Type Here to Get Search Results !

Top 30+ Buddha Quotes and wishes in kannada

Table of Content (toc)

 ಗೌತಮ ಬುದ್ಧ


ಇಂದೂ ಸಹ ಸರಳ ತತ್ವಗಳಿಂದ ಉನ್ನತ ಧ್ಯೇಯಗಳಿಂದ ಜಗತ್ತಿನ ವಿವಿಧ ಕಡೆಗಳಲ್ಲಿ ಕಂಡುಬರುವ ಬೌದ್ಧ ಧರ್ಮ ಸುಮಾರು ಎರಡು ಸಾವಿರದೈದುನೂರು ವರ್ಷಗಳ ಹಿಂದ ಆರಂಭಗೊಂಡಿತು. ಅನ್ಯ ಧರ್ಮದವರು  ತಮ್ಮ ಪ್ರಯೋಜನಕ್ಕಾಗಿ ಹಿಂಸೆ ಪ್ರಾಣಿ ಬಲಿಗಳನ್ನು ನಡೆಸಿದರು. ಆ ಸಮಯದಲ್ಲಿ ಅಹಿಂಸೆಯನ್ನು ಮುಖ್ಯ ವಾಗಿರಿಸಿಕೊಂಡ ಬೌದ್ಧ ಧರ್ಮ ಪಾಲಿಭಾಷೆಯಲ್ಲಿ ಬೋಧನೆಗೊಂಡು ಜನಮನ ತಲುಪಿತು.

ಬಾಲ್ಯ :

ನೇಪಾಳದಲ್ಲಿರುವ ಕಪಿಲವಸ್ತು ನಗರದ ಶುದ್ಧೋದನ ಮಹಾರಾಜನ ಮಗನಾಗಿ ಸಿದ್ದಾರ್ಥ ಕ್ರಿ.ಪೂ 563ರಲ್ಲಿ ಹುಟ್ಟಿದರು. ಇವರು ತಾಯಿ ಮಾಯಾದೇವಿ. ಮಗು ಹುಟ್ಟಿದಾಗ ಪುರೋಹಿತರು ಇವನು ಶ್ರೇಷ್ಠ ಚಕ್ರವರ್ತಿಯಾಗುತ್ತಾನೆ ಅಥವಾ ಶ್ರೇಷ್ಠ ಸನ್ಯಾಸಿಯಾಗುತ್ತಾನೆ ಎಂದು ತಿಳಿಸಿದರು.

ರಾಜನು ಮಗನಿಗೆ ಅರಮನೆಯಲ್ಲಿಯೇ ಎಲ್ಲ ಅನುಕೂಲತೆಗಳನ್ನು ಕಲ್ಪಿಸಿದನು. ಸನ್ಯಾಸಿಯಾಗದಂತೆ ಮಾಡುವದು ಅವನ ಉದ್ದೇಶವಾಗಿತ್ತು. ಬಿಲ್ವಿದ್ಯೆಯನ್ನು ಸಹ ಕಲಿತ ಸಿದ್ದಾರ್ಥ ಈ ಸಾಧು ಪ್ರಾಣಿ ಪಕ್ಷಿಗಳಿಗೆ ಏಕೆ ಬಾಣದಿಂದ ಹೊಡೆಯಲಿ? ಎಂದು ಬಾಣವನ್ನು ಪ್ರಯೋಗಿಸುತ್ತಿರಲಿಲ್ಲ.

ಯವ್ವನ :

ಮಗನ ಮನಸ್ಸು ಬಾಹ್ಯ ಪ್ರಪಂಚದಿಂದ ದೂರವಾದಾಗ ರಾಜನು ಯಶೋಧರಾ ಎಂಬುವಳೊಂದಿಗೆ ಮಗನ ಮದುವೆ ಮಾಡಿದನು. ರಾಹುಲ ಎಂಬ ಮಗನು ಹುಟ್ಟಿದನು. ಒಮ್ಮೆ ನಗರ ದರ್ಶನಕ್ಕಾಗಿ ಸಾರಥಿಯೊಂದಿಗೆ ಹೋದ ಸಿದ್ದಾರ್ಥ ರೋಗಿಯನ್ನು ಹೆಣವನ್ನು, ಮುದುಕನನ್ನು ನೋಡಿದನು. ಅವನ ಮನವು ಮಿಡಿದು ಹೃದಯಕರಗಿತು. ತಾನೂ ಹೀಗೆ ಮುದುಕ, ರೋಗಿ ಕೊನೆಗೆ ಹೆಣವಾಗುತ್ತೇನೆ ಎಂದು ಭಾವಿಸಿದನು.

