ಅಕ್ಬರ್ ಬೀರಬಲ್ ಕತೆಗಳು
ಕತೆಗಳ ಪಟ್ಟಿ(toc)

Stories of Akbar and Birbal area unit very fashionable in India. In many instances Birbal uses his wit and intelligence to calm the ire of Emperor Akbar and amuse him at constant time. It accustomed be a part of the oral tradition of storytelling, however in recent years these stories are compiled into books by varied authors.
Birbal was appointed by Akbar as a Minister (Mantri) and accustomed be a writer and Singer in around 1556–1562. He had an in depth association with Emperor Akbar and was one in all his most vital courtiers, a part of a gaggle referred to as the navaratnas (nine jewels).
Local people tales emerged primarily in nineteenth century involving his interactions with Akbar, him representational process him as being very clever and humourous.
We are happy to bring Akbar and Birbal stories in kannada launguage.
ಮುತ್ತು
ಬೆಳೆಯುವ ಭೂಮಿ
ಅದೊಂದು ದಿನ ಅಕ್ಬರನ
ಅಂತಃಪುರದಲ್ಲಿ ಓಡಾಡುತ್ತಿರಬೇಕಾದರೆ ಸುಂದರವಾದ ಹೂದಾನಿ ಒಡೆದು ಹೋಯಿತು. ರಾಣಿ ಗಾಬರಿಯಾದಳು : “ಮಹಾರಾಜರು ಬಂದು ಕೇಳಿದರೆ ಏನು
ಹೇಳುವುದು? ಹೂದಾನಿ ಕೆಳಗೆ ಬಿದ್ದು ಒಡೆದು
ಹೋಯಿತೆಂದರೆ ಸಿಟ್ಟಾಗುವರು.”
ಅಕ್ಬರ್ ಸಭೆ
ಮುಗಿಸಿ ಅಂತಪುರಕ್ಕೆ ಬಂದನು. ಅಲ್ಲಿ ತನಗೆ ತುಂಬಾ ಮೆಚ್ಚುಗೆಯಾಗಿದ್ದ ಹೂದಾನಿ ಕಾಣುತ್ತಿರಲಿಲ್ಲ
ಅದು ಚೀನೀ ಪ್ರವಾಸಿ ತಂದು ಕೊಟ್ಟಿದ್ದುದಾಗಿತ್ತು
“ಬೇಗಂ, ಇಲ್ಲಿಟ್ಟಿದ್ದ ಹೂದಾನಿ ಎಲ್ಲಿ?” ಎಂದು ಕೇಳಿದನು.
“ಓಹ್! ಅದು.... ಸೇವಕ ಶುಚಿ ಮಾಡಲು
ಒಯ್ದಿದ್ದಾನೆ” ಎಂದು ಹೇಳಿಬಿಟ್ಟಳು. ಆದರೆ ರಾಜ ಕುಳಿತು
ವಿಶ್ರಾಂತಿ ಪಡೆಯುವಾಗ ನಿಜ ಸಂಗತಿ ಹೇಳಬೇಕಂದು ಕೊಂಡಳು.
ರಾಜ
ಸುಖಾಸೀನನಾದನು. ಆಗ ರಾಣಿ
ಬಂದು, “ಸ್ವಾಮಿ, ಒಂದು ತಪ್ಪೋಪ್ಪಿಗೆ ಆಗಬೇಕಿದೆ.
ಹೂದಾನಿಯನ್ನು ನಾನು ಕೈಜಾರಿ ಒಡೆದು ಹಾಕಿಬಿಟ್ಟೆ” ಎಂದಳು. “ಅಂದರೆ ನೀನು ಸೇವಕ ತೆಗೆದುಕೊಂಡು ಹೋವನೆಂದು ಸುಳ್ಳು
ಹೇಳಿರುವೆ.”“
“ನನಗೆ ಮೊದಲು ಭಯವಾಗಿತ್ತು ಅದಕ್ಕೆ ಹಾಗೆ
ಹೇಳಿದೆ.”
“ನೀನು ರಾಣಿ, ನಿನ್ನಂಥವಳೇ ಸುಳ್ಳು ಹೇಳುವುದು ಸರಿಯೆ?”
“ಏನು ಮಾಡಲಿ? ಅಕಸ್ಮಾತ್ ಒಡೆದು ಹೋಯಿತು.”
“ಒಡೆದುದಕ್ಕೆ ನಾನು ನಿನ್ನನ್ನು
ಕ್ಷಮಿಸುತ್ತೇನೆ. ಆದರೆ ನೀನು ಸುಳ್ಳು ಹೇಳಿದ್ದು ಕ್ಷಮಿಸಲಾರೆ. ನೀನ ಈಗಿಂದೀಗಲೇ ಅರಮನೆ ಬಿಟ್ಟು
ಹೋಗು” ಎಂದು ಅಕ್ಬರ್ ಆಜ್ಞೆ ಮಾಡಿದನು. ರಾಣಿ
ಎಷ್ಟೆಷ್ಟೋ ಅಂಗಲಾಚಿದಳು. ಆದರೆ ಆಕ್ಟರ್ ಒಪ್ಪಲಿಲ್ಲ. ಹೋಗಲೇಬೇಕು ಎಂದು ನಿರ್ಧಾರಿತವಾಗಿ
ಹೇಳಿದನು. ರಾಣಿ ಅರಮನೆ
ಬಿಟ್ಟು ಹೋಗಲೇ ಬೇಕೆಂದನು.
“ಬೀರಬಲ್ ಪಟ್ಟಣದಲ್ಲಿದಿದ್ದರೆ ಏನಾದರೂ
ದಾರಿ ಹೇಳುತ್ತಿದ್ದನು” ಎಂದು ಕೊಂಡು ರಾಣಿ ಕಸಿವಿಸಿಗೊಂಡಳು
ಸುದ್ದಿ ಬಹುಬೇಗ ಹರಡಿತು : “ರಾಣಿ ಹೋಗುತ್ತಿದ್ದಾಳೆ”“ ಎಂದು ದಿನ ತಿಳಿದರು.ಮಾರನೆಯ ದಿನ
ಸಭೆಯಲ್ಲಿ ಅಕ್ಷರ್ ಎಲ್ಲರನ್ನು ಉದ್ದೇಶಿಸಿ, “ನಿಮ್ಮನ್ನೆಲ್ಲ ಒಂದು ಮಾತು ಕೇಳಬೇಕು. ನೀವು ಯಾರಾದರೂ
ಎಂದಾದರೂ ಸುಳ್ಳು ಹೇಳಿದ್ದೀರಾ?” ಎಂದು ಕೇಳಿದನು. ಹೇಳಿದ್ದೇವೆ
ಎಂದರೆ ರಾಣಿಗಾದ ಗತಿಯೇ ತಮಗೆ ಆಗುತ್ತದೆ ಎಂದು ಒಬ್ಬರ ನಂತರ ಒಬ್ಬರು ಇಲ್ಲ ಎಂದೂ ಹೇಳಿಲ್ಲ ಎಂದು
ಬಿಟ್ಟರು. ಅದೇ ವೇಳೆಗೆ ಅಕ್ಷರನ ಸಭೆಯನ್ನು ಬೀರಬಲ್ ಪ್ರವೇಶಿಸಿದನು.
