ಅಕ್ಬರ್ ಬೀರಬಲ್ ಕತೆಗಳು
ಕತೆಗಳ ಪಟ್ಟಿ(toc)
Stories of Akbar and Birbal area unit very fashionable in India. In many instances Birbal uses his wit and intelligence to calm the ire of Emperor Akbar and amuse him at constant time. It accustomed be a part of the oral tradition of storytelling, however in recent years these stories are compiled into books by varied authors.
Birbal was appointed by Akbar as a Minister (Mantri) and accustomed be a writer and Singer in around 1556–1562. He had an in depth association with Emperor Akbar and was one in all his most vital courtiers, a part of a gaggle referred to as the navaratnas (nine jewels).
Local people tales emerged primarily in nineteenth century involving his interactions with Akbar, him representational process him as being very clever and humourous.
We are happy to bring Akbar and Birbal stories in kannada launguage.
ಮೂರ್ಖ ವಿದ್ವಾಂಸ
ಒಮ್ಮೆ ಬ್ರಾಹ್ಮಣ ಬೀರಬಲ್‌ನ ಬಳಿಗೆ ಬಂದನು. ಆ ಬ್ರಾಹ್ಮಣ ತಾನು ವಿದ್ವಾಂಸನಲ್ಲದಿದ್ದರೂ ಮೂರ್ಖ ಇದ್ದನು. ಅವನು ಜನ ನನ್ನನ್ನು ಪಂಡಿತ ಎಂದು ಕರೆಯಬೇಕು ಎಂದು ಕೋರಿದನು.
ಆ ಬ್ರಾಹ್ಮಣ ಓದು ಬರಹ ತಿಳಿಯದವನು. ಬೀರಬಲ್‌ಗೆ ಅವನನ್ನು ಕಂಡು ಬೇಸರವೇ ಆಯಿತು. ಸಾಮಾನ್ಯವಾಗಿ ಬ್ರಾಹ್ಮಣರು ಓದಿರುತ್ತಾರೆ. ವೇದ ಉಪನಿಷತ್ತುಗಳು ತಿಳಿದಿರುತ್ತಾರೆ. ಆದರೆ ಇವನೋ ಅಜ್ಞಾನಿ.
'ಬ್ರಾಹ್ಮಣ, ಪಂಡಿತ ಎಂದು ಜಂಬ ಪಡಬಾರದು. ಅದೂ ಓದು ಬರಹಬಾರದ ನೀನು ಹಾಗೆ ಹೇಳಿಕೊಳ್ಳಬಹುದೇ? ನೀನು ಅನಕ್ಷರಸ್ಥ ವಿದ್ವಾಂಸ ಎಂದು ಹೇಗೆ ಹೇಳಿ ಕೊಳ್ಳಲು ಸಾಧ್ಯ?” ಆ ಮೂರ್ಖ ಒಪ್ಪಲಿಲ್ಲ. ಕಡೆಗೆ ಬೀರಬಲ್ ಒಂದು ಉಪಾಯ ಮಾಡಿದ.
“ನೋಡಯ್ಯ, ನಿನಗೆ ಓದು ಬರಹ ಬರೋಲ್ಲ, ಆದರೂ ನೀನು ನಿನ್ನನ್ನು ಜನ ಪಂಡಿತ ಎಂದು ಕರೆಯಬೇಕು ಎನ್ನುತ್ತಿ, ನಾನೊಂದು ಉಪಾಯ ಹೇಳುತ್ತೇನೆ. ಯಾರಾದರೂ ನಿನ್ನನ್ನು ಪಂಡಿತ ಎಂದು ಕರೆದರೆ ನೀನು ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಿ ಕಲ್ಲುಗಳಿಂದ ಹೊಡೆದು ಬಿಡು'' ಎಂದು ಹೇಳಿದ.
ಬ್ರಾಹ್ಮಣ ಒಪ್ಪಿದನು.
ಅದೇ ದಿನ ಬೀರಬಲ್ ತನ್ನ ಸಹಾಯಕನನ್ನು ಕರೆದು ಬ್ರಾಹ್ಮಣನನ್ನು ಪಂಡಿತ ಎಂದು ಕರೆಯಲು ಹೇಳಿದನು.
ಸಹಾಯಕ ಬ್ರಾಹ್ಮಣ ಮಾರುಕಟ್ಟೆಗೆ ಹೋಗುವಾಗ ಪಂಡಿತ ಎಂದು ಕರೆದನು.
ಬ್ರಾಹ್ಮಣನಿಗೆ ಖುಷಿಯಾಗಿ ಅವನನ್ನು ಕಲ್ಲುಗಳಿಂದ ಹೊಡೆದನು. ಕೆಟ್ಟ ಮಾತುಗಳಿಂದ ಬೈದನು.
ಇದನ್ನು ನೋಡಿ ಇತರರು ಬ್ರಾಹ್ಮಣನನ್ನು ವಿದ್ವಾಂಸ ಎಂದು ಕರೆಯತೊಡಗಿದರು. ಕೆಲದಿನಗಳಲ್ಲಿ ಇಡೀ ಪಟ್ಟಣವೇ ಅವನನ್ನು ವಿದ್ವಾಂಸ ಎಂದು ಕರೆಯತೊಡಗಿದರು. ಬ್ರಾಹ್ಮಣನಿಗೆ ಖುಷಿಯಾಗುತ್ತಿತ್ತು ಅವನು ಬೀರಬಲ್‌ಗೆ ವಂದಿಸಿದನು. ಆದರೆ ಅವನಿಗೆ ಜನ ಏಕೆ ನನ್ನನ್ನು ಹಾಗೆ ಕರೆಯುತ್ತಾರೆ ಎಂಬುದಂತೂ ಅರ್ಥವಾಗಲೇ ಇಲ್ಲ.
