Type Here to Get Search Results !

ಅಕ್ಬರ್ ಬೀರಬಲ್ ಕತೆಗಳು - ಭಾಗ 7

 ಅಕ್ಬರ್ ಬೀರಬಲ್ ಕತೆಗಳು

 ಕತೆಗಳ ಪಟ್ಟಿ(toc)


Stories of Akbar and Birbal area unit very fashionable in  India. In many instances Birbal uses his wit and intelligence to calm the ire of Emperor Akbar and amuse him at constant time. It accustomed be a part of the oral tradition of storytelling, however in recent years these stories are compiled into books by varied authors.

Birbal was appointed by Akbar as a Minister (Mantri) and accustomed be a writer and Singer in around 1556–1562. He had an in depth association with Emperor Akbar and was one in all his most vital courtiers, a part of a gaggle referred to as the navaratnas (nine jewels).

Local people tales emerged primarily in nineteenth century involving his interactions with Akbar, him representational process him as being very clever and humourous.

We are happy to bring Akbar and Birbal stories in kannada launguage.

 ಎಂದೂ ಮುಗಿಯದ ಕಥೆ

ಒಮ್ಮೆ ಸಲಹೆಗೆ ಒಪ್ಪಿದನು.ಕಾಯಿಲೆಯಾಯಿತು. ರಾಜನಾದವನಿಗೆ ಅದೇನೂ ಸಮಸ್ಯೆಯಲ್ಲ ಕೈಗೊಬ್ಬ ಕಾಲಿಗೊಬ್ಬ ಆಳು. ರಾಜ ವೈದ್ಯರು ಇದ್ದೇ ಇರುತ್ತಾರೆ. ಈಗ ಅವನಿಗೆ ರಾತ್ರಿ ಹೆಚ್ಚು ಹೊತ್ತು ಮಲಗಲು ಆಗುತ್ತಿರಲಿಲ್ಲ, ರಾಜ ವೈದ್ಯರು ರಾಜನನ್ನು ಗುಣಪಡಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಕಡೆಗೆ ವೈದ್ಯರು ರಾಜ ರಾತ್ರಿ ಮಲಗುವಾಗ ಒಂದು ಕಥೆ ಕೇಳಿ ಮಲಗುವುದಾದರೆ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ ಎಂದು ಸಲಹೆ ಮಾಡಿದರು. ಅಕ್ಬರ್‌ ಈ ಒಳ್ಳೆ ಸಲಹೆಗೆ ಒಪ್ಪಿದನು.

ಆದರೆ ಕಥೆ ಹೇಳಿ ನನ್ನನ್ನು ಸಂತೋಷವಾಗಿಡುವವರು ಯಾರು?” ಎಂದು ಅಕ್ಬರ್‌ ಕೇಳಿದನು.

ಅದೇನೂ ಕಷ್ಟವಲ್ಲ, ಈ ರಾಜ್ಯದಲ್ಲಿ ಬಹಳಷ್ಟು ಬುದ್ಧಿವಂತರಿದ್ದಾರೆ. ಪ್ರತಿಯೊಬ್ಬರೂ ತಲಾ ದಿನವೊಂದಕ್ಕೆ ಒಂದು ಚೆಲುವಾದ ಕಥೆ ಹೇಳಿದರಾಯಿತುಎಂದರು ರಾಜ ವೈದ್ಯರು.

ಅದರಂತೆ ಪ್ರತಿಯೊಬ್ಬರೂ ಪ್ರತಿ ರಾತ್ರಿ ಒಂದು ಕಥೆ ಹೇಳುವ ಕೆಲಸ ಮಾಡಿದರು. ಇದು ಎಂದೂ ಮುಗಿಯದಂತಾಗಿತ್ತು,

ಕಥೆಗಳನ್ನು ಯಾರು ತಾನೆ ಎಷ್ಟೂಂತ ಹೇಳಲು ಸಾಧ್ಯ? ಬೀರಬಲ್‌ನನ್ನು ಈ ಸಮಸ್ಯೆ ಬಿಡಿಸಲು ಕೇಳಿದರು.

ರಾಜ ಕಥೆ ಹೇಳುತ್ತಿದ್ದ ಪ್ರತಿಯೊಬ್ಬರನ್ನೂ ಕಥೆ ಮುಗಿದಂತೆ ಮುಂದೇನಾಯಿತು ಎಂದು ಕೇಳುತ್ತಿದ್ದನು. ಇದೀಗ ಬೀರಬಲ್‌ನ ಸರದಿ ಬಂದಿತು. ಬೀರಬಲ್ ಅರಮನೆಗೆ ಹೋದನು. ಕಥೆ ಹೇಳಲು ಆರಂಭಿಸಿದನು....

ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಒಂದು ಗೂಡಿಸಲು ಇತ್ತು ಆ ಗುಡಿಸಲಿನಲ್ಲಿ ಒಬ್ಬ ಬಡವನಿದ್ದನು. ಆ ಗುಡಿಸಲಿನಲ್ಲಿ ಅವನು ಕಾಳುಗಳನ್ನು ಇರಿಸಿದ್ದನು. ಅವನ ದುರದೃಷ್ಟ ಆ ಕಾಳುಗಳನ್ನು ತಿನ್ನಲು ಹಕ್ಕಿಗಳು ಬರುತ್ತಿದ್ದವು. ಎಲ್ಲ ಕಾಳುಗಳನ್ನೂ ತಿಂದು ಬಿಡುತ್ತಿದ್ದವು. ಬಡವ ಇದರ ಬಗ್ಗೆ ದುಃಖಗೊಂಡು ಒಂದು ದಿನ ಮಾರುಕಟ್ಟೆಗೆ ಹೋಗಿ ಒಂದು ದೊಡ್ಡ ಬುಟ್ಟಿತಂದನು. ಆ ಬುಟ್ಟಿಯಲ್ಲಿ ಕಾಳುಗಳನ್ನು ಇರಿಸಿ ಅದರ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದನು.

 ಬಳಿಕ ಏನಾಯಿತು?” ಅಕ್ಬರ್‌ ಕೇಳಿದನು.

ಹಕ್ಕಿಗಳು ಗುಡಿಸಲಿನಲ್ಲಿ ಕಾಳಿಗಾಗಿ ನೋಡಿದವು. ಕಾಳುಗಳು ಇರಲಿಲ್ಲ ಆದರೆ ಬುಟ್ಟಿಯನ್ನು ನೋಡಿದವು.

ಆಮೇಲೆ ಏನಾಯಿತು?”

ಹಕ್ಕಿಗಳು ತಮ್ಮ ಕೊಕ್ಕುಗಳಿಂದ ಬುಟ್ಟಿ ಮುಚ್ಚಳ ತೆಗೆಯಲು ನೋಡಿದವು. ಆಗ ಅವುಗಳಿಗೆ ನೋವಾಯಿತು.

ಆಮೇಲೆ......

ಒಂದು ಗುಬ್ಬಚ್ಚಿ ತನ್ನ ಗೆಳೆಯರನ್ನು ಕರೆಯಿತು. ಬಳಿಕ ಎಲ್ಲ ಹಕ್ಕಿಗಳೂ ಒಂದು ಇಲಿಯನ್ನು ತಮಗೆ ಸಹಾಯ ಮಾಡಲು ಕೇಳಿದವು. ಇಲ್ಲಿ ಬುಟ್ಟಿಯಲ್ಲಿ ಒಂದು ರಂಧ್ರ ಕೊರೆಯಿತು. ಇದ್ದಕ್ಕಿದ್ದಂತೆ ಭಾರಿ ಸಂಖ್ಯೆಯಲ್ಲಿ ಹಕ್ಕಿಗಳು ಅಲ್ಲಿಗೆ ಬಂದವು. ಎಷ್ಟು ಹಕ್ಕಿಗಳು ಬಂದವು ಗೊತ್ತೇ?”