“ಬೀರಬಲ್ ! ನೀನೆಂದಾದರೂ ಸುಳ್ಳು
ಹೇಳಿದ್ದೀಯಾ?” ಎಂದು ಅಕ್ಬರ್ ಕೇಳಿದನು.“ಹೇಳಿರಬಹುದು.”
“ನಿನ್ನಂತಹ ಪ್ರಾಮಾಣಿಕ ಸುಳ್ಳು
ಹೇಳುವುದೇ?”
“ನಾನು ಪ್ರಾಮಾಣಿಕನಾಗಿರಲು
ಪ್ರಯತ್ನಿಸಿದ್ದೇನೆ. ಕೆಲವೊಮ್ಮೆ ನೀವೂ ಸಣ್ಣಪುಟ್ಟ ಸುಳ್ಳು ಹೇಳಿರುತ್ತೀರಿ.”
“ಸಾಧ್ಯವಿಲ್ಲ ! ನನ್ನ ಆಸ್ಥಾನದಲ್ಲಿ
ಯಾರೂ ಸುಳ್ಳು ಹೇಳಿಲ್ಲ ಎಂದಿದ್ದಾರೆ. ಅವರಾರೂ ಸುಳ್ಳು ಹೇಳಿಲ್ಲ. ನಾನು ಒಬ್ಬ ಸುಳ್ಳು
ಹೇಳುವವನನ್ನು ದಿವಾನನಾಗಿಟ್ಟುಕೊಳ್ಳಲು ಇಷ್ಟವಿಲ್ಲ ನೀನೀಗಲೇ ಆಗ್ರಾ ಬಿಟ್ಟು ಹೋಗು.”
“ನಿಮ್ಮಾಜ್ನೆ ” ಎಂದು ಹೇಳಿ ಬೀರಬಲ್ ಅಲ್ಲಿಂದ ಹೊರಬಂದ.
ಬೀರಬಲ್
ಹೊರಬಂದ ಸುದ್ದಿ ರಾಣಿಗೆ ತಿಳಿಯಿತು. ಅವಳೀಗ ಆಗ್ರಾದ ಹೊರಗಿನ ತನ್ನ ಅರಮನೆಯಲ್ಲಿದ್ದಳು. ಅವಳಿಗೆ
ಬೀರಬಲ್ನನ್ನು ನೋಡಬೇಕೆನಿಸಿತು.
ಬೀರಬಲ್ನಿಗಾಗಿ
ಹೇಳಿ ಕಳುಹಿಸಿದಳು. ಬೀರಬಲ್ ಬಂದಾಗ, “ಬೀರಬಲ್, ನನಗೆ ನಿನ್ನ ಸಹಾಯ ಬೇಕಿದೆ”“ ಎಂದು ಹೇಳಿದಳು. “ಬೇಗಂ ಸಾಹೇಬ್, ಸ್ವಲ್ಪ ಕಾಲಾವಕಾಶ ಕೊಡಿ”“ ಎಂದು ಕೇಳಿಕೊಂಡು ಆಗ್ರಾದ ಹೊರಗೆ ಇದ್ದ
ಆಭರಣ ವ್ಯಾಪಾರಿ ಬಳಿಗೆ ಬಂದನು.
“ಅಯ್ಯಾ, ನನ್ನ ಬಳಿ ಗೋಧಿ ತೆನೆಗಳ ಗೊಂಚಲಿದೆ.
ನೀನು ಮುತ್ತುಗಳು ಮತ್ತು ಚಿನ್ನದಿಂದ ಇದೇ ತೆರನಾದ ಗೊಂಚಲು ಮಾಡಿಕೊಡು” ಎಂದು ಹೇಳಿ ಒಪ್ಪಿಸಿದ.
ಅಕ್ಕಸಾಲಿಗ
ಕೆಲಸಕ್ಕೆ ತೊಡಗಿದ. ಮಾಡಿ ಮುಗಿಸಿದ. ಒಂದು ತಿಂಗಳಾಯಿತು.
ಬೀರಬಲ್ ಅಕ್ಬರನನ್ನು
ನೋಡಲು ಹೋದ. ಬೀರಬಲ್ನನ್ನು ಒಳಗೆ ಬಿಡಲಾಯಿತು.
“ಮಹಾಪ್ರಭು ! ನೀವು ನನ್ನನ್ನು
ತೊರೆದಿದ್ದರೂ ನಾನು ನಿಮ್ಮನ್ನು ಮರೆತಿಲ್ಲ” ಎಂದು ಹೇಳಿದ ಬೀರಬಲ್ ಅಕ್ಬರನಿಗೆ, "ಸ್ವಾಮಿ, ನಾನೊಬ್ಬ ಪ್ರವಾಸಿಯನ್ನು ಭೇಟಿ ಮಾಡಿದೆ.
ಅವರು ನನಗಿ ಮುತ್ತುಗಳ ಅದ್ಭುತ ಗೊಂಚಲನ್ನು ಮಾರಿದ, ನಾವಿದನ್ನು ಬಿತ್ತಿದ್ದರೆ ಬೇಕಾದಷ್ಟು ಮುತ್ತುಗಳು
ಬೆಳೆಯಬಹುದು. ನಮಗೆ ಬೇಕಾದುದೆಲ್ಲ ಸ್ವಲ್ಪ ಫಲವತ್ತಾದ ಭೂಮಿ” ಎಂದು ಹೇಳಿಕೊಂಡ.
ಚಕಿತನಾದ
ಅಕ್ಟರ್, “ಹಾಗೇನು? ಸರಿ, ಯಾವುದಾದರೂ ಸೂಕ್ತವಾದ ಸ್ಥಳದಲ್ಲಿ ಬಿತ್ತು” ಎಂದು ಒಪ್ಪಿಗೆ ನೀಡಿದನು. ಕೆಲವು ದಿನಗಳ
ನಂತರ ಬೀರಬಲ್ ಮತ್ತೆ ರಾಜನ ಬಳಿಗೆ ಬಂದು, “ಹುಜೂರ್, ನಾನೊಂದು ಸೂಕ್ತ ಜಾಗ ನೋಡಿದ್ದೇನೆ. ನಾವು ಅಲ್ಲಿ ಮುತ್ತು
ಬಿತ್ತಬಹುದು. ಮುಂದಿನ ವಾರ ಹುಣ್ಣಿಮೆ ದಿನ ಬಿಡೋಣ” ಎಂದು ಇಡೀ ಸಾಮ್ರಾಜ್ಯದಲ್ಲಿ ಮುತ್ತು
ಬಿತ್ತುವ ಕಾರ್ಯಕ್ರಮ ಕುರಿತು ಘೋಷಿಸಲಾಯಿತು.
ಜನ ತಂಡ
ತಂಡವಾಗಿ ಬರತೊಡಗಿದರು. ಮುತ್ತು ಬಿತ್ತುವ ಸಮಯ ಬಂದಿತು. ರಾಜನು ಬೀರಬಲ್ಗೆ “ಬೀರಬಲ್, .ಮುತ್ತು ಬಿತ್ತಲು ಇದು ಸಕಾಲ. ಏನೇ
ಆರಂಭಿಸು” ಎಂದನು. “ಇಲ್ಲ ಇಲ್ಲ ನಾನು ಮಾಡಲಾರೆ. ಬಿತ್ತುವ
ಕೆಲಸವನ್ನು ಯಾರಾದರೂ ಶುದ್ಧವಿರುವವರೂ, ಯಾವ ಪಾಪ ಮಾಡದವರೂ, ಒಂದೇ ಒಂದು ಸುಳ್ಳು ಹೇಳದವರೂ ಮಾಡಲಿ” ಎಂದ ಬೀರಬಲ್.
