Type Here to Get Search Results !

25+ Ganesha chaturthi wishes in kannada


Ganesha chaturthi wishes in kannada



Table of Content(toc)


ಮುನ್ನುಡಿ :

ಭಾದ್ರಪದ ಶುಕ್ಲದ ಚೌತಿಯ ದಿವಸ ಗಣೇಶೋತ್ಸವ ಅಥವಾ ಗಣಪತಿಯ ಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ. ಇದೊಂದು ಪೌರಾಣಿಕ ಹಬ್ಬ. ಈ ಹಬ್ಬವನ್ನು ಮನೆ ಮನೆಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ, ಸಾಮೂಹಿಕವಾಗಿ ಆಚರಿಸುತ್ತಾರೆ. ಇತ್ತೀಚಿನಿಂದ ಈ ಹಬ್ಬಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ. ಸಾಮೂಹಿಕವಾಗಿ ಆಚರಿಸುವ ಈ ಹಬ್ಬದಲ್ಲಿ ಬಹು ವೈಶಿಷ್ಟ್ಯತೆ ಇದೆ. ಇದರ ಸಡಗರ ಸಂಭ್ರಮಕ್ಕೆ ಹೊಸ ಕಳೆ ಬಂದಿದೆ. 

ನಮ್ಮ ಗಜಾನನ ಬರುವ ದಿನ ಅವುಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಗಣೇಶನನ್ನು ತರುತ್ತಾರೆ. ಗಣೇಶನನ್ನು ತರುವಾಗ ಊದುತ್ತಾ ಬಾರಿಸುತ್ತಾ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮಾಡುತ್ತ ತರುತ್ತಾರೆ. ಆಗ ಸುಡುಮದ್ದು ಗಳನ್ನು ಸುಡುತ್ತಾರೆ. ಒಳ್ಳೆ ವಿಜೃಂಭಣೆಯಿಂದ ಗಣೇಶನ ಮೆರವಣಿಗೆ ಸಾಗಿ ಮನೆ ಅಥವಾ ಶಾಲೆ ಕಾಲೇಜುಗಳು, ಸಾಮೂಹಿಕ ಮಂಟಪಗಳ ಮುಂದೆ ಬರಲು ಓಕಳಿ ತೆಗೆದು ಚೆಲ್ಲಿ ಗಣಪ್ಪನನ್ನು ಭಯ ಭಕ್ತಿಯಿಂದ ಒಯ್ದು ಸಿಂಗರಿಸಿದ ಮಂಟಪದಲ್ಲಿ ಕೂರಿಸುತ್ತಾರೆ. ನಂತರ ಪೂಜಿಸಿ, ಮಂಗಳಾರತಿ ಎತ್ತಿ, ಕರ್ಪೂರ ಬೆಳಗಿ ಕಾಯಿ ಒಡೆಯುತ್ತಾರೆ. ಹೋಳಿಗೆ ಮೋದಕದ ನೈವೇದ್ಯ ಮಾಡುತ್ತಾರೆ. ಅಂದು ಮನೆಯಲ್ಲಿ ಎಲ್ಲರಿಗೂ ಹೋಳಿಗೆಯ ಊಟ. ಊಟವಾದ ಮೇಲೆ ವಿಶ್ರಾಂತಿ ತೆಗೆದುಕೊಂಡು ಸಾಯಂಕಾಲ ಗಣೇಶನನ್ನು ನೋಡಲು ಊರಲ್ಲಿ ಸಾಗುತ್ತಾರೆ.

 

ಎಲ್ಲಿ ನೋಡಿದಲ್ಲಿ ಪಟಾಕಿಗಳ ಸದ್ದು ಮಕ್ಕಳ ಚೀರಾಟ ಗಣಪತಿ ನೋಡುವವರ ತಂಡಗಳು ಕಂಗೊಳಿಸುತ್ತವೆ. ಮಕ್ಕಳ ಸಂತೋಷಕ್ಕಂತೂ ಪಾರವೇ ಇಲ್ಲ. ಎಲ್ಲ ಗಣಪತಿಯ ದರ್ಶನ ಮಾಡಿದಮೇಲೆ ಪ್ರಸಾದ ವಿತರಣೆಯಾಗುತ್ತಿರುವುದೊಂದು ವಿಶೇಷ, ಸಾಮೂಹಿ ಗಣಪತಿಯು ಕೂಡುವ ಸ್ಥಳದಲ್ಲಿ ಮನರಂಜನೆ ಕಾರ್ಯಕ್ರಮಗಳು ಕೀರ್ತನೆ, ಭಜನೆ, ನಾಟಕಗಳು ನಡೆಯುತ್ತಿದ್ದವು ಇವು ಜನರಿಗೆ ಸಂತೋಷ, ಉತ್ಸಾಹಗಳನ್ನು ತರುತ್ತಿದ್ದವು.