ಮಹತ್ವದ ಘಟನೆ :

ಸುಂದರವಾಗಿ ಕಾಣುವ ಜಗತ್ತು ಶರೀರ ಹೀಗೆ ಅಂತ್ಯ ಗೊಳ್ಳುವದೇ ಎಂದು ಮರುಗಿದನು. ಎಲ್ಲ ಜನರೂ ಏಕೆ ದುಃಖದಿಂದಿದ್ದಾರೆ ? ಈ ದುಃಖಕ್ಕೆ ಅಂತ್ಯವಿಲ್ಲವೇ? ಇದಕ್ಕೆ ಕಾರಣವೇನು ? ಎಂಬ ಪ್ರಶ್ನೆಗಳು ಸಿದ್ದಾರ್ಥನನ್ನು ಬಾಧಿಸಲಾರಂಭಿಸಿದವು. ಜನನ, ಜೀವನ, ಮರಣ, ಇವುಗಳ ನಡುವಿನ ಹೋರಾಟವನ್ನು ಕಲ್ಪಿಸಿಕೊಂಡ ಸಿದ್ದಾರ್ಥ ನಡುರಾತ್ರಿಯಲ್ಲಿ ಪತ್ನಿಯ ಬಳಿಗೆ ಹೋಗಿ ಪಾದಗಳನ್ನು ಮೃದುವಾಗಿ ಚುಂಬಿಸಿ ಅರಮನೆಯಿಂದ ಹೊರ ಹೊರಟನು.

ದುಃಖ ನಿವೃತ್ತಿಯ ಮಾರ್ಗ ಹುಡುಕುತ್ತ ಪ್ರಾರ್ಥನೆ ಧ್ಯಾನಗಳನ್ನು ಮಾಡುತ್ತ ಅಲ್ಲಿ ಇಲ್ಲಿ ಅಲೆದಾಡಿ ಸಾಧು ಸಂತರನ್ನು ಬೇಟಿಯಾಗಿ ಆರು ವರ್ಷ ಕಳೆದರು. ಗಯಾದಲ್ಲಿ ಭೋಧಿವೃಕ್ಷದ ಕೆಳಗೆ ಕುಳಿತು ಸತ್ಯವನ್ನು ಅರಿಯಲೇಬೇಕೆಂದು ದೃಢ ನಿರ್ಧಾರ ಮಾಡಿದರು.

ಸಾಕ್ಷಾತ್ಕಾರದ ನಂತರ :

ಸಿದ್ದಾರ್ಥ ಬುದ್ಧನಾಗಿ ಸಂಸಾರದ ದುಃಖದ ರಹಸ್ಯವನ್ನು ಅರಿತು ವಾರಣಾಸಿಗೆ ಹೋದನು. ಸಾರಾನಾಥದಲ್ಲಿ ಪ್ರಥಮವಾಗಿ ಉಪದೇಶ ಮಾಡಿದನು. ಬುದ್ದನು ಸನ್ಯಾಸಿನಿಯಂತೆ ಇದ್ದ, ಯಶೋಧರಾಳನ್ನು ಬೇಟಿಯಾಗಿ ಸಂಘಕ್ಕೆ ಸೇರಿಸಿಕೊಂಡನು. ಮಗನಿಗೆ ಆಸ್ತಿಯನ್ನು ಕೊಡುವಾಗ ಹಳದೀ ಬಟ್ಟೆಯನ್ನು ನೀಡಿ ಸಂಘಕ್ಕೆ ಸ್ವಾಗತಿಸಿದನು.