 ಎಷ್ಟು ?”

ಐನೂರು ಹಕ್ಕಿಗಳು

“ಓಹ್ ! ಐನೂರೇ? ಆಮೇಲೆ?”

ಒಂದು ಹಕ್ಕಿ ಗುಡಿಸಲು ಪ್ರವೇಶಿಸಿ ಒಂದು ಕಾಳು ತೆಗೆದುಕೊಂಡು ಹೋಯಿತು.

ಆಮೇಲೆ?”

 “ಆಮೇಲೆ

 “ಮೂರನೆ ಹಕ್ಕಿ ಕೂಡ ಒಂದು ಕಾಳು ತಿಂದು ಹಾರಿ ಹೋಯಿತು

ಆಮೇಲೆ?”

ನಾಲ್ಕನೆ ಹಕ್ಕಿ ಕಾಳು ತಿಂದು ಹಾರಿಹೋಯಿತು” *ಆಮೇಲೆ” “ಐದನೆ ಹಕ್ಕಿ.....

 “ಬೀರಬಲ್, ಅಲ್ಲಿ ಎಷ್ಟು ಹಕ್ಕಿಗಳಿದ್ದವು?”

ಎರಡನೆ ಹಕ್ಕಿ ಹಾಗೆಯೇ ಮಾಡಿತು?

ಜಹಾಂಪನಾ, ಅಲ್ಲಿ ನಾಲ್ಕು ನೂರಾತೊಂಬತ್ತೆದು ಹಕ್ಕಿಗಳಿದ್ದವು. ನಾನು ಹೇಳಿದ ಹಾಗೆ ಆರನೆಯ ಹಕ್ಕಿ ಗುಡಿಸಲಿಗೆ ಬಂದು......

ಬೀರಬಲ್ ! ಈ ಹಕ್ಕಿಗಳು ಯಾವಾಗ ತಮ್ಮ ಕೆಲಸ ಮುಗಿಸುತ್ತವೆ?”

 ಹುಜೂರ್, ಅವು ತಮ್ಮ ಕೆಲಸವನ್ನು ನೀವು ಆಮೇಲೇನಾಯಿತು ಅಂತ ಕೇಳೋದು ನಿಲ್ಲಿಸಿದ ಮೇಲೆ ನಿಲ್ಲಿಸುತ್ತವೆ.ರಾಜನಿಗೆ ತನ್ನ ತಪ್ಪು ಅರಿವಾಯಿತು.

ಇನ್ನು ಮುಂದೆ ತನಗೆ ಯಾರೂ ಕಥೆಗಳು ಹೇಳಬೇಕಿಲ್ಲವೆಂದು ಆಜ್ಞೆ ಮಾಡಿದನು.

ಹತ್ತು ಮೂರ್ಖರು

ಒಮ್ಮೆ ಅಕ್ಬರ್ ಬೀರಬಲ್ನನ್ನು ಕರೆಸಿ, “ಅಯ್ಯಾ ಬೀರಬಲ್ ! ಯಾವಾಗಲೂ ನೀನು ನನಗೆ ಬುದ್ಧಿವಂತರನ್ನೇ ತೋರಿಸುತ್ತಿದ್ದಿ. ಒಮ್ಮೆಯಾದರೂ ಮೂರ್ಖನೊಬ್ಬನನ್ನು ತೋರಿಸಲಿಲ್ಲ, ನಿನಗೆ ಒಂದು ತಿಂಗಳು ಕಾಲಾವಕಾಶ ಕೊಡುತ್ತೇನೆ. ಹತ್ತು ಮೂರ್ಖರನ್ನು ತೋರಿಸಬೇಕು. ತಿಳಿಯಿತೆ?” ಎಂದು ಹೇಳಿದ.

ಬೀರಬಲ್ ಮಹಾಚತುರ, ಬುದ್ಧಿವಂತರನ್ನು ಹುಡುಕುವುದು ಕಷ್ಟ. ಮೂರ್ಖರಿಗೆ ಕೊರತೆಯೆ? ಬೀರಬಲ್ ಒಪ್ಪಿದ.

ಬೀರಬಲ್ ಅಂದಿನಿಂದ ಮೂರ್ಖರನ್ನು ಹುಡುಕುತ್ತ ಹೊರಟ. ದಾರಿಯಲ್ಲಿ ಒಬ್ಬ ಕುದುರೆಯ ಮೇಲೆ ಕುಳಿತು ತನ್ನ ತಲೆಯ ಮೇಲೆ ಸೌದೆ ತುಂಡುಗಳ ಕಟ್ಟೊಂದನ್ನು ಹೊತ್ತು ಹೋಗುತ್ತಿದ್ದ ಬೀರಬಲ್‌ಗೆ ಆಶ್ಚರ್ಯವಾಯಿತು.

ಯಾಕೆ ಹೀಗೆ ಹೊತ್ತುಕೊಂಡಿದ್ದಿ, ಕುದುರೆಯ ಬೆನ್ನು ಮೇಲಿಡಬಾರದೆ?” ಎಂದು ಅವನನ್ನೆ ಕೇಳಿದ. ಅದಕ್ಕೆ ಅವನು, “ನನ್ನ ಕುದುರೆ ತುಂಬಾ ಮುದಿಸ್ವಾಮಿ, ಅದು ಇಷ್ಟೊಂದು ಭಾರ ಹೊತ್ತೀತೆ? ಸತ್ತು ಹೋದರೆ ನನ್ನ ಗತಿ!ಎಂದ.

ಬೀರಬಲ್ ಇವನಂಥ ಮೂರ್ಖ ಇನ್ನೊಬ್ಬನಿಲ್ಲ ಎಂದುಕೊಂಡು ನನ್ನ ಜತೆ ಬಾ ಎಂದು ಕರೆದುಕೊಂಡು ಹೊರಟ.

ಇಬ್ಬರೂ ಹೊರಟರು. ದಾರಿಯಲ್ಲಿ ಒಬ್ಬ ನೆಲದ ಮೇಲೆ ಮಲಗಿಕೊಂಡು ಕೈಗಳೆರಡನ್ನೂ ಮೇಲೆತ್ತಿದ್ದುದು ಕಾಣಿಸಿತು.

ಬೀರಬಲ್ ಇವನಿಗೆಲ್ಲೊ ಪಾರ್ಶ್ವವಾಯು ಬಡಿದಿರಬೇಕೆಂದುಕೊಂಡು ಅಲ್ಲಿಗೆ ಹೋಗಿ ಕೇಳಿದನು.

ಅದಕ್ಕೆ ಅವನು, “ಸ್ವಾಮಿ ನನ್ನ ಹೆಂಡತಿ ಇಷ್ಟು ದೊಡ್ಡ ಮಡಕೆ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಾಳೆ. ನಾನು ಕೈಗಳನ್ನು ಕೆಳಗೆ ಇಳಿಬಿಟ್ಟರೆ ಮಡಕೆಯ ಗಾತ್ರ ತಪ್ಪಿ ಹೋಗುತ್ತದೆ. ಅದಕ್ಕೆ ಎರಡೂ ಕೈಗಳನ್ನು ಹೀಗೆ ಮೇಲೆತ್ತಿ ಹಿಡಿದುಕೊಂಡಿದ್ದೇನೆ. ಸಂತೆಗೆ ಹೋದ ಮೇಲೆ ಈ ಗಾತ್ರದ ಮಡಕೆಗಳನ್ನು ತೆಗೆದುಕೊಂಡು ನಂತರ ಕೈಗಳನ್ನು ಕೆಳಗೆ ಬಿಡುತ್ತೇನೆಎಂದನು.

