Type Here to Get Search Results !

Famous 60+ Swami Vivekananda Quotes in kannada

Vivekananda represented Hinduism at the 1893 , With his opening words, “Sisters and brothers of America”, Swamiji brought the crowd to its feet. Thereafter, he was invited to speak all over America and Europe.

Vivekananda was a person with a great spiritual presence and tremendous intellectual knowledge , who was a tireless teacher and writer. He wrote poems and hymns in Bengali, Sanskrit and English.

He made major contributions  to both Indian culture and world culture .


ವಿದ್ಯುತ್ ವಾಣಿ





ಧರ್ಮದ ರಹಸ್ಯವಿರುವುದು ಸಿದ್ದಾಂತ ಗಳಲ್ಲಲ್ಲ, ಅದರ ಅನುಷ್ಠಾನದಲ್ಲಿ ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು ಇದೇ ಧರ್ಮದ ಸರ್ವಸ್ವ


ನನ್ನ ಆದರ್ಶವನ್ನು ಕೆಲವೇ ಪದಗಳಲ್ಲಿ ವಿವರಿಸಬಹುದು: ಮಾನವ ಜನಾಂಗಕ್ಕೆ ಅವರ ದೈವಿಕತೆಯನ್ನೂ ಅವರ ಜೀವನದ ಪ್ರತಿಯೊಂದು ಚಲನವಲನದಲ್ಲೂ ಹೇಗೆ ಅದನ್ನು ವ್ಯಕ್ತಗೊಳಿ ಸುವುದು ಎಂಬುದನ್ನೂ ಬೋಧಿಸುವುದು.
 ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವದ ಪ್ರಕಾಶನವೇ ಧರ್ಮ.


ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನ ನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.


ಯಾರಿಗೆ ತನ್ನಲ್ಲಿ ತನಗೇ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೊ ಅವನು ನಾಸ್ತಿಕ ಎಂದು.


ಈ ಜಗತ್ತಿನ ಇತಿಹಾಸ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ದೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸ ಬಲ್ಲಿರಿ.


ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ.


 ಪ್ರತಿಯೊಬ್ಬನಲ್ಲಿಯೂ ಪೂರ್ಣ ಋಷಿತ್ವ, ವನ್ನು ಪಡೆಯುವ ಸಾಮರ್ಥ ವಾಗಿದೆ. ಅಂತರ್ಹಿತವಾಗಿದೆ.


ಶೈಶವಾವಸ್ಥೆಯಿಂದಲೇ ಮಕ್ಕಳು ಶಕ್ತಿ ಶಾಲಿಗಳಾಗುವಂತೆ ಮಾಡಿ, ಅವರಿಗೆ ದುರ್ಬಲತೆ ಯನ್ನಾಗಲಿ, ಮೂಢ ಆಚರಣೆಗಳನ್ನಾಗಲಿ ಬೋಧಿಸಬೇಡಿ. ಅವರನ್ನು ಶಕ್ತಿವಂತರನ್ನಾಗಿ ಮಾಡಿ.


 ಶಕ್ತಿಶಾಲಿಗಳಾಗಿ, ಶ್ರದ್ಧಾವಂತರಾಗಿ. ಆಗ ಎಲ್ಲವೂ ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ.


ಶಕ್ತಿಯೆಲ್ಲ ನಿಮ್ಮೊಳಗೇ ಇದೆ ; ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ.


ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಛಾಶಕ್ತಿ ಬೇಕು. “ನಾನು ಸಮುದ್ರವನ್ನೇ ಪಾನಮಾಡುತ್ತೇನೆ,' ಎಂದು ಪ್ರಯತ್ನಶೀಲನು ಹೇಳುತ್ತಾನೆ. 'ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿ ಯಾಗುತ್ತವೆ' ಎನ್ನುತ್ತಾನವನು. ಇಂತಹ ಶಕ್ತಿಯನ್ನೂ, ಛಾತಿಯನ್ನೂ ಪಡೆಯಿರಿ ; ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ.


ಸ್ವಾರ್ಥವೇ ಅಧರ್ಮ; ನಿಸ್ವಾರ್ಥವೇ ಧರ್ಮ, ಹೆಚ್ಚು ನಿಃಸ್ವಾರ್ಥಿಯಾದವನೇ ಧರ್ಮಿಷ್ಠ ಮತ್ತು ಶಿವನಿಗೆ ಹತ್ತಿರ. ನಿಜವಾಗಿಯೂ ಜೀವನ ಸೇವೆಯೇ ಶಿವನ ಸೇವೆ.