ಆನಂದ ಬುದ್ಧನ ಪರಮಶಿಷ್ಯನು. ಬುದ್ಧನು ತನ್ನ ಎಂಬತ್ತನೇಯ ವಯಸ್ಸಿನಲ್ಲಿ ಈ ಭೂಮಿಯನ್ನು ತೊರೆದನು. ಬುದ್ಧನ ಶಿಷ್ಯರು ಧರ್ಮ ಸಮ್ಮೇಳನ ನಡೆಸಿ ಬುದ್ಧನ ಉಪದೇಶಗಳನ್ನು ಸಂಗ್ರಹಿಸಿದರು. ಆ ಸಂಗ್ರಹವನ್ನು 'ತ್ರಿಪಿಟಿಕ' ಎಂದು ಕರೆದರು. ‘ವಿನಯ ಪಿಟಕ ‘ವು ಸನ್ಯಾಸಿಗಳಿಗೆ ನಡತೆಯ ನಿಯಮ ತಿಳಿಸಿರುವದು, ಸುತ್ತಪಿಟಕವು ಆಧ್ಯಾತ್ಮಕ ಅನುಷ್ಠಾನದ ಮಾರ್ಗ ತಿಳಿಸಿದೆ. ಅಭಿಧಮ್ಮಪಿಟಕವು ಮನಶ್ಯಾಸ್ತ್ರ ಮತ್ತು ನೀತಿ ಶಾಸ್ತ್ರಗಳನ್ನು ತಿಳಿಸಿದೆ.

ಉಪನಿಷತ್‌ಗಳಲ್ಲಿ ಇದ್ದ ಸತ್ಯನ್ವೇಷಣೆಯನ್ನೇಬುದ್ಧ ಎಲ್ಲರ ದುಃಖ ನಿವೃತ್ತಿಯ ಮಾರ್ಗ ಹುಡುಕುತ್ತ ಪ್ರಾರ್ಥನೆ ಧ್ಯಾನಗಳನ್ನು ಮಾಡುತ್ತ ಅಲ್ಲಿ ಇಲ್ಲಿ ಅಲೆದಾಡಿ ಸಾಧು ಸಂತರನ್ನು ಬೇಟಿಯಾಗಿ ಆರು ವರ್ಷಕಳೆದರು. ಗಯೆಯಲ್ಲಿ ಭೋಧಿವೃಕ್ಷದ ಕೆಳಗೆ ಕುಳಿತು ಸತ್ಯವನ್ನು ಅರಿಯಲೇಬೇಕೆಂದು ದೃಢ ನಿರ್ಧಾರ ಮಾಡಿದರು.ಬೇಕೆಂದಿದ್ದಾರೆ. ಬ್ರಹ್ಮವನ್ನು, ಬ್ರಹ್ಮತ್‌ ವಿಶ್ವವನ್ನು ನಾನು ಅರಿತಿರುವೆನು.

ಮನುಷ್ಯರ ನರಳಾಟಗಳಿಗೆಲ್ಲ ಮೂಲಕಾರಣ ಆಸೆ. ಅದೇ ದುಃಖಕಾರಿ. ಇದು ಬುದ್ದನಾದ ಸಿದ್ದಾರ್ಥನ ಉಪದೇಶವಾಯಿತು. ಬುದ್ಧ ಹೇಳಿದ ಅಷ್ಟಾಂಗ ಮಾರ್ಗಗಳನ್ನನುಸರಿಸಿ ಮಾನವ ಬಯಕೆಗಳ ಬಾಧೆಯಿಂದ ದೂರವಿರಬಹುದು. ಸರಿಯಾದ ನಂಬಿಕೆ, ಆಲೋಚನೆ, ಮಾತು, ಕ್ರಿಯೆ, ಜೀವನ, ಪ್ರಯತ್ನ, ಸ್ಮರಣೆ ಹಾಗೂ ಧ್ಯಾನ ಇವೇ ಅಷ್ಟಾಂಗ ಮಾರ್ಗಗಳು.  ವೈಶಾಖ ಶುಕ್ಲ ಪೂರ್ಣಿಮೆಯಂದು ಜನಿಸಿದ ಬುದ್ಧ ಕ್ರಿ.ಪೂ. 483ರ ವೈಶಾಖ ಶುಕ್ಲ ಪೂರ್ಣಿಮೆಯಂದೇ ಕುಶಿನಗರದಲ್ಲಿ ನಿರ್ವಾಣ ಹೊಂದಿದರು. ಆತನಿಗೆ ಜ್ಞಾನೋದಯವಾದದ್ದು ವೈಶಾಖ ಶುದ್ಧ ಪೂರ್ಣಿಮೆಯಂದು. ಬುದ್ಧ ಸ್ಥಾಪಿಸಿದ ಮತ ಬೌದ್ಧಮತ ಎಂದು ಹೆಸರಾಗಿ ವಿಶ್ವದ ಪ್ರಮುಖಮತಗಳಲ್ಲಿ ಒಂದಾಗಿದೆ. ಚೀನಾ, ಶ್ರೀಲಂಕಾ, ಜಪಾನ್, ಬರ್ಮಾ ಹಾಗೂ ಇತರ ಆಗ್ನೆಯ ದೇಶಗಳಲ್ಲಿ ಬೌದ್ಧಮತ ಪ್ರಚಾರದಲ್ಲಿದೆ.