ಬೀರಬಲ್ ಮೂರ್ಖರ ಸಾಲಿಗೆ ಸೇರಲು ಲಾಯಕ್ಕಾದವನು ಎಂದುಕೊಂಡು ಅವನಿಗೆ ಒಳ್ಳೆ ಮಡಕೆಗಳನ್ನು ಕೊಡಿಸುವುದಾಗಿ ಹೇಳಿ ಜತೆಯಲ್ಲಿ ಅವನನ್ನೂ ಕರೆದುಕೊಂಡು ಹೊರಟ.

ಇನ್ನೇನು ಬೀರಬಲ್ ಕುದುರೆ ಹತ್ತಬೇಕು ಅಷ್ಟರಲ್ಲಿ ಒಬ್ಬ ಮೌಲ್ವಿ ಬೀರಬಲ್‌ನನ್ನು ದಬ್ಬಿ ಕೆಳಗೆ ಬಿದ್ದ

ಕ್ಷಮಿಸಬೇಕು ಸ್ವಾಮಿ, ನಾನು ಸಂಜೆ ಪ್ರಾರ್ಥನೆ ಮಾಡಿದೆ. ಮಸೀದಿ ದೂರದಲ್ಲಿದೆ. ನಾನು ನನ್ನ ಧ್ವನಿ. ಎಷ್ಟು ದೂರದವರೆಗೆ ಹೋಗಬಲ್ಲುದೆಂದು ನೋಡಿದೆ. ನೀವು ಅಡ್ಡ ಬಂದು ಹಾಳು ಮಾಡಿದಿರಿಎಂದ.

ಬೀರಬಲ್, “ನಮ್ಮ ಊರಿನಲ್ಲಿ ಇಂಥ ಮೂರ್ಖನಿದ್ದಾನೆ. ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಬಾರದೆ?” ಎಂದುಕೊಂಡ.

ಅವನಿಗೆ ಹೊನ್ನಿನ ನಾಣ್ಯಗಳನ್ನು ಕೊಡಿಸುವೆನೆಂದು ಅವನನ್ನೂ ಕರೆದುಕೊಂಡು ಅರಮನೆಗೆ ಬಂದ. ಅವರನ್ನು ಅಲ್ಲಿ ತಂಗಲು ಹೇಳಿ ಇನ್ನಷ್ಟು ಮೂರ್ಖರನ್ನು ಹುಡುಕಿ ತರಲು ಹೊರಟ.

ದಾರಿಯಲ್ಲಿ ಇಬ್ಬರು ಜಗಳವಾಡುತ್ತಿದ್ದರು. ಇಬ್ಬರೂ ದೇವರು ಪ್ರತ್ಯಕ್ಷವಾಗಿ ವರ ಕೇಳಿ ಕೊಳ್ಳಿ ಎಂದರೆ ಒಬ್ಬ ಹುಲಿಗಾಗಿ ಬೇಡುವೆನೆಂದೂ ಮತ್ತೊಬ್ಬ ಎಮ್ಮೆಯನ್ನು ಬೇಡುವೆನೆಂದೂ ಹೇಳಿದರು.

ಬೀರಬಲ್, “ಅದಕ್ಕೆ ಜಗಳವಾಡುತ್ತಿರುವಿರೇಕೆ?” ಎಂದು ಕೇಳಿದಾಗ ಒಬ್ಬ ಸ್ವಾಮಿ ! ಇವನು ನನ್ನ ಎಮ್ಮೆಯ ಮೇಲೆ ಹುಲಿಯನ್ನು ಬಿಡುವ ನಂತೆ. ಆಗ ಹುಲಿ ಎಮ್ಮೆಯನ್ನು ಕೊಂದು ಹಾಕುವುದಲ್ಲ ಅದಕ್ಕಾಗಿ ಇಬ್ಬರೂ ಜಗಳವಾಡುತ್ತಿದ್ದೇವೆಎಂದನು.

ಇವರಿಬ್ಬರೂ ಮೂರ್ಖರೇ ಸರಿ ಎಂದು ಕೋಂಡ ಬೀರಬಲ್ ಜಗಳನ್ನು ನಿಲ್ಲಿಸಲು ಹೇಳಿದ.

ಬೀರಬಲ್ ಈ ಮೂರ್ಖರ ಬಗ್ಗೆ ತಲೆ ಕೆಡಿಸಿಕೊಂಡುದನ್ನು ದೂರದಿಂದ ಒಬ್ಬ ಬ್ರಾಹ್ಮಣ ನೋಡಿದ. ಅವನು ತನ್ನ ತಲೆಯ ಮೇಲೆ ಎಣ್ಣೆ ತುಂಬಿದ ಮಡಕೆಯೊಂದನ್ನು ಹೊತ್ತು ತರುತ್ತಿದ್ದ.

ಸ್ವಾಮಿ ! ಈ ಮೂರ್ಖರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರುವ ನೀವೆಲ್ಲೊ ಮೂರ್ಖರಿರಬೇಕು. ಇಲ್ಲದಿದ್ದರೆ ನನ್ನ ಮೂಳೆಗಳು ಮುರಿದು ರಕ್ತ ಹರಿದು ಹೋಗಲಿ ಹೀಗೆಎಂದು ಹೇಳಿದ ಬ್ರಾಹ್ಮಣ ತನ್ನ ತಲೆಯ ಮೇಲಿದ್ದ ಮಡಕೆಯನ್ನು ಕೆಳಗೆ ಹಾಕಿದ. ಮಡಕೆಯಲ್ಲಿದ್ದ ಎಣ್ಣೆಯೆಲ್ಲ ನೆಲದ ಪಾಲಾಯಿತು. ಬೀರಬಲ್ ಒಟ್ಟಿಗೆ ಮೂವರು ಮಹಾ ಮೂರ್ಖರು ಸಿಕ್ಕ ಹಾಗಾಯಿತು ಎಂದು ಆ ಮೂವರನ್ನೂ ಕರೆದುಕೊಂಡು ಬಂದು ಅರಮನೆಯಲ್ಲಿ ಕೂಡಿ ಹಾಕಿದ.

ಅಕ್ಬರ್‌ ತಿಳಿಸಿದ್ದಂತೆ ಇನ್ನು ನಾಲ್ಕು ಮೂರ್ಖರ ಪತ್ತೆ ಆಗಬೇಕಿತ್ತು ಆ ದಿನ ರಾತ್ರಿ ಕತ್ತಲೆ. ಮೇಲೆ ಚಂದ್ರ ಪ್ರಕಾಶಿಸುತ್ತಿದ್ದ ಒಳ್ಳೆ ಬೆಳದಿಂಗಳು. ತಂಪಾದ ಗಾಳಿ, ಬೀರಬಲ್ಗೆ: ಹಿತವಾಯಿತು.

 “ಆಹಾ ! ಎಷ್ಟು ಹಿತಕರವಾದ ವಾತಾವರಣ. ಈ ಆನಂದ ಅನುಭವಿಸಲು ನಿಜವಾಗಿಯೂ ಪುಣ್ಯ ಮಾಡಿರಬೇಕುಎಂದುಕೊಂಡ.

ಎದುರಿಗೆ ಒಬ್ಬ ಮನುಷ್ಯ ಏನೋ ಹುಡುಕುತ್ತಿದ್ದುದು ಕಾಣಿಸಿತು.

ಬೀರಬಲ್ ಅವನಿದ್ದಲ್ಲಿಗೆ ಹೋದ. ಮತ್ತೆ ಅಲ್ಲಿಯೇ ಹುಡುಕದೆ ಇಲ್ಲಿ ಹುಡುಕುತ್ತಿರುವೆಯಲ್ಲ” “ಇಲ್ಲಿ ಒಳ್ಳೆ ಬೆಳಕಿದೆ ಸ್ವಾಮಿ. ಆದುದರಿಂದ......

