Kavanagalu in kannada

1:
ಜವಾಬ್ದಾರಿಗಳ ಹೊರೆ ಹೊತ್ತವನಿಗೆ
ತೊಂದರೆಗಳ ಬರೆ ಬೀಳುವುದು ಸಹಜ
ಅಡೆತಡೆಗಳಲ್ಲಿಯೇ ಹೊಸತು ಕಲಿತು
ಗೆಲುವಿನ ಸೇರಬೇಕೇ ಹೊರತು
ತೊಂದರೆಗಳಿಗೆ ಹೆದರಿ ಸೋಲು ಒಪ್ಪಿಕೊಳ್ಳಬಾರದು
" ಇದನ್ನು ನೀ ತಿಳಿಯೋ ಮನುಜ"
2:
ದೇವರು ಎಲ್ಲಿದ್ದಾನೆ ಎಂದು ಕೇಳುವವರಿಗೆ ಒಂದು ಪ್ರಶ್ನೆ?
ನಿಮ್ಮ ಬದುಕಿಗೊಂದು ಭವಿಷ್ಯ ರೂಪಿಸಲು ಹೊರಟ ತಂದೆ ತಾಯಿಯರಲ್ಲಿ ದೇವರು ಕಾಣಲಿಲ್ಲವೇ?
ಆಪತ್ತಿಗೆ ಹೆಗಲುಕೊಡುವ ನಿಮ್ಮ ಸ್ನೇಹಿತನಲ್ಲಿ ದೇವರು ಕಾಣಲಿಲ್ಲವೇ?
ಸಂತೋಷವನ್ನು ನಿಮಗಾಗಿ ಧಾರೆಯೆರೆದ ಸಂಗಾತಿಯಲ್ಲಿ ದೇವರು ಕಾಣಲಿಲ್ಲವೇ?
ಪ್ರತಿ ತಿರುವಿಗೊಮ್ಮೆ ಪಾಠ ಹೇಳಿಕೊಟ್ಟ ಕಾಲಚಕ್ರದಲ್ಲಿ ದೇವರು ಕಾಣಲಿಲ್ಲವೇ?

3:
ಜೀವನದ ಹಾದಿಯಲ್ಲಿ ಕನಸುಗಳ ಮೂಟೆ ಹೊತ್ತಿರುವ
ನಾವಿಕ ನಾನಾಗಿರುವೆ
ಆ ಕನಸುಗಳಿಗೆ ನವ ಚೈತನ್ಯ ತುಂಬುವ ದೇವತೆ
ನೀನಾಗಿರುವೆ
ನನ್ನ ನೋವು ನಲಿವಿನಲ್ಲಿ ಕೈಬಿಡದೆ ನೀ ಜೊತೆಯಾಗಿರುವೆ
ಗೆಳತಿ ನಿನ್ನ ಕೊನೆ ಕ್ಷಣದ ವರೆಗೂ ನಿನ್ನ ಜೀವಕ್ಕೆ
ಕಾವಲಾಗಿರುವೆ
ಹೇ ದೇವರೇ ಅವಳ ಮೊಗದಿ ನಗು ಚಿರಾಯುವಾಗಲಿ
ಅವಳ ನಗುವಿನಲ್ಲಿ ನನ್ನ ಉಸಿರಿಗೆ ಕೊನೆಯಿರಲಿ…

