.
ಒಂದು ದಿನ ಅಕ್ಕರನ ಮೊಮ್ಮಗ ಖುರಂ ತಾನೂ ಅವರ ಜತೆ ಬರುವುದಾಗಿ ಹೇಳಿಕೊಂಡನು. ಅಕ್ಬರ ಬರಬೇಡ ಎಂದು ಎಷ್ಟೋ ಸಮಾಧಾನ ಹೇಳಿದರೂ ಖುರಂ ಕೇಳಲಿಲ್ಲ. ಹೀಗಾಗಿ ಅವನನ್ನು ಕರೆದುಕೊಂಡು ಹೊರಟನು.
ಆಗ ಸೆಕೆಗಾಲ. ಸ್ವಲ್ಪ ಕೂಡ ಗಾಳಿ ಬೀಸುತ್ತಿರಲಿಲ್ಲ. ಸ್ವಲ್ಪ ದೂರ ನಡೆದ ಮೇಲೆ ಅಕ್ಬರ ತನ್ನ ಮೇಲಂಗಿಯನ್ನು ಬಿಚ್ಚಿ ಬೀರಬಲ್‌ಗೆ ಕೊಟ್ಟು ಬಿಟ್ಟನು. ಇದನ್ನು ನೋಡಿದ ಖುಗ್ರಂ ತಾನೂ ತನ್ನ ಅಂಗಿ ಬಿಚ್ಚಿ ಬೀರಬಲ್ಗೆ ಕೊಟ್ಟುಬಿಟ್ಟನು.
ಬೀರಬಲ್‌ಗೆ ಅಕ್ಬರ ಮತ್ತು ಖುಗ್ರಂ ಇವರಿಬ್ಬರ ಅಂಗಿಗಳನ್ನು ಹೊತ್ತುಕೊಂಡು ಬರುವುದು ಸಾಕು ಸಾಕಾಗಿ ಹೋಯಿತು. ಆದರೂ ಎರಡೂ ಅಂಗಿಗಳನ್ನು ಹಿಡಿದುಕೊಂಡು ಅಕ್ಬರ ಮತ್ತು ಖುಗ್ರಂರ ಹಿಂದೆ ನಡೆದು ಬರುತ್ತಿದ್ದನು.
ಅಕ್ಬರಗೆ ಮಾತನಾಡುವ ಚಪಲ. ಮಾತನಾಡದೆ ಬರಬಹುದಿತ್ತು ಬೀರಬಲ್ ನಡೆಯಲಾಗದೆ ಭಾರ ಹೊತ್ತು ಬರುತ್ತಿದ್ದನು.
ಬೀರಬಲ್ ಯಾಕೋ
ಭಾರ ಹೊರಲಾಗದೆ ಬರುತ್ತಿದ್ದುದನ್ನು ಕಂಡು,
ಕತ್ತೆ ಅಗಸ ಬೆನ್ನ ಮೇಲೆ ಹಾಕುವ ಭಾರ ಹೊರುತ್ತದೆಯಲ್ಲವೇ? ಬೀರಬಲ್‌ಗೆ ಸಿಟ್ಟು ಬಂದಿತು.
ಮಹಾರಾಜ ತನ್ನನ್ನು ಕತ್ತೆಗೆ ಹೋಲಿಸಿದ್ದನ್ನು ಕಂಡು, ಅಕ್ಬರನಿಗೆ ಸರಿಯಾಗಿ ಪಾಠ ಕಲಿಸಬೇಕೆಂದು ಕೊಂಡನು.
“ಸ್ವಾಮಿ, ಒಂದು ಕತ್ತೆ ಹೊರುವ ಭಾರವಲ್ಲ. ಎರಡು
ಕತ್ತೆಗಳ ಭಾರವನ್ನಲ್ಲವೇ ನಾನು ಹೊರುತ್ತಾ ಬರುತ್ತಿರುವುದು” ಎಂದು ಬಿಟ್ಟನು.
ಅಕ್ಬರ ಮುಂದೆ
ಮಾತನಾಡಲಿಲ್ಲ, ಖುರಂ ಜತೆ ಅರಮನೆಗೆ ಬಂದು ಬಿಟ್ಟನು.
There are lots of of various slots to try out, together with Achilles, Caesar's Empire, and Aztec's Millions. MBit Casino is a modern Bitcoin 점보카지노 casino the place customers can deposit using their favourite cash, corresponding to Bitcoin, Ethereum, Litecoin, and Dogecoin. They also have daily slot races and a beneficiant loyalty program. This offer lets you add quantity of} layers to your bankroll on video games like Mythic Wolf, Hail Caesar, and Sea Treasures.
ಪ್ರತ್ಯುತ್ತರಅಳಿಸಿ