ಸ್ವಾರ್ಥತೆಯೇ ಪ್ರತಿಯೊಬ್ಬನಲ್ಲಿಯೂ ಇರುವ ಪ್ರತ್ಯಕ್ಷ ರಾಕ್ಷಸ. ಪ್ರತಿಯೊಂದು ಬಗೆಯ ಸ್ವಾರ್ಥವೂ ಸೈತಾನನೇ.


ಪ್ರತಿಯಾಗಿ ಏನನ್ನೂ ಬಯಸಬೇಡಿ. ಆದರೆ ನೀವು ಹೆಚ್ಚು ಕೊಟ್ಟಷ್ಟೂ ನಿಮಗೆ ಹೆಚ್ಚು ಬರುತ್ತದೆ.


ವಿಕಾಸವೇ ಜೀವನ; ಸಂಕೋಚವೇಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.


 ಪ್ರೀತಿಯ ಮೂಲಕ, ಸಹಾನುಭೂತಿಯ ಮೂಲಕ ಮಾತ್ರವೇ ಒಳ್ಳೆಯ ಫಲಿತಾಂಶಗಳು ಉಂಟಾಗುತ್ತವೆ.


ಪರರ ಸೇವೆಗಾಗಿ ಸರ್ವಸ್ವವನ್ನೂ ತೊರೆಯುವವನು ಮಾತ್ರ ಮುಕ್ತಿಗೆ ಅರ್ಹ.


ಬುದ್ಧಿ ಶ್ರೇಷ್ಠವಾದುದು ನಿಜ. ಆದರೆ ಅದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ ; ಹೃದಯವೇ ಸ್ಫೂರ್ತಿಯ ಮೂಲ.


ವತ್ಸ, ಪ್ರೀತಿಗೆ ಸೋಲೆಂಬುದಿಲ್ಲ; ನಾಳೆಯೋ ಅಥವಾ ಯುಗಾಂತರವೊ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ. ನಿಮ್ಮ ಮಾನವಬಂಧುಗಳನ್ನು ನೀವು ಪ್ರೀತಿಸುತೀರೇನು ?


 ಜೀವನಾವಧಿ ಅಲ್ಪ, ಪ್ರಾಪಂಚಿಕ ವಿಷಯ ಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ಮೃತರು.


ಎದ್ದೇಳಿ, ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ ? ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರ ಕಲ್ಲುಗಳಿಗೂ ಏನು ವ್ಯತ್ಯಾಸ ? ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.


ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ.


 


ಎಲ್ಲವನ್ನೂ ದೂರ ಎಸೆಯಿರಿ. ನಿಮ್ಮ ಮುಕ್ತಿಯನ್ನು ಕೂಡ ಈಡಾಡಿ, ಇತರರಿಗೆ ಸಹಾಯ ಮಾಡಿ.


 ಮಹತ್ಕಾರ್ಯವು ಮಹಾ ಬಲಿದಾನದ ಮೂಲಕ ಮಾತ್ರ ಸಾಧ್ಯ.


ನಮಗೆ ತ್ಯಾಗ ಮಾಡುವ ಧೈರ್ಯ ಬೇಕಾದರೆ ನಾವು ಉದ್ವೇಗವಶರಾಗಕೂಡದು. ಉದ್ವೇಗ ಕೇವಲ ಪ್ರಾಣಿಗಳಿಗೆ ಸೇರಿದ್ದು, ಅವು ಸಂಪೂರ್ಣವಾಗಿ ಉದ್ಯೋಗದ ಅಧೀನದಲ್ಲಿರುವುವು.


ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶ ವಿಲ್ಲದ ವ್ಯಕ್ತಿಯು ಐವತ್ತು ಸಾವಿರ ತಪ್ಪು ಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು.


 ಜೀವನದಲ್ಲಿ ಉನ್ನತ ಆದರ್ಶವನ್ನು ಸ್ವೀಕರಿಸಿ ಅದಕ್ಕಾಗಿ ಇಡೀ ಜೀವನವನ್ನೇ ಬಲಿಕೊಡುವುದು ಪರಮಶ್ರೇಷ್ಠ.