Sharechat kannada kavanagalu
1:
ನೀನೆಷ್ಟೇ ನನ್ನ ಹತ್ತಿರ ಸುಳಿದರೂ
ನೀನೊಂದು ಸ್ವಪ್ನದ ಮರೀಚಿಕೆ
ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ
ನನ್ನ ಕನಸಲ್ಲ, ನೀನು ಬರೀ ಕನವರಿಕೆ
ಬಿಗಿದಪ್ಪಿ ಹಣೆಗೆ ಮುತ್ತಿಟ್ಟರೂ
ಜಾಗ ಖಾಲಿ ಇಲ್ಲ ಹೃದಯ ಸಮೀಕರಣಕ್ಕೆ
2:
ನಗುವ ಹೂವು ಕಂಡೆ ನಾನೊಂದು
ಆ ನಗುವಿಗೆ ಶರಣಾದೆ ಹುಣ್ಣಿಮೆಯ ಚಂದಿರನೆಂದು
ಹೂ ನಗುವಿನ ಪ್ರಭಾವಕ್ಕೆ ಹೃದಯವೇ ಹಣ್ಣಾಗಿದೆ ಇಂದು
ಚೆಲುವೆಯೇ ನಿನ್ನ ನೋಡಿದೆ ಪರಿಪರಿಯಾಗಿ ಹೂವೆಂದು
ಪರಿಮಳ ಬೀರುವ ಹೂವು ನೀನೆಂದು
ನಗುವೆ ನಿನ್ನ ಚಿನ್ನಾಭರಣ
ನಗುತಿರಲು ನೀನು ನನ್ನ ಬಾಳ ಬೆಳಗುವ ಹೊಂಗಿರಣ…
3:
ಎತ್ತ ನೋಡಿದರು ಇಲ್ಲ ನಿನ್ನಂತೆ ಇನ್ನೊಬ್ಬಳು
ನಿನ್ನ ಚೆಲುವಿಗೆ ಸರಿಸಾಟಿ ಯಾರಿಲ್ಲ ಸ್ಪರ್ಧಿಸಲು
ಕಣ್ಣಲ್ಲೇ ಕೊಳ್ಳುವೆ ನೀನು ಮೌನದಲ್ಲೇ ಮಾತಾಡುವೆ ನೀನು
ಕಣ್ಣು ಮುಚ್ಚಿ ನಿಂತರೆ ಸಾಕು ಕಣ್ಣೆದುರಿಗೆ ಬರುವೆ ನೀನು
ಹೃದಯದ ಹಂದರ ಸುಂದರ ಮಂದಿರದಲ್ಲಿ ನಿನ್ನದೇ ಪ್ರತಿಬಿಂಬ
ಕಾಣದ ಲೋಕದ ಮನದರಸಿ ನೀನೇ ಈ ಹೃದಯದ ತುಂಬಾ ತುಂಬಾ
ಮನದಾಳದ ಮಾತನ್ನು ಮನಬಿಚ್ಚಿ ಹೇಳುವೆ ಆಲಿಸುವೆಯ
ನನಗಿಂತ ಹೆಜ್ಜೆ ಪ್ರೀತಿಸುವೆ ನಿನ್ನ ನೀ ನನ್ನ ಪ್ರೀತಿಸುವೆಯಾ ??
ನೀ ನನ್ನ ಪ್ರೀತಿಸುವೆಯಾ?
Kannada kavanagalu love
1:
ಕನ್ನಡದ ಹುಡುಗಿ ನಮ್ಮ ಸೌಪರ್ಣಿಕ
ಇವರಾಡುವ ಕನ್ನಡ ಮನಮೋಹಕ
ಇವಳ ಹಣೆಯ ಮೇಲಿದೆ ಕನ್ನಡದ ತಿಲಕ
ಇವಳೊಂದು ಅಪ್ಪಟ ಕನಕ
ಇವಳ ಸೌಂದರ್ಯ ನೋಡಿ ನಾನಾದೆ ಪುಳಕ
ಇವಳಿಗೆ ನನ್ನ ಈ ಕವಿತೆ ಸಮರ್ಪಕ

2:
ಪ್ರೀತಿ ಒಂದು ಏಕಾಭಿನಯ ಪಾತ್ರ ಇದ್ದಂಗೆ,
ಬಣ್ಣ ಹಚ್ಚಿ ನಾಟಕ ಆಡಿಸೋರೆ ಒಬ್ಬರು,
ಮನಬಿಚ್ಚಿ ನಾಟಕವನ್ನು ನೋಡೋರೆ ಇನ್ನೊಬ್ಬರು,
ನಾಟಕ ಆಡಿದಷ್ಟು ಚಪ್ಪಾಳೆ ಸದ್ದು,
ನಾಟಕ ನಿಂತರೆ ಹೊಸ ನಾಟಕ ಮತ್ತೆ ಶುರು…