 

ಅಂದು ರಾತ್ರಿ ಮನೆ ಮನೆಗಳಲ್ಲಿ ಶಮಂತಕ ಪುರಾಣವನ್ನು ಕೇಳುವುದು ವಾಡಿಕೆ. ಈ ಪುರಾಣ ಕೇಳುವದರಿಂದ ಬರುವ ಕಷ್ಟಗಳು ದೂರಾಗುವವೆಂದೂ ಪಾಪ ಪರಿಹಾರವಾಗುವದೆಂದೂ ವಾಡಿಕೆಯಿದೆ. ಈ ರೀತಿ ಗಣೇಶನ ಹಬ್ಬವನ್ನು ಕೆಲವರು ಮೂರು ದಿನ ಕೆಲವರು ಐದು ಅಥವಾ ಒಂಬತ್ತು ದಿವಸ, ಕೆಲವರು ಹದಿನಾಲ್ಕು ಅಥವಾ ತಿಂಗಳ ದಿವಸ, ಇನ್ನೂ ಕೆಲವರು ಒಂದು ವರ್ಷ ಪಠ್ಯಂತ ಇಟ್ಟು ಪೂಜಿಸುವರು. ಗಣೇಶನನ್ನು ಕೂರಿಸಿದ ದಿನದಿಂದ ಸುಮಾರು 14 ದಿನಗಳವರೆಗೆ ವಿವಿಧ ರೀತಿಯಲ್ಲಿ ಪೂಜಿಸಿ ನಂತರ ಗಣೇಶನನ್ನು ಬ್ಯಾಂಡು ಭಜಂತ್ರಿಗಳೊಂದಿಗೆ ಮೆರವಣಿಗೆ ಮಾಡುತ್ತ ಬುತ್ತಿಯನ್ನು ಕಟ್ಟಿ ಇಟ್ಟು ಜಲಾಶಯಗಳಿಗೆ ಕಳಿಸಿಕೊಡುವ ಪದ್ಧತಿಯಿದೆ. ಅಂದು ಆತ ಕೈಲಾಸಕ್ಕೆ ಹೋಗಿ ಈತನ ತಂದೆ ತಾಯಿಗಳಾದ ಶಿವ-ಪಾರ್ವತಿಯರಿಗೆ ಭೂಲೋಕದ ಶಿವ ಭಕ್ತರ ಕಷ್ಟ-ಸುಖಗಳನ್ನು ತಿಳಿಸುತ್ತಾನೆಂದು ಜನರ ಭಾವನೆಯಾಗಿದೆ.

 

ಪೌರಾಣಿಕ ಹಿನ್ನೆಲೆ :

ಗಣೇಶ ಪಾರ್ವತಿದೇವಿಯ ಮೈ ಮಣ್ಣಿನಿಂದ ಜನ್ಮ ತಳೆದನೆಂದೂ, ಆತನನ್ನು ಬಾಗಿಲಲ್ಲಿ ಕೂರಿಸಿ ಯಾರನ್ನೂ ಒಳಗೆ ಬಿಡ ಬೇಡವೆಂದು ಹೇಳಿ, ಜಳಕ ಮಾಡಲು ಹೋಗಿರಲು ಆಗ ಶಿವನು ಬರಲು ಅವನನ್ನು ತಡೆದನೆಂದೂ, ಶಿವನು ಸಿಟ್ಟಿನಿಂದ ಶಿರಚ್ಛೇದ ಮಾಡಿ ಒಳಗೆ ಹೋದನೆಂದೂ ಆಗ ಪಾರ್ವತಿಯು ತನ್ನ ಮಗನನ್ನು ಬದುಕಿಸಿಕೊಡಲು ಹಟ ಹಿಡಿದಳೆಂದೂ, ಅವನ ಶಿರವು ಮಾಯವಾಗಿದ್ದರಿಂದ ಆನೆಯ ಶಿರವನ್ನು ಇಟ್ಟು ಮರುಜನ್ಮಕೊಟ್ಟನೆಂದು ಕಥೆಯಿದೆ.