ರೈತ ದೇಶದ ಬೆನ್ನುಮೂಳೆ
ರೈತ ದೇಶದ ಬೆನ್ನುಮೂಳೆ ಎಂದು ಹೇಳುತ್ತಾರೆ. ರೈತನಷ್ಟೇ ಅಲ್ಲ ಒಬ್ಬ ಸೈನಿಕನೂ ದೇಶದ ಆಸ್ತಿಯೇ, ರೈತ ಜನರಿಗೆ ಆಹಾರ ಬೆಳೆದುಕೊಡುತ್ತಾನೆ. ಸೈನಿಕ ದೇಶವನ್ನು ಶತ್ರುಗಳಿಂದ ರಕ್ಷಿಸುತ್ತಾನೆ.
ಬೀರಬಲ್ ಗೆ ಬೇಸಾಯ ಇಷ್ಟವಾಗಿತ್ತು, ಆತ ಬಂದುದೇ ರೈತ ಕುಟುಂಬದಿಂದ ಸ್ವಾಭಾವಿಕವಾಗಿಯೇ ಅವನಿಗೆ ರೈತರೆಂದರೆ ಪ್ರಿಯ.
ಮುಲ್ಲಾ ಅಕ್ಟರನ ಒಬ್ಬ ಮಂತ್ರಿ. ಅವನಿಗೆ ಸೈನಿಕರೆಂದರೆ ಪ್ರಿಯ. ಆತನ ಹಿರೀಕರು ಸೈನಿಕರು ಆಗಿದ್ದರು. ಮುಲ್ಲಾಗೆ ಬೀರಬಲ್ ಎಂದರೆ ಅಗದು. ಒಂದು ದಿನ ಮುಲ್ಲಾ ಹೇಗಾದರೂ ಮಾಡಿ ಬೀರಬಲ್‌ನ ಮುಖಭಂಗ ಮಾಡಬೇಕೆಂದು ನಿರ್ಧರಿಸಿದನು.
ಬೀರಬಲ್ ಎದುರಾದಾಗ, “ಬೀರಬಲ್ ! ನೀನು ಮಂತ್ರಿಯಾಗುವ ಮೊದಲು ಏನು ಕೆಲಸ ಮಾಡಿಕೊಂಡಿದ್ದೆ?” ಎಂದು ಕೇಳಿದನು.
“ವ್ಯವಸಾಯ! ನನ್ನ ತಂದೆ ಒಬ್ಬ ರೈತ' ಎಂದ ಬೀರಬಲ್.
“ಅವನು ಹೇಗೆ ಸತ್ತ?”
“ಒಂದು ದಿನ ಚಳಿಗಾಲದಲ್ಲಿ ಹೊಲ ನೋಡಿಕೊಂಡಿರಬೇಕಾದರೆ ಚಳಿ ತಡೆಯಲಾಗದೆ ಸತ್ತು ಹೋದ.”
“ಹೌದಾ? ನಿನ್ನ ಅಜ್ಜ ಹೇಗೆ ಸತ್ತ?”
“ನನ್ನ ಅಜ್ಜನೂ ಹೊಲದಲ್ಲಿ ಸತ್ತು ಹೋದ. ಒಂದು ದಿನ ಬಾವಿಯಿಂದ ನೀರು ಸೇದುತ್ತಿರಬೇಕಾದರೆ ಜಾರಿ ಬಾವಿಯಲ್ಲಿ ಬಿದ್ದ ಸತ್ತು ಹೋದ.??
“ಅದಕ್ಕೆ ನಾನು ಹೇಳೋದು ವ್ಯವಸಾಯ ಒಳ್ಳೆ ವೃತ್ತಿ ಅಲ್ಲ' ಎಂದು ಮುಲ್ಲಾ ಹೇಳಿಕೊಂಡ.
ಈಗ ಬೀರಬಲ್ ಸರದಿ.
“ಮುಲ್ಲಾ! ನಿನ್ನ ಮೊದಲ ಕೆಲಸ ಏನಿತ್ತು?”
“ನಾವೆಲ್ಲ ಸೈನಿಕರು'
''ನಿಮ್ಮ ತಂದೆ ಹೇಗೆ ಸತ್ತರು?"
"ಅವನು ಸೈನಿಕ, ಯುದ್ಧ ಮಾಡುತ್ತಾ ಸತ್ತು ಹೋದ”
“ನಿಮ್ಮ ಅಜ್ಜ ಹೇಗೆ ಸತ್ತರು?''
“ಅವರೂ ಸೈನಿಕರೇ, ಯುದ್ಧ ಮಾಡುತ್ತಾ ರಣಭೂಮಿಯಲ್ಲಿ ಸತ್ತರು'' “ಹೌದಾ? ಅದಕ್ಕೆ ನಾನು ಹೇಳೋದು.
ನಿಮ್ಮ ಕುಟುಂಬದವರಿಗೆ ಈ ಸೈನಿಕರ ವೃತ್ತಿ ಒಳ್ಳೆಯದಲ್ಲ ಅಂತ. ನೀನು ಇನ್ನೇನಾದರೂ ಕೆಲಸ ಹುಡುಕ್ಕೋ.”
ಬೀರಬಲ್‌ನ ಮಾತು ಕೇಳಿ ಮುಲ್ಲಾ ಮುಂದೆ ಮಾತನಾಡಲಿಲ್ಲ.
ರುಷುವತ್ತು
ಅಕ್ಬರ್ ಔದಾರ್ಯಕ್ಕೆ ಹೆಸರಾಗಿದ್ದ ದೊರೆ. ಅವನು ಕವಿಗಳು ಕಲಾವಿದರನ್ನು ಗೌರವಿಸುತ್ತಿದ್ದನು. ತಾನ್‌ಸೇನ್ ಒಬ್ಬ ಪ್ರಸಿದ್ದ ಸಂಗೀತಗಾರ. ಆಸ್ಥಾನ ವಿದ್ವಾಂಸ.