ಪ್ರಮುಖ ಬೋಧನೆಗಳು :

ಜಗತ್ತಿನಲ್ಲಿ ಹುಟ್ಟಿ ಅದನ್ನು ಅರಿತಿರುವೆನು. ನಿನಗೆ ನೀನೇ ಆಶ್ರಯನಾಗಿರು, ಬೇರೆಯವರನ್ನು ಅವಲಂಬಿಸ ಬೇಡ, ಸತ್ಯವನ್ನೇ ಆಶ್ರಯಿಸಿಕೋ'' ಎಂದು ಆನಂದನಿಗೆ ಬುದ್ಧ ತಿಳಿಸಿದರು. ಪರಮ ಶಾಂತಿಯನ್ನು ಪೂರ್ಣತೆಯನ್ನು ಹೊಂದುವದು ನಿರ್ವಾಣ ಅಥವಾ ಮೋಕ್ಷವಾಗಿದೆ. ಬುದ್ದನೆ ಇದನ್ನು ಅಂತರಿಕ ಸ್ವರ್ಗ ಸಾಮ್ರಾಜ್ಯ'ವೆಂದಿದ್ದಾರೆ. ಜಗತ್ತು ದುಃಖದಿಂದ ಕೂಡಿದೆ. ಅದಕ್ಕೆ ಕಾರಣವಿದೆ. ನಿವಾರಿಸುವ ಮಾರ್ಗವಿದೆ. ದುಃಖ ನಿವಾರಣೆಯು ಸಾಧ್ಯವಾದುದು'' ಎಂದು ನಾಲ್ಕು ಸೂತ್ರಗಳನ್ನು ತಿಳಿಸಿದನು. 

“ಜಗತ್ತು ಕ್ಷಣಿಕವಾದುದು. ಪ್ರತಿಕ್ಷಣದಲ್ಲಿಯೂ ಬದಲಾವಣೆ ಹೊಂದುವದು. ರೂಪ, ವೇದನೆ, ವಿಜ್ಞಾನ, ಸಂಸ್ಕಾರ ಮತ್ತು ಸಂಜ್ಞೆ ಅಶಾಶ್ವತ. ಜೀವನವೆಂದರೆ ಅನಿತ್ಯಗಳ ನಡುವೆ ಚೈತನ್ಯವನ್ನು ಕಂಡು ಹಿಡಿಯುವ ಪ್ರಯತ್ನವಾಗಿದೆ.