ಈ ಆನೆ ಮೊಗದವನನ್ನು ಯಾರು ಪ್ರೀತಿಸಬೇಕು. ಇವನಿಗೆ ವಿಶೇಷ ವರವನ್ನಿತ್ತು ಇವನು ಕೈಲಾಸದಲ್ಲಿ ಭೂಲೋಕದಲ್ಲಿ ಪೂಜೆ ಗೊಳ್ಳುವಂತೆ ಮಾಡಬೇಕೆಂದು ಹಟ ಹಿಡಿಯಲು ಅವನಿಗೆ ವಿಶೇಷ ವರವನ್ನಿತ್ತು, ಗಣ ಶ್ರೇಷ್ಠನೆಂದೂ, ವಿಘ್ನಗಳನ್ನು ದೂರ ಮಾಡವವನೆಂದೂ, ಮಂಗಳಕಾರಕನೆಂದೂ ವರವನ್ನಿತ್ತು ಯಾವದೇ ಮಂಗಳ ಕಾರಣದಲ್ಲಿ ಆತನ ಪೂಜೆಗೆ ಪ್ರಥಮ ಸ್ಥಾನಕೊಟ್ಟಿದ್ದಾನೆ. ಆದ್ದರಿಂದ ಯಾವುದೇ ಕಾರ್ಯ ಪ್ರಾರಂಭ ಮಾಡುವಾಗ ಈತನಿಗೆ ಮೊದಲ ಪೂಜೆ ಸಲ್ಲುತ್ತ ಆಗ ಈ ಶ್ಲೋಕವನ್ನು ಪಠಿಸುತ್ತಾರೆ.

 

ಶ್ರೀ ಗಜಾನನಂ ಭೂತ ಗಣಾದಿ ಸೇವಿತಂ

ಕಪಿತ್ತ ಜಂಭೂ ಪಲಸಾರ ಭಕ್ಷಿತಂ 

ಉಮಾಸುತಂ ಶೋಕವಿನಾಶ ಕಾರಣಂ 

ನಮಾಮಿ ವಿಘ್ನಶ್ವರ ಪಾದ ಪಂಕಜಂ

 

ಹೀಗೆ ಗಣೇಶನಿಗೆ ನಮ್ಮ ಜನರು ವಿಶೇಷ ಪೂಜೆ ಸಲ್ಲಿಸುವರು. ಈತನಿಗೆ ಗಣಪ, ವಿಫೇಶ, ಗಜಾನನ, ಲಂಬೋದರ, ಮೂಷಕ ವಾಹನ ಮೋದಕ ಪ್ರಿಯ, ಶುಭಕಾರಕ, ಎಂದು ಇನ್ನೂ ಅನೇಕ ಹೆಸರುಗಳಿಂದ ಕರೆಯಲ್ಪಡುವ ಈತ ನಮ್ಮೆಲ್ಲರಿಗೆ ಸುಖವ ನೀಯುವಂತನಾಗಿದ್ದಾನೆ.

 

ಗಣೇಶ ಚತುರ್ಥಿಯ ದಿವಸ ಗಣಪನನ್ನು ನೋಡದೆ ಚಂದ್ರನನ್ನು ನೋಡಿದರೆ ಅವರಿಗೆ ಒಂದು ವರ್ಷದವರೆಗೆ ಕಷ್ಟ ತಪ್ಪುವದಿಲ್ಲ ವೆಂದು ಶಾಪವಿದೆ. ಕಾರಣ ಅಂದು ಗಣೇಶನನ್ನು ನೋಡದೆ ಯಾರೂ ಚಂದ್ರನನ್ನು ನೋಡುವುದಿಲ್ಲ. ಅದಕ್ಕೆ ಒಂದು ಕಥೆಯಿದೆ. ಅದನ್ನು ಕೆಳಗೆ ವಿವರಿಸಲಾಗಿದೆ.

 