ಅಕ್ಬರ್ ಕವಿ ಕಲಾವಿದರನ್ನು ಗೌರವಿಸುತ್ತಾನೆಂದು ತಿಳಿದ ಅನೇಕ ಕವಿಗಳು ಕಲಾವಿದರು ಅಕ್ಬರನ ಅರಮನೆಗೆ ಆಗಾಗ ಬರುತ್ತಿದ್ದರು. ಆದರೆ ದೊರೆಯನ್ನು ಸಂಧಿಸುವುದು ಸುಲಭವೇನಾಗಿರಲಿಲ್ಲ, ಅಕ್ಷರ ತಾನು ಯಾರನ್ನೂ ಭೇಟಿ ಮಾಡುವುದಿಲ್ಲ ಎಂದೇನೂ ಹೇಳುತ್ತಿರಲಿಲ್ಲ, ಅಕ್ಷರನಿಗೆ ಕಲಾವಿದರೆಂದರೆ ಪ್ರೀತಿ ಇತ್ತು ಆದರೆ ಅರಮನೆ ದ್ವಾರದಲ್ಲಿ ಕಾವಲುಗಾರರು ಜನರನ್ನು ಒಳಗೆ ಬಿಡಲು ತಡೆ ಹಾಕುತ್ತಿದ್ದರು.
ಯಾರಾದರೂ ಅಕ್ಬರನನ್ನು ನೋಡಬೇಕಾದರೆ ದ್ವಾರಪಾಲಕರಿಗೆ ರುಷುವತ್ತು ಕೊಟ್ಟು ಒಳಗೆ ಹೋಗಬೇಕಾಗುತ್ತಿತ್ತು. ಯಾರಾದರೂ ಹಾಗೆ ದುಡ್ಡೋ ಕಾಸೋ ಕೊಡದಿದ್ದರೆ ಸುಮ್ಮನೆ ಹಿಂದಿರುಗಬೇಕಾಗುತ್ತಿತ್ತು ಇದು ಹೇಗೋ ಬೀರಬಲ್‌ಗೆ ಗೊತ್ತಾಗಿ ಅವನು ನಿಜ ಸ್ಥಿತಿ ಕಂಡು ಹಿಡಿಯಲು ಬಯಸಿದರು.
ಒಮ್ಮೆ ಬೀರಬಲ್ ಅರಮನೆಗೆ ಮಾರುವೇಷದಲ್ಲಿ ಹೋದನು. ತಾನೊಬ್ಬ ಕವಿ ಎಂದು ಹೇಳಿಕೊಂಡನು. ಆದರೆ ದ್ವಾರಪಾಲಕ ಒಳಗೆ ಬಿಡಲಿಲ್ಲ
“ಯಾರಯ್ಯಾ ನೀನು? ಏನು ಅರಮನೆ ಒಳಗೆ ನುಗುತ್ತಾ ಇದ್ದಿ?” ಎಂದು ಕೇಳಿದನು.
“ನಾನು ದೊರೆಗಳನ್ನು ಕಾಣಬೇಕು' ಹೇಳಿದ ಬೀರಬಲ್.
“ಓಹ್ ! ದೊರೆಗಳನ್ನು ಕಾಣಬೇಕೋ? ಅದೇನು ಅಷ್ಟು ಸುಲಭ ಎಂದು ಕೊಂಡೆಯಾ? ಅವರು ಕಾರ್ಯನಿರತರಾಗಿದ್ದಾರೆ. ಅದೂ ಅಲ್ಲದೆ ಈಗ ಯಾರನ್ನೂ ಒಳಗೆ ಬಿಡಬೇಡ ಎಂದು ಹೇಳಿದ್ದಾರೆ.”
“ಅಯ್ಯೋ ಹಾಗೆ ಹೇಳಬೇಡಪ್ಪ, ನಾನು ತುಂಬಾ ದೂರದಿಂದ ಬಂದಿದ್ದೇನೆ. ದಯಮಾಡಿ ಒಳಗೆ ಬಿಡು” ಎಂದು ಕೇಳಿಕೊಂಡ ಬೀರಬಲ್. ದ್ವಾರಪಾಲಕ ಬೀರಬಲ್ನನ್ನು ಮೇಲಿನಿಂದ ಕೆಳಗಿನವರೆಗೂ ನೋಡಿದ.
“ನೀನು ಹಾಗೆಲ್ಲ ಸುಮ್ಮನೆ ಅವರನ್ನು ನೋಡೋಕ್ಕಾಗಲ್ಲ” 'ಯಾಕೆ?''
“ಏಕೆಂದರೆ ನಾನು ಹಾಗೇ ನಿನ್ನನ್ನು ಒಳಗೆ ಬಿಡೋಲ್ಲ”
“ಆದರೆ ನಾನು ಅವರನ್ನು ನೋಡಲೇಬೇಕು.”
“ನೀನೇಕೆ ಅವರನ್ನು ನೋಡಬೇಕು? ಅವರಿಂದ ಏನಾದರೂ ಬಯಸುತ್ತಿದ್ದೀಯೋ?”
“ಹೌದು”
“ಆದರೆ ನನ್ನ ಹತ್ತಿರ ಈಗೇನೂ ಇಲ್ಲ”.
“ಹಾಗಾದರೆ ನಾನೂ ನಿನ್ನಿಂದ ಏನಾದರೂ ಬಯಸುತ್ತಿದ್ದೇನೆ.”
“ಸರಿ, ನೀನು ಒಳಗೆ ಹೋಗು. ಆದರೆ ರಾಜ ಏನು ಕೊಡುತ್ತಾರೋ ನನಗೆ ಕೊಡಬೇಕು.”