3:
ಇಬ್ಬರು ಖುಷಿಯಾಗಿದ್ದರೆ ಪ್ರೀತಿಯದು ಜೇನಿನ ಹಾಲು
ಇಬ್ಬರಲ್ಲಿ ಒಬ್ಬರು ಖುಷಿ ಇಲ್ಲದ ಪ್ರೀತಿಯದು ವಿಷದ ಹಾಲು
ಒಬ್ಬರನ್ನೊಬ್ಬರು ದ್ವೇಷಿಸಿದರೆ ಪ್ರೀತಿ ಯಾವಾಗಲೂ ವಿಷವೇ
ಅಹಂಕಾರ , ದ್ವೇಷ ಬಿಟ್ಟು ನೋಡು ವಿಷಕರ ಪ್ರೀತಿಯು ಕೂಡ ಅಮೃತ ವಾಗುತ್ತದೆ…

4:
ಸಂಬಂಧಗಳನ್ನು ನಾಶ ಮಾಡಬಹುದಾದ ಶಕ್ತಿ ದ್ವೇಷಕ್ಕೆ ಇದ್ದರೆ
ಅನುಬಂಧಗಳನ್ನು ಹೆಣೆಯುತ್ತ ದ್ವೇಷವನ್ನು ನಾಶ
ಮಾಡಬಹುದಾದ ಅಗಾಧ ಶಕ್ತಿ ಪ್ರೀತಿಗೆ ಇದೆ
ಪ್ರೀತಿ ಜಗದ ನಿತ್ಯತೆ
ಇದುವೇ ಬದುಕಿನ ಸತ್ಯತೆ…
5:
ರಂಗೇರಿದ ಹಾಗಿದೆ ತಂಗಾಳಿ
ನಿನ್ನ ಮುಂಗುರುಳ ತಾಕಿ
ಚೆಲುವೇರಿದ ಹಾಗಿದೆ ರಂಗೋಲಿ ನಿನ್ನ ಬೆರಳು ಸೋಕಿ
ಬೆರಗಾಗಿದ ಹಾಗಿದೆ ನನ್ನೆದೆಯ ಬಡಿತ
ನಿನ್ನ ಹೆಜ್ಜೆ ತಾಳ ಕುಲುಕಿ
ಮದವೇರಿದ ಹಾಗಿದೆ ನನ್ನ ಪ್ರಣಯ ಅಂತರಾಳ ಉಕ್ಕಿ

Kannada kavanagalu friendship
Friendship kannada kavanagalu1:
ಹೈಸ್ಕೂಲಿನಲ್ಲಿದ್ದಾಗ ಕಾಲೇಜು ಜೀವನ
ಕನಸಾಗಿರುತ್ತೆ
ಕಾಲೇಜಿನಲ್ಲಿ ಓದುತ್ತಿದ್ದಾಗ ಹೈಸ್ಕೂಲು ಜೀವನ
ಕನವರಿಕೆ ಆಗಿರುತ್ತೆ

Life kannada kavanagalu
1:
ನಿನ್ನ ಬಗ್ಗೆ ನೀನೆ ಪ್ರೀತಿ ವ್ಯಕ್ತ ಪಡಿಸಿ ಕೊಳ್ಳಬೇಕು
ನಿನ್ನ ಬಗ್ಗೆ ನೀನೇ ಸ್ನೇಹದ ತೋರಬೇಕು
ಅಂದಾಗ ಮಾತ್ರ ನೀನು ನೀನಾಗಿ ಉಳಿಯಲು
ಸಾಧ್ಯವಾಗುತ್ತದೆ
ಇಲ್ಲವೆಂದರೆ ಪರರಿಗೆ ಪರಮ ಸೇವೆಗೈಯುವ
ಗುಲಾಮನಾಗಿ ಬಾಳಬೇಕಾಗುತ್ತದೆ
2:
ಮನುಷ್ಯ ಅಸಹಾಯಕನಾದಾಗ ದೇವರ ಮೊರೆ
ಹೋಗುವುದು ಸರ್ವೇ ಸಾಮಾನ್ಯ
ಸಹಾಯ ಕೇಳಿ ಬಂದವನ ಜಾತಿಧರ್ಮ ಕುಲವನ್ನು
ನೋಡದೆ ಸಹಾಯ ನೀಡುವವನೇ ವಿಶ್ವಮಾನ್ಯ
3:
ನಿನ್ನ ಗುರಿ ಸಾಧಿಸಲು
ಕಷ್ಟಪಡುತ್ತಿರು
ಶಿಸ್ತಿನಿಂದ ಇರು
ತಾಳ್ಮೆಯಿಂದ ಇರು
ನಿನ್ನ ಸಮಯ ಬರುವತನಕ ಕಾಯುತ್ತಿರು
" ಸಾಧನೆ ನಿನ್ನ ಕೈ ಹಿಡಿಯುತ್ತೆ ಸಾಹಸ ನಿನ್ನ ಪ್ರವೃತ್ತಿ ಆಗುತ್ತೆ..."