ಮತ್ತೆ
ಮುಂದುವರಿದು, “ನನಗೆ ಆ ಅರ್ಹತೆ ಇಲ್ಲ. ನೀವು ಒಂದು
ಸುಳೂ ಹೇಳದ ನಿಮ್ಮ ಮಂತ್ರಿಗಳಲ್ಲಿ ಯಾರಾದರೂ ಒಬ್ಬರನ್ನು ಈ ಕೆಲಸ ಮಾಡಲು ಹೇಳಿ”“ ಎಂದನು. ಮಂತ್ರಿಗಳು
ತಮ್ಮ ತಮ್ಮಲ್ಲೆ ಗುಸು ಗುಸು ಪಿಸಪಿಸ ಮಾತನಾಡಿಕೊಂಡರು.ಒಬ್ಬೊಬ್ಬರೂ, “ನನ್ನಿಂದಾಗುವುದಿಲ್ಲ” ಎಂದು ಬಿಟ್ಟರು.
ಆಗ ಬೀರಬಲ್, “ಮಹಾರಾಜ ! ಯಾರೂ ಇಲ್ಲ ಎಂದ ಮೇಲೆ ನೀವೇ
ಆ ಕೆಲಸಕ್ಕೆ ಅರ್ಹರು. ಮುತ್ತುಗಳನ್ನು ಬಿತ್ತಿರಿ” ಎಂದನು. ದೊರೆ
ಉತ್ತರಿಸಿ, “ಅಯ್ಯೋ ! ನನ್ನಿಂದಾಗೋಲ್ಲ, ನಾನು ಚಿಕ್ಕವನಿದ್ದಾಗ ಒಂದಲ್ಲ ಎರಡಲ್ಲ
ಬೇಕಾದಷ್ಟು ಸುಳ್ಳು ಹೇಳಿದೀನಿ”“ ಎಂದು ಬಿಟ್ಟ
“ಹಾಗಾದರೆ ಏನು ಮಾಡೋಣ?”“ ಕೇಳಿದ ಬೀರಬಲ್.
“ಬೀರಬಲ್, ಸುಳ್ಳು ಹೇಳದ ವ್ಯಕ್ತಿ ಹುಡುಕುವುದೇ
ಸಾಧ್ಯವಿಲ್ಲ, ನನಗೆ ನೀನು ಹೇಳಿದ್ದು ಅರ್ಥವಾಯಿತು” ಎಂದ ಅಕ್ಬರ್. “ಅಂದ ಮೇಲೆ, ನಿಮ್ಮ ಅರಮನೆಯಲ್ಲಿರಲು ಯಾರೂ ಅರ್ಹರಲ್ಲ,”“ ಬೀರಬಲ್ ಹೇಳಿದ್ದು ಅಕ್ಬರ್ ಮನಗಂಡು
ರಾಣಿಯನ್ನು ಹಿಂದಕ್ಕೆ ಕರೆಯಿಸಿಕೊಂಡ.
“ಬೀರಬಲ್, ನನಗೆ ಮುತ್ತು ಬೆಳೆಯುವ ಭೂಮಿ ಸಿಗಲಿಲ್ಲ
ನಿಜ. ಆದರೆ ನನ್ನ ಮುತ್ತಿನಂಥ ದಿವಾನ ಹಿಂದಕ್ಕೆ ಬಂದನಲ್ಲ ಅಷ್ಟೆ ಸಾಕು”“ ಎಂದು ಬೀರಬಲ್ನನ್ನು ಮನಸಾರೆ ಹೊಗಳಿ
ಅವನಿಗೆ ಉಡುಗೊರೆಗಳನ್ನು ಕೊಟ್ಟು ಕಳುಹಿಸಿದ.
ಪಂಚಾಂಗ
ಒಂದು ದಿನ ಅಕ್ಬರ್
ತುಂಬಾ ಆಲೋಚನೆ ಮಾಡುತ್ತಿದ್ದನು. ಎರಡು ತಿಂಗಳುಗಳನ್ನು ಒಂದು ತಿಂಗಳಾಗಿ ಮಾಡಲು ಬಯಸಿದನು. ಅವನು
ಎರಡು ತಿಂಗಳುಗಳನ್ನು ಸೇರಿಸಿ ಒಂದೇ ತಿಂಗಳಾಗಿ ಕರೆಯಲು ಯೋಚಿಸಿದನು. ಆದರೆ ಅದು ಸುಲಭವೇ? ಬೀರಬಲ್ನನ್ನು ಕರೆದು, “ಬೀರಬಲ್, ವರ್ಷದಲ್ಲಿ ಆರೇ ತಿಂಗಳುಗಳಿರಬೇಕೆಂದು
ನನ್ನ ಆಸೆ. ಅದಕ್ಕೆ ನೀನುಮಾಡಬೇಕಾದ್ದು ಇಷ್ಟೆ ಎರಡು ತಿಂಗಳುಗಳು ಕೂಡಿ ಒಂದೇ ತಿಂಗಳಾಗಿ ಕರೆದು
ಬಿಡು ಏನು ಹೇಳುತಿ?
“ಹೇಗೆ ಸಾಧ್ಯ ಪ್ರಭು?”“ “ಪಂಚಾಂಗ ಬದಲಾಯಿಸು”“
“ನನಗೇನೂ ಆಕ್ಷೇಪವಿಲ್ಲ, ಆದರೆ ಹಾಗೆ ಮಾಡೋದರಲ್ಲಿ ಒಂದು ಸಮಸ್ಯೆ
ಇದೆ.”
“ಏನು ಆ ಸಮಸ್ಯೆ?”
“ನಿಮ್ಮ ಆಸೆಯಂತೆ ಮಾಡಿದರೆ ಒಂದು
ತಿಂಗಳಿನಲ್ಲಿ ಎರಡು ದಿನಗಳಿರುತ್ತವೆ. ಜನ ಗೊಂದಲಕ್ಕೀಡಾಗಿ ಎರಡು ದಿನಗಳು ಇಬ್ಬರು ಹೆಂಡತಿಯರನ್ನು ಬಯಸುತ್ತಾರೆ”“
ಎಂದು ಹೇಳಿ
ಬೀರಬಲ್ ತಲೆ ಬಗ್ಗಿಸಿದ. ಹೊಸ ಕಾಯಿದೆ ಪ್ರಕಟಿಸಲಿಲ್ಲ,
“ಬೀರಬಲ್, ನಾನು ಚಂದ್ರನನ್ನು ಈ ಹೊಸ ತಿಂಗಳಲ್ಲಿ
ಒಂದೇ ದಿನ ಬಾ ಎಂದು ಹೇಳಲಾರೆ. ನನಗೆ ಆ ಶಕ್ತಿ ಇಲ್ಲ” ಎಂದು ಅಕ್ಬರ್ ಉತ್ತರಿಸಿದ.
ಮುಂದೆ ಅವನು
ಮಾತನಾಡಲಿಲ್ಲ.