ನಮ್ಮ ದೇಶಕ್ಕೆ ಪುರುಷಸಿಂಹರು ಬೇಕಾಗಿದ್ದಾರೆ. ಪುರುಷಸಿಂಹರಾಗಿ. ಬಂಡೆಯಂತೆ ಸ್ಥಿರವಾಗಿ ನಿಲ್ಲಿ. ಸತ್ಯವು ಯಾವಾಗಲೂ ಜಯಿಸುತ್ತದೆ.


ಯಾರು ತನ್ನ ಹೃದಯದ ನೆತ್ತರಿನಿಂದ ಇತರರಿಗೆ ದಾರಿ ನಿರ್ಮಿಸುತ್ತಾನೋ ಅವನೇ ಶ್ರೇಷ್ಠ ವ್ಯಕ್ತಿ.                                   


ಕಷ್ಟದಿಂದ ಪಾರಾಗುವ ದಾರಿಯನ್ನುತೋರಿಸುವವನೇ ಮಾನವಕೋಟಿಯ ಸ್ನೇಹಿತ.


ನಿಮ್ಮ ಸೌಲಭ್ಯಗಳನ್ನೂ ನಿಮ್ಮ ಸುಖ ಗಳನ್ನೂ ನಿಮ್ಮ ಹೆಸರು, ಕೀರ್ತಿ, ಸ್ಥಾನಮಾನ ಗಳನ್ನೂ, ಅಷ್ಟೇ ಏಕೆ, ನಿಮ್ಮ ಜೀವಿತವನ್ನೇ ಬಲಿ ಕೊಟ್ಟು ಒಂದು ಮಾನವ ಸೇತುವನ್ನು ನಿರ್ಮಿಸಿ. ಅದರ ಮೂಲಕ ಲಕ್ಷಾಂತರ ಜನರು ಈ ಭವ ಜಲಧಿಯನ್ನು ದಾಟುವಂತಾಗಲಿ.


ಜೀವನವೆಂಬುದು ಕಠಿಣ ಸತ್ಯ. ಧೈರ್ಯ ವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರಿಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.


ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ಬಲಿಷ್ಟರಾಗುವುದಕ್ಕೆ ನಾವಿಲ್ಲಿ ಬಂದಿದ್ದೇವೆ.


 ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.


 ಹೇಡಿಗಳು ಮಾತ್ರ, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ, ಸಹಾನು ಭೂತಿಯುಳ್ಳವರಾಗಿ.


ಸತ್ಯಕ್ಕಾಗಿ ಸರ್ವವನ್ನೂ ಸಮರ್ಪಿಸ ಬಹುದು. ಆದರೆ ಸತ್ಯವನ್ನು ಮತ್ತಾವುದಕ್ಕೂ ತೆರುವುದಕ್ಕೆ ಆಗುವುದಿಲ್ಲ,


ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.


ಶುದ್ಧಚಾರಿತ್ರ್ಯವೊಂದೇ ಕಷ್ಟಪರಂಪರೆ ಗಳ ಅಭೇದ್ಯ ಕೋಟೆಯನ್ನು ಸೀಳಿಕೊಂಡು ಹೋಗಬಲ್ಲದು.


ಶಕ್ತಿ ಇರುವುದು ಸಾಧುಸ್ವಭಾವದಲ್ಲಿ, ಚಾರಿತ್ರ್ಯಶುದ್ದಿಯಲ್ಲಿ.


ಮೊದಲು ಚಾರಿತ್ರ್ಯವನ್ನು ಬೆಳಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು.


ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯ ವಿರುವುದು.


 ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ; ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿ ಕೊಳ್ಳಿ. ಇದರಿಂದ ಮಹತ್ಕಾರ್ಯ ಉದ್ಭವಿಸುತ್ತದೆ.


ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿ ಕೊಳ್ಳಬೇಕು . ಕರ್ತವ್ಯವನ್ನು ಮಾಡಿದರೆ ಕರ್ತವ್ಯಭಾರದಿಂದ ಪಾರಾಗುತ್ತೇವೆ.


ಯಾವಾಗಲೂ ಒಳ್ಳೆಯದನ್ನೇ ಮಾಡಿ. ನಿರಂತರವಾಗಿ ಸದ್ವಿಚಾರವನ್ನೇ ಆಲೋಚಿಸಿ. ದುಷ್ಟ ಸಂಸ್ಕಾರಗಳನ್ನು ನಿಗ್ರಹಿಸುವುದಕ್ಕೆ  ಇದೊಂದೇ ಮಾರ್ಗ.