ಅದರಲ್ಲಿ ಅರ್ಥ
“ಯಾಕಿಲ್ಲ? ಖಂಡಿತ ಕೊಡುತ್ತೇನೆ.'' “ಹಾಗಾದರೆ ಒಳಗೆ ಹೋಗು.''
ಕಾವಲುಗಾರ ಬೀರಬಲ್‌ನನ್ನು ಒಳಕ್ಕೆ ಬಿಟ್ಟು ಬಿಟ್ಟನು. ಬೀರಬಲ್ಅರಮನೆ ಒಳಗೆ ಹೋದ. ಅಕ್ಟರ್ ಅವನನ್ನು ಗುರುತಿಸಲಾಗಲಿಲ್ಲ, ಮಾರುವೇಷದಲ್ಲಿದ್ದನಲ್ಲವೇ?
'ಸರ್ಕಾರ್, ನಾನೊಬ್ಬ ಕವಿ, ನಾನು ಕೆಲವು ಪದ್ಯಗಳನ್ನು ಹಾಡಬೇಕೆಂದಿದ್ದೇನೆ' ಎಂದ ಬೀರಬಲ್.
ಅಕ್ಟರ್ ಒಪ್ಪಿಕೊಂಡ.
ಬೀರಬಲ್ ಪದ್ಯಗಳನ್ನು ಓದಿದ. ಅಕ್ಟರನಿಗೆ ಖುಷಿಯಾಯಿತು.
“ಅಯ್ಯಾ ! ನೀನೊಬ್ಬ ಒಳ್ಳೆ ಕವಿ. ನಿನಗೇನು ಬೇಕೋ ಕೇಳು ಕೊಡುತ್ತೇನೆ” ಎಂದ.
“ಹುಜೂರ್ ! ನನಗೇನು ಬೇಡ ನಾನು ನಿಮ್ಮ ಮುಂದೆ ಪದ್ಯಗಳನ್ನು ಓದಬೇಕೆಂದಿದ್ದೆ ಅಷ್ಟೆ”
“ಇಲ್ಲ ಇಲ್ಲ, ನೀನೇನಾದರೂ ಉಡುಗೊರೆ ತೆಗೆದುಕೊಳ್ಳಲೇ ಬೇಕು.”
“ಆದರೆ ಒಂದು ಸರ್ಕಾರ್, ನೀವೇನಾದರೂ ಕೊಡೋದಾದರೆ....''
“ಯಾಕೆ ಅನುಮಾನ?”
“ಹಾಗಾದರೆ ನನಗೆ ನೂರು ಚಾವಟಿ ಏಟು ಕೊಡಿಸಿ''
“ಏನು? ನಿನಗೆ ಬುದ್ದಿ ಕೊಟ್ಟಿಲ್ಲ ತಾನೇ? ಅಥವಾ ನೀನು ಹುಚ್ಚನೇ?” “ನನಗೆ ಹುಟ್ಟಿಲ್ಲ, ನಾನು ಆರೋಗ್ಯವಾಗೇ ಇದ್ದೇನೆ. ನನಗೆ ನೂರು ಏಟು ಕೊಡಿ ಅಷ್ಟೆ”
“ಒಳ್ಳೆ ಕವಿಯಯ್ಯಾ ನೀನು. ಅಲ್ಲಾ ನಿನ್ನ ಸುಂದರವಾದ ಪದ್ಯಗಳಿಗೆ ಹಣ ಕೇಳೋದು ಬಿಟ್ಟು ಹೊಡೆತ ಕೇಳುತ್ತಿರುವೆಯಲ್ಲ
“ಸ್ವಾಮಿ, ನಾನು ನಿಮ್ಮ ಒಳ್ಳೆ ಆರೋಗ್ಯಕ್ಕಾಗಿ ಕೇಳಿಕೊಳ್ಳುತ್ತಿದ್ದೇನೆ. ನನಗೀ ಉಡುಗೊರೆ ಕೊಡಿ.''
“ನನಗಂತೂ ತಿಳಿತಿಲ್ಲಪ್ಪ. ನನ್ನ ಆರೋಗ್ಯಕ್ಕಾಗಿ ನೀನೇಕೆ ಒದೆ ತಿನ್ನಬೇಕು?” “ನಾನೊಬ್ಬನೇ ಅಲ್ಲ, ನಾವಿಬ್ಬರೂ
“ಇಬ್ಬರೂ ! ಯಾರು ಇನ್ನೊಬ್ಬ? ನನಗೆ ಅರ್ಥವಾಗುತ್ತಿಲ್ಲ, ಅದೇನು ಹೇಳು.''
“ಹುಜೂರ್ ! ನಿಮ್ಮ ಅರಮನೆ ಕಾವಲುಗಾರ ನೀವೇನು ನನಗೆ ಕೊಡುತ್ತೀರೋ ಅದರಲ್ಲಿ ಅರ್ಧ ಭಾಗ ಅವನಿಗೆ ಕೊಡಬೇಕು ಅಂತ ಕೇಳಿದಾನೆ.''
“ಏನಂದೆ?''
“ಏಕೆಂದರೆ ಅವನು ನನ್ನನ್ನು ಒಳಗೆ ಬರಲು ಬಿಟ್ಟಿದ್ದಾನೆ. ಖಾವಂದ್! ನಿಮ್ಮ ಮುಂದೆ ನಾನು ಪದ್ಯಗಳನ್ನು ಓದಲೆಂದು ಇಲ್ಲಿಗೆ ಬಂದೆ. ಆದರೆ ಕಾವಲುಗಾರ ರುಷುವತ್ತು ಕೇಳಿದ. ನನ್ನ ಬಳಿ ಏನಿಲ್ಲವಪ್ಪ ಎಂದೆ. ಅದಕ್ಕೆ ಅವನು ದೊರೆಗಳು ಏನು ಕೊಡುತ್ತಾರೋ ಅದರಲ್ಲಿ ಅರ್ಧ ಭಾಗ ಕೊಡು ಎಂದು ಕೇಳಿಕೊಂಡ. ನಾನು ಹಾಗೇ ಆಗಲಿ ಅಂತ ಮಾತು ಕೊಟ್ಟಿದ್ದೇನೆ' ಎಂದ ಬೀರಬಲ್.