ಏನು ಹುಡುಕುತ್ತಿದ್ದಿ?” ಎಂದು ಕೇಳಿದ.

ನನ್ನ ಉಂಗುರಎಂದ ಆ ಮನುಷ್ಯ

ಎಲ್ಲಿ ಬಿತ್ತು ನಿನ್ನ ಉಂಗುರ?”

ಅಗೋ ದೂರದ ಮರದಡಿಯಲ್ಲಿ

ಬೀರಬಲ್‌ಗೆ ಅಷ್ಟೆ ಸಾಕಾಯಿತು. ನಡಿ ನಿನಗೆ ಇನ್ನೂ ಒಳ್ಳೆ ಉಂಗುರ ಕೊಡಿಸುತ್ತೇನೆಎಂದು ಅವನನ್ನು ಕರೆದುಕೊಂಡು ಹೊರಟ. ದಾರಿಯಲ್ಲಿ ಬರುತ್ತಿರಬೇಕಾದರೆ ಇನ್ನೊಬ್ಬ ಮನುಷ್ಯ ಏನನ್ನೋ ಹುಡುಕುತ್ತಿದ್ದ. ಬೀರಬಲ್ ಅವನ ಬಳಿಗೆ ಹೋಗಿ ವಿಚಾರಿಸಿದ.

ಅದಕ್ಕೆ ಆ ಮನುಷ್ಯ, “ಸ್ವಾಮಿ, ನಾನು ಒಂದು ಉಂಗುರವನ್ನು ಇಲ್ಲಿ ಮರದಡಿ ಹೂತಿಟ್ಟಿದ್ದೆ. ಈಗ ಅದು ನನಗೆ ಸಿಗುತ್ತಿಲ್ಲಎಂದ.

 ನೀನು ಹೂತಿಟ್ಟ ಜಾಗ ಇದಲ್ಲವೋ ಏನೋ?” ಬೀರಬಲ್

ನಾನೇನು ಮೂರ್ಖನೇ, ಇದೇ ಜಾಗದಲ್ಲಿಯೇ ಹೂತಿಟ್ಟಿದ್ದೆ. ನಾನು ಹೂತಿಡುವಾಗ ಆಕಾಶದಲ್ಲಿ ಮೋಡವಿತ್ತು ಆದರೆ ಈಗ ಆ ಮೋಡ ಇಲ್ಲ, ಬಹುಶಃ.....ಎನ್ನುತ್ತಿದ್ದ ಹಾಗೆ ಬೀರಬಲ್ ಬಳಿ ಇದ್ದ ಮೊದಲ ಮನುಷ್ಯ, “ಸ್ವಾಮಿ ! ಪಾಪ ಇವನಿಗೆ ಹೇಗೆ ತಿಳಿಯಬೇಕು ಮೋಡ ಮೋಸ ಮಾಡಿದ್ದುಎಂದು ನಡುವೆ ಬಾಯಿ ಹಾಕಿಹೇಳಿದ.

ಬೀರಬಲ್ ಅವರಿಬ್ಬರನ್ನೂ ಕರೆದುಕೊಂಡು ಅರಮನೆಯಲ್ಲಿರಿಸಿದ.

ಮಾರನೆಯ ದಿನ ಆ ಎಂಟು ಮೂರ್ಖರನ್ನು ಅಕ್ಬರನ ಆಸ್ಥಾನಕ್ಕೆ ಕರೆದುಕೊಂಡು ಬಂದು ದೊರೆಗೆ ಆ ಎಂಟು ಮೂರ್ಖರು ನಡೆದುಕೊಂಡ ವಿಧಾನವನ್ನು ವಿವರಿಸಿ ಹೇಳಿದ.

ಅಕ್ಬರ್‌ ನಗುತ್ತಾ, “ಇಷ್ಟು ಕಡಿಮೆ ಅವಧಿಯಲ್ಲಿ ಮೂರ್ಖರನ್ನು ಪಡೆಯುವುದು ಹೇಗೆ ಸಾಧ್ಯವಾಯಿತು?” ಎಂದು ಕೇಳಿದ.

ಬೀರಬಲ್, “ಜಹಾಂಪನಾ, ಮೂರ್ಖರು ಬಹು ಬೇಗ ಸಿಕ್ಕಿ ಬಿಡುತ್ತಾರೆ. ಬುದ್ದಿವಂತರೇ ದುರ್ಲಭಎಂದ.

ಆದರೆ ಇಲ್ಲಿ ಎಂಟೇ ಮೂರ್ಖರಿದ್ದಾರೆ. ನಾನು ಹೇಳಿದ್ದು ಹತ್ತು ಅಲ್ಲವೇ?” ಎಂದು ಕೇಳಿದ ಅಕ್ಬರ್‌.

ಪ್ರಭು ! ಹತ್ತು ಮೂರ್ಖರೇ ಇರುವುದುಬೀರಬಲ್ ಉತ್ತರಿಸಿದ. ಅದು ಹೇಗೆ?”

ಹೌದು ಪ್ರಭು ! ಈ ಎಂಟು ಮೂರ್ಖರೊಂದಿಗೆ ನಾವಿಬ್ಬರು ಮಹಾಮೂರ್ಖರಿದ್ದೇವೆ. ನೀವು ನನ್ನನ್ನು ಮೂರ್ಖರನ್ನು ಪತ್ತೆ ಮಾಡಿ ಬರಲು ಹೇಳಿದಿರಿ, ನಾನು ಅವರನ್ನು ಕರೆತರಲು ಹೊರಟೆ. ಅಲ್ಲಿಗೆ ಹತ್ತು ಮಂದಿ ಮೂರ್ಖರಾಗಲಿಲ್ಲವೇ.

ಬೀರಬಲ್ ಹೇಳಿದ್ದು ಕೇಳಿ ಇಡೀ ಸಭೆ ಗೊಳ್ಳೆಂದು ನಕ್ಕಿತು.

ವಧುವಿನ ತಂದೆ

ಅಕ್ಬರ್‌ ಆಸ್ಥಾನದಲ್ಲಿದ್ದನು. ಬೀರಬಲ್ ಕಳೆಗುಂದಿದ ಮುಖದೊಂದಿಗೆ ಆಸ್ಥಾನ ಪ್ರವೇಶಿಸಿದನು. ಅದನ್ನು ಗಮನಿಸಿದ ಅಕ್ಬರ್‌,

ಬೀರಬಲ್, ಏಕೆ ಚಿಂತೆ ಮಾಡುತ್ತಿದ್ದಿ? ಏನಾಗಿದೆ ನಿನಗೆ?” ಎಂದು ಕೇಳಿದ.

ಖಾವಂದ್ ! ಏನು ಹೇಳಲಿ, ನನ್ನ ಹೆಂಡತಿ ರಾತ್ರಿ ಹೆಣ್ಣು ಮಗು ಹೆತ್ತಳು. ಅದು ನನ್ನ ಚಿಂತೆಗೆ ಕಾರಣವಾಗಿದೆ. ಹೆಣ್ಣು ಮಗು ಆದವರು ನೆಮ್ಮದಿಯಾಗಿರಲು ಸಾಧ್ಯವೇ? ಅದೇನಿದ್ದರೂ ಕೈಲಿ ಬಿಸಿ ಕೆಂಡ ಇಟ್ಟುಕೊಂಡು ತಿರುಗಿದಂತೆ, ನಮ್ಮ ಜನಾಂಗದಲ್ಲಿ ಹೆಣ್ಣು ಮಗುವಾದ ಯಾವ ತಂದೆಗೂ ಸುಖವಿರೋಲ್ಲ, ಅವಳನ್ನು ಎಂಟು ವರ್ಷ ಆದ ಹಾಗೆ ಮದುವೆ ಮಾಡಬೇಕು. ಸರಿಯಾದ ವರ ಸಿಗದಿದ್ದರೆ ತಂದೆ ಚಿಂತೆಗೀಡಾಗುತ್ತಾನೆ.