ಪ್ರತಿಕೂಲವಾದ ಸನ್ನಿವೇಶಗಳನ್ನು ಎದುರಿಸಿ ಜೀವಿಯು ವಿಕಾಸ ಮತ್ತು ಬೆಳವಣಿಗೆ ಯನ್ನು ಹೊಂದುವುದೇ ಜೀವನ.


ಪರಿಸ್ಥಿತಿಗಳನ್ನು ಉತ್ತಮಪಡಿಸಲಾಗುವು ದಿಲ್ಲ, ಆದರೆ ಅವುಗಳನ್ನು ಬದಲಾಯಿಸುವುದ ರಿಂದ ನಾವು ಉತ್ತಮರಾಗುತ್ತೇವೆ.

 


ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ :

 ೧. ಒಳಿತಿನ ಶಕ್ತಿಯಲ್ಲಿ ದೃಢನಂಬಿಕೆ.

೨. ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲ ದಿರುವಿಕೆ. 

೩. ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುತ್ತಿರುವವರಿಗೆ ಸಹಾಯ ಮಾಡುವಿಕೆ.


ನಮಗೆ ನಾವೇ ಕೇಡನ್ನುಂಟುಮಾಡಿ ಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟು ಮಾಡಲಾರದು ಎಂಬುದು ನಿಶ್ಚಯ.


 ನಮ್ಮ ದುಃಖಗಳಿಗೆಲ್ಲ ಜವಾಬ್ದಾರರು, ಮತ್ತಾರೂ ಅಲ್ಲ. ನಮ್ಮ  ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.


ನಿಮ್ಮ ತಪ್ಪಿಗಾಗಿ ಇತರರನ್ನು ದೂಷಿಸ ಬೇಡಿ. ನಿಮ್ಮ ಕಾಲ ಮೇಲೆ ಸಂಪೂರ್ಣ ಜವಾಬ್ದಾರಿಯನ್ನು ನಿಮ್ಮ ನೀತ ಮೇಲೆ ಹೊತ್ತುಕೊಳ್ಳಿ.


ನಿಮ್ಮನ್ನು ನಿಂದಿಸುವ ಜನರನ್ನು ಅಶೀರ್ವದಿಸಿ. ನಿಮ್ಮಲ್ಲಿರುವ ದುರಹಂಕಾರವನ್ನು ಹತ್ತಿಕ್ಕಲು ಅವರು ಎಷ್ಟೊಂದು ಮಾಡುತ್ತಿದ್ದಾರೆ ಎಂಬುದನ್ನು ಯೋಚಿಸಿ


ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ, ಭಗವಂತನಲ್ಲೇ ಇರುವುದು, ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ.


ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ ?


ಯಾವುದನ್ನೂ ಬಯಸಬೇಡಿ. ನಮ್ಮನ್ನು ದುಃಖಕ್ಕೊಳಪಡಿಸುವ ಎಲ್ಲ ಕಷ್ಟಗಳಿಗೂ ಆಸೆಯೇ ಕಾರಣ.


ಇತರರ ಯೋಜನೆಯ ಮೇಲೆ ತಣ್ಣೀರೆರಚಬೇಡಿ. ನಿಂದೆಯನ್ನು ಸಂಪೂರ್ಣವಾಗಿ ಪರಿತ್ಯಜಿಸಿ.


 ಇತರರಿಗೆ ತಿಳಿಯದಂತೆ ಅವರನ್ನು ನಿಂದಿಸುವುದು ಮಹಾ ಅಪರಾಧ ಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣ ತ್ಯಜಿಸ ಬೇಕು.


 ಸಾಧ್ಯವಾದರೆ ಸಹಾಯಮಾಡಿ. ಇಲ್ಲದಿ ದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವದನ್ನು ನೋಡುತ್ತಿರಿ. ನಿಮಗೆ ಸಹಾಯ ಮಾಡಲಾಗದಿದದ್ದರೆ ನೋಯಿಸಲು ಪ್ರಯತ್ನಿಸದಿರಿ.


ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವ ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನೀವು ಅವು ಗಳನ್ನು ಚಲಿಸುವಂತೆ ಮಾಡಿದರೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇ ಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯ ಗಳಿಂದ ನೀವು ಪಾರಾಗಬಹುದು.


ಅಸೂಯೆ ಎಂಬುದು ಎಲ್ಲ ಗುಲಾಮರ ಹಾನಿಕರ ಲಕ್ಷಣ. ಅದೇ ನಮ್ಮ ದೇಶದ ದೊಡ್ಡ ಪಿಡುಗು. ಅದನ್ನು ಯಾವಾಗಲೂ ತೊಡೆದುಹಾಕಿ.