ಯಾಕಿನ್ ಶಾಹ್
ಒಮ್ಮೆ ಅಕ್ಬರನ
ಹುಟ್ಟಿದ ಹಬ್ಬವನ್ನು ಏಳು ದಿನಗಳ ಕಾಲ ಆಚರಿಸಲಾಯಿತು. ದೂರ ದೂರುಗಳಿಂದ ರಾಜಕುಮಾರರು ಶ್ರೀಮಂತರೂ
ಬಂದು ಭಾಗವಹಿಸಿದರು. ಅತಿಥಿಗಳಿಗೆ ಅಕ್ಬರ್ ವಿಧ ವಿಧವಾದ ಉಡುಗೊರೆಗಳನ್ನು ನೀಡಿದ.
ಎಲ್ಲರೂ ಅಕ್ಬರ್
ಶತಾಯುಷಿಯಾಗಿ ಬಾಳಲಿ ಎಂದು ಹರಸಿದನು.
ಪ್ರಾಚೀನ ಸಂಪ್ರದಾಯದಂತೆ ಅಕ್ಬರ್ ಅಕ್ಕಿ, ಬೇಳೆ, ಗೋಧಿ, ತೆಂಗಿನಕಾಯಿಗಳಿಟ್ಟು ತುಲಾಭಾರ
ಮಾಡಿಸಿಕೊಂಡು ಅವನ್ನು ಬ್ರಾಹ್ಮಣರಿಗೆದಾನ ಮಾಡಿದನು. ಎಲ್ಲರೂ ಅಕ್ಷರವನ್ನು ಮನಸಾರೆ ಹಾರೈಸಿದರು.
ಹಲವರು ಸಂತರು ಬಂದು ಅಕ್ಷರನಿಗೆ ಶುಭ ಕೋರಿದರು. ಸಂತರು ದೇವರ ಮಾನವರು.
ಬೀರಬಲ್ ಒಂದು
ಮೂಲೆಯಲ್ಲಿ ನಿಂತು ಮುಗುಳಗುತ್ತಿದ್ದುದನ್ನು ಅಕ್ಬರ್ ನೋಡಿದ.
“ಬೀರಬಲ್, ಸಂತರು ಪವಾಡ ಪುರುಷರೆಂದು ಕೇಳಬಲ್ಲೆ
ಯಾವುದು ಅವರನ್ನು ದೇವಮಾನವರನ್ನಾಗಿ ಮಾಡಿದೆ. ಜನ ಅವರನ್ನು ನಂಬುತ್ತಾರೆ” ಎಂದು ಹೇಳಿದ. ಜತೆಗೆ, “ಬೀರಬಲ್, ಇದು ಹೇಗೆ ಸಾಧ್ಯ? ಈ ದೇವಮಾನವರೇ ನಮ್ಮ ಪ್ರಾರ್ಥನೆಗಳು
ದೇವರಿಗೆ ತಲುಪುವಂತೆ ಮಾಡುವರು” ಎಂದ.
“ಇಲ್ಲ ಇಲ್ಲ, ನಮ್ಮ ನಂಬಿಕೆ ಒಬ್ಬ ಸಂತ ಅಥವಾ
ಪಾದ್ರಿಯನ್ನು ದೇವ ಮಾನವನನ್ನಾಗಿಸುತ್ತದೆ”“ ಹೇಳಿದ ಬೀರಬಲ್.“ನಮ್ಮ ಸಂತರನ್ನು ಅವಹೇಳನ
ಮಾಡುತ್ತಿರುವೆಯಾ?”
“ಇಲ್ಲ ಪ್ರಭು ! ನಾವು ಹಿಂದೂಗಳು
ವಿಗ್ರಹಾರಾಧಕರು, ವಿಗ್ರಹದಲ್ಲಿನಮಗೆ
ನಂಬಿಕೆ. ಆದ್ದರಿಂದ ನಾವು ವಿಗ್ರಹವನ್ನೆ ಪ್ರಾರ್ಥಿಸುತ್ತೇವೆ.” “ಏನೆಂದೆ ? ನೀನು ಧರ್ಮ ನಿಂದೆ ಮಾಡುತ್ತಿಲ್ಲ ತಾನೇ? ನಿನ್ನ ಮಾತುಗಳು ನಿಜವೆಂಬುದನ್ನು
ಸಾಧಿಸಿ ತೋರಿಸಲು ಒಂದು ತಿಂಗಳು ಕಾಲಾವಕಾಶ ಕೊಡುತ್ತೇನೆ. ವಿಫಲವಾದರೆ ನಿನಗೆ ಮರಣ ದಂಡನೆ ತಿಳಿ.”
ಬೀರಬಲ್
ಅಲ್ಲಿಂದ ಹೊರಟು ಆಗ್ರಾದ ಹೊರಗೆ ಬಂದು ಏಕಾಂತ ಸ್ಥಳದಲ್ಲಿ ಒಂದು ಸ್ಮಾರಕ ಅರಮನೆ ಕಟ್ಟಲು ನಾಲ್ಕು
ಜನರಿಗೆ ಹೇಳಿದನು. ಕೆಲದಿನಗಳಲ್ಲಿ ಒಂದು ಸ್ಮಾರಕ ಸಿದ್ಧವಾಯಿತು. ಒಬ್ಬನಿಗೆ ಸ್ಮಾರಕದ
ಮೇಲ್ವಿಚಾರಕನನ್ನಾಗಿ ಮಾಡಿ ಅವನಿಗೆ, “ಯಾರಾದರೂ
ಬಂದು ಇದು ಏನು ಎಂದು ಕೇಳಿದರೆ ಇದು ಯಾಕಿನ್ ಶಾಹ್ರ ಸ್ಮಾರಕ ಎಂದು ಹೇಳು” ಎಂದು ತಿಳಿಸಿದನು.
“ಆಗಲಿ ಸ್ವಾಮಿ”
“ಯಾಕಿನ್ಶಾಹ್ರ ಆಶೀರ್ವಾದಗಳಿಂದ ಉಂಟಾದ
ಪವಾಡಗಳು ಕುರಿತು ಕಥೆಗಳನ್ನು ಹರಡು.”“
“ಹೌದು ನಾವು ಯಾಕಿನ್ಶಾಪ್ರನ್ನು
ಪ್ರಸಿದ್ಧಗೊಳಿಸಬೇಕು”“ ಎಂದ ಮೇಲ್ವಿಚಾರಕ.
ಬೀರಬಲ್
ನಿರೀಕ್ಷಿಸಿದಂತೆ ಯಾಕಿನ್ಶಾಹ್ರ ಕೀರ್ತಿ ಹರಡಿತು. ಎಲ್ಲಿ ನೋಡಿದರೂ ಯಾಕಿನ್ಶಾಕ್ರನ್ನು ಕುರಿತ
ಮಾತೇ. ಜನ ಆತನ ಪವಾಡಗಳು ಬಣ್ಣಿಸುತ್ತಿದ್ದರು. ಯಾಕಿನ್ ಶಾಹ್ರನ್ನು ಕುರಿತು ಜನ
ಮಾತನಾಡತೊಡಗಿದರು.