ಬೀರಬಲ್ ! ನೀನು ಏನು ಹೇಳುತ್ತಿದ್ದ ನನಗೆ ಅರ್ಥವಾಗುತ್ತಿಲ್ಲ, ಎಷ್ಟು ಜನಕ್ಕೆ ಹೆಣ್ಣು ಮಕ್ಕಳಿಲ್ಲ? ನಿನಗೊಬ್ಬನಿಗೆ ಏನು ಹೆಣ್ಣು ಮಗು ಇರೋದು?”

ಇಲ್ಲ, ಆದರೆ ಹೆಣ್ಣು ಮಗು ಸಾಕೋದು ಸುಲಭವಲ್ಲ.

ಬೀರಬಲ್, ಚಿಂತಸಬೇಡ, ನನಗೆ ಅನೇಕ ಹಿಂದೂ ರಾಜರು ಗೊತ್ತು ಸುಲಭವಾಗಿ ವರ ಸಿಗುತ್ತಾನೆ. ಎಷ್ಟೋ ಹಿಂದೂ ರಾಜರು ಹೆಣ್ಣು ಮಕ್ಕಳಿರೋರು ಸುಖವಾಗಿರೋದೂ ನೋಡಿದ್ದೇನೆ. ನೀನೋ ಮಂತ್ರಿ ನಿನಗೇಕೆ ಚಿಂತೆ?”

ಪ್ರಭು ! ನಿಮಗೆ ಹಿಂದೂ ರಾಜರ ಬಗ್ಗೆ ಗೊತ್ತಿರಬೇಕು. ಅವರು ಹೆಣ್ಣು ಮಕ್ಕಳಿರೋ ತಂದೆಯರು ಸುಖವಾಗಿರೋಕ್ಕೆ ಬಿಡೋಲ್ಲ.  ಅಂತಹ ಉದಾಹರಣೆ ಇದೆಯೆ?”

ಹುಜೂರ್ ! ಅದನ್ನೇಕೆ ಕೇಳೀರಿ? ತಂದೆ ತನ್ನ ಮಗಳ ಮದುವೆ ಚೆನ್ನಾಗಿ ಮಾಡಿದರು ವರ ಮತ್ತು ಅವನ ಕಡೆಯವರು ಏನಾದರೂ ಒಂದು ತಪ್ಪು ಕಂಡು ಹಿಡಿದು ತೊಂದರೆ ಕೊಡುತ್ತಾರೆ. ಒಬ್ಬ ತಂದೆ ಹೆಣ್ಣು ಮಗು ಹುಟ್ಟಿದ ದಿನದಿಂದಲೇ ಅವಳ ಮದುವೆಗೆ ಯೋಚನೆ ಮಾಡುತ್ತಾನೆ. ಇತರರಿಂದ ಸಾಲ ತಗೊಂಡು ತನ್ನ ಮಗಳ ಮದುವೆ ಮಾಡುತ್ತಾನೆ. ಮದುವೆ ಆದ ಮೇಲೂ ಶಾಂತಿಯಿಂದ ಇರೋಲ್ಲ, ಅದಕ್ಕೆ ನನಗೆ ಈಗ ಚಿಂತೆ

ಬೀರಬಲ್, ಅರ್ಥವಾಯಿತು. ನಿನಗೇನು ಬೇಕೋ ಅದನ್ನು ನಾನು ಮಾಡುತ್ತೇನೆ. ಮೊಗಲ್ ದೊರೆ ನಿನ್ನ ಬಳಿ ಇರೋವಾಗ ನಿನಗೇಕೆ ಚಿಂತೆ? ಬಿಡು.

ಆದರೂ ಬೀರಬಲ್ ಚಿಂತೆ ಮಾಡೋದು ಬಿಡಲಿಲ್ಲ ಹಲವು ದಿನಗಳಾದವು. ವರ್ಷಗಳೇ ಆದವು. ಬೀರಬಲ್ ಮಗಳು ಚೆನ್ನಾಗಿ ಬೆಳೆದಳು. ಬೀರಬಲ್ ವರನನ್ನು ಹುಡುಕತೊಡಗಿದನು. ಕೆಲದಿನಗಳಲ್ಲಿ ಒಬ್ಬ ವರ ಸಿಕ್ಕಿದನು. ಮದುವೆ ಏರ್ಪಾಟುಗಳನ್ನು ಮಾಡಿದನು ಬೀರಬಲ್. ಮದುವೆ ದಿನ ಗೊತ್ತುಪಡಿಸಿದ. ಅವನು ಒಂದು ದೊಡ್ಡ ಪಾತ್ರೆ ಇಟ್ಟು ಅದರ ತುಂಬ ಚಿನ್ನದ ನಾಣ್ಯಗಳನ್ನು ತುಂಬಿದ. ವರನಿಗೆ ಸಂಬಂಧಿಸಿದ ಜನ ಎಷ್ಟು ಸಾಧ್ಯವೋ ಅಷ್ಟು ಚಿನ್ನದ ನಾಣ್ಯ ತೆಗೆದುಕೊಂಡು ಹೋಗಬಹುದೆಂದು ಬೀರಬಲ್ ಘೋಷಿಸಿದ.

ಅಕ್ಬರನೂ ಮದುವೆಯಲ್ಲಿ ಭಾಗವಹಿಸಿದನು. ಮದುವೆ ಚೆನ್ನಾಗಿ ಆಯಿತು.

ವರ ವಧುವನ್ನು ತನ್ನ ಊರಿಗೆ ಕರೆದೊಯ್ದ ಬಂಧುಗಳು ಆಗ್ರಾ ಬಿಟ್ಟು ಹೋದರು.

ಇಷ್ಟೆಲ್ಲ ಆದರೂ ಅಕ್ಬರಗೆ ಬೀರಬಲ್ ಸಂತೋಷವಾಗಿಲ್ಲದಿದ್ದುದು ಆಶ್ಚರ್ಯವಾಯಿತು.

ಬೀರಬಲ್ ! ಏಕೆ ನೀನು ಸಂತೋಷವಾಗಿಲ್ಲ?” ಮದುವೆ ಮಾಡಿಯಾಯಿತಲ್ಲ, ವರನ ಕಡೆಯವರೂ ಅವನ ತಂದೆ ಎಲ್ಲರೂ ಸಂತೋಷವಾಗಿದ್ದಾರೆ. ಇದು ನಿನಗೆ ಹೆಮ್ಮೆಯಲ್ಲವೇ?”

ಇಲ್ಲ ಸರ್ಕಾರ್. ವರನ ಕಡೆ ಕೆಲವು ಜನ ಇನ್ನೂ ತೃಪ್ತರಾಗಿಲ್ಲ

 ಅದು ಹೇಗೆ ಬೀರಬಲ್ ? ಎಲ್ಲರಿಗೂ ನೀನು ಉಡುಗೊರೆ ಕೊಟ್ಟಿರುವೆಯಲ್ಲ.

ಹೌದು. ಆದರೆ ಕೆಲವು ಜನ ವಧುವಿನ ತಂದೆ ಜಿಪುಣ, ತುಂಬಾ ಚಿಕ್ಕ ಬಾಯಿ ಇರೋ ಪಾತ್ರೆ ಇಟ್ಟಿದ್ದಾನೆ. ಆ ಪಾತ್ರೆಯಲ್ಲಿ ಎರಡೂ ಕೈಗಳು ಹಾಕಲು ಆಗೋದೆ ಇಲ್ಲ ಅಂತಾ ಹೇಳ್ತಾ ಇದ್ದರು. ಅವರಿಗೆಲ್ಲ ಹೆಚ್ಚು ನಾಣ್ಯಗಳು ತೆಗೆದುಕೊಳ್ಳಲು ಆಗಿಲ್ಲ.ಅಕ್ಬರ್‌ ಮೂಕನಾದ.