4:
ಅರಸನಾಗುವ ತನಕ ಆಳಾಗಿ ದುಡಿ
ಅರಸನಾದ ಮೇಲೆ ಇದ್ದೇ ಇರುತ್ತೆ
ಸೈನ್ಯ ಸಾಮಂತ ದೊರೆಗಳ ದಂಡು…

5:
ಜೀವನ ಎಂಬುದು ಪರೀಕ್ಷೆ ಇದ್ದ ಹಾಗೆ
ಉತ್ತೀರ್ಣರಾಗಲು ತೋರಿಸಬೇಕು ಬುದ್ಧಿವಂತಿಕೆ
ರಾಜಮರ್ಯಾದೆ ಪಡೆದು ಸ್ವರ್ಗ ಅನುಭವಿಸುತ್ತಿಯ
ರಾಜನಂತೆ....
ಇಲ್ಲ ಮೂರ್ಖತನ ತೋರಿ ಅನುತ್ತೀರ್ಣವಾದರೆ
ಜೀವಂತ ಇದ್ದರೂ ನರಕ ಅನುಭವಿಸುತ್ತಿದೆ ಬಿಕ್ಷುಕ ನಂತೆ
ನೀ ನಡೆಯುವ ದಾರಿ ಸ್ವರ್ಗದ ಕಡೆಯೋ ? ನರಕದ ಕಡೆಯೋ ?
ನಿನ್ನ ಭವಿಷ್ಯ ನಿನ್ನ ಕೈಯಲ್ಲಿದೆ…
Feeling kannada kavanagalu
1:
ಪ್ರಾಸಗಳ ಲೀಲಾಜಾಲ ಹುಡುಗಿ
ಬೆಸೆಯುವ ಭಾವ ತದುಕಿ
ಹೊಸೆಯುವ ಕಲ್ಪನೆಗೆ ಸಿಲುಕಿ
ನಿಗೂಢ ತಾತ್ಪರ್ಯ ಕೆಣಕಿ
ಹೊರಟೆ ಕವಿತೆಯ ಬೆನ್ನಟ್ಟಿ
ನನ್ನನ್ನು ಹುಚ್ಚನೆಂದರು , ಮೂರ್ಖನೆಂದರು..
ದಾರಿ ತಪ್ಪಿದವನೆಂದು ಬೀಗಿದರು
ಜಗದ ಬಹುತೇಕ ಮೂರ್ಖರು…

2:
ನನ್ನ ಮೌನದ ಗರಡಿಯಲ್ಲಿ ಹಲವು ಮಾತುಗಳಿವೆ
ಅದನ್ನು ನಾ ಹೇಳಲಾರೆ…
ಅರ್ಥವಾಗದು ನಾ ತಿಳಿ ಹೇಳಿದರೆ ನಿನಗದು…
ಮೌನದ ಪರಿಭಾಷೆ ಆಹಾ ! ಹದವೆನಿಸಿದೆ ನನಗದು…

3:
ಕವನವೊಂದನ್ನು ನಾ ಬರೆಯುವೆ ಮನದಾಳದ
ಅಡವಿಯಲ್ಲಿ ಕುಳಿತು
ಅಂದವಾದ ನಿನ್ನ ಅನುರಾಗದ ಕುರಿತು
ಅಂತರಾಳದ ಭಾವನೆಗಳ ಅರಿತು
ಹೊರಜಗತ್ತಿನ ಜ್ಞಾನವನ್ನೇ ಮರೆತು
4:
ಬಾಳ ದೋಣಿ ಸಾಗುತ್ತಿದೆ
ಅವಳೊಂದು ತೀರ
ನಾನೊಂದು ತೀರ

Good night kannada kavanagalu
1:
ಮಾತು ಮಿತವಾಗಿರಲಿ
ಮೌನ ಹಿತವಾಗಿರಲಿ
ಪ್ರೀತಿ, ವಿಶ್ವಾಸ, ನಂಬಿಕೆಗೆ ಕೊರತೆ ಇರದಿರಲಿ…
ಶುಭ ರಾತ್ರಿ