"ಹೌದು ! ನಾನು ನನ್ನ ಮಗನಿಗಾಗಿ ಯಾಕಿನ್
ಶಾಹರ ಸ್ಮಾರಕ ನೋಡಿ ಬರುತ್ತೇನೆ”“ ಎಂದು ಒಬ್ಬ
ಹೇಳಿದರೆ ಇನ್ನೊಬ್ಬ “ನಾನು ಅಲ್ಲಿಗೆ ಹೋಗಿ ಬಂದ ಮೇಲೆ ಆರೋಗ್ಯ
ಸುಧಾರಿಸಿತು” ಎಂದು ಹೇಳಿದನು. ಬೇಗನೆ ಸುದ್ದಿ
ಅಕ್ಷರನಿಗೂ ತಲುಪಿತು.
“ಹುಜೂರ್, ಯಾಕಿನ್ಶಾಹರ ಆಶೀರ್ವಾದವಿದ್ದರೆ
ಸತ್ತವನಿಗೂ ಜೀವ ಬರುತ್ತದೆ.”
ರಾಜ ಈ ಮಾತು
ಕೇಳಿ ತಾನೂ ಸ್ಮಾರಕ ನೋಡಲು ಹೋದನು. ಅಲ್ಲಿ ಜನವೋ ಜನ , ಅಪಾರ ನಂಬಿಕೆ ಉಳ್ಳವರು
ಅಕ್ಬರನ
ಜತೆಯಲ್ಲಿ ಬಂದಿದ್ದ ಎಲ್ಲರೂ ಸ್ಮಾರಕಕ್ಕೆ ನಮಸ್ಕರಿಸಿದರು. ಅಕ್ಬರನೂ ತಲೆಬಾಗಿದ. ಬೀರಬಲ್ ಮಾತ್ರ
ನಮಸ್ಕರಿಸಲಿಲ್ಲ,
“ಬೀರಬಲ್, ನೀನೇಕೆ ಯಾಕಿನ್ ಶಾಹರಿಗೆ
ನಮಸ್ಕರಿಸುತ್ತಿಲ್ಲ?” ಅಕ್ಬರ್ ಕೇಳಿದ,
““ಸಂತರಿಗಿಂತ ನಂಬಿಕೆಯೇ ಮಹತ್ವದ್ದು ಎಂದು
ನೀವು ಒಪ್ಪಿದರೆ ಮಾತ್ರ ನಾನು ತಲೆಬಾಗುವೆ."
“ಇಲ್ಲ ಯಾಕಿನ್ ಶಾಹರಲ್ಲಿ ನನಗೆ ದೃಢವಾದ
ನಂಬಿಕೆ ಇದೆ. ನಾನುಮೇವಾರದ ರಾಣಾಪ್ರತಾಪನನ್ನು ಗೆದ್ದರೆ ಯಾಕಿನ್ಶಾಹರಿಗೆ ಚಿನ್ನ ಮತ್ತು
ಬೆಳ್ಳಿ ಉಡುಗೊರೆ ಕೊಡುತ್ತೇನೆ.”
ಅಕ್ಬರ್
ಹಾಗೆ ಹೇಳುತ್ತಿದ್ದಂತೆ ಒಬ್ಬ ಕುದುರೆ ಸವಾರನು ಬಂದು,
ಒಡೆಯ, ಸಲೀಂ ರವರು ನಿಮಗೊಂದು ಸಂದೇಶ
ಕಳುಹಿಸಿದ್ದಾರೆ. ಮೇವಾರದ ರಾಣಾ ಪ್ರತಾಪ ರಣರಂಗದಲ್ಲಿ ಸೋತನಂತೆ” ಎಂದು ಹೇಳಿದನು.
ಅಕ್ಬರನ
ಸಂತೋಷಕ್ಕೆ ಪಾರವೇ ಇರದಂತಾಯಿತು,
“ನೋಡು ಬೀರಬಲ್, ನಾನಿನ್ನೂ ಹೇಳಿ ಮುಗಿಸಿಲ್ಲ ಆಗಲೇ ನನ್ನ
ಬಯಕೆ
ಈಡೇರಿತು. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು?” ಎಂದನು. ಬೀರಬಲ್ ನಿರುತ್ತರನಾದನು. ಆದರೆ ಮಾತನಾಡಿ,
ಪ್ರಭು! ಇದು
ನಂಬಿಕೆಯೇ ದೊಡ್ಡದು ಎಂದು ಹೇಳುತ್ತವೆ. ನೀವು ಒಂದು ವರ ಕೇಳಿ ನೋಡೋಣ”“ ಎಂದನು.
ಅಕ್ಬರ್
ಸಿಟ್ಟಿಗೆದ್ದು
“ಬೀರಬಲ್, ನಿನ್ನದು ಅತಿಯಾಯಿತು. ಸಂತನಿಗಿಂತ
ನಂಬಿಕೆ ದೊಡ್ಡದು ಎಂದು ಸಾಧಿಸಲಿಲ್ಲ, ನಿನಗೆ ಒಂದು
ತಿಂಗಳು ಸಮಯ ಕೊಟ್ಟಿದೆ. ಗಡುವು ಮುಗಿದಿದೆ. ಸಾಯಲು ಸಿದ್ಧನಾಗು” ಎಂದನು.
ಬೀರಬಲ್
ಭಯಪಟ್ಟವನಂತೆ ನಟಿಸಿದ.
"ನನ್ನ ಜೀವ ಅಪಾಯದಲ್ಲಿದೆ. ಓ ಯಾಕಿನ್ಶಾಹ್, ನೀನು ನನ್ನನ್ನು ಕಾಪಾಡಿದರೆ, ಇಲ್ಲಿ ನಾನು ನಿನಗೆ ಸುಂದರವಾದ
ಅಮೃತಶಿಲೆಯ ಸೌಧವನ್ನು ಕಟ್ಟಿಸುತ್ತೇನೆ"
ಎಂದು
ಪ್ರಾರ್ಥಿಸಿದ.
ಅಕ್ಬರ್
ನಕ್ಕು, “ ನೀನೂ ಪ್ರಾರ್ಥನೆ ಸಲ್ಲಿಸುವೆಯಾ?” ಎಂದು ಕೇಳಿದ.
“ಕಡೆಗೂ ನೀನು ಯಾಕಿನ್ಶಾಹರಲ್ಲಿ ಆಶ್ರಯ
ಪಡೆಯುತ್ತಿದ್ದಿ"ಎಂದಾಗ ಬೀರಬಲ್ ಎಂದ.
ಬಳಿಕ ಬೀರಬಲ್
ಸ್ಮಾರಕದ ಮೇಲೆ ಹರಡಿದ್ದ ಹೂವುಗಳನ್ನು ತೆಗೆದು ಸ್ಮಾರಕದ ಒಳಗೆ ಹೋದನು.
“ಬೀರಬಲ್, ಏನು ಮಾಡ್ತಾ ಇದ್ದೀ ನೀನು?” ಕೇಳಿದ ಅಕ್ಬರ್ ಮತ್ತೆ
ಅವನಿಗೆ ಇದು
ನನ್ನ ಸ್ವಂತ ಶಾಲು”“ ಎಂದು ಹೇಳಿದನು.
“ಸರಿ ಹುಜೂರ್, ಅದನ್ನು ತೆಗೆದು ನೋಡಿ”“ ಎಂದ ಬೀರಬಲ್.