 ಹಿಂತಿರುಗಿ ನೋಡಬೇಡಿ. ಯಾವಾಗಲೂ ಮುನ್ನಡೆಯಿರಿ, ಅನಂತ ಶಕ್ತಿ, ಅನಂತ ಉತ್ಸಾಹ, ಅನಂತ ಸಾಹಸ ಮತ್ತು ಅನಂತ ತಾಳ್ಮೆ ಇವುಗಳಿದ್ದರೆ ಮಾತ್ರ ಮಹತ್ಕಾರ್ಯ ಗಳನ್ನು ಸಾಧಿಸಲು ಸಾಧ್ಯ.


ನಿಮ್ಮೊಳಗಿರುವುದನ್ನು ಪ್ರಯತ್ನ ಪೂರ್ವಕವಾಗಿ ಹೊರಹೊಮ್ಮಿಸಿ. ಆದರೆ ಅನುಕರಿಸಬೇಡಿ. ಇತರರಿಂದ ಒಳ್ಳೆಯದೆಲ್ಲವನ್ನೂ ಸ್ವೀಕರಿಸಿ.


ಅನುಕರಣೆ ಎಂದಿಗೂ ಪ್ರಗತಿಯ ಗುರುತಲ್ಲ, ಅದೊಂದು ಹೀನ ಅವನತಿಯ ಚಿಹ್ನೆ.


ಮಾನವನು ಪ್ರಕೃತಿಯನ್ನು ಆಳುವುದಕ್ಕೆ ಅವತರಿಸಿರುವುದು, ಅದನ್ನು ಅನುಸರಿಸುವುದಕ್ಕಲ್ಲ.


ಜೀವಿಯು ತನ್ನ ಬಂಧನವನ್ನು ಗುರುತಿಸಿ, ಜಾಗೃತವಾಗಿ, ತನ್ನ ಸ್ವರೂಪವನ್ನು ವ್ಯಕ್ತ ಪಡಿಸುವ ಪ್ರಯತ್ನವೇ ಜೀವನ.


ಬೆಳವಣಿಗೆಯ ಮುಖ್ಯ ಆವಶ್ಯಕತೆ ಸ್ವಾತಂತ್ರ್ಯ.


ಇತರರಿಗೆ ಸ್ವಾತಂತ್ರವನ್ನು ಕೊಡಲು ಇಚ್ಚಿಸದವನು ಸ್ವಾತಂತ್ರ್ಯಕ್ಕೆ ಯೋಗ್ಯನಲ್ಲವೇ ಅಲ್ಲ.


ಯಾವುದು ಏಕತೆಯನ್ನುಂಟುಮಾಡುವುದೋ ಅದೇ ಒಳಿತು, ಯಾವುದು ಪ್ರತ್ಯೇಕಿಸುವುದೋ ಅದೇ ಕೆಡುಕು.


ಸುಖವು ದುಃಖದ ಕಿರೀಟವನ್ನು ಧರಿಸಿ ಮಾನವನೆದುರಿಗೆ ಬಂದು ನಿಲ್ಲುವುದು. ಯಾರಿಗೆ ಸುಖ ಬೇಕೋ ಅವರು ದುಃಖವನ್ನೂ ಸ್ವೀಕರಿಸ ಬೇಕು.


 ನಾವು ಸುಖವನ್ನೂ ಕೋರುವುದಿಲ್ಲ ; ದುಃಖವನ್ನೂ ಕೋರುವುದಿಲ್ಲ. ಅವುಗಳ ಮೂಲಕ ಅವನ್ನು ಮೀರಿರುವುದನ್ನು ಪಡೆಯಲು ಯತ್ನಿಸುತ್ತೇವೆ.


ವೈಯಕ್ತಿಕವಾಗಿ ಯಾರೊಬ್ಬರನ್ನು ಪ್ರೀತಿಸುವುದೂ ಬಂಧನ. ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ. ಆಗ ಎಲ್ಲ ಆಸೆಗಳೂ ಬಿದ್ದು ಹೋಗುತ್ತವೆ.