ಆಸೆಯೇ ದುಃಖಕ್ಕೆ ಮೂಲ. ಆಸೆಯನ್ನು ಬಿಡಬೇಕು. ಸಮ್ಯಕ್ ಪ್ರಜ್ಞೆಯಿಂದ ಸದಾಚಾರದಿಂದ ಕರ್ಮ ಮತ್ತು ಪುನಃ ಜನ್ಮಗಳನ್ನು ಮೀರಿದ ಅಮೃತತ್ವವನ್ನು ಹೊಂದ ಬೇಕೆಂದು ಬುದ್ಧ ಹೇಳಿದ್ದಾನೆ, ಸಮ್ಯಕ್ ಚಿಂತನೆ. ಸಮ್ಯಕ್ ಜ್ಞಾನ, ಸಮ್ಯಕ್ ಪ್ರಯತ್ನ ದಿಂದ ಸಮ್ಯಕ್ ಚಾರಿತ್ರ್ಯಉಂಟಾಗಿ ಸಮ್ಯಕ್ ಸಮಾಧಿಯಿಂದ ಬ್ರಹ್ಮಾನುಭವ ವಾಗುವದೆಂದು ಬುದ್ಧ ಹೇಳಿದ್ದಾರೆ.

ಬೌದ್ಧ ಧರ್ಮದ ವಿಕಾಸ ಕೆಲವು ವರ್ಷಗಳವರೆಗೆ ನಿರಂತರವಾಗಿ ನಡೆಯಿತು. ಎಂಟನೇಯ ಶತಮಾನದ ಹೊತ್ತಿಗೆ ಮತ್ತೆ ಸನಾತನ ಧರ್ಮವು ಜಾಗೃತವಾದರೂ ಅನೇಕ ದೇಶಗಳಲ್ಲಿ ಬುದ್ಧನ ಧರ್ಮದ ಅನುಯಾಯಿಗಳಿದ್ದಾರೆ. ಸಾಮ್ರಾಟ ಅಶೋಕ ತನ್ನ ಮಕ್ಕಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿ ಪ್ರಚಾರಮಾಡಿದನು.

ಸಾರಥಿಯಿಂದ ಪಳಗಿದ ಕುದುರೆಗಳಂತೆ ಯಾವನು ಇಂದ್ರಿಯಗಳನ್ನು ನಿಗ್ರಹಿಸಿ ಶಾಂತಿ ಹೊಂದುವನೋ, ಚಂಚಲತೆಯಿಂದ ಮುಕ್ತನಾಗುವನೋ ಅವನು ಜ್ಞಾನಿ ಅಥವಾ ದೇವತೆಯೇ ಆಗುತ್ತಾನೆ ಎಂದು ಬುದ್ಧನು ವಿಶಾಲ ಜಗತ್ತಿಗೆ ಹಿತಕರವಾದ ಮಾತುಗಳನ್ನು ಹೇಳಿದ್ದಾರೆ.



Famous quotes of buddha :


  1. 'ಮನುಷ್ಯ ಎಷ್ಟೇ ಕೆಂಪಗಿದ್ದರೂ ಅವನ ನೆರಳು ಕಪ್ಪಗೇ ಇರುತ್ತದೆ. ನಾನು ಶ್ರೇಷ್ಠ ಅನ್ನುವುದು ಆತ್ಮವಿಶ್ವಾಸ ನಾನೇ ಶ್ರೇಷ್ಠ ಎನ್ನುವುದು ಅಹಂಕಾರ."  -- ಭಗವಾನ್ ಬುದ್ಧ
  2. ಜಗತ್ತಿನ ಅತಿದೊಡ್ಡ ಪ್ರಾರ್ಥನೆಯೆಂದರೆ ತಾಳ್ಮೆ

  3. ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ. ಇಲ್ಲವಾದರೆ ನೀವು ಯಾರನ್ನೂ ಪ್ರೀತಿಸಲಾರಿರಿ.

  4. ಜಾತಕ ನೋಡಿ ನಿನ್ನ ಭವಿಷ್ಯ ನಿರ್ಧರಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ನೀನು ಮನಸ್ಸು ಮಾಡಿದರೆ ನಿನ್ನ ಭವಿಷ್ಯ ನೀನೇ ಬರೆದುಕೊಳ್ಳುವೆ.
  5. ನಿಮ್ಮ ಕೋಪಕ್ಕೆ ಶಿಕ್ಷೆ ಕೊಡದಿದ್ದರೆ ಕೋಪವೇ ನಿಮ್ಮನ್ನು ಶಿಕ್ಷಿಸುತ್ತದೆ.