ತೆಗೆದು
ನೋಡಿದಾಗ ಅಲ್ಲಿ ಒಂದು ಪಾದರಕ್ಷೆ ಇತ್ತು
"ಹುಜೂರ್, ಇದೇ ನೋಡಿ ನಿಮ್ಮ ಯಾಕಿನ್ ಶಾಹ್ ನಿಮ್ಮ
ಬಯಕೆ ಕೈಗೂಡುವಂತೆ ಮಾಡಿರುವುದು”“
ಎಂದು ಬೀರಬಲ್
ಹೇಳಿದಾಗ ಅಕ್ಬರ್ ಅಯ್ಯೋ ಇದು ನನ್ನ ಪಾದರಕ್ಷೆ ಎಂದು ಅವಾಕ್ಕಾದ.
“ಈಗ ಹೇಳಿ ಹುಜೂರ್, ಧರ್ಮನಿಷ್ಠನ ನಂಬಿಕೆ ದೊಡ್ಡದೋ ಅಥವಾ
ಯಾರಲ್ಲಿ ಧರ್ಮನಿಷ್ಠ ತನ್ನ ನಂಬಿಕೆ ಇಟ್ಟಿರುತ್ತಾನೆಯೋ ಆತನು ದೊಡ್ಡವನೋ?”“ ಎಂದು ಬೀರಬಲ್ ಪ್ರಶ್ನಿಸಿದ.
“ಬೀರಬಲ್, ನೀನು ಸರಿಯಾಗಿ ಹೇಳಿದೆ. ನಂಬಿಕೆಯೇ
ದೊಡ್ಡದು”“ ಎಂದು ಅಕ್ಬರ್ “ಯಾಕಿನ್ಶಾಹ್ರ ಹೆಸರಿನಲ್ಲಿ ಬರುವ ಹಣ
ಮತ್ತು ಕಾಣಿಕೆಗಳನ್ನು ಇಲ್ಲಿ ಒಂದು ಸೌಧ ಕಟ್ಟಿಸಲು ಉಪಯೋಗಿಸಿ”“ ಎಂದು ದೊರೆ ಹೇಳಿದನು.
ಸುಣ್ಣ
ನೆಕ್ಕಿದ ಕಯೂಂ
ಅಕ್ಬರ್
ಒಂದು ದಿನ ತನ್ನ ಸೇವಕನನ್ನು ಕರೆದು ಅರಮನೆಯ ಗೋಡೆಗಳು ತೋರಿಸುತ್ತ “ಕಯೂಂ, ಗೋಡೆ ಎಲ್ಲ ಹಾಳಾಗಿದೆ. ಅದರ ಮೇಲೆ
ಸುಣ್ಣ ಬಳಿ"ಎಂದು ಹೇಳಿದನು.
ಕಯೂಂ, "ಇಂದೇ ಸುಣ್ಣ ಹಾಕುತ್ತೀನಿ ಹುಜೂರ್”“ ಎಂದು ಹೇಳಿದನು.
ಮರುದಿನ ಅಕ್ಬರ್
ಗೋಡೆ ನೋಡಿದರೆ ಅಲ್ಲಿ ಸುಣ್ಣ ಬಳಿದಿರಳಿಲ್ಲ, ಕಯೂಂ ಮೂರ್ಖ ಮರೆತು ಬಿಟ್ಟಿದ್ದಾನೆ ಎಂದು ಗಟ್ಟಿಯಾಗಿ ಕೂಗಿ
ಕರೆದನು.
ಕಯೂಂ ನಡುಗಿ
ಹೋದ.
“ದಯಮಾಡಿ ಕ್ಷಮಿಸಿ ಖಾವಂದರೇ, ನಾನು ಮರೆತು ಬಿಟ್ಟೆ" ಎಂದ. “ಈಗಲೇ ಹೋಗು. ಒಂದು ಸೇರು ಸುಣ್ಣ ತಂದು
ಕೆಲಸ ಶುರು ಮಾಡು “ ಎಂದು ಆಜ್ಞೆ ಮಾಡಿದ ಅಕ್ಬರ್.
ಕಯೂಂ ಓಡಿ
ಹೋಗಿ ಬೀರಬಲ್ನನ್ನು ನೋಡಿದ
“ಯಾಕೆ ಹೀಗೆ ಓಡಿ ಬಂದೆ?” ಕೇಳಿದ ಬೀರಬಲ್
ಕಯೂಂ ಕ್ಷಮೆ
ಕೋರಿ ನಡೆದುದನ್ನು ಹೇಳಿ ಒಂದು ಸೇರು ಸುಣ್ಣ ತರಲು ಹೊರಟು ನಿಂತ.
“ಕಯೂಂ, ದೊರೆ ತುಂಬಾ ಸಿಟ್ಟಾಗಿದ್ದಾರಾ?”
“ಹೌದು ಸ್ವಾಮಿ.”
“ಒಂದು ಕೆಲಸ ಮಾಡು, ಚಕ್ರವರ್ತಿಗಳು ಕೋಪಿಷ್ಠರು. ಅವರು
ನೀನು ಪಾಠ
ಕಲಿಯಬೇಕೆಂದು ಸುಣ್ಣವನ್ನೇ ತಿನ್ನುವಂತೆ ಮಾಡಿಬಿಡುವರು. ಈಗ ಈ ಎರಡು ಮಡಕೆಗಳು ತೆಗೆದುಕೊಂಡು
ಹೋಗು ರಾಜ ಸುಣ್ಣ ತಿನ್ನಲು ಹೇಳಿದರೆ ಕೆಂಪು ಮಡಕೆಯಿಂದ ಆರಂಭಿಸು.”“
ಕಯೂಂ ಬೀರಬಲ್
ಹೇಳಿದಂತೆ ಅರಮನೆಗೆ ಹೋಗಿ, “ಸ್ವಾಮಿ, ಇಗೋ ನೋಡಿ ಸುಣ್ಣ ನಾನೀಗಲೇ ಗೋಡೆ
ದುರಸ್ತಿ ಮಾಡುತ್ತೇನೆ” ಎಂದ.
“ನಿಲ್ಲಿಸು. ಬೇಡ ಬೇಡ. ನೀನು ಈ
ಸುಣ್ಣವನ್ನು ನೆಕ್ಕು.” ಎಂದು ಹೇಳಿದ ಅಕ್ಬರ್.
“ಹುಜೂರ್ ! ದಯ ಮಾಡಿ ಕ್ಷಮಿಸಿ, ಮುಂದೆ ನಾನು ಎಚ್ಚರವಾಗಿರುತ್ತೇನೆ.”