ಮಹಾ ಮೂರ್ಖನೂ ಕೂಡ ತನ್ನ ಹೃದಯಕ್ಕೆ ಒಪ್ಪಿಗೆಯಾಗುವಂತಹ ಕಾರ್ಯ ವನ್ನು ಸಾಧಿಸಬಲ್ಲ ಆದರೆ ಯಾರು ಯಾವುದೇ ಕೆಲಸವನ್ನಾದರೂ ತನಗೆ ರುಚಿಸುವಂತೆ ಪರಿ ವರ್ತಿಸಬಲ್ಲನೋ ಅವನೇ ಬುದ್ದಿವಂತನು.


ಮೊದಲು ಆಳಾಗುವುದನ್ನು ಕಲಿಯಿರಿ, ಆಗ ನಾಯಕನ ಅರ್ಹತೆ ನಿಮಗೆ ಬರುತ್ತದೆ.


ಒಂದು ಸಾಮಾನ್ಯ ಕೆಲಸವನ್ನೂ ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.


ನಿಷೇಧಾತ್ಮಕ ಶಿಕ್ಷಣ, ನಿಷೇಧಾತ್ಮಕ ಭಾವನೆಗಳನ್ನಾಧರಿಸಿದ ಯಾವುದೇ ತರಬೇತಿ ಯಾಗಲಿ ಅದು ಮೃತ್ಯುವಿಗಿಂತಲೂ ಹೀನ.


ನೀವು ಐದು ಭಾವನೆಗಳನ್ನು ಅರಗಿಸಿ ಕೊಂಡು ಅವನ್ನು ನಿಮ್ಮ ಜೀವನಸರ್ವಸ್ವವನ್ನಾಗಿ ಮಾಡಿಕೊಂಡರೆ, ಅವು ನಿಮ್ಮ ನಡೆ ನುಡಿ ಯೊಡನೆ ಒಂದಾದರೆ ನೀವು ಯಾವುದೇ ವ್ಯಕ್ತಿಗಿಂತಲೂ ಹೆಚ್ಚು ವಿದ್ಯಾವಂತರಾಗುತ್ತೀರಿ.


ಮನಸ್ಸನ್ನು ಸಂಪೂರ್ಣ ಆಸಕ್ತವಾಗುವಂತೆ ಮಾಡಲು ನಾವು ಕಲಿಯುವುದು ಮಾತ್ರವಲ್ಲದೆ, ಯಾವಾಗ ಬೇಕಾದರು  ಕ್ಷಣಾರ್ಧದಲ್ಲಿ ಅದನ್ನು ಆ ವಸ್ತುವಿನಿಂದ ಸೆಳೆದುಕೊಂಡು ಬೇರೆ ವಸ್ತುವಿನಲ್ಲಿ ಅದನ್ನು ಇರಿಸುವುದನ್ನೂ ಕಲಿಯಬೇಕು.


ಈ ನಾರಕ ಪ್ರಪಂಚದಲ್ಲಿ ಒಬ್ಬ ವ್ಯಕ್ತಿಗೆ ಒಂದು ದಿನದ ಮಟ್ಟಿಗಾದರೂ ಶಾಂತಿ ಆನಂದ ವನ್ನು ನೀಡಲು ಸಾಧ್ಯವಾದರೆ ಅದೊಂದೇ ಸತ್ಯ. ಜೀವನವೆಲ್ಲ ಅನುಭವಿಸಿ ನಾನು ಕಲಿತ ಪಾಠ ವಿದು. ಉಳಿದುದೆಲ್ಲ ಬರಿಯ ಭ್ರಾಂತಿ.


ನಾನು ದೇಹಾತೀತನಾಗುವುದಕ್ಕೆ ಈ ದೇಹವನ್ನು ಹಳೆಯ ಬಟ್ಟೆಯಂತೆ ಕಿತ್ತೊಗೆಯು ವುದು ನನಗೆ ಮೇಲಾಗಬಹುದು. ಆದರೂ ನಾನು ಕೆಲಸ ಮಾಡುವುದನ್ನು ಬಿಡುವುದಿಲ್ಲ. ಈ ಪ್ರಪಂಚದಲ್ಲಿರುವವರೆಲ್ಲ ತಾವು ದೇವರು ಎಂದು ಭಾವಿಸುವವರೆಗೆ ಎಲ್ಲರಿಗೂ ನಾನು ಸ್ಫೂರ್ತಿಯನ್ನು ನೀಡುತ್ತ ಹೋಗುತ್ತೇನೆ.


ಮಾನವನ ಅಧ್ಯಯನ ಮಾಡು. ಮಾನವನೇ ಜೀವಂತ ಕಾವ್ಯ.