2:
Kannada love feeling kavanagalu
1:
ಧ್ವನಿಯಲ್ಲಿ ಕೂಗಿದರು ನನ್ನ ಹೆಸರ ಜಾಲ
ಪ್ರತಿಧ್ವನಿಸಿತು ನನ್ನ ಜಗದ ತುಂಬೆಲ್ಲ…
2:
ಹತ್ತಿರದಿಂದ ಬಲ್ಲೆನು ದೂರ ನಿಂತ ನಿನ್ನ ಭಾವನೆ
ಹೃದಯಕ್ಕೆ ಬೇನೆ ಪಡೆದುಕೊಳ್ಳುತ್ತಿದೆ ಒಂದೇ ಸಮನೆ
ದೂರ ದೂರ ನಿಲ್ಲಬಹುದೇ ನೀನು?
ಹತ್ತಿರ ಬರದೆ ಇರಬಹುದೇ ನಾನು?
3:
ಅತಿಯಾದ ಸಲುಗೆ, ಪ್ರೀತಿ ಮತ್ತು ವಿಶ್ವಾಸ
ನಾವು ಪ್ರೀತಿಸುವವರಿಗೆ ಭಾರವೆನಿಸಿದಾಗ ಮಾತ್ರ
ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ…
4:
ತಿಳಿಯದೆ ನಾ ನಿನ್ನ ಅರಿಯದೆ
ನನ್ನ ಹೃದಯವ ಮಿಸಲಿಟ್ಟೆ ನಿನಗಾಗಿ
ಪ್ರೀತಿಯ ಉಡುಗೊರೆಯಾಗಿ ಕಷ್ಟದ ದಿನಗಳು ಕೊಟ್ಟೆ ನನಗಾಗಿ
ನನ್ನ ಹೃದಯ ನಿಲ್ಲಿಸಿ, ನೀ ಬಿಡಲಿಲ್ಲ ನಿಟ್ಟುಸಿರ,
ಏಕಾಂತವು ನನ್ನ ಸ್ವಂತಿಕೆ ಎನ್ನುವ ಹಾಗೆ ನೊಂದೆ ನಾ
ಏಕಾಂಗಿಯಾಗಿ
ಹೃದಯಕ್ಕೆ ದಾಳಿ ಮಾಡಿದೆ ನೀ ಕೆಂಡವಾಗಿ
ನನ್ನ ಪ್ರೀತಿ ಕರಗಿ ಹೋಗಿದೆ ಇಂದು ಇಬ್ಬನಿಯಾಗಿ
Kannada feeling kavanagalu
1:
ವಿದಾಯ ಹೇಳುವ ಮನಸ್ಸಿಗೆ ತೋಚಿದೆ , ಅರ್ಥೈಸಿದೆ
ಹೃದಯಕ್ಕೆ ನೆನಪುಗಳ ಭಾರ
ಮನಸ್ಸಿಗೆ ಭಾವನೆಗಳ ಭಾರ ಎಂದು…

2:
ನೀ ಮುಗುಳು ನಗಲು , ಸರಿಗಮ ಸ್ವರಗಳ ಸಾಹಿತ್ಯ
ನಿನ್ನ ಮಂದಹಾಸ ಬೀರಲು , ಮಧುರ ಪದಗಳ ಸಾಂಗತ್ಯ
ನೀ ಬರುವ ದಾರಿಗೆ ನಾ ಕಾಯ್ದಿರಲು
ಹೂವಂತ ಚೆಲುವೆ ನೀನು ನಾಚಲು, ನನ್ನ ಖುಷಿಗೆ ಪಾರವೇ ಇಲ್ಲ ಆದಿ- ಅಂತ್ಯ.....
3:
ನಾ ಬರೆದೆನು ನಿನಗಾಗಿ ಸುಂದರ ಕವನ
ಬರೆದ ಕವನಗಳಿಗೆ ಆದೆ ನೀ ಸಂಕಲನ
ನನ್ನ ಪ್ರತಿ ಪದಗಳ ಸಾಲಿನಲ್ಲಿ ನೀನೆ ತುಂಬಿ ಕಾಂಚನ
ನನ್ನ ಹೃದಯ , ಮನಸ್ಸಿಗೆ ನೀನೆ ಆಗಿರುವೆ ಸಿಹಿ ಸಿಂಚನ
ಇರಲಾರೆನು ನಿನ್ನ ಬಗ್ಗೆ ಕನಸು ಕಾಣದೆ ಪ್ರತಿದಿನ
ನಿನ್ನ ನೆನೆದು ನನ್ನ ಪ್ರೀತಿಗೆ ಕಾಯುವೆನು ಈ ಜೀವನ
4:
ನೀನಾಗಿರುವೆ ಗೆಳೆಯ ಸದಾ ಈ ಮನಕೆ ಉಸಿರು
ಈ ಹೃದಯದ ತುಂಬೆಲ್ಲ ಸರಿ ನಿನ್ನದೇ ಹೆಸರು
ಹೇಗೆ ಮರೆಯಲಿ ನಿನ್ನ ಈ ಪ್ರೀತಿಯ
ನೆನೆದು ಕೊರಗುತ್ತಿದೆ ನಿನ್ನ ನೆನಪುಗಳ ನನ್ನ ಹೃದಯ