“ಸುಣ್ಣವನ್ನು ನೆಕ್ಕು. ಇದು ನನ್ನ ಆಜ್ಞೆ”“ “ಆಗಲಿ ಪ್ರಭು”“
ಎಂದ ಕಯೂಂ
ಸುಣ್ಣವನ್ನು ನಾನು ಹೇಗೆ ನೆಕ್ಕಲಿ? ಎಂದು ಕೊಂಡು
ಬೀರಬಲ್
ಹೇಳಿದಂತೆ ಕೆಂಪು ಮಡಕೆಯಿಂದ ತಿನ್ನಲು ತೆಗೆದುಕೊಂಡ. “ಆಹಾ ಬೀರಬಲ್ ಎಷ್ಟು ಚತುರ”“ ಎನ್ನುತ್ತಾ ಪಾತ್ರೆಯನ್ನೆತ್ತಿ ಕುಡಿದೇ ಬಿಟ್ಟ
ಅಕ್ಬರ್
ಚಕಿತನಾದ, “ಯಾ ಅಲ್ಲಾ ! ಇವನೇನು ಸುಣ್ಣವನ್ನು
ತಿನ್ನುತ್ತಿರುವನಲ್ಲ, ಇನ್ನೂ ಸ್ವಲ್ಪ ತಿಂದರೆ ಸತ್ತೇ
ಹೋಗುತ್ತಾನೆ.” ಎಂದು ಭಾವಿಸಿದ ಅಕ್ಬರ್, “ಕಯಂ ತಿಂದಿದ್ದು ಸಾಕು. ಕೆಲಸ ಮಾಡು”“ ಎಂದ. ಅಕ್ಬರ್ ಮನಸಿನಲ್ಲಿ , “ಸುಣ್ಣ ತಿಂದ ಇವನು ಇನ್ನು ಕೆಲದಿನಗಳು
ಕಾಯಿಲೆ ಮಲಗುತ್ತಾನೆ”“ ಎಂದು ಕೊಂಡ.
ಆದರೆ ಮಾರನೆಯ
ದಿನವೇ ಅರಮನೆಗೆ ಬಂದ.
“ಕಯೂಂ! ನೀನು ಆರೋಗ್ಯವಾಗಿದ್ದೀಯಾ?”
“ಇದ್ದೇನೆ ಪ್ರಭು!”
“ಅರೆ ! ಇವನು ಸುಣ್ಣವನ್ನೂ
ಜೀರ್ಣಿಸಿಕೊಂಡಿರುವನಲ್ಲ, ನಾನು ಪುನಃ ಇವನನ್ನು ಪರೀಕ್ಷಿಸಬೇಕು” ಎಂದುಕೊಂಡ ಅಕ್ಬರ್,
“ಹೋಗು ಒಂದು ಸೇರು ಸುಣ್ಣ ತೆಗೆದುಕೊಂಡು
ಬಾ”“ ಎಂದ
ವಂದನೆ.
ನಾನೀಗ ಏನು ಮಾಡಬೇಕು ಹೇಳಿ?”
ಬೀರಬಲ್ ನ
ಕಡೆಗೆ ಓಡಿದ.
“ನೀನು ಎರಡು ಕೆಂಪು ಮಡಕೆಗಳನ್ನು
ತೆಗೆದುಕೊಬೇಕು. ನೀನು ಎಲ್ಲವನ್ನೂ ತಿನ್ನಬೇಕಾಗಬಹುದು.” ಕಯ್ಯಂ ಪುನಃ ಬೀರಬಲ್ನ ಸಲಹೆಯಂತೆ ನಡೆದುಕೊಂಡ.
ಅರಮನೆಗೆ
ಬಂದಾಗ ಅಕ್ಬರ್,
“ಈಗ ಸುಣ್ಣ ತಿನ್ನು” ಎಂದ.
ಏನು ? ಒಂದು ಸೇರು ಸುಣ್ಣ
“ಹೌದು”“ ಕಯೂಂ ಎಲ್ಲವನ್ನೂ ತಿನ್ನುವಂತೆ, ತುಂಬಾ ಪ್ರಯತ್ನದಿಂದ ನಟಿಸಿದ. ಮತ್ತೆ
ಮರುದಿನ ಕೆಲಸಕ್ಕೆ ಬಂದ.
ಅಕ್ಬರ್, “ಕಯೂಂ , ಬಾ ಇಲ್ಲಿ” ಎಂದು ಕರೆದು, “ನೆನ್ನೆ ಸುಣ್ಣ ತರಲು
ಕಳುಹಿಸಿದಾಗ
ಯಾಕೆ ತುಂಬ ಹೊತ್ತು ತೆಗೆದುಕೊಂಡೆ?” ಎಂದು ಕೇಳಿದ.
“ಪ್ರಭು ! ದಾರಿಯಲ್ಲಿ ಬೀರಬಲ್
ಸಿಕ್ಕಿದರು. ಅವರೂ ಒಂದಿಷ್ಟು ಕೆಲಸ ಮಾಡಲು ಹೇಳಿದರು”“ ಎಂದು ಕಯೂಂ ಹೇಳಿದಾಗ ಅಕ್ಬರನಿಗೆ, “ಬೀರಬಲ್ ಇನಿಗೇನೋ ಉಪಾಯ ಹೇಳಿ
ಕೊಟ್ಟಿರಬೇಕು” ಎಂದು ಖಾಲಿ ಮಡಕೆಗಳನ್ನು ಪರೀಕ್ಷಿಸಿದ.
ಸುಣ್ಣ
ಜಿಡ್ಡು ಜಿಡ್ಡಾಗಿತ್ತು,
ಅದು
ಸುಣ್ಣವಾಗಿರದೆ ಬೆಣ್ಣೆ ಆಗಿತ್ತು “ಬೀರಬಲ್
ಬಹುಶಃ ಕಯೂಮನಿಗೆ ಸುಣ್ಣ ಬದಲು ಬೆಣ್ಣೆ ತೆಗೆದುಕೊಂಡು ಹೋಗಲು ಹೇಳಿರಬೇಕು, ನಿಜವಾಗಿಯೂ ಬೀರಬಲ್ ಚತುರ"
ಎಂದುಕೊಂಡ
ಪತ್ತೇದಾರ
ಬೀರಬಲ್
ರತನ್ಲಾಲ್
ತೋಟಗಾರ. ಅರಮನೆ ತೋಟ ನೋಡಿಕೊಳ್ಳುತಿದ್ದ. ತುಂಬಾ ದಕ್ಷ, ಆದರೆ ಜಿಪುಣ ಇದ್ದನು.
ಅಕ್ಬರ್
ಒಂದು ದಿನ ಅವನಿಗೆ, ““ರತನ್, ತೋಟ ಚೆನ್ನಾಗಿ ನೋಡಿಕೊಂಡಿದ್ದೆ, ಆದರೆ ಯಾಕೆ ಇಳಿದು ಹೋಗಿದ್ದಿ?” ಎಂದು ಕೇಳಿದ.
““ಪ್ರಭು ! ನಾನು ಎಲ್ಲ ಹಣವನ್ನೂ
ಉಳಿಸ್ತಿದ್ದೀನಿ. ವಯಸಾದ ಕಾಲದಲ್ಲಿ ಆ ಹಣ ನನಗೆ ಬೇಕಾಗುತ್ತದೆ.” ಅಕ್ಬರ್ ಚಕಿತನಾಗಿ ರತನ್ಲಾಲ್ನನ್ನು ““ಸರಿ, ಆದರೆ ಆ ಹಣವನ್ನು ಎಲ್ಲಿ ಇಡುತ್ತಿ?” ಎಂದು ಕೇಳಿದ.
“ಅದೊಂದು ರಹಸ್ಯ”“ ಎಂದು ಬಿಟ್ಟ ರತನ್ಲಾಲ್.
ಒಂದು ದಿನ
ರತನ್ ಅಳುತ್ತಾ ಬೀರಬಲ್ ಬಳಿಗೆ ಬಂದ. “ಸ್ವಾಮಿ, ನಾನು ಹಾಳಾಗಿ ಹೋದೆ” ಎಂದ.