  6. ನಿಮ್ಮೆಲ್ಲಾ ಒತ್ತಡಗಳಿಗೂ ನೀವು ಪ್ರತಿಕ್ರಿಯಿಸುವ ಬಗೆಯೇ ಕಾರಣ ಆದ್ದರಿಂದ ಸ್ಪಂದಿಸಲು ಕಲಿಯಿರಿ ...ಪ್ರತಿಕ್ರಿಯಿಸಬೇಡಿ.....
  7. ಚಿಂತೆ ಮಾಡಿ ಯಾಕೆ ಕೊರಗಬೇಕು ಆ ಚಿಂತೆ ಹುಟ್ಟಿಸಿದವರನ್ನು ಮರೆತು ನಾವು ಮುಂದೆ ನಡೆಯಬೇಕು
  8. ನಾನು ನನ್ನ ಯೋಚನೆಗಳನ್ನು ಬದಲಾಯಿಸಿದೆ ಆ ಯೋಚನೆಗಳೇ ನನ್ನ ಜೀವನವನ್ನು ಬದಲಾಯಿಸಿತು - ಭಗವಾನ್ ಬುದ್ಧ
  9. ನಿಮ್ಮ ಆಲೋಚನೆಗಳು ಎಲ್ಲವೂ ಸರಿಯಾಗಿವೆ ಎಂದು ನೀವು ನಂಬಿ ಕೊಳ್ಳಬೇಡಿ ನಿಮ್ಮ ಮನಸ್ಸು ನಿಮ್ಮನ್ನು ವಂಚಿಸಿದಷ್ಟು ಇನ್ಯಾರು ವಂಚಿಸಲಾರರು.
  10. ನಿಮ್ಮ ಮನಸ್ಸು ಒಂದು ಅದ್ಭುತವಾದಂತಹ ವಿಚಾರ ಅದರಲ್ಲಿ ಸಕಾರಾತ್ಮಕವಾದಂತಹ ಆಲೋಚನೆಗಳನ್ನು ತುಂಬಿ ಆಗ ನಿಮ್ಮ ಜೀವನದಲ್ಲಿ ಬದಲಾವಣೆ ಪ್ರಾರಂಭವಾಗುತ್ತದೆ.
  11. ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ - ಭಗವಾನ್ ಬುದ್ಧ
  12. ಮನಶ್ಯಾಂತಿಯನ್ನು ಯಾರಿಂದಲೂ ಕೇಳಿ ಪಡೆಯಲಾಗುವುದಿಲ್ಲ ಅದು ನಮ್ಮೊಳಗೇ ಇದೆ.
  13. ಸಂತೋಷವನ್ನು ಹುಡುಕಲು ಯಾವುದೇ ದಾರಿಗಳಿಲ್ಲ ಏಕೆಂದರೆ ಸಂತೋಷವೇ ಒಂದು ದಾರಿ.
  14. ದ್ವೇಷವನ್ನು ದ್ವೇಷದಿಂದ ಸೋಲಿಸಲು ಎಂದಿಗೂ ಸಾಧ್ಯವಿಲ್ಲ ಆದರೆ ಅದನ್ನು ಪ್ರೀತಿಯಿಂದ ಗೆಲ್ಲಬಹುದು ,ಇದುವೇ ಸನಾತನ ನಿಯಮ.
  15. ಸೌಂದರ್ಯ ನೋಟವನ್ನು ಆಕರ್ಷಿಸುತ್ತದೆ ಆದರೆ ನಡತೆ ಹೃದಯವನ್ನು ಆಕರ್ಷಿಸುತ್ತದೆ.
  16. ನಿಮ್ಮ ನಕಾರಾತ್ಮಕ ಯೋಚನೆಗಳು ನಿಮ್ಮ ಜೀವನಕ್ಕೆ ಮಾರಕ ವಾದಂತಹ ಅಂಶ.
  17. ಕೆಲವೊಮ್ಮೆ ಒಂದು ಅಪ್ಪುಗೆಯು ಎಂತಹ ಮನಸ್ತಾಪವನ್ನು ದೂರಮಾಡಿ ಬಿಡುವುದು.