ಬೀರಬಲ್ ! ನಿಜ, ನಾವು ಏನೇ ಮಾಡಿದರೂ ವರನ ಗುಂಪಿನವರು ಖಂಡಿತ ತಪ್ಪು ಕಂಡು ಹಿಡಿಯುತ್ತಾರೆ. ನೀನು ಹೇಳಿದ್ದು ನಿಜ. ವಧುವಿನ ತಂದೆ ಎಂದೂ ಖುಷಿಯಾಗಿರಲಾರ. ನಾನು ಒಪ್ಪಿದೆಎಂದು ಹೇಳಿದ ಅಕ್ಬರ್‌ ಅರಮನೆಗೆ ಹಿಂತಿರುಗಿದನು.

ರೈದಾಸ

ರೈದಾಸ ಅಕ್ಬರನ ಕಾಲದ ಒಬ್ಬ ಕವಿ. ಒಮ್ಮೆ ಅವನು ಒಬ್ಬ ಸಿರಿವಂತನ ಮನೆಗೆ ಹೋದನು. ಅವನೊಬ್ಬ ವರ್ತಕ. ರೈದಾಸನನ್ನು ಸಂತೋಷದಿಂದ ಬರಮಾಡಿಕೊಂಡು ಬಂದ ಉದ್ದೇಶವೇನೆಂದು ಕೇಳಿದನು.

ರೈದಾಸ ಉತ್ತರಿಸಿ, “ಸ್ವಾಮಿ, ನಾನೊಬ್ಬ ಕವಿ. ನನ್ನ ಹೆಸರು ರೈದಾಸ. ನಾನು ಕೆಲವು ಕವಿತೆಗಳನ್ನು ಬರೆದಿದ್ದೇನೆ. ಅವನ್ನು ನಿಮ್ಮ ಮುಂದೆ ಓದ ಬಯಸುತ್ತೇನೆಎಂದ.

ಹಾಗೇನು?  ನನಗೂ ಈಗ ಅಂತಹ ಕೆಲಸವಿಲ್ಲ, ಕವಿತೆಗಳೆಂದರೆ ನನಗೂ ಇಷ್ಟ ದಯ ಮಾಡಿ ಓದಿ ಕೇಳುತ್ತೇನೆ.

ವರ್ತಕನ ಮಾತಿಗೆ ಹರ್ಷಿಸಿ ರೈದಾಸ ಕವಿತೆಗಳನ್ನೋದಿದನು. ವರ್ತಕನಿಗೆ ರೈದಾಸನ ಬಗ್ಗೆ ಹೆಮ್ಮೆಯಾಯಿತು. ಅದೂ ಅಲ್ಲದೆ ರೈದಾಸ ತನ್ನ ಕವಿತೆಗಳಲ್ಲಿ ಒಂದರಲ್ಲಿ ಅವನನ್ನು ಹೊಗಳಿದ್ದನು.

ರೈದಾಸ ನಿನ್ನ ಕವಿತೆಗಳು ಚೆನ್ನಾಗಿವೆ. ಕೊನೆಯ ಪದ್ಯ ತುಂಬಾ ಚೆನ್ನಾ ಗಿದೆ. ನೀನು ನನ್ನನ್ನು ಹೊಗಳಿದ್ದಿ, ಕುಬೇರನ ಸಿರಿಗೆ ನನ್ನನ್ನು ಹೋಲಿಸಿದ್ದಿ.ಆ ದಿನಗಳಲ್ಲಿ ಕವಿಗಳಿಗೆ ಸಿರಿವಂತರಿಂದ ಚಿನ್ನ - ಹಣ ಸಿಗುತ್ತಿತ್ತು, ವರ್ತಕ ರೈದಾಸನಿಗೆ ಮಾತನಾಡಿ,

ರೈದಾಸ, ನೀನು ನಾಳೆ ಬಾ. ನಿನಗೆ ಉಡುಗೊರೆಗಳನ್ನು ಕೊಡುತ್ತೇನೆಎಂದು ಹೇಳಿಕಳುಹಿಸಿದನು.

ಮರುದಿನ ರೈದಾಸ ವರ್ತಕನಲ್ಲಿಗೆ ಹೋದಾಗ ಆ ವರ್ತಕ ರೈದಾಸನನ್ನು ನೀನು ಯಾರೋ ತಿಳಿಯದು. ನಿನ್ನನ್ನು ನಾನು ನೋಡಿದ್ದೆ ಇದೇ ಮೊದಲುಎಂದು ಬಿಟ್ಟು

ಸ್ವಾಮಿ, ನೆನ್ನೆ ತಾನೆ ನನ್ನ ಪದ್ಯಗಳನ್ನು ಓದಿಸಿಕೇಳಿದಿರಲ್ಲ ಮರೆತು ಬಿಟ್ಟಿರಾ?” ಎಂದು ರೈದಾಸ ಕೇಳಿದ.

ಹೌದು ಹೌದು ! ನೀನು ಒಳ್ಳೆ ಕವಿ ಇರಬಹುದು. ಆದರೆ ಇನ್ನೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ನಿಮಗಿರುವುದಿಲ್ಲ, ನಿನ್ನ ಪದ್ಯಗಳು ಅಷ್ಟೊಂದು ಆಸಕ್ತಿ ಮೂಡಿಸಿದ್ದರೆ ನೆನ್ನೆಯೇ ನಾನು ಉಡುಗೊರೆಗಳು ಕೊಡುತ್ತಿದ್ದೆ. ನಾನು ಇವತ್ತು ಬಾ ಎಂದು ಹೇಳುತ್ತಿರಲಿಲ್ಲ ನೀನು ಇರಲಿ ನೋಡೋಣ ಎಂದು ಬಂದಂತಿದೆ.

ವರ್ತಕನ ಮಾತು ಕೇಳಿ ರೈದಾಸ ಚಕಿತನಾದ. ಇವನ ಬಳಿ ಮಾತನಾಡಿ ಪ್ರಯೋಜನವಿಲ್ಲ ಎಂದು ಅಲ್ಲಿಂದ ಹೊರಟು ಬಿಟ್ಟ ದಾರಿಯಲ್ಲಿ ಕುದುರೆ ಮೇಲೆ ಬೀರಬಲ್ ಬರುತ್ತಿರುವುದು ಕಾಣಿಸಿತು.

ರೈದಾಸ ಬೀರಬಲಿಗೆ ನಮಸ್ಕಾರ ಮಾಡಿ, “ಸ್ವಾಮಿ, ನಾನು ಮೋಸ ಹೋಗಿದ್ದೇನೆ. ನನ್ನೆ ಭರವಸೆ ಕೊಟ್ಟು ಇಂದು ನನಗೆ ಒಬ್ಬ ಮೋಸಮಾಡಿದ್ದಾನೆಎಂದು ತಿಳಿಸಿ ತನ್ನ ಕಥೆ ಹೇಳಿಕೊಂಡ.

ಅದಕ್ಕೆ ಬೀರಬಲ್, “ರೈದಾಸ, ಚಿಂತಿಸಬೇಡ. ನನ್ನೊಂದಿಗೆ ಬಾಎಂದು ಹೇಳಿ ರೈದಾಸನನ್ನು ಕರೆದುಕೊಂಡು ಹೋದ. ಇಬ್ಬರೂ ಮನೆಗೆ ಹೋದರು.