“ಯಾಕಪ್ಪ ರತನ್ ಏನಾಯಿತು?” ಕೇಳಿದ ಬೀರಬಲ್
“ಅಯ್ಯೋ ! ಯಾರೋ ನನ್ನ ಜೀವಮಾನವೆಲ್ಲ
ಕಷ್ಟಪಟ್ಟು ಉಳಿಸಿದ ಹಣವನ್ನು ಅಪಹರಿಸಿಬಿಟ್ಟಿದ್ದಾರೆ.”
"ಏನು?”“
“ನಾನು ದುಡಿದು ಸುಮಾರು ಸಾವಿರ ಚಿನ್ನದ
ನಾಣ್ಯಗಳನ್ನು ಉಳಿಸಿದ್ದೆ. ಈಗ ಆ ಹಣ ಇಲ್ಲ”
“ಆದರೆ ನೀನು ಅದನ್ನು ಎಲ್ಲಿಟ್ಟಿದ್ದೆ?”
“ರಾಜ ಉದ್ಯಾನದ ಚೀಲದ ಮರದಡಿ
ಹೂತಿಟ್ಟಿದ್ದೆ”
“ಏಕೆ ಮಣ್ಣಿನಲ್ಲಿಟ್ಟಿದ್ದೆ?”
“ರಾಜ ಉದ್ಯಾನಕ್ಕಿಂತ ಸುರಕ್ಷಿತವಾದ ಜಾಗ
ಇನ್ನೆಲ್ಲಿದೆ? ಜತೆಗೆ ನಾನೇ ಅಲ್ಲಿ ದಿನದ ಬಹುಕಾಲ
ಅಲ್ಲೇ ಇರುತ್ತೇನೆ?”
“ಬೇರೆ ಯಾರಿಗಾದರೂ ಅದು ಗೊತ್ತಿತ್ತೆ?”
“ಇಲ್ಲ, ಅದೂ ಅಲ್ಲದೆ ದಿನವೂ ಇಟ್ಟ ಹಣ
ತಪಾಸಿಸುತ್ತಿದ್ದೆ. ಎರಡು ದಿನಗಳ ಕೆಳಗೆ ನೋಡಿದ್ದೆ.”
“ಸರಿ. ನನಗೆ ಸ್ವಲ್ಪ ವೇಳೆ ಕೊಡು.
ಕಳ್ಳನನ್ನು ಹಿಡಿಯುತ್ತೀನಿ” ಎಂದು ಹೇಳಿದ ಬೀರಬಲ್, “ನೆಲದಡಿ ಹೂತಿಟ್ಟಿದ್ದು ತಿಳಿದಿದ್ದರೆ
ಮಾತ್ರ ಅಗೆದುತೆಗೆದುಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಯಾಕೆ ಅಗೆಯುತ್ತಾರೆ?” ಎಂದು ಆಲೋಚಿಸಿದ ಬೀರಬಲ್ ಕಡೆಗೆ ರಾಜ್ಯದ
ಮುಖ್ಯ ವೈದ್ಯರನ್ನು ಕರೆಯಿಸಿದ.
“ನೀವೇನಾದರೂ ಬೇಲದ ಮರದ ಯಾವುದಾದರೂ
ಭಾಗವನ್ನು ಔಷಧ ತಯಾರಿಸಲು ಉಪಯೋಗಿಸುತ್ತೀರಾ?” ಎಂದು ಕೇಳಿದ.
““ಇಲ್ಲ, ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಆದರೆ
ನಾವು ಹೂವು ಎಲೆಗಳು ಉಪಯೋಗಿಸೋಲ್ಲ” ಎಂದರು ವೈದ್ಯರು.
ಆಗಷ್ಟೆ ಒಬ್ಬ
ಮುದುಕ ಹಾಗೂ ತಜ್ಞ ವೈದ್ಯ ಪ್ರವೇಶಿಸಿ,
“ಸ್ವಾಮಿ, ಒಂದು ಮುಖ್ಯ ಉಪಯೋಗ ಇದೆ.ನಾನು ಒಬ್ಬ
ರೋಗಿಯನ್ನು ತುಂಬಾ ವಿಷಮ ಸ್ಥಿತಿಯಲ್ಲಿದ್ದಾಗ ಬೇರುಗಳ ರಸದಿಂದ ಗುಣಪಡಿಸಿದ್ದೇನೆ” ಎಂದ.
“ಆ ರೋಗಿ ಯಾರು?” ಕೇಳಿದ ಬೀರಬಲ್,
“ಅಬ್ದುಲ್ ಖಾದರ್” ಬಂದಿತು ಉತ್ತರ.
ಬೀರಬಲ್
ಖಾದರನನ್ನು ಕರೆಯಿಸಿ ಕೇಳಿದ.
“ಹೌದು ಸ್ವಾಮಿ, ಬೇರುಗಳು ನನ್ನ ಜೀವ ಉಳಿಸಿದವು” ಎಂದ ಖಾದರ್.
“ಸರಿ, ನಿನಗಾಗಿ ಬೇರುಗಳನ್ನು ಕಿತ್ತವರು ಯಾರು?
“ನನ್ನ ಸೇವಕ!!”
“ಅವನನ್ನು ಕರೆಸು”
“ಆಯಿತು ಸ್ವಾಮಿ”.
ಸೇವಕ ಬಂದಾಗ
ಬೀರಬಲ್ ಕೇಳಿದ : "ಏನಯ್ಯಾ,
ರಾಜೋದ್ಯಾನದ
ಬೇಲದ ಮರದ ಬೇರುಗಳನ್ನು ನೀನೇ ಕಿತ್ತೆಯೇನು?”“ “ಹೌದು ಸ್ವಾಮಿ”“
“ನೀನು ಸಾವಿರ ಚಿನ್ನದ ನಾಣ್ಯಗಳನ್ನು
ತೆಗೆದುಕೊಂಡೆ ತಾನೇ? ಬೇಗ ತಂದಿಡು”“
“ನಾನು.... ನಾನು....”“
“ನೀನು ತಪ್ಪು ಒಪ್ಪಿಕೊಂಡರೆ, ಕ್ಷಮಿಸುತ್ತೇನೆ.”
“ಇದೋ ಈಗಲೇ ಹಣ ತರುತ್ತೇನೆ.”“
ಸೇವಕ ಮನೆಗೆ
ಹೋಗಿ ಹಣ ತಂದು ಬೀರಬಲ್ಗಿತ್ತನು. ಬೀರಬಲ್ ರತನ್ಲಾಲ್ಗೆ ಆ ಹಣ ಕೊಟ್ಟು ಮತ್ತು ಸೇವಕನಿಗೆ
ಅದರಿಂದ ಐದು ನಾಣ್ಯಗಳನ್ನು ತೆಗೆದುಕೊಟ್ಟು.
ರತನ್ಲಾಲ್ಗೆ, “ರತನ್, ಇನ್ನು ಮುಂದೆ ಜಾಗರೂಕನಾಗಿರು. ನಿನ್ನ
ಅಜಾಗರೂಕತೆಗಾಗಿ ಐದು ನಾಣ್ಯಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು ಮೇಲೆ ಹಣವನ್ನು ತೋಟದಲ್ಲಿ
ಹೂತಿಡಬೇಡ” ” ಎಂದು ಹೇಳಿದನು.