ಇಡೀ ಪ್ರಪಂಚ ನಿರ್ಮಾಣವಾಗಿರುವುದೇ ಮಾನವಶಕ್ತಿಯಿಂದ, ಉತ್ಸಾಹದ ತೀವ್ರತೆಯಿಂದ.


ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿಯು ಪರಿಶುದ್ದನಾಗಿರದಿದ್ದರೆ ಅವನು ದೇವಸ್ಥಾನಕ್ಕೆ ಹೋಗುವುದು ಮತ್ತು ದೇವರನ್ನು ಪೂಜಿಸುವುದು ಯಾವ ಪ್ರಯೋಜನಕ್ಕೂ ಬಾರದು.


ಪ್ರತಿಯೊಬ್ಬರೂ ಇತರರ ಭಾವವನ್ನು ಗ್ರಹಿಸಬೇಕು. ಆದರೂ ತನ್ನ ವೈಯಕ್ತಿಕತೆಯನ್ನು ಉಳಿಸಿಕೊಳ್ಳಬೇಕು, ಮತ್ತು ತನ್ನ ಬೆಳವಣಿಗೆಯ ನಿಯಮಕ್ಕೆ ಅನುಸಾರವಾಗಿ ಬೆಳೆಯಬೇಕು.


ನಾವು ಆಕಾಶದಷ್ಟು ವಿಶಾಲವಾಗಿರಬೇಕು ಸಾಗರದಷ್ಟು ಆಳವಾಗಿರಬೇಕು ; ಮತಾಂಧ ನಲ್ಲಿರುವ ಹುರುಪು ನಮ್ಮಲ್ಲಿರಬೇಕು, ಅನು ಭಾವಿಯ ಗಂಭೀರತೆ ಮತ್ತು ಆಜ್ಞೇಯವಾದಿಯ ವೈಶಾಲ್ಯತೆ ಇರಬೇಕು.


ನಾವು ಯಾರನ್ನೂ ತಿರಸ್ಕರಿಸುವುದಿಲ್ಲ, ಆಸ್ತಿಕನಾಗಲಿ, ನಾಸ್ತಿಕನಾಗಲಿ, ಪ್ರಕೃತಿದೇವತಾವಾದಿಯಾಗಲಿ, ಬಹುದೇವತಾಪೂಜಕನಾಗಲಿ, ಅಜೇಯವಾದಿಯಾಗಲಿ ಎಲ್ಲರನ್ನೂ ಸ್ವಾಗತಿಸುತ್ತೇವೆ.


 ಯಾವುದಕ್ಕೂ ಅಂಜದಿರು; ಅದ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ.  ನಿರ್ಭಿತಿಯೇ ಕ್ಷಣಮಾತ್ರದಲ್ಲಿ ಸ್ವರ್ಗವನ್ನು ಸಾಧಿಸಿಕೊಡಬಲ್ಲದು. ಆದುದ್ದರಿಂದ ಎದ್ದು ನಿಲ್ಲು, ಜಾಗ್ರತನಾಗು ಮತ್ತು ಗುರಿ ಪ್ರಾಪ್ತವಾಗುವವರೆಗೂ ನಿಲ್ಲದಿರು.


ನಾನಿಲ್ಲಿಗೆ (ಪಾಶ್ಚಾತ್ಯರಾಷ್ಟ್ರಗಳಿಗೆ) ಬರುವ ಮೊದಲೂ ಭಾರತವನ್ನು ಪ್ರೀತಿಸುತ್ತಿದ್ದೆ. ಆದರೆ ಈಗ ಭಾರತದ ಕಣಕಣವೂ ನನಗೆ ಪವಿತ್ರವಾಗಿದೆ, ಭಾರತದಲ್ಲಿ ಸುಳಿವ ಗಾಳಿಯೂ ನನಗೆ ಪವಿತ್ರವಾಗಿದೆ. ಈಗ ಅದು ಪವಿತ್ರಭೂಮಿ, ಯಾತ್ರಾಸ್ಥಳ, ತೀರ್ಥಸ್ಥಾನ.


ನಮ್ಮ ರಾಷ್ಟ್ರೀಯ ಆದರ್ಶಗಳು ತ್ಯಾಗ ಮತ್ತು ಸೇವೆ. ದೇಶವನ್ನು ಈ ಎರಡು ಆದರ್ಶ ಗಳಲ್ಲಿ ತೊಡಗಿಸಿದರೆ ಉಳಿದವೆಲ್ಲವೂ ತಮಗೆ ತಾವೇ ಸರಿಹೋಗುತ್ತವೆ.