Kannada kavanagalu about life
1:
ನೊಂದ ಹೃದಯ ನೋವಿನಲ್ಲಿ ಬಳಲಿ
ಸಾವೊಂದೇ ಪಲಿಹಾರವೆಂದು ತಲೆಯಲ್ಲಿ
ಉದ್ವೇಗ ತಾರಕಕ್ಕೇರಿ ಆತ್ಮದ ಹತ್ಯೆಗೆ ಕದಲಿ
ಹೆತ್ತ ತಾಯ್ತಂದೆಯರ ಗೋಳು ತಾನಿರದ ಘಳಿಗೆಯಲ್ಲಿ
ಚಿಂತಿಸಿ ಚಿಂತಿಸಿ ಮನವದು ಪರಿವರ್ತನೆಗೊಂಡಿದೆ
ಬದುಕಿದ್ದೆ ಏನನ್ನಾದರೂ ಸಾಧಿಸುವ ಚಲ ಹೊತ್ತಿದೆ...

2:
ಹೃದಯ ನೀ ಮುಗ್ಧನಾಗಿ ಹಿಂದೆ ಮುಂದೆ ತಿಳಿಯದೆ
ಅರೆಕ್ಷಣದಲ್ಲಿ ಯಾರನ್ನಾದರೂ ನಂಬಿಬಿಡುವ
ಕೊನೆಗೆ ಮೋಸಹೋಗಿ ಮನಸ್ಸಿಗೆ ಏಕೆ ನೋವು ಕೊಡುವೆ

3:
ಪದೇ ಪದೇ ತಪ್ಪು ಮಾಡುವವರನ್ನು ಕ್ಷಮಿಸಬಹುದು
ಒಂದು ಸಲ ಒಡೆದ ಕನ್ನಡಿಯ ಚೂರುಗಳನ್ನು ಮತ್ತು ಕೂಡಿಸಲು ಸಾಧ್ಯನಾ ?
ನಂಬಿಕೆಯು ಕೂಡ ಹಾಗೆ...
4:
ಪ್ರತಿಯೊಂದಕ್ಕೂ ಪ್ರತಿಕ್ರಿಯೆ ಕೊಡುವ ಖಯಾಲಿ ಬೇಡ ಮಗುವೆ
ಕೆಲವು ಸಲ ಮೂಕಪ್ರೇಕ್ಷಕರಾಗುವುದು ಕಲಿ ಮನವೇ
ಅಂದಾಗಲೇ ತಿಳಿಯುವುದು ಯಾವುದು ಹಾಲು ಯಾವುದು ನೀರು ಅಂತ ಕೊನೆಗೆ..