ದೊರೆಗೆ ಸಿಟ್ಟು ಬಂದಿತು. ಚೌಕಿದಾರನಿಗೆ ಕಾವಲುಗಾರನನ್ನು ಕರೆದುಕೊಂಡು ಬಾ ಎಂದ, ಕೊತವಾಲನಿಗೆ ಕಾವಲುಗಾರನಿಗೆ ಐವತ್ತು ಏಟುಗಳು ಕೊಡಲು ಆಜ್ಞೆ ಮಾಡಿದ. ಕಾವಲುಗಾರನಿಗೆ ಚೆನ್ನಾಗಿ ಒಡೆತ ಬಿತ್ತು, ಉಳಿದ ಕಾವಲುಗಾರರಿಗೂ ಶಿಕ್ಷೆಯಾಯಿತು. ಅಕ್ಟರ್ ಹೇಳಿದ :
“ಅಯ್ಯಾ ಕವಿ ನೀನು ನಮ್ಮ ಬೀರಬಲ್‌ಗೆ ಸಮನಾಗೇ ಇದ್ದಿ, ನೀನು ಬುದ್ಧಿವಂತ. ತಕ್ಷಣ ಬೀರಬಲ್ ತನ್ನ ನಿಜ ರೂಪ ಪ್ರಕಟಿಸಿ, “ಹುಜೂರ್, ನಾನೇ ಬೀರಬಲ್ ನೋಡಿ' ಎಂದ.
ಅಕ್ಟರ್ ಹಿಗ್ಗಿ ಹೋದ. ಅವನಿಗೆ ಉಡುಗೊರೆ ಕೊಟ್ಟು ಕಳುಹಿಸಿದನು.
ಒಂಟೆ ಕತ್ತೇಕೆ ಬಾಗಿದೆ?
ಒಮ್ಮೆಅಕ್ಬರ್ ಬೀರಬಲ್ ಗೆ ಅವನ ಬುದ್ದಿವಂತಿಕೆ ಮೆಚ್ಚಿ ಹಲವು ಉಡುಗೊರೆಗಳನ್ನು ಕೊಡುತ್ತೇನೆ ಎಂದು ವಾಗ್ದಾನ ನೀಡಿದನು. ಬೀರಬಲ್ ಒಪ್ಪಿದನು. ಕೆಲವು ದಿನಗಳಾದವು, ಅಕ್ಟರ್ ತನ್ನ ವಾಗ್ದಾನ ಮರೆತೇ ಬಿಟ್ಟನು.
ಬೀರಬಲ್ ಅಕ್ಟರ್‌ಗೆ ಹಲವು ಬಾರಿ ನೆನಪು ಮಾಡಿದರೂ ಅಕ್ಟರ್ ಕಿವಿಗೊಡಲಿಲ್ಲ, ಬೀರಬಲ್‌ಗೆ ಯಾವ ಉಡುಗೊರೆಗಳೂ ಸಿಗಲಿಲ್ಲ.
ಎರಡು ತಿಂಗಳುಗಳ ನಂತರ ಅಕ್ಟರ್ ಒಂದು ದಿನ ಯಮುನಾ ನದಿ ದಡದಲ್ಲಿ ಕುಳಿತಿದ್ದನು. ಬೀರಬಲ್ ಅಲ್ಲಿಗೆ ಬಂದನು. ಅಕ್ಟರ್ ಅವನನ್ನು ಮಾತನಾಡಿಸಿ ದೂರದಲ್ಲಿದ್ದ ಒಂದು ಒಂಟೆಯನ್ನು ತೋರಿಸಿದನು.
ಅಕ್ಟರ್ ಬೀರಬಲ್‌ನನ್ನು ಕೇಳಿದನು: “ಬೀರಬಲ್, ಒಂಟೆ ಕತ್ತು ಏಕೆ ಓರೆ ಮತ್ತು ಬಾಗಿದೆ?”
ಬೀರಬಲ್ ಉತ್ತರಿಸಿ, “ಹುಜೂರ್ ! ಗ್ರಂಥಗಳು ಹೇಳುತ್ತವೆ : ಯಾರು ವಾಗ್ದಾನ ಕೊಟ್ಟು ಅದರಂತೆ ನಡೆದುಕೊಳ್ಳುವುದಿಲ್ಲವೋ ಅವರಿಗೆ ಈ ರೀತಿ ಶಿಕ್ಷೆಯಾಗುತ್ತದೆ. ಬಹುಶಃ ಒಂಟೆ ಏನೋ ತಪ್ಪು ಮಾಡಿರಬೇಕು. ಅದಕ್ಕೆ ದೇವರು ಒಂಟೆಗೆ ಈ ಶಿಕ್ಷೆ ಕೊಟ್ಟಿದ್ದಾನೆ'' ಎಂದು ಹೇಳಿದನು.
ಅಕ್ಟರನಿಗೆ ಆಶ್ಚರ್ಯವಾಯಿತು. ಅವನು ತಕ್ಷಣ ತಾನು ಮಾಡಿದ್ದ ವಾಗ್ದಾನ ನೆನಪು ಮಾಡಿಕೊಂಡು ಬೀರಬಲ್ ಗೆ ಅಮೂಲ್ಯ ಉಡುಗೊರೆಗಳನ್ನು ಕೊಟ್ಟು ಕಳುಹಿಸಿದನು.