 ನೀವು ಆಧ್ಯಾತ್ಮಿಕರಾಗದೆ ಭಾರತದ ಪುನರುದ್ಧಾರ ಅಸಾಧ್ಯ. ಇದನ್ನು ಗಮನದಲ್ಲಿಟ್ಟು ಕೊಳ್ಳಿ : ನೀವು ಆಧ್ಯಾತ್ಮಿಕತೆಯನ್ನು ಬಿಟ್ಟು ಭೋಗಪ್ರಧಾನ ಪಾಶ್ಚಾತ್ಯ ನಾಗರಿಕತೆಯನ್ನು ಬೆಂಬತ್ತಿದರೆ, ಅದರ ಪರಿಣಾಮವಾಗಿ ಇನ್ನು ಮೂರೇ ತಲೆಮಾರುಗಳಲ್ಲಿ ನಿಮ್ಮ ಜನಾಂಗ ನಾಶವಾಗುತ್ತದೆ.


 ಜನಸಾಮಾನ್ಯರನ್ನು ಕಡೆಗಣಿಸಿದ್ದು ಅತಿದೊಡ್ಡ ರಾಷ್ಟ್ರೀಯ ಪಾಪವೆಂದು ಪರಿಗಣಿಸುತ್ತೇನೆ. ಅದು ನಮ್ಮ ಅವನತಿಯ ಕಾರಣಗಳಲ್ಲೊಂದು. ಭಾರತದ ಜನಸಾಮಾನ್ಯರನ್ನು ಮತ್ತೊಮ್ಮೆ ವಿದ್ಯಾವಂತರನ್ನಾಗಿಸುವವರೆಗೂ, ಅನ್ನಬಟ್ಟೆಗಳನ್ನೊದಗಿಸಿ ಸರಿಯಾಗಿ ನೋಡಿಕೊಳ್ಳುವವರೆಗೂ, ಎಷ್ಟೇ ರಾಜಕಾರಣ ದಿಂದಲೂ ಏನೂ ಪ್ರಯೋಜನವಿಲ್ಲ

 


ವಿಧವೆಯ ಕಣ್ಣೀರನ್ನು ನಿವಾರಿಸಲು ಅಥವಾ ಅನಾಥನ ಬಾಯಿಗೆ ಒಂದು ತುತ್ತು ಅನ್ನವನ್ನು ನೀಡಲು ಸಮರ್ಥವಾಗದ ಧರ್ಮ ದಲ್ಲಾಗಲೀ ದೈವದಲ್ಲಾಗಲೀ ನನಗೆ ನಂಬಿಕೆ..


ಇರುವ ಏಕಮಾತ್ರ ದೇವತೆಯೂ, ನಾನು ನಂಬುವ ಏಕಮಾತ್ರ ದೇವತೆಯೂ ಆದ ಜೀವ ಸಮಷ್ಟಿಯ ಆರಾಧನೆಗಾಗಿ ನನಗೆ ಎಷ್ಟು ಜನ್ನ ಗಳಾದರೂ ಪ್ರಾಪ್ತವಾಗಲಿ, ಎಂತಹ ದುಖ ಗಳಾದರೂ ಒದಗಲಿ. ಎಲ್ಲಕ್ಕಿಂತ ಹೆಚ್ಚಾಗಿ, ದುಷ್ಟ ನಾರಾಯಣ, ಆರ್ತ ನಾರಾಯಣ, ಸಮಸ್ತ ಜನಾಂಗದ ದರಿದ್ರ ನಾರಾಯಣ - ಈ ನಾರಾಯಣನೇ ನನ್ನ ವಿಶೇಷ ಆರಾಧ್ಯ ದೇವತೆ.


ನಿಮ್ಮೊಬ್ಬರ ಮೇಲೆಯೇ ಇಡೀ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿ. ಐವತ್ತು ಶತಮಾನ ಗಳು ನಿಮ್ಮನ್ನು ನೋಡುತ್ತ ನಿಂತಿವೆ. ಭಾರತದ ಭವಿಷ್ಯ ನಿಮ್ಮನ್ನು ಅವಲಂಬಿಸಿದೆ. ಕೆಲಸ ಮಾಡಿ ಕೊಂಡು ಹೋಗಿ....


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad

Search for Article