ಬೀರಬಲ್ ರೈದಾಸನಿಗೆ ಕುಡಿಯಲು ಹಣ್ಣಿನ ರಸ ಕೊಟ್ಟು ರೈದಾಸ, ನೀನು ಕವಿ. ವರ್ತಕ ತನ್ನ ಮಾತಿನಂತೆ ನಡೆದುಕೊಂಡಿಲ್ಲ. ನೀನು ನಾನು ಹೇಳಿದಂತೆ ಮಾಡುಎಂದ.

ಸ್ವಾಮಿ, ದಯಮಾಡಿ ಹೇಳಿ, ನಾನೇನು ಮಾಡಲಿ?”

ನೀನು ನಂಬುವಥ ಗೆಳೆಯರು ಯಾರಾದರೂ ಆಗ್ರಾದಲ್ಲಿ ಇದ್ದಾರೆಯೆ?”

ಇದ್ದಾರೆ ಸ್ವಾಮಿ. ಒಬ್ಬ ಇದ್ದಾನೆ.

ಹಾಗಾದರೆ ಅವನ ಮನೆಗೆ ಹೋಗು.. ಆವನನು ಶ್ರೀಮಂತನಾಗಿರಬೇಕಿಲ್ಲ. ನೀನು ಅವನಿಗೆ ನಾನು ಕೊಡುವ ಐದು ಚಿನ್ನದ ನಾಣ್ಯಗಳನ್ನು ಕೊಟ್ಟು ಒಂದು ಔತಣಕೂಟ ಏರ್ಪಾಟು ಮಾಡಲು ಹೇಳು. ನಂತರ ಆ ಮೋಸ ಮಾಡಿದ ಶ್ರೀಮಂತ ವರ್ತಕನನ್ನು ಊಟಕ್ಕೆ ಆಹ್ವಾನಿಸು. ನಂತರ ಏನು ಮಾಡಬೇಕು ಎಂದು ಹೇಳುತ್ತೇನೆ.

ಬೀರಬಲ್ ಹಾಗೆ ಹೇಳಿ ಕೊಟ್ಟ ಐದು ಚಿನ್ನದ ನಾಣ್ಯಗಳನ್ನು ತೆಗೆದುಕೊಂಡು ರೈದಾಸ, ಗೆಳೆಯ ಮಾಯಾದಾಸನ ಮನೆಗೆ ಹೋದ. ಮಾಯಾದಾಸ ರೈದಾಸ ಹೇಳಿದುದಕ್ಕೆ ಒಪ್ಪಿಕೊಂಡ.

ಮಾಯಾದಾಸ ಶ್ರೀಮಂತ ವರ್ತಕನ ಮನೆಗೆ ಹೋಗಿ ಔತಣ ಕೂಟಕ್ಕೆ ಆಹ್ವಾನಿಸಿದನು.

ಭಾನುವಾರ ಔತಣವಿದೆ. ದಯಮಾಡಿ ಬನ್ನಿ ಅತಿಥಿಗಳಿಗೆ ಚಿನ್ನದ ತಟ್ಟೆಗಳಲ್ಲಿ ಊಟ ಹಾಕಿ ಆ ತಟ್ಟೆಯನ್ನು ಅವರಿಗೆ ಉಡುಗೊರೆ ಕೊಡಲಾಗುತ್ತದೆ.

ಮಾಯಾದಾಸನ ಮಾತು ಕೇಳಿ ವರ್ತಕ ಹಿಗ್ಗಿ ಹೋದ. ಭಾನುವಾರ ಮಾಯಾದಾಸನ ಮನೆಗೆ ಹೋದ. ಅವನು ವಜ್ರದ ಆಭರಣಗಳನ್ನು ಧರಿಸಿದ್ದ, ಒಳ್ಳೆ ಬಟ್ಟೆ ಹಾಕಿಕೊಂಡಿದ್ದ.

ಅಲ್ಲಿ ಆಶ್ಚರ್ಯ ಕಾದಿತ್ತು. ಯಾರೂ ಔತಣಕ್ಕೆ ಬಂದಿರಲಿಲ್ಲ, ಮಾಯಾದಾಸ್ ರೈದಾಸ ಇಬ್ಬರೇ ಇದ್ದರು. ಇಬ್ಬರೂ ವರ್ತಕನನ್ನು ಸ್ವಾಗತಿಸಿ ಮಾತನಾಡಿಸುತ್ತ ಕುಳಿತರು. ಸಮಯ ಹೋಗಿದ್ದೆ ತಿಳಿಯಲಿಲ್ಲ ವರ್ತಕನಿಗೆ ಹಸಿವಾಯಿತು. ಅವನಿಗೆ ಮಧ್ಯರಾತ್ರಿಯಾದರೂ ಊಟ ಬಡಿಸಲಿಲ್ಲ,

“ಮಾಯಾದಾಸ, ನನಗೆ ಹಸಿವಾಗಿದೆ. ಊಟ ಬಡಿಸುವಿರಾ?” ಎಂದು ಕೇಳಿದ.

ಊಟವೇ? ಯಾವ ಊಟ? ನೀವು ಮಾತಾಡುತ್ತಿರುವುದು?” ಮಾಯಾದಾಸ ಅನುಮಾನಿಸಿ ಕೇಳಿದ,

ಮಾಯಾದಾಸ ! ನೀನೇ ಕಳೆದ ವಾರ ನನ್ನ ಮನೆಗೆ ಬಂದು ಊಟಕ್ಕೆ ಕರೆದೆಯಲ್ಲವೆ? ಆಗಲೇ ಮರೆತು ಬಿಟ್ಟೆಯಾ?” ಕೇಳಿದ ವರ್ತಕ.

 ಅದಕ್ಕೇನು ಸಾಕ್ಷಿ? ನಾನು ಯಾವಾಗ ನಿಮ್ಮನ್ನು ಊಟಕ್ಕೆ ಕರೆದೆ?” ವರ್ತಕ ಬೆಪ್ಪಾದ

ಮಾಯಾದಾಸ ಮುಂದುವರಿದು, “ಸರಿ, ನಿಮ್ಮನ್ನು ಊಟಕ್ಕೆ ಕರೆದೆವೆಂದೆ ಇಟ್ಟುಕೊಳ್ಳುತ್ತೇನೆ. ನೀವು ನಗು ನಗುತ್ತಾ ಇರಬೇಕೆಂದು ಹಾಗೆ ಹೇಳಿರಬೇಕಷ್ಟೆ ನಾವು ಇನ್ನೊಬ್ಬರನ್ನು ಸಂತೋಷವಾಗಿಡದಿರಬಹುದು. ಆದರೆ ಯಾರನ್ನೂ ನಿರಾಶೆಗೊಳಿಸುವುದಿಲ್ಲಹೇಳಿದ ಮಾಯಾದಾಸ.

ವರ್ತಕನಿಗೆ ಹಸಿವೆ ಹೆಚ್ಚಾಯಿತು. ಆಗ ಅಲ್ಲಿಗೆ ಬೀರಬಲ್ ಬಂದ. ಓಹೋ ಏನು ವರ್ತಕರು? ರೈದಾಸನಿಗೆ ಕೆಲವು ದಿನಗಳ ಹಿಂದೆ ನೀನು ಹೇಳಿದ್ದು ನೆನಪಿದೆಯೋಎಂದು ಕೇಳಿದ.

ವರ್ತಕನಿಗೆ ನೆನಪಾಗಿ, “ಸ್ವಾಮಿ, ನಾನು ರೈದಾಸನಿಗೆ ಉಡುಗೊರೆಗಳು ಕೊಡುತ್ತೇನೆಂದು ಹೇಳಿದ್ದೆ. ನಾನು ಆದಿನ ಅವನನ್ನುಹಿಂದಕ್ಕೆ ಕಳುಹಿಸಿದಾಗ ನಾನು ಮಾಯಾದಾಸ ಇಂದು ಏನು ಹೇಳಿದೆನೊ ಅದನ್ನೆ ಹೇಳಿದ್ದೆಎಂದು ತನ್ನ ತಪ್ಪು ಒಪ್ಪಿಕೊಂಡ.