ಎಲ್ಲಾ ಹಣಕ್ಕಾಗಿ
ರೊಕ್ಕ ಎರಡಕ್ಕೂ ದುಃಖ ಕಾಣಕ್ಕೆ
ಹಣವೇ ನಿನ್ನಯ ಗುಣ ಎಷ್ಟು ವರ್ಣಿಸಲಿ
ಹಣವಿಲ್ಲದವನೊಬ್ಬ ಹೆಣವೆ
ಸರಿಕಂಡ್ಯ ಎಂದೆಲ್ಲ ಹಣ ಕುರಿತು ಹೇಳುತ್ತಾರೆ. ಪ್ರತಿಯೊಬ್ಬರಿಗೂ ಹಣ ಬೇಕು. ಎಲ್ಲರೂ ಕೆಲಸ ಮಾಡುವುದೇ ಹಣಕ್ಕಾಗಿ ಹಣ ಏನು ಬೇಕಾದರೂ ಮಾಡುತ್ತೆ.
ಒಂದು ದಿನ ಬೀರಬಲ್ ಅಕ್ಬರನಿಗೆ, “ಜಹಾಂಪನಾ, ಜನ ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಹಣವು ಏನು ಬೇಕಾದರೂ ಮಾಡುತ್ತದೆ'' ಎಂದು ಹೇಳಿದನು.
ಆಗ ಅಕ್ಬರ್ ತನ್ನ ಬೆರಳುಗಳನ್ನು ಕೊಳದ ನೀರಿನಲ್ಲಿ ಅದ್ದುತಿದ್ದನು. ಆಗ ಚಳಿಗಾಲ. ಆದುದರಿಂದ ನೀರಿನಲ್ಲಿ ಬೆರಳಿಡಲಾಗದೆ ಎತ್ತಿಬಿಟ್ಟನು.
“ಇಲ್ಲ ಬೀರಬಲ್, ನೀನು ಹೇಳಿದ್ದು ನಾನು ಒಪ್ಪುವುದಿಲ್ಲ, ನೋಡು, ನಾನು ಎಷ್ಟು ಬೇಕಾದರೂ ಹಣ ಕೊಡುತ್ತೇನೆ ಎಂದರೂ ಯಾರೂ ತಮ್ಮ ಬೆರಳುಗಳನ್ನು ಈ ಚಳಿಯಲ್ಲಿ ನೀರಿನಲ್ಲಿ ಅದ್ದುವುದಿಲ್ಲ" ಎಂದ ಅಕ್ಬರ್
“ಹುಜೂರ್ ! ಹಾಗೇನಿಲ್ಲ, ನಾವು ಅಂತಹವನನ್ನು ಹುಡುಕುತ್ತಾ ಹೋದರೆ ಖಂಡಿತ ಸಿಗುತ್ತಾರೆ, ಇನ್ನೂ ದುಡ್ಡಿಗಾಗಿ ಇಡೀ ದಿನ ಈ ತಣ್ಣೀರಿನಲ್ಲಿ ಬೇಕಾದರೆ, ನಿಂತಿರುತ್ತಾರೆ' ಎಂದ ಬೀರಬಲ್.
ಅಲ್ಲಿ ಇತರ ಮಂತ್ರಿಗಳಿದ್ದರು.
"ಹೇಳೋದು ಸುಲಭ, ಬೇಕಾದರೆ ಬೀರಬಲ್ ಅಹ ವ್ಯಕ್ತಿ ' ಒಬ್ಬ ಮಂತ್ರಿ ಹೇಳಿದಳು.
“ಪ್ರಭು, ನೀವು ಅನುಮತಿಸಿದರೆ ನಾನು ಅಂತಹ ವ್ಯಕ್ತಿಯನ್ನು ತರಬಲ್ಲೆ' ಎಂದು ಬೀರಬಲ್ ನಿರ್ಧಾರಿತವಾಗಿ ನುಡಿದನು.
“ಅಕ್ಬರ್ಒಪ್ಪಿ "ನೋಡು ಬೀರಬಲ್, ನೀನು ಹಾಗೆ ತರಬಹುದು. ಒಂದು ವೇಳೆ ಈ ಕೊಳದಲ್ಲಿ ಇಡೀ ರಾತ್ರಿ ಆತ ನಿಂತು ಬಿಟ್ಟರೆ ನಾನು ಅವನಿಗೆ ಕೇಳಿದ್ದು ಕೊಡುತ್ತೇನೆ'' ಎಂದು ಹೇಳಿಬಿಟ್ಟ
ಬೀರಬಲ್ ಸಹ ಒಪ್ಪಿದ.
ಮಾರನೆಯ ದಿನ ಬೀರಬಲ್ ಅಂತಹ ವ್ಯಕ್ತಿಗಾಗಿ ಹುಡುಕಿದ, ಒಬ್ಬ ಬಡವ ಸಿಕ್ಕಿದನು. ಅವನನ್ನೆ ಬೀರಬಲ್ ಅರಮನೆಗೆ ಕರೆತಂದನು.
ಆ ಬಡವ ಮಹಾರಾಜನಿಗೆ, “ಹುಜೂರ್! ನಾನು ಇಡೀ ರಾತ್ರಿ ಈ ತಣ್ಣೀರಿನಲ್ಲಿ ನಿಂತಿರಬಲ್ಲೆ' ಎಂದು ಹೇಳಿದ.
“ಓಹ್! ಬಹುಶಃ ನೀನು ಎರಡು ಮೂರು ದಿನಗಳಿಂದ ನೀರು ಆಹಾರ ಏನೂ ತೆಗೆದು ಕೊಂಡಿಲ್ಲ ಎಂದು ತೋರುತ್ತೆ ಚೆನ್ನಾಗಿ ಯೋಚಿಸು, ನಿನಗೆ ಈ ಮಂಜಿನ ನೀರಿನಲ್ಲಿ ಇಡೀ ರಾತ್ರಿ ನಿಲ್ಲಲು ಸಾಧ್ಯವೇ?