ಅಂದು ಗಣೇಶ ಚವತಿ ಗಣಪ್ಪನು ಕೈಲಾಸದಿಂದ ಭೂ ಲೋಕಕ್ಕೆ ಇಲಿಯನೇರಿ ಬರುತ್ತಾನೆ. ಭಕ್ತರ ಮನೆಗೆ ಬಂದು ಪೂಜೆ ಗೊಂಡು ಸವಿಸವಿ. ಭಕ್ಷ್ಯ, ಭೋಜಾದಿಗಳನ್ನು ಸವಿದು ಹರ್ಷಿತನಾಗಿ ಸಾಯಂಕಾಲ ಕೈಲಾಸಕ್ಕೆ ತೆರಳುವಾಗ ದಾರಿಯಲ್ಲಿ ಒಂದು ದೊಡ್ಡ ಹುತ್ತವಿತ್ತು, ಗಣಪತಿಯು ಅಲ್ಲಿಗೆ ಬರಲು ಅದರಲ್ಲಿದ್ದ ನಾಗರ ಹಾವು ಭುಸುಗುಡುತ್ತ ಹೊರಗೆ ಬರಲು ಇಲಿಯು ಬೆದರಿ ಓಡಲಾರಂಭಿಸಿತು. ಆಗ ಗಣೇಶನು ಅದರ ಮೇಲಿಂದ ಬೀಳಲು, ಅವನ ಹೊಟ್ಟೆಯಲ್ಲಿದ್ದ ಆಹಾರ ಪದಾರ್ಥಗಳು ಕೆಳಗೆ ಸೂರೆ ಯಾದವು. ಆಗ ಗಣಪ ಎದ್ದು ಸುತ್ತಲೂ ಯಾರೂ ಇಲ್ಲದ್ದನ್ನು ನೋಡಿ ಅವನ್ನೆಲ್ಲ ಬಳಿದು ಹೊಟ್ಟೆಯಲ್ಲಿ ತುಂಬಿಕೊಂಡ ಹುತ್ತದಲ್ಲಿದ್ದ ನಾಗರ ಹಾವನ್ನು ಹೊಟ್ಟೆಗೆ ಸುತ್ತಿಕೊಂಡು ಮೇಲಕ್ಕೆ ನೋಡಲು ಆಕಾಶ ದಲ್ಲಿದ್ದ ಚಂದ್ರ ಇದನ್ನೆಲ್ಲ ನೋಡಿ ನಗುತ್ತಿದ್ದನು. ಆಗ ಗಣಪತಿಗೆ ಸಿಟ್ಟು ಬಂದು ಗಣೇಶ ಚೌತಿಯ ದಿವಸ ನನ್ನನ್ನು ನೋಡದೆ ನಿನ್ನನ್ನು ಯಾರು ನೋಡುತ್ತಾರೋ ಅವರಿಗೆ ಅನಿಷ್ಟ ತಪ್ಪದು ಎಂದು ಶಾಪ ಕೊಟ್ಟು ಇಲಿ ಏರಿ ಕೈಲಾಸಕ್ಕೆ ಹೋದರೆಂದು ಗ್ರಂಥಗಳಲ್ಲಿ ಹೇಳಲ್ಪಟ್ಟಿದೆ.

 

ಇಂಥ ಗಣೇಶನ ಹಬ್ಬವನ್ನು ಪ್ರತಿವರ್ಷ ಭೂಲೋಕದ ಜನರು ಸಂಭ್ರಮದಿಂದ ಆಚರಿಸಿ ಆತನ ಪ್ರೀತಿಗೆ ಪಾತ್ರರಾಗಿ ಹರಕೆಯನ್ನು ಪಡೆಯುತ್ತಾರೆ.

 

Ganesha chaturthi wishes :

Ganesha chaturthi wishes images with text :

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ |ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವಧಾ || ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು

DOWNLOAD


ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಗಣೇಶ  ಚತುರ್ಥಿಯ ಹಾರ್ದಿಕ ಶುಭಾಶಯಗಳು




ಸರ್ವರಿಗೂ  ಗಣೇಶ  ಚತುರ್ಥಿಯ ಶುಭಾಶಯಗಳು


ನಾಡಿನ ಸಮಸ್ತ ಜನತೆಗೆ ಗಣೇಶ  ಚತುರ್ಥಿಯ ಶುಭಾಶಯಗಳು



ಎಲ್ಲಾ ಬಂಧು ಮಿತ್ರರಿಗೂ ಗಣೇಶ  ಚತುರ್ಥಿಯ  ಹಾರ್ದಿಕ ಶುಭಾಶಯಗಳು
 

ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು



DOWNLOAD


ನಿಮಗೂ ಹಾಗೂ ನಿಮ್ಮ ಪರಿವಾರದವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.



ವಿಘ್ನ ನಿವಾರಕ ಗಣೇಶ ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡಲಿ ...ನಿಮಗೂ ಹಾಗೂ ನಿಮ್ಮ ಪರಿವಾರದವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.




ಗಜಾನನಂ ಭೂತಗನಾದಿ ಸೇವಿತಂ ಕಪಿತ್ಥ  ಜಂಬೂಫಲ ಸಾರ ಭಕ್ಷಿತಂ । ಉಮಾಸುತಂ ಶೋಕವಿನಾಶ ಕಾರಣಂ || ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು



ಸರ್ವರಿಗೂ  ಗಣೇಶ  ಚತುರ್ಥಿಯ ಶುಭಾಶಯಗಳು



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad

Search for Article