ಮತ್ತೆ ಮಾತನಾಡಿ, “ಸ್ವಾಮಿ, ರೈದಾಸ ಆ ದಿನ ಅರ್ಥಪೂರ್ಣ ಕವಿತೆಗಳನ್ನು ಓದಿ ನನ್ನ ಮನಸ್ಸು ಸಂತೋಷಪಡಿಸಿದ. ರೈದಾಸ ನನ್ನಲ್ಲಿ ಏನೂ ಬೇಡಲಿಲ್ಲ, ನಾನೇ ಕೊಡುತ್ತೇನೆ ಎಂದು ಹೇಳಿದೆ. ರೈದಾಸ ಒಳ್ಳೆ ಕವಿ. ನಾನು ಅವನಿಗೆ ನನ್ನ ಕತ್ತಿನ ಸರವನ್ನು ಕೊಡುತ್ತೇನೆಎಂದು ಹೇಳಿ ರೈದಾಸನಿಗೆ ತನ್ನ ಕತ್ತಿನಲ್ಲಿದ್ದ ಸರವನ್ನು ಕೊಟ್ಟು ಕ್ಷಮಿಸಬೇಕೆಂದು ಕೇಳಿಕೊಂಡ. ರೈದಾಸನನ್ನು ಅಕ್ಬರನ ಆಸ್ಥಾನಕ್ಕೆ ಕರೆಯಿಸಿ ಸನ್ಮಾನಿಸಲಾಯಿತು. ರೈದಾಸ ಬೀರಬಲ್‌ನನ್ನು ಹೊಗಳಿದನು. ವರ್ತಕನಿಗೆ ತಕ್ಕ ಪಾಠ ಕಲಿಸಿರುದಕ್ಕೆ ವಂದಿಸಿದನು.

 

ಯಾರೇ ಆಗಲಿ ಕೊಟ್ಟ ಮಾತು ತಪ್ಪಬಾರದು. ಒಬ್ಬರಿಗೆ ಮೋಸ ಮಾಡಿಬಿಡಬಹುದು. ಆದರೆ ನಾಳೆ ತಾನೇ ಅಂತಹ ಸನ್ನಿವೇಶಕ್ಕೆ ಸಿಕ್ಕಿಕೊಂಡಾಗ ಆಗುವ ನೋವು ಕಡಮೆಯಲ್ಲ.

 

ಬೀರಬಲ್ ರಹಸ್ಯ

ಒಂದು ದಿನ ಬೀರಬಲ್ ಸಭೆಗೆ ಬಂದಾಗ ಅಲ್ಲಿ ಎಲ್ಲರೂ ತುಂಬಾ ಖುಷಿಯಾಗಿರುವುದನ್ನು ಕಂಡು ಚಕಿತನಾದ.

ಏನಿದು ಎಲ್ಲರೂ ಸಂತೋಷವಾಗಿದ್ದೀರಿ? ಏನು ಸಮಾಚಾರ?” ಎಂದು ಕೇಳಿದ.

ಹ್ಹ ಹ್ಹ ! ನಾವು ನಮ್ಮ ಚರ್ಮಗಳ ಬಣ್ಣ ಕುರಿತು ಚರ್ಚಿಸುತ್ತಿದ್ದೆವುಎಂದರು ಅಲ್ಲಿದ್ದವರು.

ನಾವೆಲ್ಲ ತುಂಬಾ ಚೆನ್ನಾಗಿದ್ದೇವೆಎಂದು ಹೇಳಿದ ಒಬ್ಬ.

ಇನ್ನೊಬ್ಬ ಬೀರಬಲ್‌ಗೆ, “ಅಯ್ಯಾ ಬೀರಬಲ್ ! ನೀನು ಕಪ್ಪಗಿದ್ದೀಯಾಎಂದು ಹೇಳಿದಾಗ ಬೀರಬಲ್ಗೆ ಸಿಟ್ಟು ಬಂದರೂ ಸುಮ್ಮನಿದ್ದು, ಆದರೆ ನನ್ನ ಕಪ್ಪುಚರ್ಮದ ರಹಸ್ಯ ನಿಮಗೆ ತಿಳಿಯದೆ?” ಎಂದು ಕೇಳಿದ.

 ರಹಸ್ಯವೇ?” ಬೆಪ್ಪಾದರು ಎಲ್ಲರೂ.

ನೋಡಿ ದೇವರು ಭೂಮಿ ಸೃಷ್ಟಿಸಿದಾಗ ಈ ಸಸ್ಯ ಪಶುಪಕ್ಷಿ ಇವುಗಳಿಂದ ತೃಪ್ತನಾಗಲಿಲ್ಲ. ಆಗ ಅವನು ತನ್ನ ಅತ್ಯುತ್ತಮವಾದ ಸೃಷ್ಟಿ ಮನುಷ್ಯನನ್ನು ಮಾಡಿದ. ಆ ನಂತರ ಫಲಿತಾಂಶಗಳಿಂದ ಹರ್ಷಗೊಂಡ. ಬಳಿಕ ಮನುಷ್ಯನ ಮೇಲೆ ತನ್ನ ವಿಶೇಷ ಉಡುಗೊರೆಗಳನ್ನು ಕೊಡಲು ಮುಂದಾದ ಸೌಂದರ್ಯ, ಬುದ್ಧಿವಂತಿಕೆ, ಬಲ ಮತ್ತು ಸಿರಿ ಈ ನಾಲ್ಕು ಉಡುಗೊರೆಗಳನ್ನು ಕೊಡಲು ನಿರ್ಧರಿಸಿ ತಾನು ಸೃಷ್ಟಿಸಿದ ಮಾನವನ ಮೇಲೆ ಕರುಣಿಸಿದ

ಆಮೇಲೆ?”

ಭಗವಂತ ಈ ಉಡುಗೊರೆಗಳಲ್ಲಿ ನಿನಗೆ ಯಾವುದು ಬೇಕೋ ಅದನ್ನು ತಗೆದುಕೊ, ಐದು ನಿಮಿಷ ಸಮಯ ಕೊಡುತ್ತೇನೆ ಎಂದ. ನಾನು ಆಗ ಬುದ್ದಿವಂತಿಕೆಯನ್ನು ಆರಿಸಿಕೊಂಡೆ. ಇತರ ಉಡುಗೊರೆಗಳನ್ನು ತೆಗೆದುಕೊಳ್ಳಲು ಸಮಯ ಸಿಗಲಿಲ್ಲ. ಆದರೆ ನೀವೆಲ್ಲ ಐಶ್ವರ್ಯ ಮತ್ತು ಸೌಂದರ್ಯಗಳಿಗೆ ಆಕರ್ಷಿತರಾದಿರಿ, ಬುದ್ಧಿವಂತಿಕೆ ಪಡೆದುಕೊಳ್ಳಲಿಲ್ಲ ಬೇಕಿದ್ದರೆ ನೀವೇ ಫಲಿತಾಂಶಗಳನ್ನು ನೋಡಿಕೊಳ್ಳಿ.

ಬೀರಬಲ್‌ನ ಉತ್ತರಕ್ಕೆ ಎಲ್ಲ ದಂಗಾಗಿ ಹೋದರು. ಯಾರು ಮಾತನಾಡಲಿಲ್ಲ.

ಆದರೆ ಚಕ್ರವರ್ತಿ, "ಆಹಾ! ಬೀರಬಲ್, ಸರಿಯಾಗಿ ಹೇಳಿದೆ ನಿನ್ನ ಕಪ್ಪು ಬಣ್ಣದ ರಹಸ್ಯ ತಿಳಿಯಿತುಎಂದು ಮೆಚ್ಚಿಕೊಂಡ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad

Search for Article