“ಏಕಾಗದು ಪ್ರಭು? ಖಂಡಿತ ಸಾಧ್ಯ?
“ಸರಿ, ನೀನು ಹಾಗೆ ನಿಂತಿದ್ದೆ ಆದರೆ ನೀನು ಕೇಳಿದ್ದು ಕೊಡುತ್ತೇನೆ' ಎಂದ ಅಕ್ಬರ್.
ಅದೇ ದಿನ ರಾತ್ರಿ ಎಲ್ಲ ಏರ್ಪಾಟುಗಳಾದವು. ಬಡವ ರಾತ್ರಿ ಕೊಳದಲ್ಲಿ ನಿಂತುಕೊಂಡನು. ಆರು ಕಾವಲುಗಾರರು ಸುತ್ತ ನಿಂತಿದ್ದರು. ಅವರೆಲ್ಲ ಇಡೀ ರಾತ್ರಿ ಅವನು ನಿಂತಿರುತ್ತಾನೆಯೆ ಇಲ್ಲವೆ ಎಂದು ತಪಾಸಣೆ ಮಾಡಬೇಕಿತ್ತು.
ಬಡವ ರಾತ್ರಿ ಪೂರಾ ತಣ್ಣೀರಿನಲ್ಲಿ ನಿಂತಿದ್ದನು. ಮರುದಿನ ಬಡವನನ್ನು ಅರಮನೆಗೆ ಕರೆತಂದರು. ಅಕ್ಬರ್ ಅವನನ್ನು ನೋಡಿ ಚಕಿತನಾದ.
“ನೀನು ನಿಜವಾಗಿಯೂ ಕೊಳದಲ್ಲಿ ಅದೂ ಈ ಚಳಿಗಾಲದಲ್ಲಿ ನಿಂತಿದ್ದೆಯಾ?” ಅಕ್ಬರ್ ಕೇಳಿದನು.
“ನಿಜವಾಗಿ ಸ್ವಾಮಿ, ಬೇಕಿದ್ದರೆ ನಿಮ್ಮ ಕಾವಲುಗಾರರನ್ನೆ ಕೇಳಿ'' ಎಂದ ಬಡವ.
“ಹುಜೂರ್, ಇಡೀ ರಾತ್ರಿ ನೀರಿನಲ್ಲಿ ನಿಂತಿದ್ದ ಈ ಮನುಷ್ಯ” ಎಂದು ಕಾವಲುಗಾರ ದೃಢೀಕರಿಸಿದ.
“ಓಹ್! ನೀನು ಆ ಮಂಜು ನೀರಿನಲ್ಲಿ ನಿಂತು ಸಮಯ ಹೇಗೆ ಕಳೆದೆ?” ಎಂದು ಕೇಳಿದ ಅಕ್ಟ.
“ಸ್ವಾಮಿ, ನಾನು ದೀಪದ ಕಂಬ ನೋಡುತ್ತಾ ಇಡೀ ರಾತ್ರಿ ಕಳೆದೆ.”
"ಹಾಗೊ? ಬಹುಶಃ ನೀನು ದೀಪದ ಶಾಖದಿಂದ ನೀರಿನಲ್ಲಿ ನಿಲ್ಲೋಕೆ ಸಾಧ್ಯವಾಯಿತೋ ಏನೋ? ಅದಕ್ಕೆ ರಾತ್ರಿ ಪೂರಾ ನಿಂತಿದ್ದಿ.” ರಾಜನ ಮಾತಿಗೆ ಬಡವ ಮಂಕಾದ.
ರಾಜ ಮಾತನಾಡಿ, ''ನಾನು ನಿಮಗೆ ಯಾವ ಹಣವನ್ನೂ ಕೊಡುವುದಿಲ್ಲ, ನಡಿ ಇಲ್ಲಿಂದ ಇಲ್ಲಿ ನಿಲ್ಲಬೇಡ'' ಎಂದ.
ಬಡವ ಅಸಹಾಯಕನಾದ. ನೇರ ಬೀರಬಲ್ ಬಳಿಗೆ ಬಂದು ನಡೆದುದನ್ನು ಹೇಳಿದ.
ಬೀರಬಲ್ ಅವನಿಗೆ ಸಮಾಧಾನ ಹೇಳಿ, “ಚಿಂತಿಸಬೇಡ. ನಾನು ನಿನಗೆ ಉಡುಗೊರೆಗಳನ್ನು ಕೊಡಿಸುತ್ತೇನೆ'' ಎಂದು ತಿಳಿಸಿದ. ಮರುದಿನ ರಾಜಸಭೆಗೆ ಹೋಗಲಿಲ್ಲ,
ಅಕ್ಟರ್ ಬೀರಬಲ್ ಕಾಣದುದನ್ನು ಗಮನಿಸಿ ಸೇವಕರನ್ನು ಕೇಳಿದ ಅವರೆಲ್ಲ “ಬೀರಬಲ್ ಇನ್ನೂ ಆಹಾರ ತೆಗೆದುಕೊಂಡಿಲ್ಲ. ಅದಕ್ಕೆ ಸಭೆಗೆ ಬಂದಿಲ್ಲ ಪ್ರಭು'' ಎಂದು ಹೇಳಿದರು.