  18. ಅಹಂ ಎಂದಿಗೂ ಸತ್ಯವನ್ನು ಸ್ವೀಕರಿಸುವುದಿಲ್ಲ
  19. ನೀವು ಇನ್ನೊಬ್ಬರಿಗೆ ಮಾಡಿದ ನೋವುಗಳು ಅರ್ಥವಾಗುವುದು ನಿಮಗೆ ಆ ನೋವು ಒದಗಿದಾಗ ಮಾತ್ರ.
  20. ಬಾಯಿಯನ್ನು ತೆರೆಯುವುದಕ್ಕೆ ಮುನ್ನ ನಿಮ್ಮ ಮನಸ್ಸನ್ನು ತೆರೆಯಿರಿ.
  21. ಸಕಾರಾತ್ಮಕ ಯೋಚನೆ ಅವಕಾಶಗಳನ್ನು ಸೃಷ್ಟಿ ಮಾಡುತ್ತದೆ ಅಂತೆಯೇ ನಕಾರಾತ್ಮಕ ಯೋಚನೆ ತಪ್ಪುಗಳನ್ನು ಸೃಷ್ಟಿಮಾಡುತ್ತದೆ
  22. ಪ್ರೀತಿ ಇರುವುದು ಎರಡು ದೇಹಗಳ ನಡುವೆ ಅಲ್ಲ ಅದು ಎರಡು ಹೃದಯಗಳ ನಡುವೆ
  23. ಕರುಣೆಯೆಂಬ ಭಾಷೆಯನ್ನು ಕುರುಡನು ಕಾಣಬಲ್ಲ ಕಿವುಡನೂ ಕೇಳಬಲ್ಲ.
  24. ಪ್ರೇಮ ಪರಿಪೂರ್ಣವಾಗಿರಬೇಕಿಲ್ಲ ಆದರೆ ಅದು ನಿಜವಾಗಿ ಇರಬೇಕಷ್ಟೆ.
  25. ನೀವು ಪ್ರಯತ್ನಿಸುತ್ತಿದ್ದೀರಿ ಎಂಬುದಕ್ಕೆ ನಿಮ್ಮ ತಪ್ಪುಗಳೇ ದಾಖಲೆ.
  26. ಜೀವನದಲ್ಲಿ ಅತ್ಯಂತ ಮಹತ್ವದ ಘಟನೆಗಳು ಪೂರ್ವಗ್ರಹವಿಲ್ಲದೆ ನಡೆಯುತ್ತದೆ
  27. ಯಾರು ಕಷ್ಟದಲ್ಲಿದ್ದಾರೆ ಅವರಿಗೆ ಒಂದೇ ಒಂದು ಮಾತು ಇದು ಕ್ಷಣಿಕ
  28. ಬೇರೆಯವರಿಗೆ ಸಹಾಯ ಮಾಡಿ ಅದರ ಫಲ ತಿರುಗಿ ಬರುತ್ತದೆ.
  29. ನೀವು ಶ್ರೀಮಂತ ಮನೆತನದಿಂದ ಬಂದಿಲ್ಲ ವಾಗಿದ್ದರೆ ಶ್ರೀಮಂತ ಮನೆತನವು ನಿಮ್ಮಿಂದ ಪ್ರಾರಂಭವಾಗಲಿ
  30. ಭಾವನೆಗಳು ಪ್ರವಾಸಿಗರ ಹಾಗೆ ಬರುತ್ತದೆ ಹೋಗುತ್ತದೆ
  31. ಅತ್ಯಂತ ಬಲಿಷ್ಠ ವಾದಂತಹ ಯೋಧರು ತಾಳ್ಮೆ ಮತ್ತು ಸಮಯ
  32. ಬಿಟ್ಟುಕೊಡಬೇಡಿ ಪ್ರಾರಂಭ ಯಾವತ್ತು ಅತ್ಯಂತ ಕಠಿಣವಾಗಿರುತ್ತದೆ
  33. ಅತಿಯಾಗಿ ಯೋಚನೆ ಅತೃಪ್ತಿಗೆ ದೊಡ್ಡ ಕಾರಣ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad

Search for Article