5:
ನಿನ್ನೆ-ನಾಳೆ ಎಲ್ಲಾ ಮರೆಯಬೇಕು ಇಂದಿಗೆ
ಖುಷಿಯಾಗಿ ಬದುಕಬೇಕು
ವರ್ತಮಾನದಲ್ಲಿ ಇದೇ ಭವಿಷ್ಯ
ಇದನ್ನು ನೀನು ಅರ್ಥ ಮಾಡಿಕೊ ಮನುಷ್ಯ

Kannada kavanagalu about Smile
1:
ಮನದಲ್ಲಿ ಎಷ್ಟೇ ಇದ್ದರೂ ಭಾವನೆಗಳ ಬೇಗೇ
ಮರೆಯಾಗದಿರಲಿ ನಿನ್ನ ಮುಖದಲ್ಲಿ ಎಂದಿಗೂ ಆ ಕಿರುನಗೆ
ನಿನ್ನ ಅಣಕಿಸಿಯಾದರೂ ಒಮ್ಮೆ ನಕ್ಕುಬಿಡು
ನೋಡಬೇಕು ಆ ನಿನ್ನ ಮುಗುಳುನಗೆ…

2:
ಎಲ್ಲರ ಜೊತೆ ನೀ ಸದಾ ಹೃದಯಬಿಚ್ಚಿ ನಗುತ್ತಿರು…
ಆದರೆ ಯಾರನ್ನು ಮನಸ್ಸಾರೆ ಎಂದೆಂದಿಗೂ ನಂಬದಿರು…

3:
ನಿನ್ನ ಮೊಗದ ಮೇಲೆ ಸದಾ ನೋಡಲು ಮುಗುಳ್ನಗೆ
ದೂರ ತಳ್ಳಿರುವೆ ಅಸಹಾಕನಾಗಿ ನನ್ನ ನಗೆ
ದೂರವಿದ್ದುಕೊಂಡೆ ಕಲಿಯಿತ್ತಿರುವೆ ಕಾಲದ ಬೇಗೆ.
Kannada kavanagalu about Success
1:
ನಿನ್ನ ದಾರಿ ಬೇರೆಯವರಿಗಿಂತ ವಿಭಿನ್ನವಾಗಿದ್ದರೂ ಪರವಾಗಿಲ್ಲ
ಅಚಲ ಆತ್ಮವಿಶ್ವಾಸದಿಂದ ನಿನ್ನ ಗುರಿಯ ಕಡೆ ಮುನ್ನುಗ್ಗು
ದಾರಿ ಬದಲಾವಣೆ ಸೌಖ್ಯ
ಗುರಿ ಕಡೆ ಪಯಣ ಮುಖ್ಯ..

2:
ನೀನು ಕಳೆದುಕೊಂಡಿರುವುದನ್ನು ಹಿಂತಿರುಗಿ ನೋಡಿ
ಸುಮ್ಮನೆ ಕಾಲಹರಣ ಮಾಡುವ ಬದಲು
ತಲೆಕೆಡಿಸಿಕೊಳ್ಳದೆ ಮುಂದುವರಿ ನೀ ಮೊದಲು ಅಂದಾಗ ಮಾತ್ರ
ನಿನ್ನ ಗುರಿ ತಲುಪಿದ ಎಲ್ಲರಿಗಿಂತ ಮೊದಲು
ಆಡಿ ಹಿಂದಿಟ್ಟರೆ ನರಕ
ಅಡಿ ಮುಂದಿಟ್ಟರೆ ಸ್ವರ್ಗ

3:
ತುಂಬಾ ಸಲ ಸೋತಾಗ ಕನಸುಗಳ ಮೇಲಿಟ್ಟಿರುವ
ನಂಬಿಕೆಯನ್ನು ಕಳೆದುಕೊಳ್ಳಬೇಡ ಹೇಡಿಯಂತೆ
ಒಮ್ಮೆಯಾದರೂ
ನಿನ್ನ ಕನಸುಗಳು ನನಸಾಗುತ್ತದೆ ಕಾಲಕಳೆದಂತೆ
ಕಂಡ ಕನಸುಗಳತ್ತ ನಡೆ ನೀ ಹಠ ಬಿಡದಂತೆ…
4:
ಗುರಿ ಇಟ್ಟು ನೀ ಹೋಗುವ ದಾರಿಗೆ ನೀನೆ
ಮಾರ್ಗದರ್ಶಕ, ಗುರು ಆಗಿರು
ನಿನ್ನ ದಾರಿಗೆ ನಿನ್ನದೇ ಆದ ನಿಯಮಗಳನ್ನು
ಇಟ್ಟುಕೊಂಡಿರು
ಯಾರ ಉಪದೇಶ ಉಪದ್ರವ ನಿನಗೆ ಬೇಕಾಗಿಲ್ಲ ಎಂದು
ನೀನು ತಿಳಿದುಕೊಂಡಿರು
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