ಅಕ್ಟರ್ ಬೀರಬಲ್ ಮನೆಗೆ ಸೇವಕನಿಗೆ ಹೇಳಿಕಳುಹಿಸಿದನು. ಸೇವಕ ಸ್ವಲ್ಪ ಹೊತ್ತಿನಲ್ಲಿ ಹಿಂತಿರುಗಿ,
“ಸರ್ಕಾರ್, ಬೀರಬಲ್ ಅಡಿಗೆ ತಯಾರಿಸುತ್ತಿದ್ದರು. ಅಡಿಗೆ ಮಾಡಿ ಬಂದು ಬಿಡುವರಂತೆ'' ಎಂದು ಹೇಳಿದನು. ಇನ್ನೊಂದು ಗಂಟೆ ಕಳೆಯಿತು. ಬೀರಬಲ್ ಬರಲೇ ಅಕ್ಬರ್ ಮಂತ್ರಿಗಳ ಜತೆ ಚರ್ಚಿಸಿದನು. ಅವರೆಲ್ಲರೂ ನಾವೇ ಬೀರಬಲ್ ಮನೆಗೆ ಹೋಗಿ ಬರೋಣ ಎಂದರು.
ಎಲ್ಲರೂ ಬೀರಬಲ್ ಮನೆಗೆ ಹೋದರು. ಅಲ್ಲಿ ಒಂದು ಸ್ವಾರಸ್ಯಕರ ದೃಶ್ಯ ಕಾದಿತ್ತು ಅಕ್ಬರ್ ಚಕಿತನಾದ.
ಎರಡು ಕಂಬಗಳ ನಡುವೆ ಒಂದು ಹಗ್ಗ ಬಿಗಿಯಲಾಗಿತ್ತು. ಹಗ್ಗದಿಂದ ಒಂದು ಮಣ್ಣು ಮಡಕೆ ನೇತು ಬಿಡಲಾಗಿತ್ತು ಮಡಕೆ ಭಾರಿ ಎತ್ತರದಲ್ಲಿತ್ತು ನೆಲದ ಮೇಲೆ ಬೆಂಕಿ ಇತ್ತು
“ಬೀರಬಲ್ ! ಏನು ಮಾಡ್ತಾ ಇದಿ. ಎಲಲರೂ ನಿನ್ನ ನೋಡಿ ನಗ್ತಾ ಇದ್ದಾರೆ. ನೀನು ಆಟ ಆಡಿಲ್ಲ ತಾನೇ?”
“ಪ್ರಭುಗಳೇ ! ನಾನು ಅಡಿಗೆ ತಯಾರಿಸಿ ನಂತರ ಅರಮನೆಗೆ ಬರುತ್ತೇನೆ. ಅಕ್ಕಿ ಬೇಳೆ ಬೇಯ್ತಾ ಇದೆ.”
“ಬೀರಬಲ್ ! ಸಾಕು ನಿನ್ನ ಹುಡುಗಾಟ, ಎಲ್ಲಿ ಅಡಿಗೆ?”
“ಮಡಕೆಯಲ್ಲಿ" ಮೂರ್ಖನಂತೆ ಮಾತನಾಡಬೇಡ, ಅಲ್ಲಿಗೆ ಶಾಖದ ಹೇಗೆ ಹೋಗುತ್ತೆ? ನೀನು ಅಡಿಗೆ ಯಾವಾಗ ಮುಗಿಸೋದು? ಅರಮನೆಗೆ ಯಾವಾಗ ಬರೋದು?''
ಅಡಿಗೆ ಆಗ್ತಾ ಇದೆ ಸ್ವಾಮಿ”
“ಅರೆ ! ಮಡಿಕೆ ಬೆಂಕಿಯಿಂದ ದೂರ ಇದೆ.”
“ಸ್ವಾಮಿ ! ಒಬ್ಬ ಮನುಷ್ಯ ಮಂಜಿನ ನೀರಿನಲ್ಲಿ ನಿಂತು ದೂರದ ದೀಪದ ಕಂಬ ನೋಡ್ತಾ ಶಾಖಾ ಪಡೆಯೋದಾದರೆ ನೆಲದ ಮೇಲಿರೋ ಬೆಂಕಿ, ಶಾಖ ಮೇಲಿರೋ ಮಡಕೆ ತಲುಪದೆ ಇರುತ್ತದೆಯೇ?”
ಬೀರಬಲ್ ಹೇಳಿದ್ದು ಅಕ್ಬರ್ ಅರ್ಥ ಮಾಡಿಕೊಂಡ. “ಸರಿ ಸರಿ, ಅರಮನೆಗೆ ಬಾ” ಹೇಳಿದ ಅಕ್ಟರ್.
“ಅಡಿಗೆ ಮಾಡಿದ ನಂತರ ಬಂದು ಬಿಡುತ್ತೇನೆ.”
“ನೀನು ಎಂದೂ ತಯಾರಿಸಲಾರೆ. ಬೇಗ ಹೋಗಿ ನೆನ್ನೆ ರಾತ್ರಿ ಮಂಜಿನ ನೀರಿನಲ್ಲಿ ನಿಂತಿದ್ದನಲ್ಲ ಅವನನ್ನು ಕರೆದುಕೊಂಡು ಬಾ” ಎಂದು ಹೇಳಿದ ಅಕ್ಟರ್..
ಬಡವ ಅಲ್ಲೆ ನಿಂತಿದ್ದ ರಾಜನ ಮುಂದೆ ಬಂದು ನಿಂತ ರಾಜ ಅವನಿಗೆ ಕೈ ತುಂಬ ಅವನು ಕೇಳಿದಷ್ಟು ಹಣ ಕೊಟ್ಟ
'ಹಣಕ್ಕಾಗಿ ಜನ ಏನು ಬೇಕಾದರೂ ಮಾಡುತ್ತಾರೆ' ಎಂಬ ನೀತಿಯನ್ನು ಅಕ್ಟರ್ ಒಪ್ಪಿಕೊಂಡನು.
ಬೀರಬಲ್‌ನಿಗೂ ಸಂತೋಷವಾಯಿತು.